ಕರೋನಾ ಎಫೆಕ್ಟ್- ಕಾರುಗಳ ಬದಲಿಗೆ ಮಾಸ್ಕ್‌ಗಳನ್ನು ಉತ್ಪಾದನೆಗೆ ಚಾಲನೆ ನೀಡಿದ ಕಿಯಾ ಮೋಟಾರ್ಸ್

ಚೀನಾದಿಂದ ಶುರುವಾದ ಕರೋನಾ ವೈರಸ್ ಇದೀಗ ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ಇದುವರೆಗೆ 5 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದಲ್ಲದೆ 20 ಸಾವಿರ ಜನ ಪ್ರಾಣಕಳೆದುಕೊಂಡಿದ್ದಾರೆ. 5 ಲಕ್ಷ ಜನರಲ್ಲಿ ಇದುವರೆ ಸುಮಾರು 1 ಲಕ್ಷದಷ್ಟು ಜನ ಗುಣಮುಖರಾಗಿದ್ದು, ಶೇ.10 ರಷ್ಟು ಸೋಂಕಿತರ ಸ್ಥಿತಿ ಶೋಚನೀಯವಾಗಿದೆ.

ಕರೋನಾ ಎಫೆಕ್ಟ್- ಕಾರುಗಳ ಬದಲಿಗೆ ಮಾಸ್ಕ್‌ಗಳನ್ನು ಉತ್ಪಾದನೆಗೆ ಚಾಲನೆ ನೀಡಿದ ಕಿಯಾ ಮೋಟಾರ್ಸ್

ವೈರಸ್ ತಡೆಗಾಗಿ ಈಗಾಗಲೇ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದು, ವೈದ್ಯಕೀಯ ಉಪಕರಣಗಳ ಕೊರತೆ ಎದ್ದುಕಾಣುತ್ತಿದೆ. ಹೀಗಾಗಿ ಆಟೋ ಉತ್ಪಾದನಾ ಘಟಕಗಳಲ್ಲಿ ಇದೀಗ ವೈದಕೀಯ ಉಪಕರಣಗಳ ಉತ್ಪಾದನೆಗೆ ನಿರ್ಧರಿಸಲಾಗಿದ್ದು, ವೆಂಟಿಲೆಟರ್ ಮತ್ತು ಮಾಸ್ಕ್‌ ಉತ್ಪಾದನೆ ಪ್ರಮುಖ ಕಾರು ಕಂಪನಿಗಳು ಒಪ್ಪಿಗೆ ಸೂಚಿಸಿವೆ. ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಕೂಡಾ ಮಹತ್ವದ ನಿರ್ಧಾರವೊಂದರನ್ನು ಪ್ರಕಟಿಸಿದ್ದು, ಶೀಘ್ರದಲ್ಲೇ 1 ಮಿಲಿಯನ್(10 ಲಕ್ಷ) ಫೇಸ್ ಮಾಸ್ಕ್‌ಗಳನ್ನು ಅಭಿವೃದ್ದಿಪಡಿಸಿ ಕೊಡುವುದಾಗಿ ಹೇಳಿಕೊಂಡಿದೆ.

ಕರೋನಾ ಎಫೆಕ್ಟ್- ಕಾರುಗಳ ಬದಲಿಗೆ ಮಾಸ್ಕ್‌ಗಳನ್ನು ಉತ್ಪಾದನೆಗೆ ಚಾಲನೆ ನೀಡಿದ ಕಿಯಾ ಮೋಟಾರ್ಸ್

ಚೀನಾದಲ್ಲಿರುವ ಝಿನುಹು ಕಾರು ಉತ್ಪಾದನಾ ಘಟಕದಲ್ಲಿ ಫೇಸ್ ಮಾಸ್ಕ್‌ಗಳನ್ನು ತಯಾರಿ ಮಾಡಲಿರುವ ಕಿಯಾ ಮೋಟಾರ್ಸ್ ಕಂಪನಿಯು ಚೀನಿ ಸರ್ಕಾರಕ್ಕೆ ನೀಡಲಿದ್ದು, ಭಾರತದಲ್ಲೂ ಮಾಸ್ಕ್‌ಗಳನ್ನು ತಯಾರು ಮಾಡಿಕೊಡುವ ಸಾಧ್ಯತೆಗಳಿವೆ.

