ಸೊನೆಟ್ ಕಾರು ಮಾದರಿಯೊಂದಿಗೆ ಮಾರಾಟದಲ್ಲಿ ಶೇ.50 ರಷ್ಟು ಬೆಳವಣಿಗೆ ಸಾಧಿಸಿದ ಕಿಯಾ ಮೋಟಾರ್ಸ್
ಕಿಯಾ ಮೋಟಾರ್ಸ್ ಕಂಪನಿಯು ನವೆಂಬರ್ ಅವಧಿಯಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟವನ್ನು ತನ್ನದಾಗಿಸಿಕೊಂಡಿದ್ದು, ಕಳೆದ ವರ್ಷದ ನವೆಂಬರ್ ಅವಧಿಯ ಕಾರು ಮಾರಾಟಕ್ಕಿಂತಲೂ ಶೇ.50ರಷ್ಟು ಬೆಳವಣಿಗೆ ಸಾಧಿಸಿದೆ.

ಕರೋನಾ ವೈರಸ್ ಪರಿಣಾಮ ತೀವ್ರವಾಗಿ ಕುಸಿತ ಕಂಡಿದ್ದ ಭಾರತೀಯ ಆಟೋ ಉದ್ಯಮವು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಚೇತರಿಸಿಕೊಂಡಿದ್ದು, ಕೆಲವೇ ಕೆಲವು ಆಟೋ ಕಂಪನಿಗಳ ವಾಹನ ಮಾರಾಟದಲ್ಲಿ ಬೆಳವಣಿಗೆಯನ್ನು ಹೊರತುಪಡಿಸಿ ಹಲವು ಆಟೋ ಕಂಪನಿಗಳ ವಾಹನ ಮಾರಾಟವು ಇನ್ನು ಕೂಡಾ ಕುಸಿತ ಅನುಭವಿಸುತ್ತಿವೆ. ಆದರೆ ಹೊಸದಾಗಿ ಮಾರುಕಟ್ಟೆಗೆ ಪ್ರವೇಶಿಸಿರುವ ವಾಹನಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದ್ದು, ಕಿಯಾ ಕಾರುಗಳಿಗೆ ಭರ್ಜರಿ ಬೇಡಿಕೆ ದಾಖಲಾಗಿದೆ.

ವಿವಿಧ ಕಾರು ಉತ್ಪಾದನಾ ಕಂಪನಿಗಳ ಹೊಸ ಕಾರುಗಳ ನೋಂದಣಿಯು ಕಳೆದ ಕೆಲ ತಿಂಗಳಿನಿಂದ ಸಾಕಷ್ಟು ಬೆಳವಣಿಗೆ ಕಂಡುಬಂದಿದ್ದು, ಕಿಯಾ ಮೋಟಾರ್ಸ್, ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಹ್ಯುಂಡೈ ಸೇರಿದಂತೆ ವಿವಿಧ ಕಾರು ಕಂಪನಿಗಳು ಒಟ್ಟು 2,86,353 ಯನಿಟ್ ಕಾರುಗಳನ್ನು ಮಾರಾಟ ಮಾಡಿವೆ.

ಕಿಯಾ ಮೋಟಾರ್ಸ್ ಕಂಪನಿಯು ನವೆಂಬರ್ ಅವಧಿಯಲ್ಲಿ ಶೇ.50ರಷ್ಟು ಬೆಳವಣಿಗೆಯೊಂದಿಗೆ 21,022 ಯುನಿಟ್ ಮಾರಾಟ ಮಾಡಿದ್ದು, ಕಳೆದ ವರ್ಷದ ನವೆಂಬರ್ ಅವಧಿಯಲ್ಲಿ 14,005 ಯುನಿಟ್ ಮಾರಾಟ ಮಾಡಿತ್ತು.

ಸೆಲ್ಟೊಸ್ ಜೊತೆ ಇದೀಗ ಸೊನೆಟ್ ಕಾರು ಮಾರಾಟ ಮಾಡುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯು ಕಾರು ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ಸೆಪ್ಟೆಂಬರ್ 18ರಂದು ಬಿಡುಗಡೆಗೊಂಡಿದ್ದ ಸೊನೆಟ್ ಕಾರು ಕೂಡಾ ಭಾರೀ ಪ್ರಮಾಣದಲ್ಲಿ ಮಾರಾಟಗೊಂಡಿದೆ. ಸೊನೆಟ್ ಕಳೆದ ತಿಂಗಳು ಬರೋಬ್ಬರಿ 11,417 ಯನಿಟ್ ಮಾರಾಟಗೊಳಿಸಲಾಗಿದ್ದು, ಸೆಲ್ಟೊಸ್ ಕಾರು ಮಾದರಿಯು ಕಳೆದ ತಿಂಗಳು ಒಟ್ಟು 9,205 ಯುನಿಟ್ ಮಾರಾಟಗೊಂಡಿದೆ.

ಇನ್ನುಳಿದ ಕಾರ್ನಿವಾಲ್ ಎಂಪಿವಿ ಕಾರು ಕೂಡಾ ದುಬಾರಿ ಬೆಲೆ ನಡುವೆಯೂ 400 ಯುನಿಟ್ ಮಾರಾಟಗೊಂಡಿದ್ದು, ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಕಿಯಾ ಮೋಟಾರ್ಸ್ ಕಂಪನಿಗೆ ಭಾರೀ ಪ್ರಮಾಣದ ಲಾಭ ತಂದುಕೊಡುವ ನೀರಿಕ್ಷೆಯಲ್ಲಿದೆ.

ಭಾರತದಲ್ಲಿ ಕಿಯಾ ಮೋಟಾರ್ಸ್ ನಿರ್ಮಾಣದ ಮೂರನೇ ಕಾರು ಮಾದರಿಯಾಗಿ ಬಿಡುಗಡೆಯಾಗಿರುವ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ವಿನೂತನ ಫೀಚರ್ಸ್ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 1.2-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಸೊನೆಟ್ ಕಾರು ಆರಂಭಿಕವಾಗಿ ರೂ. 6.71 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.89 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರನ್ನು ಜಿಟಿ-ಲೈನ್ ಮತ್ತು ಟೆಕ್-ಲೈನ್ ವೆರಿಯೆಂಟ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.

ಜಿಟಿ-ಲೈನ್ ಮಾದರಿಯಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್ ಮತ್ತು ಹೆಚ್‌ಟಿಎಕ್ಸ್ ಪ್ಲಸ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದಲ್ಲಿ ಜಿಟಿ ಲೈನ್‌ನಲ್ಲಿ ಜಿಟಿಎಕ್ಸ್ ಪ್ಲಸ್ ವೆರಿಯೆಂಟ್ ಖರೀದಿಗೆ ಲಭ್ಯವಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಸೊನೆಟ್ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಬ್ ಫೋರ್ ಮೀಟರ್ ಕಾರು ಮಾದರಿಯಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಹೊಸ ಕಾರು ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.


Click it and Unblock the Notifications