ಬೆಂಗಳೂರಿನಲ್ಲಿ ಹೊಸ ಶೋರೂಂ ತೆರೆದ ಲ್ಯಾಂಬೊರ್ಗಿನಿ

ಇಟಲಿ ಮೂಲದ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ಬೆಂಗಳೂರಿನ ಲಾವೆಲ್ಲೆ ರಸ್ತೆಯಲ್ಲಿ ಹೊಸ ಶೋರೂಂ ಅನ್ನು ತೆರೆದಿದೆ. 4,370 ಚ.ಮೀ ವಿಸ್ತೀರ್ಣದ ಈ ಶೋರೂಂ ಅನ್ನು ಮ್ಯಾಟಿಯೊ ಆರ್ಟೆಂಜಿ ಹಾಗೂ ಶರದ್ ಅಗರ್‍‍ವಾಲ್‍‍‍ರವರು ಉದ್ಘಾಟಿಸಿದರು.

ಬೆಂಗಳೂರಿನಲ್ಲಿ ಹೊಸ ಶೋರೂಂ ತೆರೆದ ಲ್ಯಾಂಬೊರ್ಗಿನಿ

ಹೊಸ ಶೋರೂಂ ಆರಂಭದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲ್ಯಾಂಬೊರ್ಗಿನಿ ಕಂಪನಿಯು, ಈ ಶೋರೂಂ ಗ್ರಾಹಕರ ಅನುಭವವನ್ನು ಮತ್ತಷ್ಟು ಹೆಚ್ಚಿಸಲಿದೆ. ಹೊಯ್ಸಳ ಆಟೋಮೋಟಿವ್‍‍ನ ಸಹಭಾಗಿತ್ವದೊಂದಿಗೆ ಹೊಸ ಅಧ್ಯಾಯ ಆರಂಭವಾಗಲಿದೆ ಎಂದು ಹೇಳಿದೆ.

ಬೆಂಗಳೂರಿನಲ್ಲಿ ಹೊಸ ಶೋರೂಂ ತೆರೆದ ಲ್ಯಾಂಬೊರ್ಗಿನಿ

ಬೆಂಗಳೂರಿನ ಹೃದಯ ಭಾಗದಲ್ಲಿ ಶುರುವಾಗಿರುವ ಈ ಶೋರೂಂನಲ್ಲಿ ವಿಶೇಷವಾಗಿ ತಯಾರಿಸಲಾದ ಎಕ್ಸ್ ಪಿರಿಯನ್ಸ್ ಜೋನ್‍‍ಗಳಿವೆ. ಇವುಗಳಲ್ಲಿ ಗ್ರಾಹಕರು ಕಾರು ಖರೀದಿಗೆ ಮೊದಲು ತಮ್ಮ ನೆಚ್ಚಿನ ಕಾರುಗಳನ್ನು ನೋಡಿ ತಮಗೆ ಬೇಕಾದ ರೀತಿಯಲ್ಲಿ ಕಸ್ಟಮೈಸ್ ಮಾಡಿಸಿಕೊಳ್ಳಬಹುದಾಗಿದೆ.

ಬೆಂಗಳೂರಿನಲ್ಲಿ ಹೊಸ ಶೋರೂಂ ತೆರೆದ ಲ್ಯಾಂಬೊರ್ಗಿನಿ

ಈ ಎಕ್ಸ್ ಪಿರಿಯನ್ಸ್ ಜೋನ್‍‍ಗಳಲ್ಲಿ ಆಡ್ ಪರ್ಸೊನಮ್ ಕಸ್ಟಮೈಸೇಷನ್ ಕೇಂದ್ರಗಳಿದ್ದು, ಇವುಗಳಲ್ಲಿ ಕಾರುಗಳ ಇಂಟಿರಿಯರ್ ಹಾಗೂ ಎಕ್ಸ್ ಟಿರಿಯರ್ ಫಿನಿಶಿಂಗ್ ಹೊಂದಿರುವ ಮಾದರಿಗಳಿವೆ. ಗ್ರಾಹಕರು ಇವುಗಳಲ್ಲಿರುವ ಸಾಫ್ಟ್ ಲೆದರ್ ಹಾಗೂ ಕಾರ್ಬನ್ ಲೆದರ್‍‍ಗಳನ್ನು ಕಸ್ಟಮೈಸ್ ಮಾಡಿಸಿಕೊಳ್ಳಬಹುದು.

