ಲಾಕ್‌ಡೌನ್: ಸಂಕಷ್ಟದಲ್ಲಿರುವ ಡೀಲರ್ಸ್‌ಗಳ ಕೈಹಿಡಿದ ಕಿಯಾ ಮೋಟಾರ್ಸ್

ಕರೋನಾ ವೈರಸ್ ಮಾಹಾಮಾರಿಯಿಂದಾಗಿ ವಿಶ್ವಾದ್ಯಂತ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, ಯಾವುದೇ ರೀತಿಯ ವ್ಯಾಪಾರ-ವಹಿವಾಟು ಇಲ್ಲದಿರುವುದು ಉತ್ಪಾದನಾ ಕಂಪನಿಗಳಿಗೆ ಭಾರೀ ಪ್ರಮಾಣದ ನಷ್ಟ ಸಂಭವಿಸುತ್ತಿದೆ.

ಲಾಕ್‌ಡೌನ್: ಸಂಕಷ್ಟದಲ್ಲಿರುವ ಡೀಲರ್ಸ್‌ಗಳ ಕೈಹಿಡಿದ ಕಿಯಾ ಮೋಟಾರ್ಸ್

ಆದರೆ ಪರಿಸ್ಥಿತಿಗೆ ಅನುಗುಣವಾಗಿ ಲಾಕ್‌ಡೌನ್ ಪಾಲನೆ ಮಾಡಬೇಕಾದ ಅನಿವಾರ್ಯತೆಗಳಿದ್ದು, ಸಂಕಷ್ಟದಲ್ಲಿರುವ ಆಟೋ ಮಾರಾಟಗಾರರಿಗೆ ಉತ್ಪಾದನಾ ಕಂಪನಿಗಳು ಸಹಾಯಕ್ಕೆ ಮುಂದಾಗಿವೆ. ಹೆಚ್ಚುವರಿ ಲಾಭಾಂಶ ಮತ್ತು ತುರ್ತು ಪರಿಸ್ಥಿತಿ ಸರಿಪಡಿಸಿಕೊಳ್ಳಲು ಹಣಕಾಸಿನ ಸಹಾಯವನ್ನು ಘೋಷಣೆ ಮಾಡಲಾಗಿದ್ದು, ಕಿಯಾ ಮೋಟಾರ್ಸ್ ಸಹ ತನ್ನ ಅಧಿಕೃತ ಕಾರು ಮಾರಾಟಗಾರರಿಗೆ ಹಲವು ಬೆಂಬಲ ಯೋಜನೆಗಳನ್ನು ಘೋಷಣೆ ಮಾಡಿದೆ.

ಲಾಕ್‌ಡೌನ್: ಸಂಕಷ್ಟದಲ್ಲಿರುವ ಡೀಲರ್ಸ್‌ಗಳ ಕೈಹಿಡಿದ ಕಿಯಾ ಮೋಟಾರ್ಸ್

ಸ್ಟಾಕ್ ಪ್ರಮಾಣದಿಂದಾಗಿ ಆಗುತ್ತಿರುವ ನಷ್ಟ ಮತ್ತು ಲಾಕ್‌ಡೌನ್‌ನಿಂದಾಗಿ ಮಾರ್ಗಮಧ್ಯೆದಲ್ಲೇ ಸಿಲುಕಿರುವ ವಾಹನಗಳ ಸಾರಿಗೆ ವೆಚ್ಚವನ್ನು ತಾನೆ ಭರಿಸುವುದಾಗಿ ಭರವಸೆ ನೀಡಿರುವ ಕಿಯಾ ಮೋಟಾರ್ಸ್ ಕಂಪನಿಯು ಕಂಪನಿಯಿಂದ ಬರಬೇಕಿರುವ ಪೂರ್ಣಪ್ರಮಾಣದ ಹಣವನ್ನು ಕೂಡಲೇ ವರ್ಗಾವಣೆ ಮಾಡುವುದಾಗಿ ತಿಳಿಸಿದೆ.

MOST READ: ವೈದ್ಯರ ನೆರವಿಗೆ ಬರಲಿದೆ ಮಹೀಂದ್ರಾ ನಿರ್ಮಾಣದ ವಿಶೇಷ ಏರೋಸೊಲ್ ಬಾಕ್ಸ್

ಲಾಕ್‌ಡೌನ್: ಸಂಕಷ್ಟದಲ್ಲಿರುವ ಡೀಲರ್ಸ್‌ಗಳ ಕೈಹಿಡಿದ ಕಿಯಾ ಮೋಟಾರ್ಸ್

ಹಾಗೆಯೇ ಸ್ಟಾಕ್ ಪ್ರಮಾಣದ ಮೇಲೆ ಬಡ್ಡಿ ಕಟ್ಟಬೇಕಿರುವ ಅಧಿಕೃತ ಡೀಲರ್ಸ್‌ಗಳ ಹೊರೆಯನ್ನು ತಗ್ಗಿಸುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯು ಅಧಿಕೃತ ಡೀಲರ್ಸ್‌ಗಳು ಯಾವುದೇ ರೀತಿಯ ಆರ್ಥಿಕ ದಿವಾಳಿಗೆ ಸಿಲುಕದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದಿದೆ.

