ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಭಾರತದಲ್ಲಿ 2ನೇ ಘಟಕ ಸ್ಥಾಪನೆಗೆ ಮುಂದಾದ ಕಿಯಾ ಮೋಟಾರ್ಸ್

ಭಾರತದಲ್ಲಿ 2017ರಿಂದ ಕಾರು ಉತ್ಪಾದನೆಗೆ ಚಾಲನೆ ನೀಡಿದ್ದ ಕಿಯಾ ಮೋಟಾರ್ಸ್ ಕಂಪನಿಯು ಕಳೆದ ವರ್ಷ ಅಗಸ್ಟ್‌ನಲ್ಲಿ ತನ್ನ ಮೊದಲ ಕಾರನ್ನು ಬಿಡುಗಡೆ ಮಾಡಿತ್ತು. ಇದೀಗ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿರುವ ಕಿಯಾ ಕಂಪನಿಯು ಶೀಘ್ರದಲ್ಲೇ ಮತ್ತೊಂದು ಕಾರು ಉತ್ಪಾದನಾ ಘಟಕ ನಿರ್ಮಾಣಕ್ಕೆ ಮುಂದಾಗಿದೆ.

ಭಾರತದಲ್ಲಿ 2ನೇ ಘಟಕ ಸ್ಥಾಪನೆಗೆ ಮುಂದಾದ ಕಿಯಾ ಮೋಟಾರ್ಸ್

ಆಂಧ್ರಪ್ರದೇಶದಲ್ಲಿ ಮೊದಲ ಕಾರು ಉತ್ಪಾದನಾ ಘಟಕವನ್ನು ಹೊಂದಿರುವ ಕಿಯಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ಉತ್ತರ ಭಾರತದಲ್ಲಿ 2ನೇ ಕಾರು ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡುವ ಸಾಧ್ಯತೆಗಳಿದ್ದು, ಭಾರೀ ಪ್ರಮಾಣದ ಹೂಡಿಕೆ ಮಾಡಲು ಸಿದ್ದವಾಗಿದೆ. ಮೊದಲ ಕಾರು ಉತ್ಪಾದನಾ ಘಟಕ ನಿರ್ಮಾಣದ ಮೇಲೆ ಬರೋಬ್ಬರಿ ರೂ.7 ಸಾವಿರ ಕೋಟಿ ಹೂಡಿಕೆ ಮಾಡಿದ್ದ ಕಿಯಾ ಕಂಪನಿಯು ಇದೀಗ ಮತ್ತೊಮ್ಮೆ ಹೂಡಿಕೆಗೆ ಸಿದ್ದತೆ ನಡೆಸಿದೆ.

ಭಾರತದಲ್ಲಿ 2ನೇ ಘಟಕ ಸ್ಥಾಪನೆಗೆ ಮುಂದಾದ ಕಿಯಾ ಮೋಟಾರ್ಸ್

ಅನಂತಪುರ ಜಿಲ್ಲೆ ಪೆನುಗೊಂಡ ಬಳಿಯಿರುವ ಕಿಯಾ ಕಂಪನಿಯ ಮೊದಲ ಕಾರು ಉತ್ಪಾದನಾ ಘಟಕವು ಬರೋಬ್ಬರಿ 211 ಎಕರೆ ಪ್ರದೇಶದಲ್ಲಿ ತಲೆಎತ್ತಿದ್ದು, ವಾರ್ಷಿಕವಾಗಿ 3 ಲಕ್ಷ ಕಾರುಗಳ ನಿರ್ಮಾಣ ಸಾಮರ್ಥ್ಯ ಹೊಂದಿದೆ. ಇದೀಗ 2ನೇ ಘಟಕವು ಮೊದಲ ಘಟಕದಷ್ಟೇ ಕಾರು ಉತ್ಪಾದನಾ ಸಾಮಾರ್ಥ್ಯ ಹೊಂದಿರಲಿದ್ದು, ರಫ್ತು ಪ್ರಮಾಣವನ್ನು ಹೆಚ್ಚಿಸುವ ಯೋಜನೆಯಲ್ಲಿದೆ.

ಭಾರತದಲ್ಲಿ 2ನೇ ಘಟಕ ಸ್ಥಾಪನೆಗೆ ಮುಂದಾದ ಕಿಯಾ ಮೋಟಾರ್ಸ್

ಇನ್ನು ಕಿಯಾ ಕಂಪನಿಯು ಬಿಡುಗಡೆ ಮಾಡಿದ್ದ ಮೊದಲ ಸೆಲ್ಟೊಸ್ ಕಾರು ಇದುವರೆಗೆ 80 ಸಾವಿರ ಯುನಿಟ್ ಮಾರಾಟ ದಾಖಲೆ ಕಂಡಿದ್ದು, ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಮರಾಟವಾದ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯಾಗಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಭಾರತದಲ್ಲಿ 2ನೇ ಘಟಕ ಸ್ಥಾಪನೆಗೆ ಮುಂದಾದ ಕಿಯಾ ಮೋಟಾರ್ಸ್

ತದನಂತರ ಎರಡನೇ ಕಾರು ಮಾದರಿಯಾಗಿ ಬಿಡುಗಡೆಯಾದ ಕಾರ್ನಿವಾಲ್ ಎಂಪಿವಿ ಕಾರು ಕೂಡಾ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ದುಬಾರಿ ಬೆಲೆ ನಡುವೆಯೂ ಮೂರು ತಿಂಗಳ ಅವಧಿಯಲ್ಲಿ 5 ಸಾವಿರ ಯುನಿಟ್ ಮಾರಾಟವಾಗಿದೆ.

ಭಾರತದಲ್ಲಿ 2ನೇ ಘಟಕ ಸ್ಥಾಪನೆಗೆ ಮುಂದಾದ ಕಿಯಾ ಮೋಟಾರ್ಸ್

ಇದೀಗ ಬಿಡುಗಡೆಗೆ ಸಿದ್ದವಾಗಿರುವ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಕೂಡಾ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಗ್ರಾಹಕರ ಬೇಡಿಕೆಯೆಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಕಾರುಗಳು ರಸ್ತೆಗಿಳಿಯಲಿವೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಭಾರತದಲ್ಲಿ 2ನೇ ಘಟಕ ಸ್ಥಾಪನೆಗೆ ಮುಂದಾದ ಕಿಯಾ ಮೋಟಾರ್ಸ್

ಇದಕ್ಕಾಗಿಯೇ ಉತ್ಪಾದನಾ ಪ್ರಮಾಣವನ್ನು ಹೆಚ್ಚಳ ಮಾಡಲು 2ನೇ ಘಟಕ ನಿರ್ಮಾಣಕ್ಕೆ ಸಿದ್ದತೆ ನಡೆಸಿರುವ ಕಿಯಾ ಮೋಟಾರ್ಸ್ ಕಂಪನಿಯು ಸಹೋದರ ಸಂಸ್ಥೆ ಹ್ಯುಂಡೈ ಹಿಂದಿಕ್ಕಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದು, ಮುಂದಿನ 2 ವರ್ಷಗಳ ಅವಧಿಯಲ್ಲಿ 7 ಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಸಿದ್ದತೆಯಲ್ಲಿದೆ.

More from DriveSpark

Article Published On: Sunday, April 26, 2020, 9:00 [IST]
English summary
Kia Motors Considering Setting Up A Second Production Plant In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+