ಬಿಡುಗಡೆಯಾಯ್ತು ಹೊಸ ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಆರ್‍‍ಡಬ್ಲ್ಯೂಡಿ

ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ಕಂಪನಿಯು ತನ್ನ ಹುರಾಕನ್ ಇವೊ ರೇರ್ ವ್ಹೀಲ್ ಡ್ರೈವ್(ಆರ್‍‍ಡಬ್ಲ್ಯುಡಿ) ಸೂಪರ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‍‍ಡಬ್ಲ್ಯುಡಿ ಕಾರಿಗೆ ಭಾರತದ ಎಕ್ಸ್ ಶೋರೋಂ ಪ್ರಕ್ರಾರ ರೂ.3.22 ಕೋಟಿಗಳಾಗಿದೆ.

ಬಿಡುಗಡೆಯಾಯ್ತು ಹೊಸ ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಆರ್‍‍ಡಬ್ಲ್ಯೂಡಿ

ಹೊಸ ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಆರ್‍‍ಡಬ್ಲ್ಯೂಡಿ ವಿನ್ಯಾಸವು ಹಿಂದಿನ ಮಾದರಿಯಾದ ಆಲ್-ವ್ಹೀಲ್ ಡ್ರೈವ್(ಎಡಬ್ಲ್ಯುಡಿ) ಆವೃತ್ತಿಯನ್ನು ಹೋಲುತ್ತದೆ. ಈ ಕಾರಿನಲ್ಲಿ ಸುಧಾರಿತ ಏರೋಡೈನಾಮಿಕ್ ಸಿಸ್ಟಂ ಅನ್ನು ಹೊಂದಿದೆ. ಇನ್ನೂ ಹೊಸ ಕಾರಿನಲ್ಲಿ ಫ್ರಂಟ್ ಸ್ಪ್ಲಿಟರ್ ಮತ್ತು ದೊಡ್ಡ ಫ್ರಂಟ್ ಏರ್‍‍ಟೇಕ್‍‍ಗಳನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಹೊಸ ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಆರ್‍‍ಡಬ್ಲ್ಯೂಡಿ

ಈ ಸೂಪರ್‍‍ಕಾರ್ ವಿನೂತನವಾದ ಡಿಫ್ಯೂಸರ್ ಅನ್ನು ಹೊಂದಿದೆ. ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಕಾರಿನಲ್ಲಿ ಹೆಚ್‍ಎಂಐ 8.4 ಇಂಚಿನ ಟಚ್‍‍ಸ್ಕ್ರೀನ್ ಅನ್ನು ಹೊಂದಿದೆ. ಇದರಲ್ಲಿ ಕಾರಿನ ಹಲವು ಫೀಚರ್ಸ್‍‍ಗಳನ್ನು ನಿಯಂತ್ರಿಸಬಹುದಾಗಿದೆ.

ಬಿಡುಗಡೆಯಾಯ್ತು ಹೊಸ ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಆರ್‍‍ಡಬ್ಲ್ಯೂಡಿ

ಇದರಲ್ಲಿ ಪೋನ್ ಕನೆಕ್ಟಿವಿಟಿ, ಇಂಟರ್ನೆಟ್ ಎಕ್ಸಸ್ ಮತ್ತು ಆ್ಯಪಲ್ ಕಾರ್‍‍ಪ್ಲೇಗಳು ಸೇರಿವೆ. ಹುರಾಕಾನ್ ಇವೊ ಆರ್‍‍ಡಬ್ಲ್ಯುಡಿ ಅದೇ ಐಕಾನಿಕ್ ಎಂಜಿನ್ ಅನ್ನು ಹೊಂದಿದೆ. ಇದು 5.2 ಲೀಟರ್ ವಿ10 ಎಂಜಿನ್ 109 ಬಿ‍‍ಹೆಚ್‍‍ಪಿ ಪವರ್ ಮತ್ತು 540 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಹೊಸ ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಆರ್‍‍ಡಬ್ಲ್ಯೂಡಿ

ಈ ಕಾರು ಎಡಬ್ಲ್ಯೂಡಿ ರೂಪಾಂತರಕ್ಕಿಂತ 33ಕೆಜಿ ಕಡಿಮೆ ತೂಕವನ್ನು ಹೊಂದಿದೆ. ಹೊಸ ಹುರಾಕಾನ್ ಕಾರು ಕೇವಲ 3.3 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ಕ್ರಮಿಸುತ್ತದೆ. ಈ ಸೂಪರ್ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 325 ಕಿ.ಮೀಗಳಾಗಿದೆ.

