ನವೆಂಬರ್ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

ಕರೋನಾ ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಭಾರತದಲ್ಲಿ ಸಣ್ಣ ಕಾರುಗಳ ಮಾರಾಟ ಪ್ರಮಾಣವು ಹೆಚ್ಚಾಗುತ್ತಿದ್ದರೆ, ಐಷಾರಾಮಿ ಕಾರುಗಳ ಮಾರಾಟವು ಕುಸಿಯುತ್ತಿದೆ. ಮಾಹಿತಿಗಳ ಪ್ರಕಾರ ಐಷಾರಾಮಿ ಕಾರುಗಳ ಮಾರಾಟವು ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ.

ನವೆಂಬರ್ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

ಫಾಡಾ (ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್) ನವೆಂಬರ್ 2020ರ ಕಾರು ಮಾರಾಟ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ. ಈ ವರದಿಯಲ್ಲಿ ಆಂಧ್ರಪ್ರದೇಶ, ಮಧ್ಯಪ್ರದೇಶ, ಲಕ್ಷದ್ವೀಪ ಹಾಗೂ ತೆಲಂಗಾಣ ರಾಜ್ಯಗಳ ಅಂಕಿಅಂಶಗಳು ದಾಖಲಾಗಿಲ್ಲ.

ನವೆಂಬರ್ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

ಫಾಡಾ ಬಿಡುಗಡೆಗೊಳಿಸಿರುವ ಅಂಕಿಅಂಶಗಳ ಬಗ್ಗೆ ಹೇಳುವುದಾದರೆ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ 40%ನಷ್ಟು ಮಾರುಕಟ್ಟೆ ಪಾಲನ್ನು ಉಳಿಸಿಕೊಂಡಿದೆ. ಆದರೆ ಕಂಪನಿಯ ಮಾರಾಟವು ನವೆಂಬರ್ ತಿಂಗಳಿನಲ್ಲಿ 26.66%ನಷ್ಟು ಕುಸಿದಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ನವೆಂಬರ್ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

2020ರ ನವೆಂಬರ್‌ ತಿಂಗಳಿನಲ್ಲಿ ಮರ್ಸಿಡಿಸ್ ಬೆಂಝ್ ಇಂಡಿಯಾ 897 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಕಂಪನಿಯು 2019ರ ನವೆಂಬರ್ ತಿಂಗಳಿನಲ್ಲಿ 1223 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು.

ನವೆಂಬರ್ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

ಕಳೆದ ವರ್ಷದ ನವೆಂಬರ್‌ ತಿಂಗಳಿಗೆ ಹೊಲಿಸಿದರೆ ಈ ವರ್ಷದ ನವೆಂಬರ್ ತಿಂಗಳಿನಲ್ಲಿ 326 ಯುನಿಟ್ ಕಾರುಗಳು ಕಡಿಮೆ ಮಾರಾಟವಾಗಿವೆ. ಇನ್ನು ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 728 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ನವೆಂಬರ್ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

2019ರ ನವೆಂಬರ್‌ ತಿಂಗಳಿನಲ್ಲಿ ಕಂಪನಿಯು 954 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಕಳೆದ ವರ್ಷದ ನವೆಂಬರ್ ತಿಂಗಳಿಗಿಂತ ಒಟ್ಟು 226 ಯುನಿಟ್ ವಾಹನಗಳನ್ನು ಕಡಿಮೆ ಮಾರಾಟ ಮಾಡಲಾಗಿದೆ.

ನವೆಂಬರ್ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ನವೆಂಬರ್‌ ತಿಂಗಳಿನಲ್ಲಿ ಕಂಪನಿಯ ಮಾರಾಟವು 23.69%ನಷ್ಟು ಕಡಿಮೆಯಾಗಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಕಳೆದ ತಿಂಗಳು 236 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ನವೆಂಬರ್ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

ಕಂಪನಿಯು 2019ರ ನವೆಂಬರ್‌ ತಿಂಗಳಿನಲ್ಲಿ 260 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೊಲಿಸಿದರೆ ಈ ವರ್ಷದ ನವೆಂಬರ್ ತಿಂಗಳಿನಲ್ಲಿ 24 ಯುನಿಟ್‌ ವಾಹನಗಳು ಕಡಿಮೆ ಮಾರಾಟವಾಗಿವೆ.

ನವೆಂಬರ್ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

ಈ ಮೂಲಕ ಕಂಪನಿಯ ಮಾರಾಟವು ಹಿಂದಿನ ವರ್ಷಕ್ಕಿಂತ 9.23%ನಷ್ಟು ಕಡಿಮೆಯಾಗಿದೆ. ವೊಲ್ವೋ ಕಂಪನಿಯು ನವೆಂಬರ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 169 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ನವೆಂಬರ್ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

ವೊಲ್ವೋ ಕಂಪನಿಯು 2019ರ ನವೆಂಬರ್‌ನಲ್ಲಿ 196 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ವೊಲ್ವೋ ಕಂಪನಿಯ ಮಾರಾಟ ಪ್ರಮಾಣವು ಹಿಂದಿನ ವರ್ಷದ ನವೆಂಬರ್ ತಿಂಗಳಿಗೆ ಹೊಲಿಸಿದರೆ ಈ ವರ್ಷದ ನವೆಂಬರ್‌ ತಿಂಗಳಿನಲ್ಲಿ 13.78%ನಷ್ಟು ಕುಸಿದಿದೆ.

Article Published On: Wednesday, December 9, 2020, 14:10 [IST]
English summary
Luxury car sales declines in November 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+