ಸ್ಮಾರ್ಟ್ ಟಯರ್ ಅನಾವರಣಗೊಳಿಸಿದ ಜೆಕೆ ಟಯರ್

ಭಾರತ ಮೂಲದ ಟಯರ್ ತಯಾರಕ ಕಂಪನಿಯಾದ ಜೆಕೆ ಟಯರ್, ಸ್ಮಾರ್ಟ್ ಟಯರ್ ಎಂಬ ಹೊಸ ಉತ್ಪನ್ನವನ್ನು ಅನಾವರಣಗೊಳಿಸಿದೆ. ಸ್ಮಾರ್ಟ್ ಟಯರ್ ಟೆಕ್ನಾಲಜಿ ಜೆಕೆ ಟಯರ್‍‍ನ ಹೊಸ ಕೊಡುಗೆಯಾಗಿದೆ. ಈ ಉತ್ಪನ್ನವನ್ನು ಸೆನ್ಸಾರ್‍‍ಗಳನ್ನು ಬಳಸಿ ಟಯರ್‍‍ಗಳ ಬಗೆಗಿನ ಮಾಹಿತಿಯನ್ನು ಪಡೆಯುವಂತೆ ವಿನ್ಯಾಸಗೊಳಿಸಲಾಗಿದೆ.

ಸ್ಮಾರ್ಟ್ ಟಯರ್ ಅನಾವರಣಗೊಳಿಸಿದ ಜೆಕೆ ಟಯರ್

ಈ ಒಂದು ರೀತಿಯ ಟೆಕ್ನಾಲಜಿ ಆಧಾರಿತ ಸಾಧನವು ಗ್ರಾಹಕರಿಗೆ ಸ್ಮಾರ್ಟ್ ಮಾನಿಟರಿಂಗ್ ಹಾಗೂ ಪರಿಣಾಮಕಾರಿಯಾದ ಟಯರ್ ಮೆಂಟೆನೆನ್ಸ್ ಸೇವೆಗಳನ್ನು ನೀಡುತ್ತದೆ. ಸ್ಮಾರ್ಟ್ ಟಯರ್ ಜೆಕೆ ಟಯರ್‌ ತನ್ನ ಗ್ರಾಹಕರಿಗೆ ನೀಡುತ್ತಿರುವ ಮತ್ತೊಂದು ಉತ್ಪನ್ನವಾಗಿದೆ.

ಸ್ಮಾರ್ಟ್ ಟಯರ್ ಅನಾವರಣಗೊಳಿಸಿದ ಜೆಕೆ ಟಯರ್

ಈ ಫೀಚರ್ ಡಿಜಿಟಲ್ ಮೂಲಕ ನೈಜ ಸಮಯದ ಟಯರ್ ಪರ್ಫಾಮೆನ್ಸ್, ವೆಹಿಕಲ್ ಲೊಕೇಶನ್, ಏರ್ ಲೀಕ್ ಪತ್ತೆ ಹಾಗೂ ಎಂಜಿನ್ ಡಯಾಗ್ನಾಸಿಸ್ ಟ್ರ್ಯಾಕ್ ಮಾಡಿ ಟಯರ್‌ಗಳ ಬಾಳಿಕೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ಸ್ಮಾರ್ಟ್ ಟಯರ್ ಅನಾವರಣಗೊಳಿಸಿದ ಜೆಕೆ ಟಯರ್

ಈ ಸಂದರ್ಭದಲ್ಲಿ ಜೆಕೆ ಟಯರ್ ಹಾಗೂ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾರ್ಕೆಟಿಂಗ್ ಹೆಡ್ ಅಮಿತ್ ಗುಜ್ರಾಲ್‍‍ರವರು ಮಾತನಾಡಿ, ವಾಹನಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ದಕ್ಷಿಣ ಭಾರತದ ಯುವ ಪ್ರಭಾವಿಗಳನ್ನು ಭೇಟಿ ಮಾಡಿದ್ದೇವೆ. ಅವರು ಈ ಸೆಗ್‍ಮೆಂಟಿನಲ್ಲಿ ನಡೆಯುತ್ತಿರುವ ಹೊಸ ಆವಿಷ್ಕಾರ ಹಾಗೂ ಬೆಳವಣಿಗೆಗಳ ಬಗ್ಗೆ ತಿಳಿಯಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು.

ಸ್ಮಾರ್ಟ್ ಟಯರ್ ಅನಾವರಣಗೊಳಿಸಿದ ಜೆಕೆ ಟಯರ್

ನಾವು ಅಡ್ವಾನ್ಸ್ ಟೆಕ್ನಾಲಜಿ ಹಾಗೂ ಹೊಸತನಗಳ ಮೂಲಕ ಪ್ರಮುಖ ಮಾರುಕಟ್ಟೆ ಅವಶ್ಯಕತೆಗಳನ್ನು ಪರಿಹರಿಸುತ್ತೇವೆ. ಸ್ಮಾರ್ಟ್ ಟಯರ್ ಸೊಲ್ಯುಷನ್ ಆಕರ್ಷಕವಾದ ಅಡ್ವಾನ್ಸ್ ಫಂಕ್ಷನಾಲಿಟಿಯನ್ನು ಹೊಂದಿದ್ದು, ಟಯರ್‌ಗಳ ಬಾಳಿಕೆಯ ಬಗ್ಗೆ ನೈಜ ಮಾಹಿತಿಯನ್ನು ಸ್ಮಾರ್ಟ್ ಸೆನ್ಸಾರ್ ಮೂಲಕ ಒದಗಿಸುತ್ತದೆ. ಇದು ವಾಹನಗಳ ಸುರಕ್ಷತೆ ಹಾಗೂ ಪರ್ಫಾಮೆನ್ಸ್ ನೆರವಾಗುತ್ತದೆ ಎಂದು ಹೇಳಿದರು.

