ಸೊನೆಟ್ ನಂತರ ಸೊಲ್ ಇವಿ ಬಿಡುಗಡೆಗೆ ಸಿದ್ದವಾದ ಕಿಯಾ ಮೋಟಾರ್ಸ್

ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಕಾರು ಮಾರಾಟ ಆರಂಭಿಸಿದ ಕೇವಲ 1 ವರ್ಷದ ಅವಧಿಯಲ್ಲಿ ಅಗ್ರ ಸ್ಥಾನಕ್ಕೇರುವ ಮೂಲಕ ಬಹುಬೇಡಿಕೆಯ ಕಾರ್ ಬ್ರಾಂಡ್ ಆಗಿ ಹೊರಹೊಮ್ಮಿದ್ದು, ಸೆಲ್ಟೊಸ್, ಕಾರ್ನಿವಾಲ್ ನಂತರ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಸೊನೆಟ್ ನಂತರ ಸೊಲ್ ಇವಿ ಬಿಡುಗಡೆಗೆ ಸಿದ್ದವಾದ ಕಿಯಾ ಮೋಟಾರ್ಸ್

ಕಿಯಾ ಕಂಪನಿಯು ಸದ್ಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಸೊನೆಟ್ ಕಾರು ಮಾದರಿಯನ್ನು ಅನಾವರಣಗೊಳಿಸಿ ಬಿಡುಗಡೆಯ ಯೋಜನೆಯಲ್ಲಿದ್ದು, ಮುಂದಿನ ತಿಂಗಳು ಸೆಪ್ಟೆಂಬರ್‌ನಲ್ಲಿ ಸೊನೆಟ್ ಬಿಡುಗಡೆಯ ನಂತರ ಸೊಲ್ ಇವಿ ಹ್ಯಾಚ್‌ಬ್ಯಾಕ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ. ಈ ಕುರಿತಂತೆ ಮಾಧ್ಯಮ ಸಂಸ್ಥೆಯೊಂದರ ಸಂದರ್ಶನದಲ್ಲಿ ಭವಿಷ್ಯದ ವಾಹನ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದು, ಈ ವೇಳೆ ಸೊಲ್ ಇವಿ ಮಾದರಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಸೊನೆಟ್ ನಂತರ ಸೊಲ್ ಇವಿ ಬಿಡುಗಡೆಗೆ ಸಿದ್ದವಾದ ಕಿಯಾ ಮೋಟಾರ್ಸ್

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ನಿರೋ ಎಲೆಕ್ಟ್ರಿಕ್ ಎಸ್‌ಯುವಿ ಹಾಗೂ ಸೊಲ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆವೃತ್ತಿಯಲ್ಲಿ ಯಾವ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲವಾದರೂ ಹ್ಯುಂಡೈ ಕೊನಾ ಇವಿ ಹಾಗೂ ಎಂಜಿ ಝಡ್ಎಸ್ ಇವಿ ಕಾರಿಗೆ ಪೈಪೋಟಿಯಾಗಿ ಸೊಲ್ ಇವಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸೊನೆಟ್ ನಂತರ ಸೊಲ್ ಇವಿ ಬಿಡುಗಡೆಗೆ ಸಿದ್ದವಾದ ಕಿಯಾ ಮೋಟಾರ್ಸ್

ಸೊಲ್ ಇವಿ ಈ ಕಾರು ಪ್ರತಿ ಚಾರ್ಜ್‌ಗೆ 400ಕಿ.ಮೀ ನಿಂದ 450 ಕಿ.ಮೀ ಮೈಲೇಜ್ ನೀಡಲಿದೆ. ಹೊಸ ಕಾರು ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಕಾರು ರೂ.14 ಲಕ್ಷದಿಂದ ರೂ.18 ಲಕ್ಷ ಬೆಲೆಯನ್ನು ಹೊಂದಿರುವ ನಿರೀಕ್ಷೆಗಳಿವೆ.

ಸೊನೆಟ್ ನಂತರ ಸೊಲ್ ಇವಿ ಬಿಡುಗಡೆಗೆ ಸಿದ್ದವಾದ ಕಿಯಾ ಮೋಟಾರ್ಸ್

ಜೊತೆಗೆ ಸೊಲ್ ಇವಿ ಕಾರಿನಲ್ಲಿ ಹಲವಾರು ಐಷಾರಾಮಿ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಸೊಲ್ ಇವಿ ಕಾರಿಗಿಂತ ಸುಧಾರಿತ ಬ್ಯಾಟರಿ ಪ್ಯಾಕ್ ಹೊಂದಿರುವ ನಿರೋ ಇವಿ ಕಾರು ತುಸು ದುಬಾರಿಯಾಗಿರಲಿದೆ. ಹೀಗಾಗಿ ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಸೊಲ್ ಇವಿ ಪ್ರಮುಖ ಆಕರ್ಷಣೆಯಾಗಲಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸೊನೆಟ್ ನಂತರ ಸೊಲ್ ಇವಿ ಬಿಡುಗಡೆಗೆ ಸಿದ್ದವಾದ ಕಿಯಾ ಮೋಟಾರ್ಸ್

ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿಗಾಗಿ ಹ್ಯುಂಡೈ ಜೊತೆಗೂಡಿರುವ ಕಿಯಾ ಮೋಟಾರ್ಸ್ ಕಂಪನಿಯು ಸ್ವತಂತ್ರವಾಗಿ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡಲಿದ್ದರೂ ಕೆಲವು ತಾಂತ್ರಿಕ ಅಂಶಗಳನ್ನು ಹ್ಯುಂಡೈ ಕಂಪನಿಯೊಂದಿಗೆ ಹಂಚಿಕೆ ಮಾಡಿಕೊಂಡಿದೆ.

ಸೊನೆಟ್ ನಂತರ ಸೊಲ್ ಇವಿ ಬಿಡುಗಡೆಗೆ ಸಿದ್ದವಾದ ಕಿಯಾ ಮೋಟಾರ್ಸ್

ಇದು ಭವಿಷ್ಯದ ವಾಹನಗಳಿಗೆ ಅನ್ವಯಿಸಲಿದ್ದು, ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಎರಡು ಕಾರು ಕಂಪನಿಗಳು ಭಾರತದಲ್ಲಿ ಮತ್ತೊಂದು ಹಂತದ ಸಂಚಲನ ಸೃಷ್ಠಿಸಲಿವೆ. ಈ ಮೂಲಕ ಭಾರತದ ಕಾರು ಕಂಪನಿಗಳಿಗೆ ಮತ್ತಷ್ಟು ಪೈಪೋಟಿ ನೀಡಿರುವ ಕೊರಿಯನ್ ಕಂಪನಿಗಳು ಬ್ಯಾಟರಿ ಉತ್ಪನ್ನಗಳನ್ನು ಭಾರತದಲ್ಲಿ ಅಭಿವೃದ್ದಿಪಡಿಸುವ ಯೋಜನೆಯನ್ನು ಹೊಂದಿವೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸೊನೆಟ್ ನಂತರ ಸೊಲ್ ಇವಿ ಬಿಡುಗಡೆಗೆ ಸಿದ್ದವಾದ ಕಿಯಾ ಮೋಟಾರ್ಸ್

ಸದ್ಯ ಮಾರುಕಟ್ಟೆಯಲ್ಲಿರುವ ಬಹುತೇಕ ಎಲೆಕ್ಟ್ರಿಕ್ ವಾಹನಗಳು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾದ ಬ್ಯಾಟರಿ ಉತ್ಪನ್ನಗಳನ್ನೇ ಅವಲಂಬಿಸಿದ್ದು, ಈ ವಿಚಾರವಾಗಿ ಖಡಕ್ ಎಚ್ಚರಿಕೆ ನೀಡಿರುವ ಕೇಂದ್ರ ಸರ್ಕಾರವು ಸಾಧ್ಯವಾದಷ್ಟು ಮಟ್ಟಿಗೆ ಭಾರತದಲ್ಲಿಯೇ ಬ್ಯಾಟರಿ ಉತ್ಪಾದನೆ ಮಾಡಿ ಬಳಸುವಂತೆ ಕರೆ ನೀಡಿದೆ.

ಸೊನೆಟ್ ನಂತರ ಸೊಲ್ ಇವಿ ಬಿಡುಗಡೆಗೆ ಸಿದ್ದವಾದ ಕಿಯಾ ಮೋಟಾರ್ಸ್

ಹೀಗಾಗಿ ಬ್ಯಾಟರಿ ಸಂಪನ್ಮೂನಕ್ಕಾಗಿ ಚೀನಿ ಹಾಗೂ ಥೈವಾನ್ ಮಾರುಕಟ್ಟೆಗಳನ್ನು ನೆಚ್ಚಿಕೊಂಡಿದ್ದ ಇವಿ ಕಾರು ಕಂಪನಿಗಳು ಇದೀಗ ಭಾರತದಲ್ಲೇ ಹೂಡಿಕೆ ಮಾಡಿ ಬ್ಯಾಟರಿ ಉತ್ಪನ್ನಗಳನ್ನು ಸಿದ್ದಪಡಿಸಲು ತಯಾರಾಗಿದ್ದು, ಇದು ಇವಿ ವಾಹನಗಳ ಬೆಲೆ ಇಳಿಕೆಗೂ ಸಹಕಾರಿಯಾಗಲಿದೆ.

Most Read Articles

Kannada
English summary
Kia motors to launch another EV in Indian market. Read in Kannada.
Story first published: Saturday, August 22, 2020, 19:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X