ಖರೀದಿ ಮಾಡಿದ ಒಂದೇ ವಾರದಲ್ಲಿ 3 ಬಾರಿ ರಿಪೇರಿ- ಕಿಯಾ ವಿರುದ್ದ ಸಿಡಿದೆದ್ದ ಕಾರ್ನಿವಾಲ್ ಮಾಲೀಕ..!

ಭಾರತದಲ್ಲಿ ಕಾರು ಮಾರಾಟವನ್ನು ಆರಂಭಿಸಿದ ಕೆಲವೇ ದಿನಗಳಲ್ಲಿ ಮೂರನೇ ಅಗ್ರಸ್ಥಾನಕ್ಕೇರಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಮಾರಾಟ ವಿಭಾಗದಲ್ಲಿ ಹೊಸ ದಾಖಲೆಗಳಿಗೆ ಕಾರಣವಾಗುತ್ತಿದೆ. ಆದರೆ ಮಾರಾಟ ನಂತರ ಸೇವೆಗಳ ಕುರಿತಾಗಿ ಸಾಕಷ್ಟು ಗ್ರಾಹಕರು ಕಿಯಾ ವಿರುದ್ಧ ದೂರು ಸಲ್ಲಿಸುತ್ತಿದ್ದು, ಇದೀಗ ದುಬಾರಿ ಬೆಲೆಯ ಕಾರ್ನಿವಾಲ್ ಖರೀದಿಸಿದ ಗ್ರಾಹಕರೊಬ್ಬರು ಬೀದಿಗಿಳಿದು ಪ್ರತಿಭಟಿಸುವ ಪರಿಸ್ಥಿತಿ ಎದುರಾಗಿದೆ.

ಖರೀದಿ ಮಾಡಿದ ಒಂದೇ ವಾರದಲ್ಲಿ 3 ಬಾರಿ ರಿಪೇರಿ- ಕಿಯಾ ವಿರುದ್ದ ಸಿಡಿದೆದ್ದ ಕಾರ್ನಿವಾಲ್ ಮಾಲೀಕ..!

ಕಳೆದ ತಿಂಗಳು ಫೆಬ್ರುವರಿ 5ರಂದು ದೆಹಲಿಯಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದ್ದ ಕಾರ್ನಿವಾಲ್ ಎಂಪಿವಿ ಆವೃತ್ತಿಯು ದುಬಾರಿ ಬೆಲೆ ನಡುವೆಯೂ ಮೊದಲ ತಿಂಗಳಿನಲ್ಲಿಯೇ ಸುಮಾರು 500ಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟಗೊಂಡಿದ್ದು, ಐಷಾರಾಮಿ ಎಂಪಿವಿ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸಿರುವ ಕಾರ್ನಿವಾಲ್ ಕಾರಿನ ವಿರುದ್ಧ ಗ್ರಾಹಕರ ದೂರುಗಳು ಕೇಳಿಬರಲಾಂಭಿಸಿವೆ.

ಖರೀದಿ ಮಾಡಿದ ಒಂದೇ ವಾರದಲ್ಲಿ 3 ಬಾರಿ ರಿಪೇರಿ- ಕಿಯಾ ವಿರುದ್ದ ಸಿಡಿದೆದ್ದ ಕಾರ್ನಿವಾಲ್ ಮಾಲೀಕ..!

ಹೊಸ ಕಾರ್ನಿವಾಲ್ ಕಾರು ಖರೀದಿ ಮಾಡಿದ ಒಂದೇ ವಾರದಲ್ಲಿ ಮೂರು ಬಾರಿ ರಿಪೇರಿ ಒಳಗಾಗಿದ್ದರೂ ಸಮಸ್ಯೆ ಬಗೆಹರಿಯದ ಹಿನ್ನಲೆಯಲ್ಲಿ ಗ್ರಾಹಕರೊಬ್ಬರು ಕಿಯಾ ಮೋಟಾರ್ಸ್ ವಿರುದ್ಧ ಬಹಿರಂಗವಾಗಿ ಪ್ರತಿಭಟನೆಗಿಳಿದಿದ್ದು, ತಾಂತ್ರಿಕ ಸಮಸ್ಯೆಗಳಿಂದ ಕೂಡಿರುವ ಕಾರನ್ನು ತಕ್ಷಣವೇ ಬದಲಿಸಬೇಕೆಂದು ಒತ್ತಾಯಿಸಿದ್ದಾರೆ.

