ಲಾಕ್‌ಡೌನ್ ಸಂಕಷ್ಟ: ಹೊಸ ಲೋನ್ ಸ್ಕೀಮ್ ಪರಿಚಯಿಸಿದ ಕಿಯಾ ಮೋಟಾರ್ಸ್

ಲಾಕ್‌ಡೌನ್ ಸಡಿಲಿಕೆಯ ನಂತರ ಹೊಸ ಸುರಕ್ಷಾ ಮಾರ್ಗಸೂಚಿ ಅನ್ವಯ ಆಟೋ ಉದ್ಯಮವು ಮರು ಚಾಲನೆಗೊಂಡಿದ್ದು, ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ಪರದಾಡುತ್ತಿವೆ. ಹೀಗಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಆಟೋ ಕಂಪನಿಗಳು ಹಲವು ಹೊಸ ಆಫರ್‌ಗಳನ್ನು ಘೋಷಿಸುತ್ತಿವೆ.

ಲಾಕ್‌ಡೌನ್ ಸಂಕಷ್ಟ: ಹೊಸ ಲೋನ್ ಸ್ಕೀಮ್ ಪರಿಚಯಿಸಿದ ಕಿಯಾ ಮೋಟಾರ್ಸ್

ಕರೋನಾ ವೈರಸ್‌ನಿಂದಾಗಿ ಆಟೋ ಮೊಬೈಲ್ ಸೇರಿದಂತೆ ಎಲ್ಲಾ ವಲಯದಲ್ಲೂ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಲಾಕ್‌ಡೌನಿಂದಾಗಿ ಕುಸಿದಿರುವ ವ್ಯಾಪಾರ ಅಭಿವೃದ್ದಿಯನ್ನು ಸರಿದಾರಿಗೆ ತರುವುದು ಒಂದು ಸವಾಲಾಗಿ ಪರಿಣಿಮಿಸಿದ್ದು, ಕಿಯಾ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ. ಹೊಸ ಕುಸಿದಿರುವ ಕಾರು ಮಾರಾಟಕ್ಕೆ ಚೇತರಿಕೆ ನೀಡಲಿದ್ದು, ಸಂಕಷ್ಟದ ಸಮಯದಲ್ಲೂ ಗ್ರಾಹಕರನ್ನು ಸೆಳೆಯಲು ಕೆಲವು ಆಕರ್ಷಕ ಯೋಜನೆಗಳನ್ನು ರೂಪಿಸಿದೆ.

ಲಾಕ್‌ಡೌನ್ ಸಂಕಷ್ಟ: ಹೊಸ ಲೋನ್ ಸ್ಕೀಮ್ ಪರಿಚಯಿಸಿದ ಕಿಯಾ ಮೋಟಾರ್ಸ್

ಲಾಕ್‌ಡೌನ್‌ಗೂ ಮೊದಲ ವಾಹನಗಳ ಖರೀದಿಗೆ ಮುಂಗಡ ಪಾವತಿಸಿದ್ದ ಗ್ರಾಹಕರು ಇದೀಗ ವಾಪಸ್ ಪಡೆದುಕೊಳ್ಳುತ್ತಿರುವುದು ಆಟೋ ಕಂಪನಿಗಳನ್ನು ಚಿಂತೆಗೀಡು ಮಾಡಿದ್ದು, ವಾಹನ ಮಾರಾಟಕ್ಕೆ ವಿನಾಯ್ತಿ ಸಿಕ್ಕರೂ ಇದೀಗ ಗ್ರಾಹಕರು ಮಾರಾಟ ಮಳಿಗೆಗಳತ್ತ ಸುಳಿಯುತ್ತಿಲ್ಲ.

ಲಾಕ್‌ಡೌನ್ ಸಂಕಷ್ಟ: ಹೊಸ ಲೋನ್ ಸ್ಕೀಮ್ ಪರಿಚಯಿಸಿದ ಕಿಯಾ ಮೋಟಾರ್ಸ್

ಮಾಹಿತಿಗಳ ಪ್ರಕಾರ, ಲಾಕ್‌ಡೌನ್‌ಗೂ ಮುಂಗಡ ಪಾವತಿಸಿದ್ದ ಗ್ರಾಹಕರಲ್ಲಿ ಇದೀಗ ಸುಮಾರು ಶೇ.60ರಿಂದ ಶೇ.70ರಷ್ಟು ಜನ ಮುಂಗಡ ಹಣವನ್ನು ವಾಪಸ್ ಪಡೆದುಕೊಳ್ಳುತ್ತಿದ್ದು, ಭವಿಷ್ಯದಲ್ಲಿ ಮತ್ತಷ್ಟು ಆರ್ಥಿಕ ಸಂಕಷ್ಟು ಶುರುವಾಗಬಹುದು ಎನ್ನುವ ಆತಂಕ ಗ್ರಾಹಕರಲ್ಲಿ ಕಾಡತೊಡಗಿದೆ.