ಬೆಂಗಳೂರಿನಲ್ಲಿ ಹೊಸ ಶೋರೂಂ ತೆರೆದ ಲ್ಯಾಂಬೊರ್ಗಿನಿ

ಆಟೊಮೊಬಿಲಿ ಲ್ಯಾಂಬೊರ್ಗಿನಿ ಏಷ್ಯಾ-ಪೆಸಿಫಿಕ್‌ನ ಸಿ‍ಇ‍ಒ ಮ್ಯಾಟಿಯೊ ಆರ್ಟೆಂಜಿರವರು ಮಾತನಾಡಿ, ಹೊಸ ಲ್ಯಾಂಬೊರ್ಗಿನಿ ಡೀಲರ್‍‍ಶಿಪ್ ತನ್ನ ಗ್ರಾಹಕರಿಗೆ ಕಂಪನಿಯ ಡಿಸೈನ್ ಫಿಲಾಸಫಿಯಂತೆ ಸೇವೆಯನ್ನು ನೀಡಲಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಹೊಸ ಶೋರೂಂ ತೆರೆದ ಲ್ಯಾಂಬೊರ್ಗಿನಿ

ಭಾರತದಲ್ಲಿ ನಾವು ಕಂಪನಿಯನ್ನು ವಿಸ್ತರಿಸುತ್ತಿದ್ದು, ನಮ್ಮ ಪಾಲುದಾರರೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತೇವೆ. ದೇಶಿಯ ಮಾರುಕಟ್ಟೆಯಲ್ಲಿ ನಮ್ಮ ಕಂಪನಿಯು ಇನ್ನಷ್ಟು ದೊಡ್ಡದಾಗಿ ಬೆಳೆಯುತ್ತದೆಂಬ ಆಶಾ ಭಾವನೆಯನ್ನು ಹೊಂದಿದ್ದೇವೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಹೊಸ ಶೋರೂಂ ತೆರೆದ ಲ್ಯಾಂಬೊರ್ಗಿನಿ

ಶರದ್ ಅಗರ್‍‍ವಾಲ್‍‍ರವರು ಮಾತನಾಡಿ, ಬೆಂಗಳೂರಿನಲ್ಲಿ ಆರಂಭಿಸಲಾಗಿರುವ ಹೊಸ ಶೋರೂಂ, ಭಾರತದ ಸೂಪರ್ ಕಾರ್ ಮಾರುಕಟ್ಟೆಯಲ್ಲಿ ಕಂಪನಿಗಿರುವ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಹೊಸ ಶೋರೂಂ ತೆರೆದ ಲ್ಯಾಂಬೊರ್ಗಿನಿ

ಭಾರತದಲ್ಲಿ ಸೂಪರ್ ಕಾರುಗಳಿಗೆ ಬೇಡಿಕೆ ಹೆಚ್ಚಿತ್ತಿದ್ದು, ಲ್ಯಾಂಬೊರ್ಗಿನಿ ಕಾರುಗಳ ಮಾರಾಟದಲ್ಲಿ ಹೆಚ್ಚಳವಾಗಿದೆ ಎಂದು ಅವರು ಹೇಳಿದರು. ಇದರ ಜೊತೆಗೆ ಲ್ಯಾಂಬೊರ್ಗಿನಿ ಕಂಪನಿಯು ಹೊಸ ಶೋರೂಂನಲ್ಲಿ ಹುರಾಕನ್ ಇವೊ ಸ್ಪೈಡರ್ ಸೂಪರ್ ಕಾರ್ ಅನ್ನು ಸಹ ಪ್ರದರ್ಶಿಸಿತು.

