ಎಲೆಕ್ಟ್ರಿಕ್ ರೂಪದಲ್ಲಿ ಲಗ್ಗೆ ಇಡಲಿದೆ ಜನಪ್ರಿಯ ಕಿಯಾ ಸೆಲ್ಟೋಸ್ ಎಸ್‍‍ಯುವಿ

ಕಿಯಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಿದ ಮೊದಲ ಎಸ್‍‍ಯುವಿಯಾದ ಸೆಲ್ಟೋಸ್ ಹೊಸ ಸಂಚಲನವನ್ನು ಮೂಡಿಸಿದೆ. ಕಿಯಾ ಮೋಟಾರ್ಸ್ ಬಿಡುಗಡೆಗೊಳಿಸಿದ ಮೊದಲ ಎಸ್‍‍ಯುವಿ ಭಾರತದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಲಗ್ಗೆ ಇಡಲಿದೆ ಜನಪ್ರಿಯ ಕಿಯಾ ಸೆಲ್ಟೋಸ್ ಎಸ್‍‍ಯುವಿ

ಕಿಯಾ ಸೆಲ್ಟೋಸ್ ಎಸ್‍‍ಯುವಿ ಹಲವಾರು ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಈ ಎಸ್‍‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‍‍ಗಳಿಂದ ಗ್ರಾಹಕರ ಗಮನಸೆಳೆದಿದೆ. ಭಾರತದ ಎಸ್‍‍ಯುವಿ ಸೆಗ್‍‍ಮೆಂಟ್‍‍ನಲ್ಲಿ ಕಿಯಾ ಸೆಲ್ಟೋಸ್ ಅತಿ ಹೆಚ್ಚು ಮಾರಾಟವಾಗುವ ವಾಹನವಾಗಿದೆ. ಅದೇ ರೀತಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಉತ್ತಮವಾಗಿ ಮಾರಾಟವಾಗುತ್ತಿದೆ. ಇದೀಗ ಕಿಯಾ ಮೋಟಾರ್ಸ್ ಸೆಲ್ಟೋಸ್ ಎಸ್‍‍ಯುವಿಯನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೊಳಿಸಲಿದೆ ಎಂದು ಖಚಿತಪಡಿಸಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಲಗ್ಗೆ ಇಡಲಿದೆ ಜನಪ್ರಿಯ ಕಿಯಾ ಸೆಲ್ಟೋಸ್ ಎಸ್‍‍ಯುವಿ

ಹಲವಾರು ಪ್ರಮುಖ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವುದರಲ್ಲಿ ನಿರತವಾಗಿವೆ. ಇನ್ನೂ ಕೆಲವು ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿವೆ. ಕೇವಲ ವಾಹನ ಉತ್ಪಾದಕರು ಅಲ್ಲದೇ ಗ್ರಾಹಕರು ಕೂಡ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡಿದ್ದಾರೆ.

MOST READ: ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್

ಎಲೆಕ್ಟ್ರಿಕ್ ರೂಪದಲ್ಲಿ ಲಗ್ಗೆ ಇಡಲಿದೆ ಜನಪ್ರಿಯ ಕಿಯಾ ಸೆಲ್ಟೋಸ್ ಎಸ್‍‍ಯುವಿ

ಇದ್ದರಿಂದ ಕಿಯಾ ಮೋಟಾರ್ಸ್ ಕಂಪನಿಯ ಯಶ್ವಸಿ ಸೆಲ್ಟೋಸ್ ಎಸ್‍‍ಯುವಿಯನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲು ಚಿಂತಿಸಿದೆ. ಆದರೆ ಕಿಯಾ ಸೆಲ್ಟೋಸ್ ಎಲೆಕ್ಟ್ರಿಕ್ ಆವೃತ್ತಿಯು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಲಗ್ಗೆ ಇಡಲಿದೆ ಜನಪ್ರಿಯ ಕಿಯಾ ಸೆಲ್ಟೋಸ್ ಎಸ್‍‍ಯುವಿ

