ಅಧಿಕೃತ ಕಾರ್ ಮಾಡಿಫೈಡ್ ಸೌಲಭ್ಯವನ್ನು ತೆರೆದ ಮಹೀಂದ್ರಾ

ಭಾರತದಲ್ಲಿ ವಾಹನಗಳ ಮಾಡಿಫೈಡ್ ಪ್ರಕ್ರಿಯೆಯನ್ನು ಕಾನೂನು ಬಾಹಿರ ಎಂದು ಘೋಷಣೆ ಮಾಡಲಾಗಿದ್ದರೂ ಕೂಡಾ ವಾಹನ ಉತ್ಪಾದನಾ ಕಂಪನಿಗಳೇ ಜೋಡಣೆ ಮಾಡುವ ಕೆಲವು ಮಾಡಿಫೈ ಬಿಡಿಭಾಗಗಳಿಗೆ ಮಾನ್ಯತೆಯಿದ್ದು, ಸಾರಿಗೆ ಇಲಾಖೆಯ ನಿಯಮಗಳ ಅನುಸಾರವಾಗಿ ಮಹೀಂದ್ರಾ ಕಂಪನಿಯು ಇದೀಗ ಅಧಿಕೃತವಾಗಿ ಮಾಡಿಫೈ ವಾಹನಗಳ ಮಾರಾಟಕ್ಕೆ ಚಾಲನೆ ನೀಡಿದೆ.

ಅಧಿಕೃತ ಕಾರ್ ಮಾಡಿಫೈಡ್ ಸೌಲಭ್ಯವನ್ನು ತೆರೆದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಮಾಡಿಫೈ ವಾಹನಗಳ ಮಾಹಿತಿ ಮತ್ತು ಬಿಡಿಭಾಗಗಳ ಮಾಹಿತಿಗಾಗಿ ಪ್ರತ್ಯೇಕವಾದ ವೆಬ್‌ಸೈಟ್ ಆರಂಭಿಸಿದ್ದು, ತನ್ನ ಜನಪ್ರಿಯ ಎಸ್‌ಯುವಿ ಕಾರು ಮಾದರಿಗಳಿಗಾಗಿ ವಿವಿಧ ಮಾದರಿಯ ಮಾಡಿಫೈ ವಿನ್ಯಾಸಗಳನ್ನು ಸಿದ್ದಪಡಿಸಿದೆ. ಮಹೀಂದ್ರಾ ಕಂಪನಿಯು ಜೋಡಣೆ ಮಾಡುವ ಮಾಡಿಫೈ ಬಿಡಿಭಾಗಗಳು ಸಾರಿಗೆ ಇಲಾಖೆಯು ನಿಗದಿಪಡಿಸಿರುವ ಮಾಡಿಫೈ ಮಿತಿಯೊಳಗೆ ಸಿದ್ದವಾಗಿದ್ದು, ಆಕರ್ಷಕ ಬೆಲೆಗಳಲ್ಲಿ ಮಾಡಿಫೈ ಸೌಲಭ್ಯಗಳನ್ನು ನೀಡಲಿದೆ.

ಅಧಿಕೃತ ಕಾರ್ ಮಾಡಿಫೈಡ್ ಸೌಲಭ್ಯವನ್ನು ತೆರೆದ ಮಹೀಂದ್ರಾ

ಸದ್ಯಕ್ಕೆ ಮಹೀಂದ್ರಾ ಕಂಪನಿಯು ಪ್ರಮುಖ ಮೂರು ಕಾರು ಮಾದರಿಗಳಾದ ಥಾರ್, ಸ್ಕಾರ್ಪಿಯೋ ಮತ್ತು ಬೊಲೆರೊ ಕಾರು ಮಾದರಿಗಳಿಗಾಗಿ ಮಾತ್ರ ಮಾಡಿಫೈ ಸೌಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯು ಕಸ್ಟಮೈಜ್ಡ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ.