ಖರೀದಿ ಮಾಡಿದ ಒಂದೇ ವಾರದಲ್ಲಿ 3 ಬಾರಿ ರಿಪೇರಿ- ಕಿಯಾ ವಿರುದ್ದ ಸಿಡಿದೆದ್ದ ಕಾರ್ನಿವಾಲ್ ಮಾಲೀಕ..!

ಬರೋಬ್ಬರಿ ರೂ.38 ಲಕ್ಷ ಕೊಟ್ಟು ಖರೀದಿ ಮಾಡಿದರೂ ಸಮಸ್ಯೆಯಿಂದ ಕೂಡಿರುವ ಹೊಸ ಕಾರಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ಕೇಳಿಬರುತ್ತಿದ್ದು, ಗ್ರಾಹಕರ ಸೇವೆ ಕುರಿತು ಹಲವು ಗ್ರಾಹಕರು ಕಿಯಾ ವಿರುದ್ಧ ಸಿಡಿದೆದ್ದಿದ್ದಾರೆ.

ಖರೀದಿ ಮಾಡಿದ ಒಂದೇ ವಾರದಲ್ಲಿ 3 ಬಾರಿ ರಿಪೇರಿ- ಕಿಯಾ ವಿರುದ್ದ ಸಿಡಿದೆದ್ದ ಕಾರ್ನಿವಾಲ್ ಮಾಲೀಕ..!

ಪಂಜಾಬ್ ಮೂಲದ ಹರೀಶ್ ಗುಪ್ತಾ ಎಂಬುವವರೇ ಕಾರ್ನಿವಾಲ್ ಖರೀದಿಸಿ ಸಂಕಷ್ಟಕ್ಕೆ ಸಿಲುಕಿದ್ದು, ಇವರು ಕಳೆದ ತಿಂಗಳ ಕೊನೆಯ ವಾರದಲ್ಲಿ ಕಾರ್ನಿವಾಲ್ ಹೈ ಎಂಡ್ ವೆರಿಯೆಂಟ್ ಲಿಮೋಸಿನ್ ಖರೀದಿಸಿದ್ದರು. ಆನ್ ರೋಡ್ ಪ್ರಕಾರ ಇದು ರೂ.38 ಲಕ್ಷ ಬೆಲೆ ಹೊಂದಿದ್ದು, ಕಾರು ಖರೀದಿದ ಮಾಡಿದ ಎರಡೇ ದಿನದಲ್ಲಿ ರಿಪೇರಿ ಬಂದಿದೆ. ಉತ್ಪಾದನೆಯಲ್ಲಿನ ತಾಂತ್ರಿಕ ದೋಷವು ಕಾರ್ನಿವಾಲ್ ಮಾಲೀಕನನ್ನು ಸಂಕಷ್ಟಕ್ಕೆ ಈಡಾಗುವಂತೆ ಮಾಡಿದ್ದು, ಒಂದೇ ವಾರದಲ್ಲಿ ಮೂರು ಬಾರಿ ರಿಪೇರಿ ಮಾಡಿದರೂ ಯಾವುದೇ ಪರಿಹಾರ ಕಂಡುಬಂದಿಲ್ಲ.

ಖರೀದಿ ಮಾಡಿದ ಒಂದೇ ವಾರದಲ್ಲಿ 3 ಬಾರಿ ರಿಪೇರಿ- ಕಿಯಾ ವಿರುದ್ದ ಸಿಡಿದೆದ್ದ ಕಾರ್ನಿವಾಲ್ ಮಾಲೀಕ..!