ಆದರೆ ಕಿಯಾ ಸೆಲ್ಟೋಸ್ ಎಲೆಕ್ಟ್ರಿಕ್ ಕಾರು ಉತ್ಪಾದನೆಯ ಪ್ರಾರಂಭಿಕ ಹಂತದಲ್ಲಿರುವುದರಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕಿಯಾ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ಸೆಲ್ಟೋಸ್ ಎಸ್‍‍ಯುವಿಯನ್ನು ಉತ್ಪಾದಿಸಿ, ಮೊದಲ ವರ್ಷದಲ್ಲಿ ಕೇವಲ 10,000 ಸೀಮಿತ ಯುನಿಟ್‍‍ಗಳನ್ನು ಬಿಡುಗಡೆಗೊಳಿಸಲಿದೆ. ಬೇಡಿಕೆಯ ಅನುಸಾರವಾಗಿ ನಂತರದ ಹಂತದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಎಲೆಕ್ಟ್ರಿಕ್ ರೂಪದಲ್ಲಿ ಲಗ್ಗೆ ಇಡಲಿದೆ ಜನಪ್ರಿಯ ಕಿಯಾ ಸೆಲ್ಟೋಸ್ ಎಸ್‍‍ಯುವಿ

ಹೂಸ ಕಿಯಾ ಸೆಲ್ಟೋಸ್ ಎಲೆಕ್ಟ್ರಿಕ್ ಆವೃತ್ತಿಯಲ್ಲಿ 150 ಕಿಲೋವ್ಯಾಟ್ ಎಲೆಕ್ಟ್ರಿಕ್ ಮೋಟರ್ ನೊಂದಿಗೆ 64 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಬಹುದು. ಈ ಕಿಯಾ ಸೆಲ್ಟೋಸ್ ಇವಿ ಆವೃತ್ತಿಯು 400 ಕಿ.ಮೀ ಮೈಲೇಜ್ ಅನ್ನು ಹೂಂದಿರುತ್ತದೆ.

ಎಲೆಕ್ಟ್ರಿಕ್ ರೂಪದಲ್ಲಿ ಲಗ್ಗೆ ಇಡಲಿದೆ ಜನಪ್ರಿಯ ಕಿಯಾ ಸೆಲ್ಟೋಸ್ ಎಸ್‍‍ಯುವಿ

ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕಿಯಾ ಸೆಲ್ಟೋಸ್‍ ಎಸ್‍‍ಯು‍ವಿಯನ್ನು ಬಿಎಸ್-6 ಎಂಜಿನ್‍‍ನ ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ 1.5 ಲೀಟರ್ ಪೆಟ್ರೋಲ್ , 1.5 ಲೀಟರ್ ಡೀಸೆಲ್ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‍‍ಗಳು ಸೇರಿವೆ. ಎಸ್‍‍ಯು‍ವಿಯ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ 115 ಬಿ‍ಎಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಎಲೆಕ್ಟ್ರಿಕ್ ರೂಪದಲ್ಲಿ ಲಗ್ಗೆ ಇಡಲಿದೆ ಜನಪ್ರಿಯ ಕಿಯಾ ಸೆಲ್ಟೋಸ್ ಎಸ್‍‍ಯುವಿ

ಇನ್ನೂ 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 138 ಬಿಎಚ್‍ಪಿ ಪವರ್ ಮತ್ತು 242 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ಗಳು ಸ್ಟ್ಯಾಂಡರ್ಡ್ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿವೆ.

ಎಲೆಕ್ಟ್ರಿಕ್ ರೂಪದಲ್ಲಿ ಲಗ್ಗೆ ಇಡಲಿದೆ ಜನಪ್ರಿಯ ಕಿಯಾ ಸೆಲ್ಟೋಸ್ ಎಸ್‍‍ಯುವಿ

ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕಿಯಾ ಸೆಲ್ಟೊಸ್ ಹ್ಯುಂಡೈ ಕ್ರೆಟಾ, ಮಹೀಂದ್ರಾ ಎಕ್ಸ್‌ಯುವಿ 500, ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್, ಎಂಜಿ ಹೆಕ್ಟರ್, ನಿಸ್ಸಾನ್ ಕಿಕ್ಸ್ ಮತ್ತು ರೆನಾಲ್ಟ್ ಡಸ್ಟರ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಆದರೆ ಕಿಯಾ ಸೆಲ್ಟೋಸ್ ಎಲೆಕ್ಟ್ರಿಕ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಗೊಳಿಸುವುದ ಬಗ್ಗೆ ಯಾವುದೇ ಮಾಹಿತಿ ಇಲ್ಲ.

Most Read Articles

Kannada
English summary
Kia Seltos Electric Launch Confirmed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X