ಅಧಿಕೃತ ಕಾರ್ ಮಾಡಿಫೈಡ್ ಸೌಲಭ್ಯವನ್ನು ತೆರೆದ ಮಹೀಂದ್ರಾ

ಥಾರ್ ಎಸ್‌ಯುವಿ ಮಾಡಿಫೈ ಪ್ಯಾಕೇಜ್‌‌ನಲ್ಲಿ ಥಾರ್ ಅಡ್ವೆಂಚರ್(ಹಾರ್ಡ್ ಟಾಪ್, ಸಾಫ್ಟ್ ಟಾಪ್ ಮತ್ತು ಓಪನ್ ಟಾಪ್), ಥಾರ್ ಬೈಸನ್, ಥಾರ್ ಬಗ್ಗಿ, ಥಾರ್ ಮಿಡ್‌ನೈಟ್ ಮತ್ತು ಥಾರ್ ಡೇ ಬ್ರೇಕ್(ಹಾರ್ಡ್ ಮತ್ತು ಸಾಫ್ಟ್ ಟಾಪ್) ಒಳಗೊಂಡಿದೆ.

ಅಧಿಕೃತ ಕಾರ್ ಮಾಡಿಫೈಡ್ ಸೌಲಭ್ಯವನ್ನು ತೆರೆದ ಮಹೀಂದ್ರಾ

ಹಾಗೆಯೇ ಸ್ಕಾರ್ಪಿಯೋ ಮತ್ತು ಬೊಲೆರೊದಲ್ಲೂ ಕೂಡಾ ವಿವಿಧ ಮಾಡಿಫೈ ಪ್ಯಾಕೇಜ್‌ಗಳಿದ್ದು, ಸ್ಕಾರ್ಪಿಯೋದಲ್ಲಿ ನೀಡಲಾಗಿರುವ ಡಾರ್ಕ್‌ಹಾರ್ಸ್, ಲೈಫ್‌ಸ್ಟೈಲ್, ಮೌಂಟೆನೈರ್ ಮತ್ತು ಎಕ್ಸ್‌ಟ್ರಿಮ್ ಪ್ಯಾಕೇಜ್ ಆಕರ್ಷಕ ಲುಕ್ ಹೊಂದಿವೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಅಧಿಕೃತ ಕಾರ್ ಮಾಡಿಫೈಡ್ ಸೌಲಭ್ಯವನ್ನು ತೆರೆದ ಮಹೀಂದ್ರಾ

ಬೊಲೆರೊದಲ್ಲಿ ಆ್ಯಟಿಟ್ಯೂಡ್, ಸ್ಟಿಂಜರ್, ಎಕ್ಸ್‌ಲುಸಿವ್ ಮತ್ತು ಲಿಮಿಟೆಡ್ ಎಡಿಷನ್ ಮಾಡಿಫೈ ಪ್ಯಾಕೇಜ್‌ಗಳನ್ನು ಲಭ್ಯವಿದ್ದು, ಮಾಡಿಫೈ ವಾಹನಗಳಿಗಾಗಿ ಗ್ರಾಹಕರು ತಮ್ಮ ಕಾರುಗಳನ್ನು ಮುಂಬೈನಲ್ಲಿರುವ ಬ್ರಾಂಡ್ ಸ್ಟುಡಿಯೋಗೆ ತರಬೇಕಾಗುತ್ತದೆ.

ಅಧಿಕೃತ ಕಾರ್ ಮಾಡಿಫೈಡ್ ಸೌಲಭ್ಯವನ್ನು ತೆರೆದ ಮಹೀಂದ್ರಾ

ಇದಕ್ಕಾಗಿ ಮಹೀಂದ್ರಾ ಕಂಪನಿಯು ಲಾಜಿಸ್ಟಿಕ್ ಸೌಲಭ್ಯವನ್ನು ಸಹ ತೆರೆದಿದ್ದು, ಮಾಡಿಫೈಗೊಳ್ಳಲಿರುವ ವಾಹನಗಳು ಮಹೀಂದ್ರಾ ಕಂಪನಿಯು ನಡೆಸಲಿರುವ ಕೆಲವು ಪೂರ್ವ ಪರೀಕ್ಷೆಗಳನ್ನು ಎದುರಿಸಿದ ನಂತರ ಮಾಡಿಫೈ ಸೌಲಭ್ಯಕ್ಕೆ ಅರ್ಹವಾಗಿದೆ ಎಂಬುವುದನ್ನು ಖಾತ್ರಿಪಡಿಸುತ್ತದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಅಧಿಕೃತ ಕಾರ್ ಮಾಡಿಫೈಡ್ ಸೌಲಭ್ಯವನ್ನು ತೆರೆದ ಮಹೀಂದ್ರಾ