ಕರೋನಾ ಎಫೆಕ್ಟ್- ಕಾರುಗಳ ಬದಲಿಗೆ ಮಾಸ್ಕ್‌ಗಳನ್ನು ಉತ್ಪಾದನೆಗೆ ಚಾಲನೆ ನೀಡಿದ ಕಿಯಾ ಮೋಟಾರ್ಸ್

ಆಂಧ್ರಪ್ರದೇಶದಲ್ಲಿರುವ ಕಾರು ಉತ್ಪಾದನಾ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಕಿಯಾ ಮೋಟಾರ್ಸ್ ಕಂಪನಿಯು ಬೇಡಿಕೆಗೆ ಅನುಗುಣವಾಗಿ ಫೇಸ್‌ ಮಾಸ್ಕ್ ಮತ್ತು ವೆಂಟಿಲೆಟರ್‌ಗಳನ್ನು ನಿರ್ಮಾಣ ಮಾಡಲಿದ್ದು, ಕಿಯಾ ಮೋಟಾರ್ಸ್ ಮಾತ್ರವಲ್ಲದೆ ಮಹೀಂದ್ರಾ ಸಹ ವೆರಿಯೆಂಟ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದೆ.

ಕರೋನಾ ಎಫೆಕ್ಟ್- ಕಾರುಗಳ ಬದಲಿಗೆ ಮಾಸ್ಕ್‌ಗಳನ್ನು ಉತ್ಪಾದನೆಗೆ ಚಾಲನೆ ನೀಡಿದ ಕಿಯಾ ಮೋಟಾರ್ಸ್

ಜೊತೆಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಕೆನಾಡ್ ಪ್ರಧಾನಿ ಜಸ್ಟಿನ್ ಟ್ರೂಡಿಯು ಅವರ ಮನವಿಗೆ ಸ್ಪಂದಿಸಿರುವ ವಿಶ್ವದ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಸಹ ತಾತ್ಕಾಲಿಕವಾಗಿ ಉತ್ಪಾದನೆ ನಿಲ್ಲಿಸಿರುವುದರಿಂದ ವೈದ್ಯಕೀಯ ಉಪಕರಣಗಳನ್ನು ತಯಾರು ಮಾಡುವುದಾಗಿ ಹೇಳಿಕೊಂಡಿದ್ದು, ತುರ್ತು ಸಂದರ್ಭದಲ್ಲಿ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಹಣಕಾಸಿನ ನೆರವನ್ನು ಸಹ ನೀಡಿವೆ.

ಕರೋನಾ ಎಫೆಕ್ಟ್- ಕಾರುಗಳ ಬದಲಿಗೆ ಮಾಸ್ಕ್‌ಗಳನ್ನು ಉತ್ಪಾದನೆಗೆ ಚಾಲನೆ ನೀಡಿದ ಕಿಯಾ ಮೋಟಾರ್ಸ್

ಭಾರತದಲ್ಲಿ ಪ್ರಮುಖ ಕಾರು ಮಾರಾಟ ಕಂಪನಿಯಾಗಿರುವ ಎಂಜಿ ಮೋಟಾರ್ ಕಂಪನಿಯು ಈಗಾಗಲೇ ರೂ.2 ಪರಿಹಾರವಾಗಿ ಪ್ರಧಾನಿಮಂತ್ರಿಯವರ ತುರ್ತು ನಿಧಿಗೆ ಸಹಾಯಯಾಚಿಸಿದ್ದು, ಇನ್ನು ಹಲವು ಕಂಪನಿಗಳು ನೇರವು ಘೋಷಿಸುವ ಸಾಧ್ಯತೆಗಳಿವೆ.

ಕರೋನಾ ಎಫೆಕ್ಟ್- ಕಾರುಗಳ ಬದಲಿಗೆ ಮಾಸ್ಕ್‌ಗಳನ್ನು ಉತ್ಪಾದನೆಗೆ ಚಾಲನೆ ನೀಡಿದ ಕಿಯಾ ಮೋಟಾರ್ಸ್

ಇನ್ನು ದೇಶದಲ್ಲಿ ವೈರಸ್ ತಡೆಯಲು ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ವಿವಿಧ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಭಾರತದ ಕ್ರಮಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಕರೋನಾ ಎಫೆಕ್ಟ್- ಕಾರುಗಳ ಬದಲಿಗೆ ಮಾಸ್ಕ್‌ಗಳನ್ನು ಉತ್ಪಾದನೆಗೆ ಚಾಲನೆ ನೀಡಿದ ಕಿಯಾ ಮೋಟಾರ್ಸ್

