ಸಹಭಾಗಿತ್ವ ಯೋಜನೆ ಸ್ಥಗಿತ- ಅಲ್ಟುರಾಸ್ ಜಿ4 ಉತ್ಪಾದನೆಗೆ ಗುಡ್‌ಬೈ ಹೇಳಲಿದೆ ಮಹೀಂದ್ರಾ

ಮಹೀಂದ್ರಾ ಕಂಪನಿಯು ದಕ್ಷಿಣ ಕೊರಿಯಾದ ಕಾರು ಉತ್ಪಾದನಾ ಕಂಪನಿಯಾದ ಸ್ಯಾಂಗ್‌ಯಾಂಗ್ ಜೊತೆಗೂಡಿ ಬಿಡುಗಡೆ ಮಾಡಲಾಗಿದ್ದ ಅಲ್ಟುರಾಸ್ ಜಿ4 ಎಸ್‌ಯುವಿ ಮಾದರಿಯ ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಹೊಸ ಕಾರು ಮುಂಬರುವ ಕೆಲವೇ ದಿನಗಳ ತನಕ ಮಾತ್ರವೇ ಖರೀದಿಗೆ ಲಭ್ಯವಿರಲಿದೆ.

ಸಹಭಾಗಿತ್ವ ಯೋಜನೆ ಸ್ಥಗಿತ- ಅಲ್ಟುರಾಸ್ ಜಿ4 ಉತ್ಪಾದನೆಗೆ ಗುಡ್‌ಬೈ ಹೇಳಲಿದೆ ಮಹೀಂದ್ರಾ

ಭಾರತದಲ್ಲಿ ಕಳೆದ 10 ವರ್ಷಗಳಿಂದ ಸಹಭಾಗಿತ್ವ ಯೋಜನೆ ಅಡಿಯಲ್ಲಿ ವಾಹನ ಮಾರಾಟ ಮಾಡುತ್ತಿದ್ದ ಸ್ಯಾಂಗ್‌ಯಾಂಗ್ ಕಂಪನಿಯಲ್ಲಿ ಹೆಚ್ಚಿನ ಮಟ್ಟದ ಷೇರು ಹೊಂದಿದ್ದ ಮಹೀಂದ್ರಾ ಕಂಪನಿಯು ಕಳೆದ ವರ್ಷದ ಮೊದಲ ಕಾರು ಮಾದರಿಯಾಗಿ ಅಲ್ಟುರಾಸ್ ಜಿ4 ಎಸ್‌ಯುವಿ ಬಿಡುಗಡೆ ಮಾಡಿತ್ತು. ಅಲ್ಟುರಾಸ್ ಬಿಡುಗಡೆಗೂ ಮುನ್ನ ರೆಕ್ಸ್ಟಾನ್ ಹೆಸರಿನಲ್ಲಿ ಮಾರಾಟವಾಗುತ್ತಿದ್ದ ಸ್ಯಾಂಗ್‌ಯಾಂಗ್ ಎಸ್‌ಯುವಿ ಕಾರನ್ನು ಮಹೀಂದ್ರಾ ಕಂಪನಿಯು 2019ರ ಆರಂಭದಲ್ಲಿ ಬಿಡುಗಡೆ ಮಾಡಿತ್ತು.

ಸಹಭಾಗಿತ್ವ ಯೋಜನೆ ಸ್ಥಗಿತ- ಅಲ್ಟುರಾಸ್ ಜಿ4 ಉತ್ಪಾದನೆಗೆ ಗುಡ್‌ಬೈ ಹೇಳಲಿದೆ ಮಹೀಂದ್ರಾ

ಅಲ್ಟುರಾಸ್ ಜಿ4 ಬಿಡುಗಡೆಯ ನಂತರ ರೆಕ್ಸ್ಟಾನ್ ಎಸ್‌ಯುವಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದ ಸ್ಯಾಂಗ್‌ಯಾಂಗ್ ಕಂಪನಿಯು ಅಲ್ಟುರಾಸ್ ಜಿ4 ಮಾದರಿಯ ಉತ್ಪಾದನೆಯ ಮೇಲೆ ಗಮನಹರಿಸಿತ್ತು. ಜೊತೆಗೆ ಹೊಸ ಕಾರನ್ನು ಈ ವರ್ಷದ ಮಧ್ಯಂತರದಲ್ಲಿ ಬಿಎಸ್-6 ಮಾದರಿಯಲ್ಲೂ ಬಿಡುಗಡೆ ಮಾಡಿತ್ತು.

