Just In
Don't Miss!
- News
ಪೊಲೀಸ್ ಠಾಣೆಯಲ್ಲಿ ಬಗೆಹರಿದ ಒಂದು ಕೋಣದ ವಿವಾದ!
- Movies
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಹೀಂದ್ರಾ ಫಸ್ಟ್ ಚಾಯ್ಸ್ ಜೊತೆಗೂಡಿದ ಟಿವಿಎಸ್ ಆಟೋಮೊಬೈಲ್ ಸಲ್ಯೂಷನ್
ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಜೊತೆಗೆ ಬಳಕೆ ಮಾಡಿದ ವಾಹನಗಳ ಮರುಮಾರಾಟ ಮತ್ತು ಖರೀದಿ ಪ್ರಕ್ರಿಯೆ ಸಹ ಜೋರಾಗಿದ್ದು, ಹೊಸ ಉದ್ಯಮ ವ್ಯವಹಾರದಲ್ಲಿ ಮಹೀಂದ್ರಾ ಒಡೆತನದ ಮಹೀಂದ್ರಾ ಫಸ್ಟ್ ಚಾಯ್ಸ್ ಭಾರೀ ಜನಪ್ರಿಯತೆ ಗಳಿಸುತ್ತಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಆರಂಭಗೊಂಡಿದ್ದ ಮಹೀಂದ್ರಾ ಫಸ್ಟ್ ಚಾಯ್ಸ್ ಮಲ್ಟಿ ಬ್ರಾಂಡ್ ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳು ಇದೀಗ ಬೇಡಿಕೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಿಗೆ ವಿಸ್ತರಣೆಗೊಳ್ಳುತ್ತಿದ್ದು, ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ಹೊಸ ಕಾರುಗಳ ಮಾದರಿಯಲ್ಲೇ ಹಲವಾರು ಆಫರ್ ನೀಡುತ್ತಿರುವುದಲ್ಲದೆ ಗರಿಷ್ಠ ವಾರಂಟಿ ರೋಡ್ ಸೈಡ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಹೊಸ ವಾಹನ ಖರೀದಿ ಪ್ರಕ್ರಿಯೆಯಲ್ಲಿ ಭಾರೀ ಹೆಚ್ಚಳವಾಗಿರುವ ಹಿನ್ನಲೆ ಎಕ್ಸ್‌ಚೆಂಜ್ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಮಹೀಂದ್ರಾ ಕಂಪನಿಯು ತನ್ನ ಫಸ್ಟ್ ಛಾಯ್ಸ್ ಮಾರಾಟ ಮಳಿಗೆಗಳ ಮೂಲಕ ಹೆಚ್ಚುವರಿ ವಾರಂಟಿಗಳೊಂದಿಗೆ ಮರುಮಾರಾಟ ಮಾಡುತ್ತಿದೆ.

ವಾಹನಗಳ ಮರುಮಾರಾಟದ ನಂತರ ಗ್ರಾಹಕರಿಗೆ ಗುಣಮಟ್ಟದ ಗ್ರಾಹಕರ ಸೇವೆಗಳನ್ನು ಒದಗಿಸುತ್ತಿರುವ ಮಹೀಂದ್ರಾ ಕಂಪನಿಯು ಗ್ರಾಹಕರ ಸೇವೆಗಳನ್ನು ಸಹ ಅತ್ಯುತ್ತಮವಾಗಿ ನಿರ್ವಹಿಸುತ್ತಿದೆ. ಗ್ರಾಹಕರ ಸೇವೆಗಳನ್ನು ಮತ್ತಷ್ಟು ಸರಳಗೊಳಿಸಲು ಮುಂದಾಗಿರುವ ಮಹೀಂದ್ರಾ ಫಸ್ಟ್ ಚಾಯ್ಸ್ ವಿಭಾಗವು ಇದೀಗ ಟಿವಿಎಸ್ ಆಟೋಮೊಬೈಲ್ ಸಲ್ಯೂಷನ್ ವಹಿಸಿಕೊಡಲಾಗಿದೆ.

