ಸೆಪ್ಟೆಂಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಲ್ಯಾಂಬೊರ್ಗಿನಿ
ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ 2020ರ ಸೆಪ್ಟೆಂಬರ್ ತಿಂಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಲ್ಯಾಂಬೊರ್ಗಿನಿ 2020ರ ಸೆಪ್ಟೆಂಬರ್ ತಿಂಗಳಲ್ಲಿ 738 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಕಳೆದ ಮೂರು ತಿಂಗಳುಗಳಿಂದ ಲ್ಯಾಂಬೊರ್ಗಿನಿ ಕಾರುಗಳು ಸ್ಥಿರವಾಗಿ ಮಾರಾಟವಾಗುತ್ತಿದೆ. ಕರೋನಾ ಸೋಂಕಿನ ಭೀತಿಯ ನಡುವೆ ಲ್ಯಾಂಬೊರ್ಗಿನಿ ಕಾರುಗಳು ಉತ್ತಮವಾಗಿ ಮಾರಾಟವಾಗಿವೆ. ಲ್ಯಾಂಬೊರ್ಗಿನಿ ಕಂಪನಿಯು ಕೂಡ ಉತ್ಪಾದನೆಯನ್ನು ಹಲವು ದಿನಗಳ ಕಾಲ ಸ್ಥಗಿತಗೊಳಿಸಿದ್ದರು. ಲ್ಯಾಂಬೊರ್ಗಿನಿ ಕೂಡ ಗ್ರಾಹಕರ ಮತ್ತು ಉದ್ಯೋಗಿಗಳ ಸುರಕ್ಷೆತೆಗಾಗಿ ಕಛೇರಿಗಳನ್ನು ಏಳ ವಾರಗಳ ಕಾಲ ಮುಚ್ಚಲಾಗಿತ್ತು.

ಲ್ಯಾಂಬೊರ್ಗಿನಿ ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಸ್ಟೆಫಾನೊ ಡೊಮೆನಿಕಲಿ ಮಾತನಾಡಿ, ಮಾರಾಟಾದ ವರದಿ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ವಾಹನ ಜಗತ್ತಿನಲ್ಲಿ ಹೆಚ್ಚು ಮಹತ್ವಾಕಾಂಕ್ಷೆಯ ಮತ್ತು ಅಪೇಕ್ಷಣೀಯ ಬ್ರ್ಯಾಂಡ್ ಆಗಿ ನಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದೇವೆ. ಮುಂದೆ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳೀದರು.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇತ್ತೀಚೆಗೆ ಲ್ಯಾಂಬೊರ್ಗಿನಿ ತನ್ನ ಅವೆಂಟಡಾರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದೆ. ಲ್ಯಾಂಬೊರ್ಗಿನಿ ಕಂಪನಿಯು ಒಂಬತ್ತು ವರ್ಷಗಳಲ್ಲಿ ಜನಪ್ರಿಯ ಅವೆಂಟಡಾರ್ ಮಾದರಿಯ 10,000 ಯುನಿಟ್‍ಗಳನ್ನು ಉತ್ಪಾದಿಸಿದೆ.

ಲ್ಯಾಂಬೊರ್ಗಿನಿ ಕಂಪನಿಯು ತನ್ನ ಅವೆಂಟಡಾರ್ ಕಾರನ್ನು 2011ರಲ್ಲಿ ಪರಿಚಯಿಸಿದ್ದರು. ಇತರ ಲ್ಯಾಂಬೊರ್ಗಿನಿ ಮಾದರಿಗಳಂತೆ ಇದು ಕೂಡ ವಿಶ್ವದ ಗಮನವನ್ನು ತನ್ನೆಡೆಗೆ ಸೆಳೆಯುವಂತ ಮಾಡಿದ ಸೂಪರ್ ಕಾರು ಆಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ದುಬಾರಿ ಲ್ಯಾಂಬೊರ್ಗಿನಿ ಕಾರುಗಳನ್ನು ಅತಿ ಹೆಚ್ಚು ಖರೀದಿಸುವವರಲ್ಲಿ ವಿಶ್ವದಲ್ಲೇ ಬೆಂಗಳೂರಿಗರು ಒಬ್ಬರಾಗಿದ್ದಾರೆ. ಲ್ಯಾಂಬೊರ್ಗಿನಿ ಸ್ಪೋರ್ಟ್ಸ್ ಕಾರುಗಳಿಗೆ ವಿಶ್ವದೆಲ್ಲೆಡೆ ಒಂದು ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿದೆ.

ಲ್ಯಾಂಬೊರ್ಗಿನಿ ಅವೆಂಟಡಾರ್ ಕೇವಲ 2.9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ಕ್ರಮಿಸುತ್ತದೆ. 9 ವರ್ಷಗಳ ಅವಧಿಯಲ್ಲಿ ಲ್ಯಾಂಬೊರ್ಗಿನಿ ಅವೆಂಟಡಾರ್‌ನ ಹಲವಾರು ಮಾದರಿಗಳನ್ನು ಬಿಡುಗಡೆ ಮಾಡಿತು. 2012ರಲ್ಲಿ ಅವೆಂಟಡಾರ್ ರೋಡ್ಸ್ಟರ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಇನ್ನು ಇತ್ತೀಚೆಗೆ ಲ್ಯಾಂಬೊರ್ಗಿನಿ ಕಂಪನಿಯು ಹೊಸ ಲ್ಯಾಂಬೊರ್ಗಿನಿ ತನ್ನ ಅವೆಂಟಡಾರ್ ಎಸ್‌ವಿಜೆ ರೋಡ್‌ಸ್ಟರ್ ಕ್ಸಾಗೊ ಎಡಿಷನ್ ಮಾದರಿಯನ್ನು ಇತ್ತೀಚೆಗೆ ಅನಾವರಣಗೊಳಿಸಿತು. ವಿಶ್ವಾದ್ಯಂತ ಈ ಸೂಪರ್ ಕಾರಿನ ಕೇವಲ 10 ಯುನಿಟ್‌ಗಳು ಮಾತ್ರ ಲಭ್ಯವಿರಲಿದೆ.

ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್‌ವಿಜೆ ರೋಡ್‌ಸ್ಟರ್ ಕ್ಸಾಗೊ ಆವೃತ್ತಿಯ ಕೇವಲ 10 ಯುನಿಟ್‌ಗಳು ಮಾತ್ರ ಲಭ್ಯವಿರಲಿದೆ. ಈ ಸೂಪರ್ ಕಾರು ಲಿಮಿಟೆಡ್ ಎಡಿಷನ್ ಆಗಿದೆ. ಅಲ್ಲದೇ ಇತರ ಲ್ಯಾಂಬೊರ್ಗಿನಿ ಕಾರಿನಂತೆ ಇದು ಕೂಡ ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿದೆ.


Click it and Unblock the Notifications








