ಐಆರ್‌ಡಿಎಐ ಮಹತ್ವದ ನಿರ್ಧಾರ, ಕಡಿಮೆಯಾಗಲಿದೆ ಹೊಸ ವಾಹನ ದರ

ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ವಾಹನಗಳ ಮೇಲಿನ ದೀರ್ಘಾವಧಿ ವಿಮಾ ಪಾಲಿಸಿಗಳನ್ನು ರದ್ದುಪಡಿಸುತ್ತಿದೆ. ಈ ನಿರ್ಧಾರದ ನಂತರ, ಹೊಸ ವಾಹನಗಳ ಬೆಲೆ ಕಡಿಮೆಯಾಗಲಿದೆ. ದೀರ್ಘಾವಧಿ ಮೋಟಾರು ವಿಮಾ ಅನ್ವಯ ನಾಲ್ಕು ಚಕ್ರ ವಾಹನಗಳಿಗೆ 3 ವರ್ಷ ಹಾಗೂ ದ್ವಿಚಕ್ರ ವಾಹನಗಳಿಗೆ 5 ವರ್ಷಗಳ ಅವಧಿಯಿರುತ್ತದೆ.

ಐಆರ್‌ಡಿಎಐ ಮಹತ್ವದ ನಿರ್ಧಾರ, ಕಡಿಮೆಯಾಗಲಿದೆ ಹೊಸ ವಾಹನ ದರ

2018ರ ಸುಪ್ರೀಂ ಕೋರ್ಟ್ ಆದೇಶದ ನಂತರ, ಹೊಸ ವಾಹನಗಳಿಗೆ ಪೀಪಲ್ ಟರ್ಮ್ ಇನ್ಶುರೆನ್ಸ್ ಪಾಲಿಸಿಯನ್ನು ಜಾರಿಗೆ ತರಲಾಯಿತು. ದೀರ್ಘಾವಧಿ ವಿಮಾ ಪಾಲಿಸಿಯು 2020ರ ಆಗಸ್ಟ್ 1ರಿಂದ ಮಾರಾಟವಾಗುವುದಿಲ್ಲ. ಹೊಸ ಆದೇಶದ ಪ್ರಕಾರ, ಸ್ವಂತ ಹಾನಿ ಹಾಗೂ ಥರ್ಡ್ ಪಾರ್ಟಿ ಮೋಟಾರು ವಿಮೆಯ ಮೇಲಿನ ದೀರ್ಘಾವಧಿ ವಿಮೆಯನ್ನು ರದ್ದುಗೊಳಿಸಲಾಗುತ್ತದೆ. ಐಆರ್‌ಡಿಎಐ ಪ್ರಕಾರ, ದೀರ್ಘಾವಧಿಯ ಪಾಲಿಸಿಯು ಹೊಸ ವಾಹನಗಳ ಬೆಲೆಯನ್ನು ಹೆಚ್ಚಿಸುತ್ತದೆ.

ಐಆರ್‌ಡಿಎಐ ಮಹತ್ವದ ನಿರ್ಧಾರ, ಕಡಿಮೆಯಾಗಲಿದೆ ಹೊಸ ವಾಹನ ದರ

ಹೊಸ ಮೋಟಾರು ವಿಮೆಯಡಿಯಲ್ಲಿ, ಪಾಲಿಸಿದಾರರು ಕಡಿಮೆ ದಿನಗಳ ವಿಮಾ ರಕ್ಷಣೆಯನ್ನು ಕಡಿಮೆ ದರದಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. ಕರೋನಾ ವೈರಸ್‌ನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ವಾಹನಗಳ ಆನ್-ರೋಡ್ ಬೆಲೆಯನ್ನು ಕಡಿಮೆ ಮಾಡಲು ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಐಆರ್‌ಡಿಎಐ ಮಹತ್ವದ ನಿರ್ಧಾರ, ಕಡಿಮೆಯಾಗಲಿದೆ ಹೊಸ ವಾಹನ ದರ

ಇದರಿಂದ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ. ಐಆರ್‌ಡಿಎಐ ಪ್ರಕಾರ, ದೀರ್ಘಾವಧಿಯ ಮೋಟಾರು ವಿಮಾ ರಕ್ಷಣೆಯಿಂದಾಗಿ ಜನರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ಇದರಿಂದಾಗಿ ಪಾಲಿಸಿದಾರರು ಫ್ಲೆಕ್ಸಿಬಲ್ ಅಲ್ಲದ ವಿಮೆಯನ್ನು ಖರೀದಿಸುತ್ತಾರೆ.

ಐಆರ್‌ಡಿಎಐ ಮಹತ್ವದ ನಿರ್ಧಾರ, ಕಡಿಮೆಯಾಗಲಿದೆ ಹೊಸ ವಾಹನ ದರ

ಗ್ರಾಹಕರು ಈಗಿರುವ ವಿಮಾ ಕಂಪನಿಯ ಸೇವೆಯು ತೃಪ್ತಿ ನೀಡದಿದ್ದರೆ ವಿಮಾ ಕಂಪನಿಯನ್ನು ಬದಲಿಸಬಹುದು. ದೇಶದ ಬಹುತೇಕ ವಾಹನ ಸವಾರರು ಸಾಲದಲ್ಲಿ ವಾಹನಗಳನ್ನು ಖರೀದಿಸುವ ಕಾರಣಕ್ಕೆ ದೀರ್ಘಾವಧಿ ವಿಮೆಯಿಂದಾಗಿ ಹೆಚ್ಚಿನ ಹೊರೆ ಬೀಳುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಐಆರ್‌ಡಿಎಐ ಮಹತ್ವದ ನಿರ್ಧಾರ, ಕಡಿಮೆಯಾಗಲಿದೆ ಹೊಸ ವಾಹನ ದರ

ವಿಮಾ ಕಂಪನಿಯೊಂದಿಗೆ ಗ್ರಾಹಕರು ತೃಪ್ತರಾಗದಿದ್ದರೆ, ಆ ಕಂಪನಿಯು ದೀರ್ಘಾವಧಿ ವಿಮೆಯನ್ನು ಬದಲಿಸಲು ಸಾಧ್ಯವಿಲ್ಲ. ಈ ನಿಯಮವನ್ನು ತೆಗೆದುಹಾಕಿದ ನಂತರ, ಗ್ರಾಹಕರು ತಮ್ಮ ವಿಮಾ ಕಂಪನಿಯನ್ನು ಬದಲಿಸಬಹುದು.

ಐಆರ್‌ಡಿಎಐ ಮಹತ್ವದ ನಿರ್ಧಾರ, ಕಡಿಮೆಯಾಗಲಿದೆ ಹೊಸ ವಾಹನ ದರ

ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳಿಗೆ 5 ವರ್ಷ ಹಾಗೂ ನಾಲ್ಕು ಚಕ್ರ ವಾಹನಗಳಿಗೆ 3 ವರ್ಷದ ದೀರ್ಘಾವಧಿ ವಿಮೆ ಕಡ್ಡಾಯ ಎಂದು 2018 ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ನಂತರ ವಿಮಾ ಕಂಪನಿಗಳು ಗ್ರಾಹಕರಿಗೆ ದೀರ್ಘಾವಧಿ ಪಾಲಿಸಿಗಳನ್ನು ನೀಡಿದವು.

Most Read Articles

Kannada
English summary
Long term vehicle insurance policy scrapped from 1st August confirms IRDAI. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X