Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಿಯಾ ಸೆಲ್ಟೊಸ್ ಕಾರಿಗೆ ಭರ್ಜರಿ ಬೇಡಿಕೆ- ಕಾಯುವಿಕೆ ಅವಧಿಯಲ್ಲಿ ಮತ್ತಷ್ಟು ಹೆಚ್ಚಳ
ಕಿಯಾ ಮೋಟಾರ್ಸ್ ಕಂಪನಿಯು ಕರೋನಾ ವೈರಸ್ ಅಬ್ಬರ ನಡುವೆಯೂ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬೆಳವಣಿಗೆ ಸಾಧಿಸಿದ್ದು, ಸೆಲ್ಟೊಸ್ ಕಾರು ಮಾದರಿಯ ಮಾರಾಟದಲ್ಲಿ ಹಲವು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ.

2019ರ ಅಗಸ್ಟ್ ಅವಧಿಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಕಿಯಾ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ಪ್ರೀಮಿಯಂ ಸೌಲಭ್ಯಗಳು ಮತ್ತು ಆಕರ್ಷಕ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಇದುವರೆಗೆ ಸುಮಾರು 1.35 ಲಕ್ಷ ಯುನಿಟ್ ಮಾರಾಟಗೊಂಡಿದೆ. ಹೊಸ ಕಾರು ಖರೀದಿಗಾಗಿ ಬುಕ್ಕಿಂಗ್ ಪ್ರಮಾಣವನ್ನು ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಲೇ ಇದ್ದು, ಡೀಸೆಲ್ ಟಾಪ್ ಎಂಡ್ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದೆ.

ಸೆಲ್ಟೊಸ್ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಬುಕ್ಕಿಂಗ್ ನಂತರ ಕನಿಷ್ಠ 1 ತಿಂಗಳಿನಿಂದ ಗರಿಷ್ಠ 4 ತಿಂಗಳು ಕಾಯಲೇಬೇಕಿದ್ದು, ಸೆಲ್ಟೊಸ್ ಜಿಟಿಎಕ್ಸ್ ಮಾದರಿಗಳು ಬುಕ್ಕಿಂಗ್ ನಂತರ ವೇಗವಾಗಿ ವಿತರಣೆಯಾಗಲಿದ್ದು, ಹೆಚ್‌ಟಿಎಕ್ಸ್ ಮಾದರಿಗಳಿಗೆ ಹೆಚ್ಚು ಕಾಯಬೇಕಾಗುತ್ತದೆ.

ಕಿಯಾ ಮೋಟಾರ್ಸ್ ಮಾಹಿತಿಯೆಂತೆ ಸೆಲ್ಟೊಸ್ ಜಿಟಿಎಕ್ಸ್ ಮಾದರಿಗಳಿಗೆ 3 ವಾರಗಳಿಂದ 4 ವಾರ ಮತ್ತು ಹೆಚ್‌ಟಿಎಕ್ಸ್ ಮಾದರಿಗಳಿಗೆ ಹೆಚ್‌ಟಿಎಕ್ಸ್ ಮಾದರಿಗಳಿಗೆ ಕನಿಷ್ಠ 15 ವಾರದಿಂದ 16 ವಾರ ಕಾಲ ಕಾಯುವಿಕೆ ಅವಧಿಯನ್ನು ನಿಗದಿ ಮಾಡಿದೆ.

ಸೆಲ್ಟೊಸ್ ಕಾರಿನ ಟಾಪ್ ಎಂಡ್ ಮಾದರಿಗಳ ಮೇಲೆ ಹೆಚ್ಚಿನ ಗಮನಹರಿಸಿರುವ ಕಿಯಾ ಮೋಟಾರ್ಸ್ ಕಂಪನಿಯು ಜಿಟಿಎಕ್ಸ್ ಮಾದರಿಗಳ ಉತ್ಪಾದನೆ ಪ್ರಮಾಣದಲ್ಲಿ ಹೆಚ್ಚಳ ಮಾಡಿದ್ದು, ತದನಂತರ ಹೆಚ್‌ಟಿಎಕ್ಸ್ ಮಾದರಿಗಳೊಂದಿಗೆ ವಿತರಣೆಯನ್ನು ಮೇಲೆ ಆದ್ಯತೆ ನೀಡುತ್ತಿದೆ. ಹೊಸ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಸೆಲ್ಟೊಸ್ ಕಾರು ಎಸ್‌ಯುವಿ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.89 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.34 ಲಕ್ಷ ಬೆಲೆ ಹೊಂದಿದೆ.

ಬಿಎಸ್-6 ನಿಯಮ ಅನುಸಾರ ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ.

ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಇತ್ತೀಚೆಗೆ ಕಂಪನಿಯು ಆ್ಯನಿವರ್ಸರಿ ಎಡಿಷನ್ ಬಿಡುಗಡೆಗೊಳಿಸುವ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ.

ಆ್ಯನಿವರ್ಸರಿ ಎಡಿಷನ್ ಮಾದರಿಯು ಪ್ರಮುಖ ಮೂರು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಮಾದರಿಯು ರೂ. 13.75 ಲಕ್ಷ, ಮಧ್ಯಮ ಕ್ರಮಾಂಕದ ಮಾದರಿಯು ರೂ. 14.75 ಲಕ್ಷ ಮತ್ತು ಉನ್ನತ ಮಾದರಿಯು ರೂ. 14.85 ಲಕ್ಷ ಬೆಲೆ ಹೊಂದಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಸ್ಟ್ಯಾಂಡರ್ಡ್ ಮಾದರಿಗಿಂತ ಆ್ಯನಿವರ್ಸರಿ ಎಡಿಷನ್ ಮಾದರಿಯು ರೂ. 41 ಸಾವಿರ ಹೆಚ್ಚುವರಿ ಬೆಲೆ ಹೊಂದಿದ್ದು, ಹೆಚ್ಚುವರಿ ಬೆಲೆಗೆ ತಕ್ಕಂತೆ ವಿಶೇಷ ಮಾದರಿಯಲ್ಲಿ ಹಲವು ಹೆಚ್ಚುವರಿ ಫೀಚರ್ಸ್‌ಗಳನ್ನು ಜೋಡಣೆ ಮಾಡಿರುವುದು ಆ್ಯನಿವರ್ಸರಿ ಎಡಿಷನ್ ಆಕರ್ಷಣೆಯನ್ನು ಹೆಚ್ಚಿಸಿದೆ.

ತಾಂತ್ರಿಕವಾಗಿ ಸ್ಟ್ಯಾಂಡರ್ಡ್ ಮಾದರಿಯಂತೆಯೇ ಸೌಲಭ್ಯಗಳನ್ನು ಹೊಂದಿರುವ ಆ್ಯನಿವರ್ಸರಿ ಎಡಿಷನ್ ಮಾದರಿಯಲ್ಲಿ ಆಕರ್ಷಣೆಗಾಗಿ ಫಾಗ್ ಲೈಟ್, ಸೈಡ್ ಸ್ಕರ್ಟ್ಸ್, ಫ್ಲಕ್ಸ್ ಡ್ಯುಯಲ್ ಎಕ್ಸಾಸ್ಟ್, ರಿಯರ್ ಬಂಪರ್ ಮತ್ತು ಅಲಾಯ್ ವೀಲ್ಹ್ ಸುತ್ತ ಆರೇಂಜ್ ಆಕ್ಸೆಂಟ್ ನೀಡಲಾಗಿದೆ. ಹಾಗೆಯೇ ಟೈಲ್‌ಲೈಟ್ ಬಳಿಯಲ್ಲಿ ಆ್ಯನಿವರ್ಸರಿ ಎಡಿಷನ್ ಬ್ಯಾಡ್ಜ್, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಹೊಸ ವಿನ್ಯಾಸದ ಬಂಪರ್ ಜೊತೆಗೆ ಫ್ಲಕ್ಸ್ ಸ್ಕ್ರೀಡ್ ಪ್ಲೇಟ್ ಜೋಡಿಸಲಾಗಿದ್ದು, ಸೈಡ್ ಸ್ಕರ್ಟ್ಸ್‌ಗಳನ್ನು ಸಹ ಸಿಲ್ವರ್ ಲೇಪನದೊಂದಿಗೆ ನೀಡಲಾಗಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಇದಲ್ಲದೆ ಹೊಸ ಕಾರಿಗೆ ಮತ್ತಷ್ಟು ಮೆರಗು ನೀಡಲು ಗ್ರಾವಿಟಿ ಗ್ರೇ, ಅರೋರಾ ಬ್ಲ್ಯಾಕ್, ಸ್ಟ್ಪೀಲ್ ಸಿಲ್ವರ್, ಅರೋರಾ ಬ್ಲ್ಯಾಕ್ ಪರ್ಲ್ ಜೊತೆಗೆ ಡ್ಯುಯಲ್ ಮಾದರಿಯಾಗಿ ಅರೋರಾ ಬ್ಲ್ಯಾಕ್ ಪರ್ಲ್ ಪೇಂಟ್ ಶೇಡ್ ಹಾಗೂ ಗಾರ್ಸಿರ್ ವೈಟ್ ಡ್ಯುಯಲ್ ಟೋನ್ ಬಣ್ಣಗಳನ್ನು ನೀಡಲಾಗಿದೆ.