ಬರೋಬ್ಬರಿ 50 ದಿನಗಳ ನಂತರ ಕಾರು ಮಾರಾಟ ಪುನಾರಂಭಿಸಿದ ಕಿಯಾ ಮೋಟಾರ್ಸ್
ಲಾಕ್‌ಡೌನ್ ಸಂಕಷ್ಟದಿಂದ ಹೊರಬರಲು ಯತ್ನಿಸುತ್ತಿರುವ ಆಟೋ ಉದ್ಯಮವು ಕೇಂದ್ರ ಸರ್ಕಾರ ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಕಾರ್ಯನಿರ್ವಹಿಸುತ್ತಿದ್ದು, ಗರಿಷ್ಠ ಸುರಕ್ಷಾ ಕ್ರಮಗಳೊಂದಿಗೆ ವಾಹನಗಳ ಉತ್ಪಾದನೆ ಮಾರಾಟವನ್ನು ಪುನಾರಂಭಿಸಲಾಗಿದೆ.

ಕರೋನಾ ವೈರಸ್ ಪ್ರಕರಣ ಹೆಚ್ಚಳದ ನಡುವೆಯೂ ಕೇಂದ್ರ ಸರ್ಕಾರವು ಆರ್ಥಿಕ ಪುನಶ್ಚೇತನಕ್ಕಾಗಿ ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ಕೈಗಾರಿಕಾ ಚಟುವಟಿಕೆಗಳಿಗೆ ವಿನಾಯ್ತಿ ನೀಡಿದ್ದು, ಆಟೋ ಉದ್ಯಮದಲ್ಲಿನ ಚಟುವಟಿಕೆಗಳು ಕೂಡಾ ಇದೀಗ ಬರೋಬ್ಬರಿ 50 ದಿನಗಳ ನಂತರ ಚಾಲನೆ ಪಡೆದುಕೊಂಡಿವೆ.

ಹೊಸ ಸುರಕ್ಷಾ ಮಾರ್ಗಸೂಚಿಯಂತೆ ವಾಹನ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಉದ್ಯೋಗದ ಸ್ಥಳದಲ್ಲಿ ಆಟೋ ಕಂಪನಿಗಳು ಗರಿಷ್ಠ ಸುರಕ್ಷಾ ಕ್ರಮಗಳನ್ನು ಜಾರಿಗೊಳಿಸಿವೆ.
MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಕಾರು ಮಾರಾಟದಲ್ಲಿ ಸದ್ಯ ದಾಖಲೆಗಳಿಗೆ ಕಾರಣವಾಗಿರುವ ಕಿಯಾ ಮೋಟಾರ್ಸ್ ಸಹ ಕಾರು ಮಾರಾಟ ಪ್ರಕ್ರಿಯೆಯನ್ನು ನಿನ್ನೆಯಿಂದಷ್ಟೇ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಆನ್‌ಲೈನ್ ಮೂಲಕವೇ ಕಾರು ಮಾರಾಟ ನಡೆಸುತ್ತಿದೆ.

ಮಾರಾಟ ಮಳಿಗೆಗಳಿಗೆ ಗ್ರಾಹಕರ ಆಗಮನ ತಡೆಯುವುದಕ್ಕಾಗಿ ಕಂಪನಿಯೇ ಆನ್‌ಲೈನ್ ಮೂಲಕವೇ ಪತ್ರ ವ್ಯವಹಾರ ಮುಗಿಸಿ ಅಂತಿಮವಾಗಿ ಕಾರು ಉತ್ಪನ್ನಗಳನ್ನು ಗ್ರಾಹಕರ ಬಾಗಿಲುಗಳಿಗೆ ತಲುಪಿಸುತ್ತಿದ್ದು, ಕಾರು ವಿತರಣೆ ಸಂದರ್ಭದಲ್ಲೂ ನಂಜು ನಿರೋಧಕ ಔಷಧಿಗಳನ್ನು ಸಿಂಪರಣೆ ಮಾಡಿ ಸ್ವಚ್ಚಗೊಳಿಸಿದ ನಂತರವೇ ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸುತ್ತಿದೆ.
MOST READ: ಕರೋನಾ ವೈರಸ್: ಹೊಸ ವಿಧಾನದ ಮೂಲಕ ಜನರ ಬಳಿ ಬರಲಿರುವ ಪೊಲೀಸರು..

ಇನ್ನು ಕರೋನಾ ವೈರಸ್‌ನಿಂದಾಗಿ ಆಟೋ ಮೊಬೈಲ್ ಸೇರಿದಂತೆ ಎಲ್ಲ ವಲಯದಲ್ಲೂ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಹೀಗಿರುವಾಗ ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದ್ದು, ಕಿಯಾ ಮೋಟಾರ್ಸ್ ಕೂಡಾ ಕೆಲವು ಮಹತ್ವದ ನಿರ್ಧಾರಗಳೊಂದಿಗೆ ಕಾರು ಮಾರಾಟಕ್ಕೆ ಮರುಚಾಲನೆ ನೀಡಿದೆ.

ವೈರಸ್ ತಡೆಗಾಗಿ ಲಾಕ್‌ಡೌನ್ ಅನಿವಾರ್ಯವಾಗಿದ್ದರಿಂದ ಭಾರತೀಯ ಆಟೋ ಉದ್ಯಮವು ಸಹ ದಿನಂಪ್ರತಿ ನೂರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಆಟೋ ಕ್ಷೇತ್ರಕ್ಕೆ ವಿನಾಯ್ತಿ ನೀಡಲಾಗಿದೆಯಾದರೂ ಆರ್ಥಿಕ ಮುಗ್ಗಟ್ಟು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಹೊಸ ಸುರಕ್ಷಾ ಮಾರ್ಗಸೂಚಿತಂತೆ ಆಟೋ ಉದ್ಯಮವು ಮರು ಚಾಲನೆಗೊಂಡರು ಕೂಡಾ ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ಪರದಾಡುತ್ತಿವೆ. ಇದರಿಂದ ಮುಂಬರುವ ದಿನಗಳು ಮತ್ತಷ್ಟು ಕಠಿಣವಾಗಿರವೆ ಎನ್ನಲಾಗುತ್ತಿದ್ದು, ಕರೋನಾ ವೈರಸ್‌ನಿಂದ ಮುಕ್ತಿ ಹೊಂದುವ ತನಕವು ಈ ಸಂಕಷ್ಟ ತಪ್ಪಿದಲ್ಲ.


Click it and Unblock the Notifications