ಬಿಡುಗಡೆಯಾಯ್ತು ಹೊಸ ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಆರ್‍‍ಡಬ್ಲ್ಯೂಡಿ

ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಉನ್ನತ ಮಟ್ಟದ ಸುರಕ್ಷತಾ ಫೀಚರ್ಸ್‍ಗಳನ್ನು ಅಳವಡಿಸಲಾಗಿದೆ. ಪವರ್ ಅನ್ನು ನಿಯಂತ್ರಿಸಲು ಕಾರು ಪರ್ಫಾಮೆನ್ಸ್ ಟಾಕ್ಷನ್ ಕಂಟ್ರೋಲ್ (ಪಿ-ಟಿಸಿಎಸ್) ಅನ್ನು ಹೊಂದಿದೆ. ಇದರೊಂದಿಗೆ ಎಬಿಎಸ್, ಏರ್‍‍ಬ್ಯಾಗ್, ಇಬಿಡಿ, ಇಎಸ್‍ಪಿ ಸೇರಿದಂತೆ ಹಲವಾರು ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಆರ್‍‍ಡಬ್ಲ್ಯೂಡಿ

ಇನ್ನೂ ಲ್ಯಾಂಬೊರ್ಗಿನಿ ಸೂಪರ್ ಕಾರುಗಳ ಸರಣಿಯಲ್ಲಿ ಹುರಾಕಾನ್ ಇವೊ ಸ್ಪೈಡರ್ ಕಾರು ಅತಿ ಹೆಚ್ಚು ಬೆಲೆಯನ್ನು ಹೊಂದಿದೆ. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.1 ಕೋಟಿಗಳಾಗಿದೆ. ದುಬಾರಿ ಲ್ಯಾಂಬೊರ್ಗಿನಿ ಕಾರುಗಳನ್ನು ಅತಿ ಹೆಚ್ಚು ಖರೀದಿಸುವವರಲ್ಲಿ ವಿಶ್ವದಲ್ಲೇ ಬೆಂಗಳೂರಿಗರು ಒಬ್ಬರಾಗಿದ್ದಾರೆ.

ಬಿಡುಗಡೆಯಾಯ್ತು ಹೊಸ ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಆರ್‍‍ಡಬ್ಲ್ಯೂಡಿ

ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಆರ್‍‍ಡಬ್ಲ್ಯೂಡಿ ಕಾರು ಹಿಂದಿನ ಮಾದರಿಯಾದ ಹುರಾಕಾನ್ ಇವೊ ಎಡಬ್ಲ್ಯೂಡಿ ಕಾರಿಗಿಂತ ಕಡಿಮೆ ತೂಕವನ್ನು ಹೊಂದಿರುವುದರಿಂದ ಟ್ರ್ಯಾಕ್‍‍ನಲ್ಲಿ ಉತ್ತಮ ಪಫಾರ್ಮೆನ್ಸ್ ನೀಡುತ್ತದೆ. ಸೂಪರ್‍‍ಕಾರು ಪ್ರಿಯರ ಮೆಚ್ಚಿನ ಬ್ರ್ಯಾಂಡ್ ಆದ ಲ್ಯಾಂಬೊರ್ಗಿನಿ ಮತ್ತೊಂದು ಹೊಸ ಕಾರು ಬಿಡುಗಡೆಗೊಳಿಸುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯಲು ಪ್ರಯತ್ನಿಸುತ್ತಿದೆ.

ಬಿಡುಗಡೆಯಾಯ್ತು ಹೊಸ ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಆರ್‍‍ಡಬ್ಲ್ಯೂಡಿ

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‍‍ಡಬ್ಲ್ಯುಡಿ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಜಿ‍ಟಿ-ಆರ್ ಮತ್ತು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಫೆರಾರಿ 8 ಟ್ರಿಬ್ಯುಟೊ ಕಾರುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Wednesday, January 29, 2020, 15:16 [IST]
English summary
Lamborghini Huracan EVO RWD Launched In India: Prices Start At Rs 3.22 Crore. Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+