ಬೆಂಗಳೂರಿನಲ್ಲಿ ಹೊಸ ಶೋರೂಂ ತೆರೆದ ಲ್ಯಾಂಬೊರ್ಗಿನಿ

ಈ ಸೂಪರ್ ಕಾರ್ ಅನ್ನು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಕಾರು ಸಾಫ್ಟ್ ಟಾಪ್ ಕನ್ವರ್ಟಿಬಲ್ ಮಾದರಿಯಾಗಿದೆ. ಈ ಮಾದರಿಯು 50 ಕಿ.ಮೀ ವೇಗದಲ್ಲಿದ್ದಾಗ 17 ಸೆಕೆಂಡುಗಳಲ್ಲಿ ಚಲಿಸುವುದನ್ನು ನಿಲ್ಲಿಸುತ್ತದೆ.

ಬೆಂಗಳೂರಿನಲ್ಲಿ ಹೊಸ ಶೋರೂಂ ತೆರೆದ ಲ್ಯಾಂಬೊರ್ಗಿನಿ

ಈ ಕನ್ವರ್ಟಿಬಲ್ ಮೆಕಾನಿಸಂ ಕಾರಿನ ತೂಕವನ್ನು 120 ಕೆ.ಜಿಯಷ್ಟು ಹೆಚ್ಚಿಸಿದರೂ, ಕಾರಿನ ಪರ್ಫಾಮೆನ್ಸ್ ನಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಹುರಾಕನ್ ಇವೊ ಸ್ಪೈಡರ್ ಕಾರು 3.10 ಸೆಕೆಂಡುಗಳಲ್ಲಿ 0 ಯಿಂದ 100 ಕಿ.ಮೀ ವೇಗವನ್ನು ಆಕ್ಸೆಲೆರೇಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಬೆಂಗಳೂರಿನಲ್ಲಿ ಹೊಸ ಶೋರೂಂ ತೆರೆದ ಲ್ಯಾಂಬೊರ್ಗಿನಿ

9.3 ಸೆಕೆಂಡುಗಳಲ್ಲಿ 0 ಯಿಂದ 200 ಕಿ.ಮೀ ವೇಗವನ್ನು ಆಕ್ಸೆಲೆರೇಟ್ ಮಾಡುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 325 ಕಿ.ಮೀಗಳಿಗೆ ಎಲೆಕ್ಟ್ರಾನಿಕ್ ಆಗಿ ಸೀಮಿತಗೊಳಿಸಲಾಗಿದೆ. ಈ ಕಾರಿನಲ್ಲಿ 5.2 ಲೀಟರಿನ ವಿ10 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಬೆಂಗಳೂರಿನಲ್ಲಿ ಹೊಸ ಶೋರೂಂ ತೆರೆದ ಲ್ಯಾಂಬೊರ್ಗಿನಿ

ಈ ಎಂಜಿನ್ 631 ಬಿ‍ಹೆಚ್‍‍ಪಿ ಪವರ್ ಹಾಗೂ 600 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 7 ಸ್ಪೀಡಿನ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆದ ಲ್ಯಾಂಬೊರ್ಗಿನಿ ಡೊಪಿಯಾ ಫ್ರಿಜಿಯೊನಿಯನ್ನು ಅಳವಡಿಸಲಾಗಿದೆ. ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.4.10 ಕೋಟಿಗಳಾಗಿದೆ.

ಬೆಂಗಳೂರಿನಲ್ಲಿ ಹೊಸ ಶೋರೂಂ ತೆರೆದ ಲ್ಯಾಂಬೊರ್ಗಿನಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಸೂಪರ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ನಿಜಕ್ಕೂ ಶ್ಲಾಘನೀಯ. ಭಾರತದ ರಸ್ತೆಗಳು ಈ ಸೂಪರ್ ಕಾರುಗಳು ಚಲಿಸುವಷ್ಟು ಉತ್ತಮವಾಗಿವೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಬೆಂಗಳೂರಿನಲ್ಲಿ ಹೊಸ ಶೋರೂಂ ಆರಂಭಿಸಿದ ಲ್ಯಾಂಬೊರ್ಗಿನಿ ಕಂಪನಿಗೆ ಅಭಿನಂದನೆಗಳು.

More from DriveSpark

Article Published On: Saturday, January 11, 2020, 11:53 [IST]
English summary
Lamborghini Inaugurates New Dealership At Bangalore: Showcases Huracan Evo Spider At Opening. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+