ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಎರಡು ದೈತ್ಯ ಕಾರು ತಯಾರಕ ಕಂಪನಿಗಳಾದ ಟೊಯೊಟಾ ಹಾಗೂ ಮಾರುತಿ ಸುಜುಕಿ ಸಹಭಾಗಿತ್ವವನ್ನು ಹೊಂದಿವೆ. ಈ ಸಹಭಾಗಿತ್ವದಲ್ಲಿ ತಯಾರಾದ ಮೊದಲ ಕಾರು ಟೊಯೊಟಾ ಗ್ಲಾಂಝಾ, ಇದು ಮಾರುತಿ ಸುಜುಕಿ ಕಂಪನಿಯ ಬಲೆನೊ ಕಾರಿನ ರಿಫ್ರೆಶ್ ಆವೃತ್ತಿಯಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

2020ರ ಆಗಸ್ಟ್ ತಿಂಗಳಲ್ಲಿ ಗ್ಲಾಂಝಾ ಮಾದರಿಯ 1,418 ಯುನಿಟ್‌ಗಳು ಮಾರಟವಾಗಿವೆ. ಇದೀಗ ಟೊಯೊಟಾ ಕಂಪನಿಯು ತನ್ನ ಗ್ಲಾಂಝಾ ಮಾದರಿಯನ್ನು ಆಫ್ರಿಕಾದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಟೊಯೊಟಾ ಕಂಪನಿಯು ಈ ಪ್ರೀಮಿಯಂ ಮಾದರಿಯನ್ನು ಆಫ್ರಿಕಾ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ವರ್ಷದ ಕೊನೆಯಲ್ಲಿ ಆಫ್ರಿಕಾದ 47 ಮಾರುಕಟ್ಟೆಯಲ್ಲಿ ಈ ಕಾರು ಬಿಡುಗಡೆಗೊಳಿಸಲಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಆದರೆ ಟೊಯೊಟಾ ಕಂಪನಿಯು ಗ್ಲಾಂಝಾ ಎಂಬ ಹೆಸರನ್ನು ಬೈಬಿಟ್ಟು ‘ಸ್ಟಾರ್ಲೆಟ್' ಎಂಬ ಹೆಸರಿನೊಂದಿಗೆ ಅನಾವರಣಗೊಳಿಸಿದೆ. ಇದು ಮೂಲತಃ 1973 ರಿಂದ 1999 ರವರೆಗೆ ಟೊಯೊಟಾ ತಯಾರಿಸಿದ ಉಪ-ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಆಗಿತ್ತು.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಸ್ಟಾರ್ಲೆಟ್ ಅನ್ನು ಮಾರುತಿ ಸುಜುಕಿಯ ಗುಜರಾತ್ ಸ್ಥಾವರದಲ್ಲಿ ತಯಾರಿಸಲಾಗುವುದು ಮತ್ತು ಈ ವರ್ಷದ ಕೊನೆಯಲ್ಲಿ ಪ್ರಾರಂಭವಾದ ನಂತರ 47 ಆಫ್ರಿಕನ್ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುವುದು.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಲ್ಯಾಂಡ್ ಕ್ರೂಸರ್ 200, ಹಿಲಕ್ಸ್ ಮತ್ತು ಹಿಯಾಸ್ ನಂತರ ಸ್ಟಾರ್ಲೆಟ್ ಆಫ್ರಿಕಾದಲ್ಲಿ ಬಿಡುಗಡೆಯಾಗುತ್ತಿರುವ ಟೊಯೊಟಾದ ನಾಲ್ಕನೇ ವಾಹನವಾಗಲಿದೆ. ಟೊಯೊಟಾ ಸ್ಟಾರ್ಲೆಟ್ ಕಾರು ಮಾರುತಿ ಸುಜುಕಿಯ ಗುಜರಾತ್ ಸ್ಥಾವರದಲ್ಲಿ ತಯಾರಿಸಲಾಗುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಸ್ಟಾರ್ಲೆಟ್ ಕಾರಿನಲ್ಲಿ 1.4-ಲೀಟರ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 93 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಆದರೆ ಭಾರತದಲ್ಲಿ ಮಾರಾಟವಾಗುತ್ತಿರುವ ಟೊಯೊಟಾ ಗ್ಲಾಂಝಾ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯ 1.2-ಲೀಟರಿನ ಕೆ 12 ಬಿ, ಬಿಎಸ್ 6 ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 83 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಗ್ರಾಹಕರು ಎಸ್‌ಎಸ್‌ವಿಎಸ್ 1.2-ಲೀಟರ್ ಡ್ಯುಯಲ್ ಜೆಟ್ ಡ್ಯುಯಲ್-ವಿವಿಡಿಐ ಪೆಟ್ರೋಲ್ ಮಾದರಿಯನ್ನು ಸಹ ಖರೀದಿಸಬಹುದು. ಈ ಎಂಜಿನ್ 90 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಗ್ಲಾಂಝಾ ಕಾರಿನಲ್ಲಿ ಎಲ್ಇಡಿ ಪ್ರೋಜೆಕ್ಟರ್ ಜೊತೆ ಡಿಎಲ್ಆರ್ ಹೆಡ್‌ಲ್ಯಾಂಪ್, 3ಡಿ ಮಾದರಿಯಲ್ಲಿ ಮುಂಭಾಗದ ಕ್ರೋಮ್ ಗ್ರೀಲ್, ಸ್ಟೈಲಿಷ್ ಬಂಪರ್, ಡೈಮೆಂಡ್ ಕಟ್ ಅಲಾಯ್ ವ್ಹೀಲ್‍‍ಗಳು ಮತ್ತು ಎಲ್ಇಡಿ ರೇರ್ ಕಾಂಬಿನೇಷನ್ ಟೇಲ್‌ಗೇಟ್ ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಟೊಯೊಟಾ ಗ್ಲಾಂಝಾ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಚೈಲ್ಡ್ ಸೀಟ್ ಮೌಂಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆ ನಾಲ್ಕು ಬದಿಯಲ್ಲೂ ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಹೈ ಸ್ಪೀಡ್ ವಾರ್ನಿಂಗ್ ಅಲರ್ಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಕಾರನ್ನು ಅನಾವರಣಗೊಳಿಸಿದ ಟೊಯೊಟಾ

ಮಾರುತಿ ಸುಜುಕಿ ಬಲೆನೊ ಹಾಗೂ ಟೊಯೊಟಾ ಗ್ಲಾಂಝಾ ಕಾರುಗಳು ಹೆಚ್ಚಿನ ಅಂಶಗಳಲ್ಲಿ ಸಾಮ್ಯತೆಯನ್ನು ಹೊಂದಿವೆ. ಗ್ಲಾಂಝಾದ ನಂತರ ಟೊಯೊಟಾ-ಸುಜುಕಿ ಸಹಭಾಗಿತ್ವದಲ್ಲಿ ಇನ್ನೂ ಹಲವು ಕಾರುಗಳು ಬಿಡುಗಡೆಯಾಗಲಿವೆ.

Most Read Articles

Kannada
Read more on ಟೊಯೊಟಾ toyota
English summary
Made-In-India Toyota Starlet (Rebadged Glanza) Unveiled In South Africa. Read In Kannada.
Story first published: Wednesday, September 9, 2020, 11:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X