ಲಾಕ್‌ಡೌನ್ ಸಂಕಷ್ಟ: ಹೊಸ ಲೋನ್ ಸ್ಕೀಮ್ ಪರಿಚಯಿಸಿದ ಕಿಯಾ ಮೋಟಾರ್ಸ್

ಇದರಿಂದ ಆತಂಕದಲ್ಲಿರುವ ಆಟೋ ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿವಿಧ ಮಾದರಿಯ ಹಲವಾರು ಸರಳ ಹಣಕಾಸು ಸೇವೆಗಳನ್ನು ನೀಡಲು ಮುಂದಾಗಿದ್ದು, ಕಿಯಾ ಕೂಡಾ ಕಾರು ಖರೀದಿ ನಂತರ ಮೊದಲ ವರ್ಷದ ಮೂರು ತಿಂಗಳ ಅವಧಿಯ ಇಎಂಐ ಹೊರೆ ತಗ್ಗಿಸುವ ಯೋಜನೆ ರೂಪಿಸಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಲಾಕ್‌ಡೌನ್ ಸಂಕಷ್ಟ: ಹೊಸ ಲೋನ್ ಸ್ಕೀಮ್ ಪರಿಚಯಿಸಿದ ಕಿಯಾ ಮೋಟಾರ್ಸ್

ಒಂದು ವೇಳೆ ಹೊಸ ಕಾರು ಖರೀದಿಯ ನಂತರ ಆರ್ಥಿಕ ಸಂಕಷ್ಟ ಎದುರಾಗಿ ಇಲ್ಲವೆ ಉದ್ಯಗ ಕಳೆದುಕೊಂಡಲ್ಲಿ ಮೂರು ತಿಂಗಳ ಇಎಂಐ ಹೊರೆಯನ್ನು ಕಂಪನಿಯೇ ಭರಿಸಲಿದ್ದು, ನೀವು ತದನಂತರ ಪಾವತಿ ಮಾಡಲು ಅವಕಾಶವಿರುತ್ತದೆ.

ಲಾಕ್‌ಡೌನ್ ಸಂಕಷ್ಟ: ಹೊಸ ಲೋನ್ ಸ್ಕೀಮ್ ಪರಿಚಯಿಸಿದ ಕಿಯಾ ಮೋಟಾರ್ಸ್

ಇದರಿಂದ ಲಾಕ್‌ಡೌನ್ ಸಂಕಷ್ಟದಲ್ಲಿ ಕಾರು ಖರೀದಿಯನ್ನು ಮುಂದೂಡುತ್ತಿರುವ ಗ್ರಾಹಕರಿಗೆ ಅನುಕೂಲಕವಾಗಲಿದ್ದು, ಕಿಯಾ ಮಾತ್ರವಲ್ಲದೆ ಪ್ರಮುಖ ಕಾರು ಕಂಪನಿಗಳು ಇನ್ನು ಹೆಚ್ಚಿನ ಮಟ್ಟದ ಆಫರ್‌ಗಳನ್ನು ನೀಡುತ್ತಿವೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಲಾಕ್‌ಡೌನ್ ಸಂಕಷ್ಟ: ಹೊಸ ಲೋನ್ ಸ್ಕೀಮ್ ಪರಿಚಯಿಸಿದ ಕಿಯಾ ಮೋಟಾರ್ಸ್

ಇನ್ನು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯೆಂತೆ ಕಾರು ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಪುನಾರಂಭಿಸಿರುವ ಕಿಯಾ ಮೋಟಾರ್ಸ್ ಕಂಪನಿಯು ತನ್ನ ನೆಚ್ಚಿನ ಗ್ರಾಹಕರಿಗೆ ಫ್ರೀ ವೆಹಿಕಲ್ ಸ್ಯಾನಿಟೈಜ್ ಸರ್ವೀಸ್ ಘೋಷಿಸಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಆನ್‌ಲೈನ್ ವ್ಯವಹಾರಗಳ ಮೂಲಕ ಕಾರು ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ.

Article Published On: Saturday, May 23, 2020, 21:37 [IST]
English summary
Kia To Introduce New Financial Solutions And EMI Covers For Customers. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+