ಆಟೋ ಎಕ್ಸ್‌ಪೋ 2020: ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಟೀಸರ್ ಬಿಡುಗಡೆ

ಫೆಬ್ರುವರಿ 7ರಿಂದ ಆರಂಭವಾಗಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ತನ್ನ ಹೊಸ ಕಾರು ಮಾದರಿಗಳನ್ನು ಪ್ರದರ್ಶನಗೊಳಿಸಲು ಭರ್ಜರಿ ತಯಾರಿ ನಡೆಸಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ವಿವಿಧ ಮಾದರಿಯ ನಾಲ್ಕು ಹೊಸ ಕಾರುಗಳನ್ನು ಅನಾವರಣಗೊಳಿಸಲಿದ್ದು, ಕ್ಯೂವೈಎ ಕೋಡ್‌ನೆಮ್ ಆಧರಿತ ಸೊನೆಟ್ ಕಾರಿನ ಟೀಸರ್ ಬಹಿರಂಗ ಪಡಿಸಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಟೀಸರ್ ಬಿಡುಗಡೆ

ಕಿಯಾ ಮೋಟಾರ್ಸ್ ಸಂಸ್ಥೆಯು ಸದ್ಯ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಮೂಲಕ ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ರಸ್ತೆಗಿಳಿಸಲಿದೆ. ಇದಕ್ಕಾಗಿ ಭಾರೀ ಪ್ರಮಾಣದ ಹೂಡಿಕೆಯನ್ನು ಸಹ ಮಾಡಿರುವ ಕಿಯಾ ಸಂಸ್ಥೆಯು ವಾರ್ಷಿಕವಾಗಿ 3 ಲಕ್ಷ ಕಾರು ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದು, ಮಧ್ಯಮ ಗಾತ್ರದ ಕಾರುಗಳ ಜೊತೆಗೆ ಐಷಾರಾಮಿ ಕಾರುಗಳನ್ನು ಸಹ ಬಿಡುಗಡೆ ಮಾಡಲಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಟೀಸರ್ ಬಿಡುಗಡೆ

ಭಾರತದಲ್ಲಿ ಬಿಡುಗಡೆಯಾಗಲಿರುವ ಕಿಯಾ ಹೊಸ ಕಾರುಗಳ ಪೈಕಿ ಕಾರ್ನಿವಾಲ್ ಎಂಪಿವಿ ಮತ್ತು ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಹತ್ವದ ಬದಲಾವಣೆಗೆ ಕಾರಣವಾಗಲಿದ್ದು, ಆಟೋ ಎಕ್ಸ್‌ಪೋದಲ್ಲಿ ಕಿಯಾ ಹೊಸ ಕಾರುಗಳು ಪ್ರಮುಖ ಆಕರ್ಷಣೆಯಾಗಲಿವೆ.

ಆಟೋ ಎಕ್ಸ್‌ಪೋ 2020: ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಟೀಸರ್ ಬಿಡುಗಡೆ

ಸ್ಪೋಟಿ ಲುಕ್ ಜೊತೆಗೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಸ ಕಾರು ವಿನೂತನ ಗ್ರಾಹಕರನ್ನು ಸೆಳೆಯಲಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಇದು ಹೊಸ ಭರವಸೆ ಮೂಡಿಸಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಟೀಸರ್ ಬಿಡುಗಡೆ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಸ್ಟೊನಿಕ್ ಮಾದರಿಯಲ್ಲೇ ಅಭಿವೃದ್ದಿಗೊಂಡಿರುವ ಕ್ಯೂವೈಎ ಕೊಡ್ ಆಧರಿತ ಕಾರು(ಸೊನೆಟ್) ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ300, ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಪೈಪೋಟಿ ನೀಡಲಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾಗಿ ಈಗಾಗಲೇ ವಿವಿಧ ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಟೀಸರ್ ಬಿಡುಗಡೆ

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.7 ಲಕ್ಷದಿಂದ ರೂ.11 ಲಕ್ಷ ಬೆಲೆ ಅಂತರ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ಕಾರಿನ ಮತ್ತಷ್ಟು ತಾಂತ್ರಿಕ ಮಾಹಿತಿಗಳು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಲಭ್ಯವಾಗಲಿವೆ.

ಆಟೋ ಎಕ್ಸ್‌ಪೋ 2020: ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಟೀಸರ್ ಬಿಡುಗಡೆ

ಮಾಹಿತಿಗಳ ಪ್ರಕಾರ ಹೊಸ ಕಾರಿನಲ್ಲಿ 1.2-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಫೋರ್ ಸಿಲಿಂಡರ್ ಪೆಟ್ರೋಲ್, 1.6-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಫೋರ್ ಸಿಲಿಂಡರ್ ಪೆಟ್ರೋಲ್ ಮತ್ತು 1.4-ಲೀಟರ್ ಟರ್ಬೋಚಾರ್ಜ್ಡ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆ ಪಡೆಯುವ ಸಾಧ್ಯತೆಗಳಿವೆ.

ಆಟೋ ಎಕ್ಸ್‌ಪೋ 2020: ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಟೀಸರ್ ಬಿಡುಗಡೆ

ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಚಾರ್ಜ್ಡ್ ತ್ರೀ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆಯುವ ಸಾಧ್ಯತೆಗಳಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಳ್ಳಲಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಟೀಸರ್ ಬಿಡುಗಡೆ

ಬಿಡುಗಡೆಯ ಅವಧಿ(ಅಂದಾಜು)

ಫೆಬ್ರುವರಿ 7ರಿಂದ ಆರಂಭವಾಗಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾದ ನಂತರ ಕಿಯಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಬಿಡುಗಡೆಯಾಗಲಿದ್ದು, ಇನ್ನು ಹಲವು ಸುತ್ತಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಮುಗಿಸಿದ ನಂತರ ಮೇ ಹೊತ್ತಿಗೆ ಬಿಡುಗಡೆಗೊಳ್ಳಲಿದೆ.

ಆಟೋ ಎಕ್ಸ್‌ಪೋ 2020: ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಟೀಸರ್ ಬಿಡುಗಡೆ

ಇನ್ನು ಕಿಯಾ ಸಂಸ್ಥೆಯು ಕಂಪ್ಯಾಕ್ಟ್ ಎಸ್‌ಯುವಿ ಜೊತೆಗೆ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಕಾರ್ನಿವಾಲ್ ಎಂಪಿವಿ, ಸೆಲ್ಟೊಸ್ ಎಕ್ಸ್‌-ಲೈನ್(ಆಫ್ ರೋಡ್ ಕಾರು) ಮತ್ತು ಆಪ್ಟಿಮಾ ಕೆ5 ಸೆಡಾನ್ ಕಾರುಗಳನ್ನು ಪ್ರದರ್ಶನಗೊಳಿಸಲಿದ್ದು, ಕಾರು ಮಾರಾಟದಲ್ಲಿ ಕಿಯಾ ಹೊಸ ಬದಲಾವಣಗೆ ಕಾರಣವಾಗಲಿದೆ.

Article Published On: Friday, January 24, 2020, 16:22 [IST]
English summary
Kia Motor India To Unveil New Compact-SUV Concept At 2020 Auto Expo. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+