ಬಿಡುಗಡೆಗೂ ಮುನ್ನ ಕಿಯಾ ಡೀಲರ್ಸ್‌ಗಳಲ್ಲಿ ಸಂಚಲನ ಮೂಡಿಸಿದ ಸೊನೆಟ್ ಕಾರು
ಬಹುನೀರಿಕ್ಷಿತ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯಾದ ಸೊನೆಟ್ ಬಿಡುಗಡೆಗೆ ಕಿಯಾ ಮೋಟಾರ್ಸ್ ಕಂಪನಿಯು ಭರ್ಜರಿ ಸಿದ್ದತೆ ನಡೆಸಿದ್ದು, ದೇಶಾದ್ಯಂತ ಹರಡಿಕೊಂಡಿರುವ ತನ್ನ ಪ್ರಮುಖ ಕಾರು ಮಾರಾಟ ಮಳಿಗೆಗಳಲ್ಲಿ ಹೊಸ ಸೊನೆಟ್ ಕಾರುನ್ನು ಸ್ಟಾಕ್ ಮಾಡುತ್ತಿರುವುದು ಕಂಡುಬಂದಿದೆ.

ಕಿಯಾ ಮೋಟಾರ್ಸ್ ಪ್ರಮುಖ ಕಾರು ಮಾರಾಟ ಮಳಿಗೆಗಳಲ್ಲಿ ಸೊನೆಟ್ ಕಾರು ತಲುಪಿದ್ದು, ಆಸಕ್ತ ಗ್ರಾಹಕರು ಈಗಾಗಲೇ ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾಗಿ ಮಾರಾಟಗಾರರ ಬಳಿ ಚರ್ಚಿಸುತ್ತಿದ್ದಾರೆ. ಹೊಸ ಕಾರು ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಹೊಸ ಕಾರು ಈಗಾಗಲೇ 10 ಸಾವಿರಕ್ಕೂ ಅಧಿಕ ಯುನಿಟ್‌ಗಳಿಗಾಗಿ ಬುಕ್ಕಿಂಗ್ ಪಡೆದುಕೊಂಡಿರುವುದು ಕಿಯಾ ಮೋಟಾರ್ಸ್ ಕಂಪನಿಯ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚುವ ನೀರಿಕ್ಷೆಯಿದೆ.

ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಸಬ್ ಫೋರ್ ಮೀಟರ್ ಕಾರು ಮಾದರಿಗಳಲ್ಲೇ ವಿಶೇಷ ವಿನ್ಯಾಸ ಮತ್ತು ಎಂಜಿನ್ ಆಯ್ಕೆ ಹೊಂದಿರುವ ಸೊನೆಟ್ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರಿನಲ್ಲಿ ಪ್ರಮುಖ ಮೂರು ಎಂಜಿನ್ ಆಯ್ಕೆಗಳೊಂದಿಗೆ ಒಟ್ಟು 17 ವೆರಿಯೆಂಟ್‌ಗಳನ್ನು ನೀಡಲಾಗಿದೆ. ಹಾಗೆಯೇ 8 ಬಣ್ಣಗಳ ಆಯ್ಕೆ ಹೊಂದಿರುವ ಸೊನೆಟ್ ಕಾರು ಅತ್ಯುತ್ತಮ ಉದ್ದಳತೆಯೊಂದಿಗೆ ಅರಾಮದಾಯಕ ಒಳಾಂಗಣ ವಿನ್ಯಾಸ ಹೊಂದಿದೆ.

ಶಾರ್ಪ್ ಸ್ಟೈಲಿಷ್ ಲುಕ್ ಹೊಂದಿರುವ ಹೊಸ ಕಿಯಾ ಸೊನೆಟ್ ಕಾರಿನಲ್ಲಿ ಕ್ರೌನ್ ಜ್ಯುವೆಲ್ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಸ್ ಮತ್ತು ಟರ್ನ್ ಇಂಡಿಕೇಟರ್, ಎಲ್ಇಡಿ ಪ್ರೋಜೆಕ್ಟರ್ ಫಾಗ್ ಲ್ಯಾಂಪ್, ಹಾರ್ಟ್‌ಬೀಟ್ ವಿನ್ಯಾಸದ ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಟೈಲ್ ಲೈಟ್‌ಗೆ ಹೊಂದಿಕೊಂಡಿರುವ ರಿಪ್ಲೆಕ್ಟರ್ ಸ್ಟ್ಪೀಪ್ ಆಕರ್ಷಕವಾಗಿದೆ.