ಸಹಭಾಗಿತ್ವ ಯೋಜನೆ ಸ್ಥಗಿತ- ಅಲ್ಟುರಾಸ್ ಜಿ4 ಉತ್ಪಾದನೆಗೆ ಗುಡ್‌ಬೈ ಹೇಳಲಿದೆ ಮಹೀಂದ್ರಾ

ಆದರೆ ಸ್ಯಾಂಗ್‌ಯಾಂಗ್ ಕಂಪನಿಯಲ್ಲಿ ಗರಿಷ್ಠ ಪ್ರಮಾಣದ ಹೂಡಿಕೆ ಮಾಡಿದ್ದ ಮಹೀಂದ್ರಾ ಕಂಪನಿಯು ಕರೋನಾ ವೈರಸ್ ಪರಿಣಾಮ ಕಳೆದ ಕೆಲ ಹಿಂದೆ ತನ್ನ ಷೇರು ಪಾಲನ್ನು ಮಾರಾಟಗೊಳಿಸಿದೆ. ಹೀಗಾಗಿ ಸಹಭಾಗಿತ್ವದ ಯೋಜನೆ ಅಡಿ ನಿರ್ಮಾಣವಾಗುತ್ತಿದ್ದ ಅಲ್ಟುರಾಸ್ ಜಿ4 ಉತ್ಪಾದಾನೆಯು ಶೀಘ್ರದಲ್ಲೇ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.

ಸಹಭಾಗಿತ್ವ ಯೋಜನೆ ಸ್ಥಗಿತ- ಅಲ್ಟುರಾಸ್ ಜಿ4 ಉತ್ಪಾದನೆಗೆ ಗುಡ್‌ಬೈ ಹೇಳಲಿದೆ ಮಹೀಂದ್ರಾ

ಸ್ಯಾಂಗ್‌ಯಾಂಗ್ ಕಂಪನಿಯಲ್ಲಿ ಶೇ.75ರಷ್ಟು ಸ್ಟಾಕ್ ಹೊಂದಿರುವ ಮಹೀಂದ್ರಾ ಕಂಪನಿಯು ಕಳೆದ ವರ್ಷ ಬರೋಬ್ಬರಿ ರೂ.3,255 ಕೋಟಿ ನಷ್ಟ ಅನುಭವಿಸಿದ್ದು, ಸತತ ನಷ್ಟ ಹಿನ್ನಲೆಯಲ್ಲಿ ಸ್ಯಾಂಗ್‌ಯಾಂಗ್ ಕಂಪನಿಯಲ್ಲಿ ಹೂಡಿಕೆಯನ್ನು ಮೊಟುಕುಗೊಳಿಸಿ ಹೊಸ ಯೋಜನೆಗಳತ್ತ ಗಮನಹರಿಸುತ್ತಿದೆ. ಈ ಹಿನ್ನಲೆಯಲ್ಲಿ ಅಲ್ಟುರಾಸ್ ಜಿ4 ಮಾದರಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ಮಾರಾಟದಿಂದ ಸ್ಥಗಿತಗೊಳಿಸುವ ಸುಳಿವು ನೀಡಿರುವ ಮಹೀಂದ್ರಾ ಕಂಪನಿಯು 500 ಯುನಿಟ್ ಉತ್ಪಾದನೆ ಆಗುವಷ್ಟು ಮಾತ್ರವೇ ಬಿಡಿಭಾಗಗಳನ್ನು ಸ್ಟಾಕ್ ಹೊಂದಿದೆ.

ಕ್ಲಾಸಿಕ್ ಬೈಕ್ ಪ್ರಿಯರಿಗಾಗಿ ಬಿಡುಗಡೆಯಾದ ರಾಯಲ್ ಎನ್‌ಫೀಲ್ಡ್ ಹೊಸ ಮಿಟಿಯೊರ್ 350 ಹೇಗಿದೆ? ಈ ವಿಡಿಯೋ ನೋಡಿ..

ಅಲ್ಟುರಾಸ್ ಜಿ4 ಮಾದರಿಗಾಗಿ ಪೂರ್ಣ ಪ್ರಮಾಣದಲ್ಲಿ ದಕ್ಷಿಣ ಕೊರಿಯಾದಲ್ಲಿರುವ ಸ್ಯಾಂಗ್‌ಯಾಂಗ್ ಕಾರು ಉತ್ಪಾದನಾ ಘಟಕದಿಂದಲೇ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಮಹೀಂದ್ರಾ ಕಂಪನಿಯು ಇದೀಗ ಸಂಪೂರ್ಣವಾಗಿ ಆಮದು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.

