ಸೊನೆಟ್ ಕಾರು ಬಿಡುಗಡೆಯ ಸಿದ್ದತೆಯಲ್ಲಿರುವ ಕಿಯಾ ಕಂಪನಿಗೆ ಆರಂಭದಲ್ಲೇ ಹಿನ್ನಡೆ
ಕಾರು ಮಾರಾಟದಲ್ಲಿ ಹೊಸ ದಾಖಲೆಗಳಿಗೆ ಕಾರಣವಾಗುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯು ಸೆಲ್ಟೊಸ್ ಮತ್ತು ಕಾರ್ನಿವಾಲ್ ನಂತರ ಮೂರನೇ ಕಾರು ಮಾದರಿಯಾಗಿ ಸೊನೆಟ್ ಕಾನ್ಸೆಪ್ಟ್ ಕಾರಿನ ಬಿಡುಗಡೆಗೆ ಭರ್ಜರಿ ಸಿದ್ದತೆ ನಡೆಸಿದ್ದು, ಹೊಸ ಕಾರು ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿರುವಾಗ 'ಸೊನೆಟ್' ಹೆಸರಿನ ಕುರಿತಾಗಿ ಆಕ್ಷೇಪ ವ್ಯಕ್ತವಾಗಿದೆ.

ಹೌದು, ಹೊಸ ಸೊನೆಟ್ ಕಾನ್ಸೆಪ್ಟ್ ಕಾರು ಮುಂದಿನ ಅಗಸ್ಟ್ ಅಥವಾ ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯದ ಅಧೀನದಲ್ಲಿರುವ ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆಯು ಹೊಸ ಕಾರಿನ ಅಧಿಕೃತ ಹೆಸರಿನ ಕುರಿತಾಗಿ ಆಕ್ಷೇಪ ವ್ಯಕ್ತಪಡಿಸಿರುವುದು ಕಿಯಾ ಮೋಟಾರ್ಸ್ ಕಂಪನಿಗೆ ಹಿನ್ನಡೆ ಉಂಟಾಗಿದೆ. ಸೊನೆಟ್ ಬ್ರಾಂಡ್ ನೆಮ್ ಈಗಾಗಲೇ ಬಳಕೆಯಲ್ಲಿದ್ದು, ಇದು ಮತ್ತೊಂದು ಸಂಸ್ಥೆಯ ಉತ್ಪನ್ನ ಮಾರಾಟದ ಪರಿಣಾಮ ಬೀರಲಿದೆ ಎನ್ನುವುದೇ ಸೊನೆಟ್ ಹೆಸರಿನ ಬಳಕೆಗೆ ಆಕ್ಷೇಪ ವ್ಯಕ್ತವಾಗಿದೆ ಎನ್ನಲಾಗಿದೆ.

ಸೊನೆಟ್ ಸ್ಯಾನಿಟರಿವೇರ್ ಉತ್ಪನ್ನಗಳು ಈಗಾಗಲೇ ಬಾರಿ ಜನಪ್ರಿಯತೆಯೊಂದಿಗೆ ಮಾರಾಟವಾಗುತ್ತಿದ್ದು, ಇದು ಕಿಯಾ ಬಳಕೆ ಮಾಡುತ್ತಿರುವ ಸೊನೆಟ್ ಬ್ರಾಂಡ್ ನೆಮ್‌ನಿಂದಾಗಿ ಸೊನೆಟ್ ಸ್ಯಾನಿಟರಿವೇರ್ ಬ್ರಾಂಡ್ ನೆಮ್‌ಗೆ ಹಿನ್ನಡೆ ಉಂಟಾಗಬಹುದು ಎನ್ನಲಾಗಿದೆ.

ಇದರಿಂದ ಕಿಯಾ ಕಂಪನಿಯು ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಅಧಿಕೃತ ಬ್ರಾಂಡ್ ನೆಮ್ ಅನ್ನು ಬದಲಾಯಿಸುವ ಸಾಧ್ಯತೆಗಳಿದ್ದು, ಒಂದು ವೇಳೆ ಹೊಸ ಕಾರಿನ ಹೆಸರಿನಲ್ಲಿ ಬದಲಾವಣೆಯಾದಲ್ಲಿ ಕಾರು ಬಿಡುಗಡೆಯು ಮತ್ತಷ್ಟು ವಿಳಂಬವಾಗಬಹುದು.