ಕರೋನಾ ವೈರಸ್ ಅನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಈಗಗಾಲೇ ಕೇಂದ್ರ ಸರ್ಕಾರ ಸೇರಿದಂತೆ ವಿವಿಧ ರಾಜ್ಯಗಳು ಸಹ ಗರಿಷ್ಠ ಮಟ್ಟದ ಮುಂಜಾಗ್ರತ ಕ್ರಮಗಳೊಂದಿಗೆ ಮುಂದಿನ 21 ದಿನ ಲಾಕ್ ಡೌನ್ ಮಾಡಲಾಗಿದ್ದು, ಕರ್ನಾಟಕ ಸರ್ಕಾರ ಸಹ ಹಲವು ಸುಧಾರಿತ ತಂತ್ರಜ್ಞಾನಗಳ ಸಹಾಯದೊಂದಿಗೆ ವೈರಸ್ ಮಟ್ಟ ಹಾಕುತ್ತಿದೆ.

ಕರೋನಾ ಎಫೆಕ್ಟ್- ಕಾರುಗಳ ಬದಲಿಗೆ ಮಾಸ್ಕ್‌ಗಳನ್ನು ಉತ್ಪಾದನೆಗೆ ಚಾಲನೆ ನೀಡಿದ ಕಿಯಾ ಮೋಟಾರ್ಸ್

ಜೊತೆಗೆ ದೇಶದ ಇತರೆ ರಾಜ್ಯಗಳಿಂತಲೂ ಹೆಚ್ಚು ಕರೋನಾ ಪಾಸಿಟಿವ್ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿರುವುದು ಜನರಲ್ಲಿ ಮಾತ್ರವಲ್ಲದೆ ಸರ್ಕಾರವನ್ನು ಚಿಂತೆಗೀಡು ಮಾಡಿದ್ದು, ವೈರಸ್ ಹರಡುವಿಕೆಯ 3ನೇ ಮತ್ತು 4ನೇ ಹಂತವನ್ನು ಕುಗ್ಗಿಸಲು ಕೆಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ.

ಕರೋನಾ ಎಫೆಕ್ಟ್- ಕಾರುಗಳ ಬದಲಿಗೆ ಮಾಸ್ಕ್‌ಗಳನ್ನು ಉತ್ಪಾದನೆಗೆ ಚಾಲನೆ ನೀಡಿದ ಕಿಯಾ ಮೋಟಾರ್ಸ್

ರಾಜ್ಯ ಗಡಿಭಾಗಗಳನ್ನು ಈಗಾಗಲೇ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ತುರ್ತು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಈ ವೇಳೆಯೂ ವೈರಸ್ ಹರಡದಂತೆ ನಂಜು ನಿರೋಧಕ(ಡಿಸ್ ಇನ್ಫೆಕ್ಷನ್) ರಾಸಾಯನಿಕವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಯ ಸಹಾಯದೊಂದಿಗೆ ಸಿಂಪರಣೆ ಮಾಡಲಾಗುತ್ತಿದ್ದು, ಇದೀಗ ಸೋಂಕು ಪಿಡಿತ ನಗರದೊಳಗಿನ ಸ್ವಚ್ಚತೆಗೂ ಹೆಚ್ಚಿನ ಆದ್ಯತೆ ನೀಡುವ ಮೂಲಕ ನಂಜು ನಿರೋಧಕವನ್ನು ಸಿಂಪರಣೆ ಮಾಡಲಾಗುತ್ತಿದೆ.

ಕರೋನಾ ಎಫೆಕ್ಟ್- ಕಾರುಗಳ ಬದಲಿಗೆ ಮಾಸ್ಕ್‌ಗಳನ್ನು ಉತ್ಪಾದನೆಗೆ ಚಾಲನೆ ನೀಡಿದ ಕಿಯಾ ಮೋಟಾರ್ಸ್

ಪ್ರಾಯೋಗಿಕವಾಗಿ ಡ್ರೋನ್ ಬಳಕೆ ಮಾಡಿ ನಂಜು ನಿರೋಧಕ ಔಷಧಿಯನ್ನು ಸಿಂಪರಣೆ ಮಾಡಲಾಗಿದ್ದು,ಕರೋನಾ ವೈರಸ್ ಸೋಂಕಿತರ ಮೇಲೆ ನಿಗಾ ಇಡಲು ವೈದ್ಯಕೀಯ ಕ್ಷೇತ್ರದಲ್ಲಿ ರೋಬೋಟಿಕ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ.

Most Read Articles

Kannada
English summary
Kia Motors will produce one million masks at china plant details, Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X