ಸಹಭಾಗಿತ್ವ ಯೋಜನೆ ಸ್ಥಗಿತ- ಅಲ್ಟುರಾಸ್ ಜಿ4 ಉತ್ಪಾದನೆಗೆ ಗುಡ್‌ಬೈ ಹೇಳಲಿದೆ ಮಹೀಂದ್ರಾ

ಇದರಿಂದಾಗಿ ಸ್ಟಾಕ್ ಪ್ರಮಾಣದಲ್ಲಿರುವ ಬಿಡಿಭಾಗಗಳಿಂದ ಮಾತ್ರವೇ ಉತ್ಪಾದನೆಗೊಳ್ಳಲಿರುವ ಅಲ್ಟುರಾಸ್ ಜಿ4 ಮಾದರಿಯು 500 ಯುನಿಟ್ ಮಾರಾಟಗೊಳಿಸಲಿದ್ದು, ತದನಂತರ ಕಾರು ಮಾರಾಟವು ಅಧಿಕೃತವಾಗಿ ನಿಲುಗಡೆಯಾಗಲಿದೆ.

ಸಹಭಾಗಿತ್ವ ಯೋಜನೆ ಸ್ಥಗಿತ- ಅಲ್ಟುರಾಸ್ ಜಿ4 ಉತ್ಪಾದನೆಗೆ ಗುಡ್‌ಬೈ ಹೇಳಲಿದೆ ಮಹೀಂದ್ರಾ

ಇನ್ನು ಅಲ್ಟುರಾಸ್ ಜಿ4 ಕಾರು ಮಾದರಿಯು ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರು ಮಾದರಿಗೆ ಸರಿಸಮನಾದ ಎಂಜಿನ್ ಕಾರ್ಯಕ್ಷಮತೆ ಮತ್ತು ಬಲಿಷ್ಠತೆ ಹೊಂದಿದ್ದು, ಈ ವರ್ಷದ ಆರಂಭದಲ್ಲಿ ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಯಾಗಿತ್ತು.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಸಹಭಾಗಿತ್ವ ಯೋಜನೆ ಸ್ಥಗಿತ- ಅಲ್ಟುರಾಸ್ ಜಿ4 ಉತ್ಪಾದನೆಗೆ ಗುಡ್‌ಬೈ ಹೇಳಲಿದೆ ಮಹೀಂದ್ರಾ

ಬಿಎಸ್-6 ಅಲ್ಟುರಾಸ್ ಜಿ4 ಎಸ್‌ಯುವಿ ಮಾದರಿಯು ಸದ್ಯ ಎರಡು ಮಾದರಿಯಲ್ಲಿ ಮಾರಾಟವಾಗುತ್ತಿದ್ದು, 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 28.69 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.31.69 ಲಕ್ಷ ಬೆಲೆ ಹೊಂದಿದೆ.

ಸಹಭಾಗಿತ್ವ ಯೋಜನೆ ಸ್ಥಗಿತ- ಅಲ್ಟುರಾಸ್ ಜಿ4 ಉತ್ಪಾದನೆಗೆ ಗುಡ್‌ಬೈ ಹೇಳಲಿದೆ ಮಹೀಂದ್ರಾ

ಫ್ರಂಟ್ ವೀಲ್ಹ್ ಡ್ರೈವ್ ಮತ್ತು ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಹೊಂದಿರುವ ಅಲ್ಟುರಾಸ್ ಜಿ4 ಎಸ್‌ಯುವಿ ಕಾರು ಫಾರ್ಚೂನರ್ ಮತ್ತು ಎಂಡೀವರ್ ಕಾರುಗಳಿಗೆ ಪ್ರಬಲ ಪೈಪೋಟಿಯಾಗಿದ್ದು, ಮರ್ಸಿಡಿಸ್‌ನಿಂದ ಎರವಲು ಪಡೆದುಕೊಳ್ಳಲಾದ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 180-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಸಹಭಾಗಿತ್ವ ಯೋಜನೆ ಸ್ಥಗಿತ- ಅಲ್ಟುರಾಸ್ ಜಿ4 ಉತ್ಪಾದನೆಗೆ ಗುಡ್‌ಬೈ ಹೇಳಲಿದೆ ಮಹೀಂದ್ರಾ

ಹಾಗೆಯೇ ಸುರಕ್ಷಾ ಫೀಚರ್ಸ್‌ಗಳಲ್ಲೂ ಈಗಾಗಲೇ 5-ಸ್ಟಾರ್ ರೇಟಿಂಗ್ಸ್ ಹೊಂದಿರುವ ಅಲ್ಟುರಾಸ್ ಜಿ4 ಎಸ್‌ಯುವಿ ಕಾರು ಮಾದರಿಯು ಮುಂದಿನ ಕೆಲ ದಿನಗಳ ತನಕ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ತದನಂತರ ಮಾರುಕಟ್ಟೆಯಿಂದ ನಿರ್ಗಮಿಸಲಿದೆ.

Most Read Articles

Kannada
English summary
Mahindra Alturas G4 SUV To Be Discontinued.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X