ಮಾಲೀಕರ ಪ್ರಕಾರ, ಹೊಸ ಕಾರ್ನಿವಾಲ್ ಕಾರಿನಲ್ಲಿ ಹಲವಾರು ತಾಂತ್ರಿಕ ಸಮಸ್ಯೆಗಳಿದ್ದು, ಪ್ರಮುಖವಾಗಿ ಸ್ಟೀರಿಂಗ್ ಅಳವಡಿಕೆಯಲ್ಲಿ ಸಾಕಷ್ಟು ದೋಷಗಳಿವೆ ಎಂದಿದ್ದಾರೆ. ಚಾಲನೆ ವೇಳೆ ಕಾರು ಒಂದೇ ಬದಿಗೆ ಎಳೆದಂತಾಗುತ್ತದೆ ಎಂದು ದೂರಲಾಗಿದ್ದು, ಮೂರು ಬಾರಿ ರಿಪೇರಿ ಒಳಗಾಗಿದ್ದರೂ ಯಾವುದೇ ಪರಿಹಾರ ಸಿಕ್ಕಿಲ್ಲ.

ಖರೀದಿ ಮಾಡಿದ ಒಂದೇ ವಾರದಲ್ಲಿ 3 ಬಾರಿ ರಿಪೇರಿ- ಕಿಯಾ ವಿರುದ್ದ ಸಿಡಿದೆದ್ದ ಕಾರ್ನಿವಾಲ್ ಮಾಲೀಕ..!

ತಾಂತ್ರಿಕ ಸಮಸ್ಯೆ ಕುರಿತು ಕಿಯಾ ಅಧಿಕೃತ ಸರ್ವೀಸ್ ಸೆಂಟರ್‌ನಲ್ಲಿ ಮೊದಲ ಬಾರಿ ಚೆಕ್ ಮಾಡಿಸಿದ ಸಂದರ್ಭದಲ್ಲಿ ಸರಿ ಮಾಡುವ ಮಾಡುವ ಭರವಸೆ ನೀಡಿದ್ದ ಶೋರೂಂ ಸಿಬ್ಬಂದಿಯು ತದನಂತರ ಮೂರು ಬಾರಿ ರಿಪೇರಿ ಮಾಡಿದ್ದಲ್ಲದೆ ಎರಡು ಬಾರಿ ಮುಂಭಾಗದ ಚಕ್ರಗಳನ್ನು ಸಹ ಬದಲಿಸಿದರೂ ಸಮಸ್ಯೆ ಸರಿಹೋಗಿಲ್ಲ.

ಖರೀದಿ ಮಾಡಿದ ಒಂದೇ ವಾರದಲ್ಲಿ 3 ಬಾರಿ ರಿಪೇರಿ- ಕಿಯಾ ವಿರುದ್ದ ಸಿಡಿದೆದ್ದ ಕಾರ್ನಿವಾಲ್ ಮಾಲೀಕ..!

ಹೆಚ್ಚುವರಿ ಶುಲ್ಕು ಪಾವತಿಗೆ ಬೇಡಿಕೆ

ಮೊದಲ ಮೂರು ಸರ್ವೀಸ್‍ಗಳ ನಂತರ ಕಾರು ರಿಪೇರಿಗೆ ಹೆಚ್ಚುವರಿ ಶುಲ್ಕ ಪಾವತಿಸಲು ಸೂಚಿಸಿರುವ ಶೋರೂಂ ಸಿಬ್ಬಂದಿಯು ಇದು ನಮ್ಮ ತಪ್ಪಲ್ಲ ಹೊಸ ಕಾರು ಉತ್ಪಾದನೆಯೇ ದೋಷದಿಂದ ಕೂಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.

ಖರೀದಿ ಮಾಡಿದ ಒಂದೇ ವಾರದಲ್ಲಿ 3 ಬಾರಿ ರಿಪೇರಿ- ಕಿಯಾ ವಿರುದ್ದ ಸಿಡಿದೆದ್ದ ಕಾರ್ನಿವಾಲ್ ಮಾಲೀಕ..!

