ಮಲೇಷಿಯಾದಲ್ಲೂ ಬಿಡುಗಡೆಯಾಗಲಿದೆ ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಕಿಯಾ ಸೆಲ್ಟೊಸ್

ಕಿಯಾ ಮೋಟಾರ್ಸ್ ಕಂಪನಿಯು ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಮೂಲಕ ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಸೆಲ್ಟೊಸ್ ಮಾದರಿಯನ್ನು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟ ಮಾಡುತ್ತಿದೆ.

ಮಲೇಷಿಯಾದಲ್ಲೂ ಬಿಡುಗಡೆಯಾಗಲಿದ ಕಿಯಾ ಸೆಲ್ಟೊಸ್

ವಿಶ್ವಾದ್ಯಂತ ಮಾರಾಟವಾಗುತ್ತಿರುವ ಸೆಲ್ಟೊಸ್ ಕಾರು ಮಾದರಿಯನ್ನು ಭಾರತದಿಂದ ರಫ್ತುಗೊಳಿಸುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯು ಇದೀಗ ಮಲೇಷಿಯಾದಲ್ಲೂ ಕೆಲವು ಬದಲಾವಣೆಗಳೊಂದಿಗೆ ಮಾರಾಟ ಮಾಡಲು ಸಿದ್ದತೆ ನಡೆಸಿದ್ದು, ಹೊಸ ಕಾರು ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಸಿದ್ದಗೊಳ್ಳಲಿದೆ. ಮಲೇಷಿಯಾದಲ್ಲಿ ಇದೇ ವರ್ಷಾಂತ್ಯದೊಳಗೆ ಬಿಡುಗಡೆಯಾಗಲಿರುವ ಹೊಸ ಸೆಲ್ಟೊಸ್ ಕಾರು ಹೊಸ ಎಂಜಿನ್ ಆಯ್ಕೆ ಜೊತೆಗೆ ಕೆಲವು ಪ್ರಮುಖ ತಾಂತ್ರಿಕ ಅಂಶಗಳ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಮಲೇಷಿಯಾದಲ್ಲೂ ಬಿಡುಗಡೆಯಾಗಲಿದ ಕಿಯಾ ಸೆಲ್ಟೊಸ್

ಭಾರತದಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಶ್ರೇಣಿಯಲ್ಲಿ ಮಾರಾಟವಾಗುತ್ತಿರುವ ಸೆಲ್ಪೊಸ್ ಕಾರು ಮಲೇಷಿಯಾದಲ್ಲಿ ಮಧ್ಯಮ ಕ್ರಮಾಂಕದ ಎಸ್‌ಯುವಿ ಸ್ಥಾನ ಪಡೆದುಕೊಳ್ಳಲಿದ್ದು, ಹೊಸ ಕಾರಿನ ಉದ್ದಳತೆಯನ್ನು ದೇಶಿಯ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ 25ಎಂಎಂ ವಿಸ್ತರಿತ ಬೂಟ್ ಸ್ಪೆಸ್ ನೀಡಲಾಗಿದೆ.

ಮಲೇಷಿಯಾದಲ್ಲೂ ಬಿಡುಗಡೆಯಾಗಲಿದ ಕಿಯಾ ಸೆಲ್ಟೊಸ್

ಜೊತೆಗೆ ಮಲೇಷಿಯಾದಲ್ಲಿ ಬಿಡುಗಡೆಯಾಗಲಿರುವ ಸೆಲ್ಟೊಸ್ ಕಾರು ಹೊಸದಾಗಿ ಅಭಿವೃದ್ದಿಗೊಳಿಸಲಾದ 1.6-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟಗೊಳ್ಳಲಿದ್ದು, ಡೀಸೆಲ್ ಎಂಜಿನ್ ಮಾದರಿಯನ್ನು ಪರಿಚಯಿಸುತ್ತಿಲ್ಲ.