ಇನ್ನು ಹೊಸ ಕಾರನ್ನು ಸದ್ಯಕ್ಕೆ ಕ್ಯೂವೈಎ ಕೊಡ್ ನೆಮ್ ಆಧಾರದ ಮೇಲೆ ರೋಡ್ ಟೆಸ್ಟಿಂಗ್ ಮಾಡಲಾಗುತ್ತಿದ್ದು, ಪ್ರತಿ ಸ್ಪರ್ಧಿ ಕಾರು ಮಾದರಿಗಳಾದ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ300, ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಪ್ರಬಲ ಪೈಪೋಟಿಯಾಗಲಿದೆ. ಅಂದಾಜು ಒಂದರ ಪ್ರಕಾರ ಹೊಸ ಕಾರು ಪ್ರತಿ ತಿಂಗಳು 6 ಸಾವಿರ ಯುನಿಟ್‌ನಂತೆ ವಾರ್ಷಿಕವಾಗಿ 72 ಸಾವಿರ ಯುನಿಟ್ ಮಾರಾಟಗೊಳ್ಳಬಹುದೆಂಬ ಲೆಕ್ಕಾಚಾರ ಮಾಡಲಾಗುತ್ತಿದೆ.
MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಹೊಸ ಕಾರು ಬಿಎಸ್-6 ಎಂಜಿನ್ ಜೊತೆಗೆ ಸ್ಪೋರ್ಟಿ ವಿನ್ಯಾಸದೊಂದಿಗೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸ್ಟೊನಿಕ್ ಕಾರು ಮಾದರಿಯಲ್ಲೇ ಅಭಿವೃದ್ದಿಗೊಂಡಿದೆ.

ಹೊಸ ಸೊನೆಟ್ ಕಾರಿನಲ್ಲಿ ಒಟ್ಟು ಮೂರು ಎಂಜಿನ್ ಆಯ್ಕೆಗಳನ್ನು ನೀಡುವ ಸಾಧ್ಯತೆಗಳಿದ್ದು, 1.2-ಲೀಟರ್ ಪೆಟ್ರೋಲ್ ಮತ್ತು1.5-ಲೀಟರ್ ಟರ್ಬೋ ಡೀಸೆಲ್ ಮತ್ತು ಪರ್ಫಾಮೆನ್ಸ್ ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಿದೆ.
MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದುವ ಸಾಧ್ಯತೆಗಳಿದ್ದು, ಟರ್ಬೋ ಎಂಜಿನ್‌ನಲ್ಲಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾಮಿಷನ್ ಹೊಂದಲಿದೆ.

ಹಾಗೆಯೇ ಕಾರಿನ ಒಳಭಾಗದಲ್ಲೂ ಸಾಕಷ್ಟು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಫ್ಲ್ಯಾಟ್ ಬಾಟಮ್ ತ್ರಿ ಸ್ಪೋಕ್ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ಹ್, ಫ್ರಂಟ್ ಆರ್ಮ್ ರೆಸ್ಟ್, ಸಿಲ್ವರ್ ಹ್ಯಾಂಡಲ್ ಬಾರ್, ರೆಡ್ ಕಾಟ್ರಾಸ್ಟ್ ಹೊಂದಿರುವ ಲೆದರ್ ಸೀಟುಗಳು, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೆಡ್ ರೆಸ್ಟ್, ಸೀಟ್ ಬ್ಯಾಕ್ ಪ್ಯಾಕೇಟ್ ಸೌಲಭ್ಯಗಳನ್ನು ಹೊಂದಿರುವುದು ರೋಡ್ ಟೆಸ್ಟ್ ವೇಳೆ ಬಹಿರಂಗವಾಗಿದೆ.
MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಇದರೊಂದಿಗೆ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿರುವ ಕಿಯಾ ಮೋಟಾರ್ಸ್ ಕಂಪನಿಯು 4 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸ್ಟ್ಯಾಂಡರ್ಡ್ ಆಗಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳನ್ನು ಜೋಡಣೆ ಮಾಡಿದ್ದು, ದೆಹಲಿ ಎಕ್ಸ್‌ಶೋರೂಂ ಹೊಸ ಕಾರನ್ನು ಆರಂಭಿಕವಾಗಿ ರೂ.6.50 ಲಕ್ಷದಿಂದ ಟಾಪ್ ಎಂಡ್ ಮಾದರಿಯನ್ನು ರೂ.10 ಲಕ್ಷ ಬೆಲೆ ಅಂತರದಲ್ಲಿ ಮಾರಾಟ ಮಾಡುವ ನೀರಿಕ್ಷೆಯಿದೆ.


Click it and Unblock the Notifications