ಮಾಡಿಫೈಗೊಳ್ಳಲಿರುವ ಎಸ್‌ಯುವಿ ಕಾರು ತಾಂತ್ರಿಕವಾಗಿ ಉತ್ತಮ ಸ್ಥಿತಿಯಲ್ಲಿದೆ ಎಂದು ಖಚಿತಪಡಿಸಿದ ನಂತರ ಮಾಡಿಫೈ ಸೌಲಭ್ಯವು ಲಭ್ಯವಾಗಲಿದ್ದು, ಮಾಡಿಫೈ ವಿನ್ಯಾಸಗಳ ಆಧಾರದ ಮೇಲೆ ದರ ನಿಗದಿ ಮಾಡಲಾಗುತ್ತದೆ.

ಅಧಿಕೃತ ಕಾರ್ ಮಾಡಿಫೈಡ್ ಸೌಲಭ್ಯವನ್ನು ತೆರೆದ ಮಹೀಂದ್ರಾ

ಸದ್ಯ ಮೂರು ಎಸ್‌ಯುವಿ ಕಾರು ಮಾದರಿಗಳಲ್ಲಿ ಮಾತ್ರವೇ ಮಾಡಿಫೈ ಕಿಟ್ ಸೌಲಭ್ಯವನ್ನು ನೀಡುತ್ತಿರುವ ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಟಿಯುವಿ300, ಎಕ್ಸ್‌ಯುವಿ500 ಮತ್ತು ಕೆಯುವಿ100 ಕಾರು ಮಾದರಿಗಳಲ್ಲೂ ಮಾಡಿಫೈ ಕಿಟ್ ಪರಿಚಯಿಸುವ ಯೋಜನೆಯಲ್ಲಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಅಧಿಕೃತ ಕಾರ್ ಮಾಡಿಫೈಡ್ ಸೌಲಭ್ಯವನ್ನು ತೆರೆದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಮಾಡಿಫೈ ಕಿಟ್ ಹೊರತುಪಡಿಸಿ ಸಾಮಾನ್ಯ ಕಾರುಗಳಲ್ಲಿ ಈಗಾಗಲೇ ವಿಭಿನ್ನವಾದ ಗ್ರಿಲ್, ಹೆಡ್‌ಲ್ಯಾಂಪ್, ಟೈಲ್‌ಲ್ಯಾಂಪ್, ಟೈಲ್‌ಲೈಟ್, ಅಲಾಯ್ ವೀಲ್ಹ್, ರೋಲ್ ಬಾರ್, ರಾಕ್ ಸ್ಲೈಡರ್, ಬುಲ್ ಬಾರ್, ವಿಂಚ್ ಸೇರಿದಂತೆ ವಿವಿಧ ಮಾಡಿಫೈ ಬಿಡಿಭಾಗಗಳನ್ನು ಅಧಿಕೃತವಾಗಿ ಮಾರಾಟ ಮಾಡುತ್ತಿದೆ. ಆದರೆ ಇದೀಗ ಹೊಸದಾಗಿ ಆರಂಭಿಸಿರುವ ಮಾಡಿಫೈ ಸೌಲಭ್ಯವು ಗ್ರಾಹಕರ ಬೇಡಿಕೆಯೆಂತೆ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೆಚ್ಚಿನ ಮಾಹಿತಿಗಾಗಿ ಮಹೀಂದ್ರಾ ಕಸ್ಟ್‌ಮೈಜ್ಡ್ ವೆಬ್‌ಸೈಟ್‍ಗೆ ಭೇಟಿ ನೀಡಿ.

Most Read Articles

Kannada
English summary
Mahindra Car Customisation Website Launched. Read in Kannada.
Story first published: Saturday, August 29, 2020, 14:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X