ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಬರಲಿದೆ ಹೊಸ ಮಹಿಂದ್ರಾ ಥಾರ್
ಬಹುನಿರೀಕ್ಷಿತ 2020ರ ಥಾರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಕ್ಕೆ ಮಹೀಂದ್ರಾ ಕಂಪನಿಯು ಸಜ್ಜಾಗಿದೆ. ಮಹೀಂದ್ರಾ ಕಂಪನಿಯು ಈ ಹೊಸ ಐಕಾನಿಕ್ ಆಫ್-ರೋಡರ್ ಥಾರ್ ಎಸ್‍ಯುವಿಯನ್ನು ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಮಹೀಂದ್ರಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಪವನ್ ಗೋಯೆಂಕಾ ಅವರು ಇತ್ತೀಚೆಗೆ ಮಾಧ್ಯಮವೊಂದರಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡಿ, ಈ ವರ್ಷದ ಅಕ್ಟೋಬರ್ ಆರಂಭದಲ್ಲಿ ಹೊಸ ತಲೆಮಾರಿನ ಥಾರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ. ಕಾರೋನ ಸೋಂಕಿನಿಂದಾಗಿ ಈ ಹೊಸ ಥಾರ್ ಎಸ್‍ಯುವಿಯ ಬಿಡುಗಡೆಯು ವಿಳಂಬವಾಗಿದೆ ಎಂದು ಹೇಳಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಸ್‍ಯುವಿಗಳಲ್ಲಿ ಹೊಸ ಥಾರ್ ಕೂಡ ಒಂದಾಗಿದೆ.

ಹೊಸ ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ 140 ಬಿಹೆಚ್‌ಪಿ ಪವರ್ ಉತ್ಪಾದಿಸುವ 2.2 ಲೀಟರ್ ಡೀಸೆಲ್ ಬಿಎಸ್ 6 ಎಂಜಿನ್ ಹೊಂದಿರಲಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿರಲಿದೆ.
MOST READ: 370 ಕಿ.ಮೀ ಮೈಲೇಜ್ ನೀಡಲಿದೆ ಮಹೀಂದ್ರಾದ ಹೊಸ ಎಲೆಕ್ಟ್ರಿಕ್ ಎಸ್‍ಯುವಿ

ಈ ಥಾರ್ ಎಸ್‍ಯುವಿಯಲ್ಲಿ ಹೊಸ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಕೂಡ ಹೊಂದಿರಲಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿರಲಿದೆ.

ಮಹೀಂದ್ರಾ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಹೊಸ ಮಹೀಂದ್ರಾ ಥಾರ್ ಎಸ್‍ಯುವಿಯ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿದೆ. ಈ ಹೊಸ ಮಹೀಂದ್ರಾ ಥಾರ್ ಎಸ್‍ಯುವಿಗಾಗಿ ಅನಧಿಕೃತವಾಗಿ ಬುಕ್ಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಆದರೆ ಬುಕ್ಕಿಂಗ್ ಮಾಡಲು ಟೋಕನ್ ಮೊತ್ತ ಮತ್ತು ಇತರ ಮಾಹಿತಿಗಳು ಇನ್ನು ಕೂಡ ಲಭ್ಯವಾಗಿಲ್ಲ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಹೊಸ ಥಾರ್ ನಲ್ಲಿ ಹಲವಾರು ಹೊಸ ಫೀಚರ್ಸ್‍ಗಳನ್ನು ಅಳವಡಿಸಲಾಗುತ್ತಿದೆ. ಹೊಸ ಥಾರ್‍ನಲ್ಲಿ ಫ್ಲೋಟಿಂಗ್ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಇದು ಆ್ಯಪಲ್ ಕಾರ್‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ವನ್ನು ಒಳಗೊಂಡಿದೆ ಎಂದು ನಿರೀಕ್ಷಿಸಲಾಗಿದೆ.

2020ರ ಥಾರ್‍ನಲ್ಲಿರುವ ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ತನ್ನ ಬ್ರ್ಯಾಂಡ್‍ನ ಸರಣಿಯಲ್ಲಿರುವ ಟಿಯುವಿ 300 ಎಸ್‍ಯುವಿಯಲ್ಲಿರುವ ಕ್ಲಸ್ಟರ್ ಅನ್ನು ಹೋಲುವಂತಿದೆ. ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಡಿಜಿಟಲ್ ಡಿಸ್‍ಪ್ಲೇ ಯುನಿಟ್‍ನೊಂದಿಗೆ ಎರಡು ಅನಲಾಗ್ ಡಯಲ್‍ಗಳನ್ನು ಒಳಗೊಂಡಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಮಹೀಂದ್ರಾ ಥಾರ್‍ನ 4×4 ಲಿವರ್ ವಿಭಿನ್ನವಾಗಿದೆ. ಇದರಲ್ಲಿ 2ಡಬ್ಲ್ಯುಡಿ(ಆರ್‍ಡಬ್ಲ್ಯುಡಿ) ಹೈ, 4ಡಬ್ಲ್ಯುಡಿ ಹೈ ಮತ್ತು 4 ಡಬ್ಲ್ಯು ಡಿ ಲೋ ಎಂಬ ಮೂರು ಮೋಡ್‍ಗಳಿವೆ. 2020ರ ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಸಾಫ್ಟ್ ಟಾಪ್ ಹಾಗೂ ಹಾರ್ಡ್ ಟಾಪ್ - ಎಂಬ ಎರಡು ಡೋರ್ ಬಾಡಿ ಸ್ಟೈಲ್‌ಗಳಲ್ಲಿ ನೀಡಲಾಗುವುದು.

ಹೊಸ ಥಾರ್‍ನಲ್ಲಿ 5 ಸ್ಪೋಕ್ ವಿನ್ಯಾಸದ ದೊಡ್ಡ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗಿದೆ. ಅಲಾಯ್ ವ್ಹೀಲ್‍ಗಳಲ್ಲಿ 235 ಅಥವಾ 245 ಸೆಕ್ಷನ್ ಟಯರ್‍ಗಳನ್ನು ನೀಡಲಾಗುವುದು. ಹೊಸ ಮಹೀಂದ್ರಾ ಎಸ್‍ಯುವಿಯು ಶೀಘ್ರದಲ್ಲೇ ಹೊಸ ಫೀಚರ್ಸ್‍ಗಳೊಂದಿಗೆ ಬಿಡುಗಡೆಯಾಗಲಿದೆ.


Click it and Unblock the Notifications