ಮಲೇಷಿಯಾದಲ್ಲೂ ಬಿಡುಗಡೆಯಾಗಲಿದ ಕಿಯಾ ಸೆಲ್ಟೊಸ್

ಮಾಹಿತಿಗಳ ಪ್ರಕಾರ ಹೊಸ ಕಾರು ಮುಂದಿನ 2 ತಿಂಗಳ ಅವಧಿಯಲ್ಲಿ ಮಲೇಷಿಯಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, ಹೊಸ ಕಾರು ದೇಶಿಯ ಮಾರುಕಟ್ಟೆಯಲ್ಲಿರುವಂತೆ ತಾಂತ್ರಿಕ ಅಂಶಗಳೊಂದಿಗೆ ಕೆಲವು ಹೆಚ್ಚುವರಿ ತಾಂತ್ರಿಕ ಅಂಶಗಳನ್ನು ಹೊಂದಿಲಿದೆ. ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಹೊಸ ಕಾರಿನ ಬೆಲೆ ಕೂಡಾ ದುಬಾರಿಯಾಗಿರಲಿದ್ದು, ಪ್ರಯಾಣಿಕ ಸುರಕ್ಷತೆಗಾಗಿ ಹೆಚ್ಚಿನ ಒತ್ತು ನೀಡಲಾಗಿದೆ.

ಮಲೇಷಿಯಾದಲ್ಲೂ ಬಿಡುಗಡೆಯಾಗಲಿದ ಕಿಯಾ ಸೆಲ್ಟೊಸ್

ಸದ್ಯ ದೇಶಿಯ ಮಾರುಕಟ್ಟೆಯಲ್ಲಿರುವ ಸೆಲ್ಪೊಸ್ ಮಾದರಿಯು ಹಲವಾರು ಆಕರ್ಷಕ ಫೀಚರ್ಸ್‌ಗಳೊಂದಿಗೆ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.89 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.34 ಲಕ್ಷ ಬೆಲೆ ಹೊಂದಿದೆ.

ಮಲೇಷಿಯಾದಲ್ಲೂ ಬಿಡುಗಡೆಯಾಗಲಿದ ಕಿಯಾ ಸೆಲ್ಟೊಸ್

ಬಿಎಸ್-6 ನಿಯಮ ಅನುಸಾರ ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಮಲೇಷಿಯಾದಲ್ಲೂ ಬಿಡುಗಡೆಯಾಗಲಿದ ಕಿಯಾ ಸೆಲ್ಟೊಸ್

ನವೀಕರಣಗೊಂಡ ಸೆಲ್ಟೊಸ್ ಆವೃತ್ತಿಯಲ್ಲಿ ಈ ಬಾರಿ ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಬದಲಾವಣೆ ಪರಿಚಯಿಸಲಾಗಿದ್ದು, ಬೆಸ್ ಮಾಡೆಲ್‌ಗಳಲ್ಲಿ ಡ್ಯುಯಲ್ ಎಕ್ಸಾಸ್ಟ್, ಮೆಟಲ್ ಸ್ಕಫ್, ಪವರ್ಡ್ ಸನ್‌ರೂಫ್ ಪಡೆದುಕೊಂಡಿವೆ.

ಮಲೇಷಿಯಾದಲ್ಲೂ ಬಿಡುಗಡೆಯಾಗಲಿದ ಕಿಯಾ ಸೆಲ್ಟೊಸ್

ಹಾಗೆಯೇ ಹೈ ಎಂಡ್ ಮಾದರಿಗಳಲ್ಲಿ ಎರಡು ಸಾಲುಗಳಲ್ಲೂ ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್, ಸ್ಟ್ಯಾಂಡರ್ಡ್ ಆಗಿ ಎಮರ್ಜೆನ್ಸಿ ಸ್ಟಾಪ್ ಲೈಟಿಂಗ್, ಎಲ್‌ಇಡಿ ಕ್ಯಾಬಿನ್ ಲೈಟ್, ಎಸಿ ಕಂಟ್ರೊಲ್ ಮೇಲೆ ಫ್ಲಕ್ಸ್ ಮೆಟಲ್ ಗಾರ್ನಿಶ್ ಜೋಡಿಸಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಮಲೇಷಿಯಾದಲ್ಲೂ ಬಿಡುಗಡೆಯಾಗಲಿದ ಕಿಯಾ ಸೆಲ್ಟೊಸ್

37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಸೌಲಭ್ಯದಿಂದಾಗಿ ಹೊಸ ಸೆಲ್ಟೊಸ್ ಕಾರಿಗೆ ಗರಿಷ್ಠ ಭದ್ರತೆ ದೊರೆತಿದ್ದು, ಸ್ಮಾರ್ಟ್ ಫೋನ್ ಅಥವಾ ಸ್ಮಾರ್ಟ್ ವಾಚ್ ಮೂಲಕವೇ ಕಾರಿನ ಬಹುತೇಕ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾಗಿದೆ.

Most Read Articles

Kannada
English summary
Kia Seltos SUV Revealed In Malaysia. Read in Kannada.
Story first published: Saturday, September 12, 2020, 13:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X