ಸ್ಮಾರ್ಟ್ ಟಯರ್ ಅನಾವರಣಗೊಳಿಸಿದ ಜೆಕೆ ಟಯರ್

ದೇಶಿಯ ಮಾರುಕಟ್ಟೆಯು ಯಾವಾಗಲೂ ಜೆಕೆ ಉತ್ಪನ್ನಗಳನ್ನು ಬಹಳ ನಂಬಿಕೆಯಿಂದ ಸ್ವೀಕರಿಸಿದೆ. ಇದೇ ರೆಸ್ಪಾನ್ಸ್ ಅನ್ನು ಹೊಸ ಸ್ಮಾರ್ಟ್ ಟಯರ್‌ಗೂ ಸಹ ಪಡೆಯುವ ನಿರೀಕ್ಷೆಯನ್ನು ಜೆಕೆ ಕಂಪನಿಯು ಹೊಂದಿದೆ. ಸ್ಮಾರ್ಟ್ ಟಯರ್ ಟೆಕ್ನಾಲಜಿ ಸರಿಯಾದ ಟಯರ್ ಪ್ರೆಷರ್ ನಿರ್ವಹಿಸಲು ಸಹಾಯ ಮಾಡಿ, ರಸ್ತೆ ಸುರಕ್ಷತೆಯನ್ನು ಹೆಚ್ಚಿಸಿ, ಪರಿಸರಕ್ಕಾಗಿ ತನ್ನದೇ ಕೊಡುಗೆಯನ್ನು ನೀಡಲಿದೆ.

ಸ್ಮಾರ್ಟ್ ಟಯರ್ ಅನಾವರಣಗೊಳಿಸಿದ ಜೆಕೆ ಟಯರ್

ಸ್ಮಾರ್ಟ್ ಟಯರ್ ಟೆಕ್ನಾಲಜಿಯು ಟಯರ್‍‍ಗಳ ಅಂಕಿಅಂಶಗಳನ್ನು ಮೇಲ್ವಿಚಾರಣೆ ಮಾಡಲು ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂಗಳನ್ನು ಹೊಂದಿದೆ. ಇದರಲ್ಲಿ ಪ್ರೆಷರ್ ಹಾಗೂ ಟೆಂಪರೆಚರ್‍‍ಗಳೂ ಸಹ ಸೇರಿವೆ. ಇವುಗಳನ್ನು ಭಾರತದಲ್ಲಿಯೇ ತಯಾರಿಸಲಾಗಿದೆ.

ಸ್ಮಾರ್ಟ್ ಟಯರ್ ಅನಾವರಣಗೊಳಿಸಿದ ಜೆಕೆ ಟಯರ್

ಇದರಲ್ಲಿ ಸಂಗ್ರಹಿಸಲಾಗುವ ಮಾಹಿತಿಯನ್ನು ವಾಹನ ಮಾಲೀಕರಿಗೆ ಬ್ಲೂಟೂತ್ ಮೂಲಕ ಅಥವಾ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ ಮೂಲಕ ನೈಜ ಸಮಯದ ಆಧಾರದ ಮೇಲೆ ತೋರಿಸಲಾಗುತ್ತದೆ. ಇದು ಸಮಸ್ಯೆಗಳನ್ನು ಮೊದಲೇ ಕಂಡುಹಿಡಿಯಲು ಹಾಗೂ ಇವುಗಳನ್ನು ತಡೆಗಟ್ಟುವ ಕ್ರಮಗಳನ್ನು ನಿಯೋಜಿಸಲು ಅನುವು ಮಾಡಿಕೊಡುತ್ತದೆ.

ಸ್ಮಾರ್ಟ್ ಟಯರ್ ಅನಾವರಣಗೊಳಿಸಿದ ಜೆಕೆ ಟಯರ್

ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಸ್ಮಾರ್ಟ್ ಟಯರ್‍‍ಗಳಿಗೆ ಹೆಚ್ಚಿನ ಫ್ಯೂಯಲ್ ಎಫಿಶಿಯನ್ಸಿ ತಲುಪುವಂತೆ ಮಾಡುತ್ತದೆ. ಜೆಕೆ ಟಯರ್ ಅನಾವರಣಗೊಳಿಸಿದ ಸ್ಮಾರ್ಟ್ ಟೈರ್ ಜಿಪಿಎಸ್ ಅನ್ನು ಹೊಂದಿದೆ. ಈ ಜಿ‍‍ಪಿಎಸ್ ಯಾವುದೇ ಸಮಯದಲ್ಲಿ ತಮ್ಮ ವಾಹನಗಳು ಎಲ್ಲಿವೆ ಎಂಬುದನ್ನು ಮಾಲೀಕರಿಗೆ ತಿಳಿಸಲು ನೆರವಾಗುತ್ತವೆ.

Article Published On: Saturday, February 1, 2020, 14:54 [IST]
English summary
JK Tyre Unveils Smart Tyre. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+