ಹಾಗೆಯೇ ಕಾರಿನ ಇಂಟಿರಿಯರ್ ಕೂಡಾ ಆಕರ್ಷಕವಾಗಿದ್ದು, ಆರಾಮದಾಯಕ ಆಸನ ಸೌಲಭ್ಯದೊಂದಿಗೆ ರಿಯರ್ ಎಸಿ ವೆಂಟ್ಸ್, ಎಲೆಕ್ಟ್ರಿಕ್ ಸನ್‌ರೂಫ್, ಏರ್ ಪ್ಲೂರಿಫ್ಲೈರ್, ವೆಂಟಿಲೆಟೆಡ್ ಫ್ರಂಟ್ ಸೀಟ್ ಮತ್ತು ವಿವಿಧ ಫೀಚರ್ಸ್ ಒಂದೇ ಸೂರಿನಡಿ ನಿಯಂತ್ರಣ ಮಾಡಬಲ್ಲ ಯುವಿಒ ಕನೆಟೆಡ್ ಟೆಕ್ನಾಲಜಿ ಸಹ ಈ ಕಾರಿನಲ್ಲಿದೆ. ಕಾರಿನ ಒಳಭಾಗದ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡುವ ಉದ್ದೇಶದಿಂದ ಅಲ್ಲಲ್ಲಿ ಸಿಲ್ವರ್ ಆಕ್ಸೆಂಟ್ ಸಹ ನೀಡಲಾಗಿದ್ದು, ಗೇರ್ ಲೀವರ್, ಸ್ಟೀರಿಂಗ್ ವೀಲ್ಹ್, ಎಸಿ ವೆಂಟ್ಸ್ ಸುತ್ತ ನೀಡಲಾಗಿದೆ.

ಇದು ಕಾರಿನ ಒಳಭಾಗದ ಖದರ್ ಹೆಚ್ಚಿಸಲಿದ್ದು, ಲೆದರ್ ವ್ಯಾರ್ಪ್ ಆಸನಗಳು, ವೈರ್ ಲೆಸ್ ಚಾರ್ಜರ್ ಪ್ರಮುಖವಾಗಿರಲಿವೆ. ಹೊಸ ಸೊನೆಟ್ ಕಾರು ಸೆಲ್ಟೊಸ್ ಮಾದರಿಯಲ್ಲಿ ಟೆಕ್ ಲೈನ್ ಮತ್ತು ಜಿಟಿ ಲೈನ್ ವೆರಿಯೆಂಟ್ ಹೊಂದಿದ್ದು, ಹೊಸ ಕಾರು ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆಗೆ ಟರ್ಬೋ ಪೆಟ್ರೋಲ್ ಮಾದರಿಯನ್ನು ಹೊಂದಿದೆ.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ವೆನ್ಯೂ ಕಾರಿನಿಂದ ಎರವಲು ಪಡೆದುಕೊಂಡಿರುವ ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ 1.-0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯ ಆಯ್ಕೆ ನೀಡಲಾಗಿದೆ.

1.2-ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಜೊತೆಗೆ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ, 1.5-ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಇಂಟೆಲಿಜೆಂಟ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿದೆ. ಟರ್ಬೋ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು, ಜಿಟಿ ಲೈನ್ ಮಾದರಿಯಾಗಿರುವ ಟರ್ಬೋ ಮಾದರಿಯೇ ಸೊನೆಟ್ ಕಾರಿನ ಹೈಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಈ ಮೂಲಕ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ ಮತ್ತು ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿರುವ ಹೊಸ ಕಾರು ಸೆಪ್ಟೆಂಬರ್ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಫೀಚರ್ಸ್‌ಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7 ಲಕ್ಷದಿಂದ ರೂ.11.50 ಲಕ್ಷ ಬೆಲೆ ಅಂತದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.


Click it and Unblock the Notifications