ಲಾಕ್‌ಡೌನ್: ಸಂಕಷ್ಟದಲ್ಲಿರುವ ಡೀಲರ್ಸ್‌ಗಳ ಕೈಹಿಡಿದ ಕಿಯಾ ಮೋಟಾರ್ಸ್

ಇನ್ನು ವೈರಸ್ ಹರಡದಂತೆ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿರುವ ಕಿಯಾ ಮೋಟಾರ್ಸ್ ಆನ್‌ಲೈನ್ ಮೂಲಕ ಕಾರು ಮಾರಾಟವನ್ನು ಮುಂದುವರಿಸುವ ಸಿದ್ದತೆಯಲ್ಲಿದ್ದು, ಗ್ರಾಹಕರ ಸೇವೆಯಲ್ಲಿ ಸುರಕ್ಷತೆ ಕಾಯ್ದಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ಪ್ರಕಟಿಸಿದೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಲಾಕ್‌ಡೌನ್: ಸಂಕಷ್ಟದಲ್ಲಿರುವ ಡೀಲರ್ಸ್‌ಗಳ ಕೈಹಿಡಿದ ಕಿಯಾ ಮೋಟಾರ್ಸ್

ಸಂಕಷ್ಟದ ಸಮಯದಲ್ಲಿ ವ್ಯವಹಾರ ಅಭಿವೃದ್ದಿಯ ಜೊತೆ ಜೊತೆಗೆ ಉದ್ಯೋಗಿಗಳಿಗಳು ಗರಿಷ್ಠ ಸುರಕ್ಷತೆ ನೀಡಲು ನಾವು ಬದ್ದ ಎಂದಿರುವ ಕಿಯಾ ಮೋಟಾರ್ಸ್ ಕಂಪನಿಯು ಲಾಕ್‌ಡೌನ್ ತೆರವು ನಂತರ ಕಾರು ಮಾರಾಟದಲ್ಲಿ ಹಲವಾರು ಹೊಸ ಸುರಕ್ಷಾ ಕ್ರಮಗಳೊಂದಿಗೆ ವ್ಯವಹಾರ ಕೈಗೊಳ್ಳಲು ಸಿದ್ದವಾಗಿದೆ.

ಲಾಕ್‌ಡೌನ್: ಸಂಕಷ್ಟದಲ್ಲಿರುವ ಡೀಲರ್ಸ್‌ಗಳ ಕೈಹಿಡಿದ ಕಿಯಾ ಮೋಟಾರ್ಸ್

ಇನ್ನು ಕಾರ್ಪೋರೆಟ್ ಸಾಮಾಜಿಕ ಹೊಣೆಗಾರಿಕೆ ನೀಡಿ ಅಡಿ ಸಂಕಷ್ಟದಲ್ಲಿರುವ ಸರ್ಕಾರದ ಜೊತೆ ಕೈಜೋಡಿಸಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ದೇಣಿಗೆ ಜೊತೆಗೆ ವೈದ್ಯಕೀಯ ಉಪಕರಣಗಳನ್ನು ಸಹ ಉತ್ಪಾದನೆ ಮಾಡಿ ಒದಗಿಸುತ್ತಿದ್ದು, ಕಿಯಾ ಕಂಪನಿ ಕೂಡಾ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಾಕಷ್ಟು ನೆರವು ನೀಡುತ್ತಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಲಾಕ್‌ಡೌನ್: ಸಂಕಷ್ಟದಲ್ಲಿರುವ ಡೀಲರ್ಸ್‌ಗಳ ಕೈಹಿಡಿದ ಕಿಯಾ ಮೋಟಾರ್ಸ್

ಮಹಾಮಾರಿ ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಈ ವೇಳೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಕ್ಕೆ ಆಟೋ ಉತ್ಪಾದನಾ ಕಂಪನಿಗಳು ತಮ್ಮ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಬೆನ್ನಲುಬಾಗಿ ಸರ್ಕಾರದ ಜೊತೆ ಕೈಜೋಡಿಸಿವೆ.

ಲಾಕ್‌ಡೌನ್: ಸಂಕಷ್ಟದಲ್ಲಿರುವ ಡೀಲರ್ಸ್‌ಗಳ ಕೈಹಿಡಿದ ಕಿಯಾ ಮೋಟಾರ್ಸ್

ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಮತ್ತು ಐಸಿಯು ಯುನಿಟ್‌ಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದು, ಆರೋಗ್ಯ ಇಲಾಖೆಯ ಬೇಡಿಕೆಗಳನ್ನು ಪೂರೈಸುತ್ತಿವೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಲಾಕ್‌ಡೌನ್: ಸಂಕಷ್ಟದಲ್ಲಿರುವ ಡೀಲರ್ಸ್‌ಗಳ ಕೈಹಿಡಿದ ಕಿಯಾ ಮೋಟಾರ್ಸ್

ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿನ ಆರೋಗ್ಯ ಸೌಕರ್ಯ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ವಿಶೇಷ ಆದ್ಯತೆ ನೀಡುವುದಾಗಿ ಹೇಳಿಕೊಂಡಿರುವ ಆಟೋ ಕಂಪನಿಗಳು ಪರಿಸರ ಮತ್ತು ಆರೋಗ್ಯ ಕಾಳಜಿಗೆ ವಿಶೇಷ ಆಸಕ್ತಿ ವಹಿಸಿದ್ದು, ಶೀಘ್ರದಲ್ಲೇ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವುದಾಗಿ ಘೋಷಣೆ ಮಾಡಿವೆ.

Most Read Articles

Kannada
English summary
Kia Motors Announces Measures To Support Its Dealers During The COVID-19 Pandemic. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X