ಮಲ್ಟಿ ಬ್ರಾಂಡ್ ಸರ್ವಿಸ್‌ನಲ್ಲಿ ಭಾರೀ ಬೇಡಿಕೆ ಹೊಂದಿರುವ ಟಿವಿಎಸ್ ಆಟೋಮೊಬೈಲ್ ಸಲ್ಯೂಷನ್ ಕಂಪನಿಯು ಇದೀಗ ಮಹೀಂದ್ರಾ ಫಸ್ಟ್ ಚಾಯ್ಸ್ ವಾಹನಗಳಿಗೂ ಅಧಿಕೃತ ಸೇವೆಗಳನ್ನು ಒದಗಿಸಲಿದ್ದು, ಈ ಮೂಲಕ ಸೆಕೆಂಡ್ ವಾಹನಗಳಿಗೂ ಅತ್ಯುತ್ತಮ ಗ್ರಾಹಕ ಸೇವೆಗಳನ್ನು ಖಾತ್ರಿಪಡಿಸುತ್ತದೆ. ಡಿಜಿಟಲ್ ಪ್ಲ್ಯಾಟ್‌ಫಾಮರ್ಮ್ ಹಲವಾರು ಗ್ರಾಹಕ ಸೇವೆಗಳನ್ನು ಒದಗಿಸುವ ಟಿವಿಎಸ್ ಆಟೋಮೊಬೈಲ್ ಸಲ್ಯೂಷನ್ ವಿಭಾಗದ ದೇಶದ ಪ್ರಮುಖ ನಗರಗಳಲ್ಲಿ ಸರ್ವಿಸ್ ಸೆಂಟರ್‌ಗಳನ್ನು ಹೊಂದಿದ್ದು, ಮಹೀಂದ್ರಾ ಫಸ್ಟ್ ಚಾಯ್ಸ್ ವಾಹನ ಮಾರಾಟಕ್ಕೆ ಇದು ಪೂರಕವಾಗಲಿದೆ.

ಇನ್ನು ಅಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿರುವ ಸೆಕೆಂಡ್ ಹ್ಯಾಂಡ್ ಕಾರು ಮಾರಾಟವನ್ನು ವ್ಯವಸ್ಥಿತವಾಗಿ ಮಾರಾಟಗೊಳಿಸುವ ಗುರಿ ಯೋಜನೆ ಹೊಂದಿರುವ ಮಹೀಂದ್ರಾ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ ಮಹೀಂದ್ರಾ ಫಸ್ಟ್ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದೆ.

ಅಸಂಘಟಿತವಾಗಿರುವ ಸ್ಥಳೀಯ ವ್ಯಾಪಾರಿಗಳ ಬಳಿ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಯು ಕೆಲವು ಸಂದರ್ಭಗಳಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟ ಅನುಭವಿಸಬೇಕಾದ ಸಂದರ್ಭಗಳು ಎದುರಾಗಬಹುದಾಗಿದ್ದು, ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳು ಗ್ರಾಹಕರ ಆಯ್ಕೆಗೆ ಉತ್ತಮ ಎನ್ನಬಹುದು.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಜೊತೆಗೆ ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮಳಿಗೆಗಳಲ್ಲಿ ಖರೀದಿಸುವ ವಾಹನಗಳಿಗೆ ಹೆಚ್ಚುವರಿಯಾಗಿ ವಾರಂಟಿ ಸಹ ದೊರೆಯಲಿದ್ದು, ಮೋಸ ವ್ಯವಹಾರಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ.

ಈ ನಿಟ್ಟಿನಲ್ಲಿ ಫಸ್ಟ್ ಚಾಯ್ಸ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿರುವ ಮಹೀಂದ್ರಾ ಕಂಪನಿಯು ಮುಂದಿನ 2 ವರ್ಷಗಳಲ್ಲಿ ಭಾರೀ ಪ್ರಮಾಣದ ವಹಿವಾಟು ನಡೆಸುವ ಯೋಜನೆಯಲ್ಲಿದ್ದು, ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ಮಹಾನಗರಗಳಿಂತಲೂ ಹೆಚ್ಚು 2ನೇ ಮತ್ತು 3ನೇ ಹಂತದ ನಗರಗಳಲ್ಲಿ ಹೆಚ್ಚಿನ ಮಟ್ಟದ ಬೇಡಿಕೆ ಕಂಡುಬರುತ್ತಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

2ನೇ ಮತ್ತು 3ನೇ ದರ್ಜೆ ಮಾಹಾನಗರಗಳಲ್ಲಿ ದುಬಾರಿ ಬೆಲೆಯಲ್ಲಿ ವಾಹನಗಳಿಂತ ಕೈಗೆಟುಕುವ ಬೆಲೆಯಲ್ಲಿ ಉತ್ತಮ ನಿರ್ವಹಣೆಯಲ್ಲಿರುವ ಸೆಕೆಂಡ್ ಹ್ಯಾಂಡ್ ವಾಹನಗಳ ಮಾಲೀಕತ್ವಕ್ಕೆ ಮುಂದಾಗುತ್ತಿರುವುದೇ ಬಳಕೆ ಮಾಡಿದ ವಾಹನಗಳ ಉದ್ಯಮ ವ್ಯವಹಾರವು ದ್ವಿಗುಣಗೊಂಡಿದೆ.