ಲಾಕ್‌ಡೌನ್ ಎಫೆಕ್ಟ್: ಕಾರ್ಮಿಕರಿಗೆ ಸಾರಿಗೆ ಸೇವೆ ಒದಗಿಸಲು ಮುಂದಾದ ಕರ್ನಾಟಕ ಸರ್ಕಾರ

ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ವಿಶೇಷ ಬಸ್ ಸೌಲಭ್ಯವನ್ನು ಒದಗಿಸಲು ಕರ್ನಾಟಕ ಸರ್ಕಾರವು ಮುಂದಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಕೇಂದ್ರ ಸರ್ಕಾರವು ವಿಶೇಷ ಆರ್ಥಿಕ ವಲಯ (ಎಸ್‌ಇಝಡ್) ಹಾಗೂ ಹಸಿರು ವಲಯದಲ್ಲಿರುವ ಕೈಗಾರಿಕೆ ಹಾಗೂ ಉದ್ಯಮಗಳಿಗೆ ವಿನಾಯಿತಿ ನೀಡಿದೆ.

ಲಾಕ್‌ಡೌನ್ ಎಫೆಕ್ಟ್: ಕಾರ್ಮಿಕರಿಗೆ ಸಾರಿಗೆ ಸೇವೆ ಒದಗಿಸಲು ಮುಂದಾದ ಕರ್ನಾಟಕ ಸರ್ಕಾರ

ರಾಜ್ಯದ ಆರ್ಥಿಕ ವ್ಯವಸ್ಥೆಗೆ ಉತ್ತೇಜನ ನೀಡಲು ಕರ್ನಾಟಕ ಸರ್ಕಾರವು ಈ ನಿರ್ಧಾರಕ್ಕೆ ಬಂದಿದೆ. ಮಾರ್ಚ್ 24ರ ನಂತರ ಮೊದಲ ಬಾರಿಗೆ 2,500ಕ್ಕೂ ಹೆಚ್ಚು ಉದ್ಯಮಗಳನ್ನು ತೆರೆಯಲಾದರೂ, ಕಾರ್ಮಿಕರ ಕೊರತೆ ಎದುರಾಗಿದೆ. ದೇಶಾದ್ಯಂತ ಲಾಕ್‌ಡೌನ್ ಘೋಷಿಸುವ ಮೊದಲೇ ಮುನ್ನೆಚ್ಚರಿಕಾ ಕ್ರಮವಾಗಿ ಅನೇಕ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದವು.

ಲಾಕ್‌ಡೌನ್ ಎಫೆಕ್ಟ್: ಕಾರ್ಮಿಕರಿಗೆ ಸಾರಿಗೆ ಸೇವೆ ಒದಗಿಸಲು ಮುಂದಾದ ಕರ್ನಾಟಕ ಸರ್ಕಾರ

ಲಾಕ್‌ಡೌನ್ ಘೋಷಣೆಯಾದ ನಂತರ ಈ ಕಾರ್ಖಾನೆಗಳಲ್ಲಿದ್ದ ಕಾರ್ಮಿಕರು ಹಾಗೂ ಸಿಬ್ಬಂದಿಗಳು ತಮ್ಮ ಊರುಗಳಿಗೆ ಮರಳಿದರು. ಬಸ್ಸು, ರೈಲು ಹಾಗೂ ವಿಮಾನಯಾನ ಸೇವೆಗಳನ್ನು ರದ್ದುಪಡಿಸಿರುವುದರಿಂದ ಕಾರ್ಮಿಕರು ಮತ್ತೆ ಹಿಂದಿರುಗಲು ತೊಂದರೆಯಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ಎಫೆಕ್ಟ್: ಕಾರ್ಮಿಕರಿಗೆ ಸಾರಿಗೆ ಸೇವೆ ಒದಗಿಸಲು ಮುಂದಾದ ಕರ್ನಾಟಕ ಸರ್ಕಾರ