ಈ ಕುರಿತು ಕಿಯಾ ಮೋಟಾರ್ಸ್ ಸಂಸ್ಥೆಗೂ ಪತ್ರ ಬರೆದಿದ್ದ ಹರೀಶ್ ಗುಪ್ತಾ ಅವರಿಗೆ ಶೋರೂಂ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳುವಂತೆ ಪ್ರತ್ಯುತ್ತರಗಳು ಬಂದಿದ್ದು, ಪರಿಹಾರಕ್ಕಾಗಿ ತಕ್ಷಣವೇ ಹೊಸ ಕಾರಿನ ಸಮೇತ ಶೋರೂಂ ಮುಂಭಾಗದಲ್ಲೇ ಪ್ರತಿಭಟನೆ ನಡೆಸಿದ್ದಾರೆ.

ಹೊಸ ಕಾರಿನಲ್ಲಿರುವ ತಾಂತ್ರಿಕ ಸಮಸ್ಯೆಯನ್ನು ಈ ಕೂಡಲೇ ಪರಿಹರಿಸಬೇಕು ಇಲ್ಲವೆ ಕಾರು ಬದಲಿಸುವಂತೆ ಒತ್ತಾಯಿಸಿ ಕಿಯಾ ಮೋಟಾರ್ಸ್ ಸಂಸ್ಥೆಯನ್ನು ತರಾಟೆ ತಗೆದುಕೊಂಡಿರುವ ಹರೀಶ್ ಗುಪ್ತಾ ಅವರು ನಿಗದಿತ ಸಮಯದಲ್ಲಿ ಸಮಸ್ಯೆ ಬಗೆಹರಿಸದೇ ಹೋದಲ್ಲಿ ಕೋರ್ಟ್ ಮೆಟ್ಟಿಲು ಎರುವುದಾಗಿ ಎಚ್ಚೆರಿಸಿದ್ದಾರೆ.

ಖರೀದಿ ಮಾಡಿದ ಒಂದೇ ವಾರದಲ್ಲಿ 3 ಬಾರಿ ರಿಪೇರಿ- ಕಿಯಾ ವಿರುದ್ದ ಸಿಡಿದೆದ್ದ ಕಾರ್ನಿವಾಲ್ ಮಾಲೀಕ..!

ಇನ್ನು ಕಾರ್ನಿವಾಲ್ ಕಾರು ಗ್ರಾಹಕರ ಬೇಡಿಕೆಯೆಂತೆ ಪ್ರೀಮಿಯಂ, ಪ್ರೆಸ್ಟಿಜ್ ಮತ್ತು ಲಿಮೋಸಿನ್ ಎನ್ನುವ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.24.95 ಲಕ್ಷ ಬೆಲೆ ಹೊಂದಿದ್ದು, ಹೈ ಎಂಡ್ ಆವೃತ್ತಿಯು ರೂ.33.95 ಲಕ್ಷ ಬೆಲೆ ಪಡೆದುಕೊಂಡಿದೆ.

ಖರೀದಿ ಮಾಡಿದ ಒಂದೇ ವಾರದಲ್ಲಿ 3 ಬಾರಿ ರಿಪೇರಿ- ಕಿಯಾ ವಿರುದ್ದ ಸಿಡಿದೆದ್ದ ಕಾರ್ನಿವಾಲ್ ಮಾಲೀಕ..!

ಹೊಸ ಕಾರಿನಲ್ಲಿರುವ ಪ್ರೀಮಿಯಂ ತಾಂತ್ರಿಕ ಸೌಲಭ್ಯಗಳು ಮತ್ತು ಐಷಾರಾಮಿ ವಿನ್ಯಾಸದಿಂದಾಗಿ ಕಾರ್ನಿವಾಲ್ ಕಾರು ಆವೃತ್ತಿಯನ್ನು 'ಲಗ್ಷುರಿ ಎಂಪಿವಿ' ವಿಭಾಗದಲ್ಲಿ ಗುರುತಿಸಲಾಗಿದ್ದು, ಇದೀಗ ಕೇಳಿಬರುತ್ತಿರುವ ಗ್ರಾಹಕರ ದೂರುಗಳು ಹೊಸ ಕಾರ್ ಬ್ರಾಂಡ್ ಮೌಲ್ಯಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆಗಳಿವೆ.

Article Published On: Tuesday, March 3, 2020, 17:31 [IST]
English summary
Kia carnival owner unsatisfied with premium mpv details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+