ಮುಂದಿನ ವಾರದಿಂದ ರಾಜ್ಯದಲ್ಲಿ ಇನ್ನೂ 3,000 ಕಾರ್ಖಾನೆಗಳನ್ನು ತೆರೆಯುವ ಯೋಜನೆ ಇದೆ. ಮತ್ತೆ ಕಾರ್ಮಿಕರ ಕೊರತೆ ಎದುರಾಗಲಿದೆ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸಾಮಾಜಿಕ ಅಂತರವನ್ನು ಪಾಲಿಸುವ ಮೂಲಕ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಕರೆತರಲು ಸಾರಿಗೆ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಲಾಕ್‌ಡೌನ್ ಎಫೆಕ್ಟ್: ಕಾರ್ಮಿಕರಿಗೆ ಸಾರಿಗೆ ಸೇವೆ ಒದಗಿಸಲು ಮುಂದಾದ ಕರ್ನಾಟಕ ಸರ್ಕಾರ

ಈ ಬಗ್ಗೆ ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ಮಾತನಾಡಿ ಅನೇಕ ಕಂಪನಿಗಳು ತಮ್ಮ ಕಾರ್ಮಿಕರನ್ನು ಮರಳಿ ಕರೆತರಲು ವಿಶೇಷ ಸೌಲಭ್ಯಗಳನ್ನು ಒದಗಿಸುತ್ತಿವೆ. ಕರ್ನಾಟಕ ಸರ್ಕಾರವು ಕಂಪನಿಗಳಿಗೆ ನೆರವಾಗಲಿದೆ ಎಂದು ಹೇಳಿದರು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ಎಫೆಕ್ಟ್: ಕಾರ್ಮಿಕರಿಗೆ ಸಾರಿಗೆ ಸೇವೆ ಒದಗಿಸಲು ಮುಂದಾದ ಕರ್ನಾಟಕ ಸರ್ಕಾರ

ಕೈಗಾರಿಕೆಗಳು ಹಾಗೂ ಉದ್ಯಮಗಳನ್ನು ಮತ್ತೆ ಸರಿ ದಾರಿಗೆ ತರಲು ಪ್ರಸ್ತಾವನೆಯನ್ನು ರೂಪಿಸಲಾಗಿದೆ ಎಂದು ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಸ್ತಾವನೆಯಲ್ಲಿ ವಿದ್ಯುತ್ ಹಾಗೂ ನೀರಿನ ಬಿಲ್‌ಗಳಿಗೆ ವಿನಾಯಿತಿ ನೀಡುವುದರ, ಕೆಲವು ತೆರಿಗೆಗಳಿಗೂ ಸಹ ವಿನಾಯಿತಿ ನೀಡಲಾಗುವುದು.

ಲಾಕ್‌ಡೌನ್ ಎಫೆಕ್ಟ್: ಕಾರ್ಮಿಕರಿಗೆ ಸಾರಿಗೆ ಸೇವೆ ಒದಗಿಸಲು ಮುಂದಾದ ಕರ್ನಾಟಕ ಸರ್ಕಾರ

ಉದ್ಯಮಿಗಳು 2,500 ಕೈಗಾರಿಕಾ ಘಟಕಗಳ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ಕೋರಿದ್ದಾರೆ. ಸೋಂಕಿನ ಭಯದಿಂದ ಕಾರ್ಮಿಕರು ಕಾರ್ಖಾನೆಗಳಿಗೆ ಬರದ ಕಾರಣ ಹೆಚ್ಚಿನ ಕಾರ್ಖಾನೆಗಳಲ್ಲಿ ಇನ್ನೂ ಕೆಲಸ ಆರಂಭವಾಗಿಲ್ಲ.

Most Read Articles

Kannada
English summary
Karnataka State Government to offer transport services to industry workers amidst lockdown. Read in Kannada.
Story first published: Tuesday, April 28, 2020, 18:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X