ಡೀಸೆಲ್ ಎಂಜಿನ್‌ಗೆ ಗುಡ್‌ಬೈ- ಕೆಯುವಿ100 ಕಾರಿನಲ್ಲಿ ಮೊದಲ ಬಾರಿಗೆ ಸಿಎನ್‌ಜಿ ವರ್ಷನ್

ಏಪ್ರಿಲ್ 1ರಿಂದ ಬಿಎಸ್-6 ಎಮಿಷನ್ ಜಾರಿಗೆ ಬರುತ್ತಿರುವ ಹಿನ್ನಲೆಯಲ್ಲಿ ಮಹೀಂದ್ರಾ ಸಂಸ್ಥೆಯು ತನ್ನ ಎಂಟ್ರಿ ಲೆವಲ್ ಕ್ರಾಸ್ ಓವರ್ ಹ್ಯಾಚ್‌ಬ್ಯಾಕ್ ಮಾದರಿಯಾದ ಕೆಯುವಿ100 ಎಂಜಿನ್‌ ಆಯ್ಕೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಹೊಸ ಕೆಯುವಿ100 ಕಾರಿನಲ್ಲಿ ಇನ್ಮುಂದೆ ಡೀಸೆಲ್ ಎಂಜಿನ್ ಕೈಬಿಟ್ಟು ಪೆಟ್ರೋಲ್ ಮತ್ತು ಹೊಸದಾಗಿ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಮಾತ್ರ ನೀಡಲು ಮುಂದಾಗಿದೆ.

ಡೀಸೆಲ್ ಎಂಜಿನ್‌ಗೆ ಗುಡ್‌ಬೈ- ಕೆಯುವಿ100 ಕಾರಿನಲ್ಲಿ ಮೊದಲ ಬಾರಿಗೆ ಸಿಎನ್‌ಜಿ ವರ್ಷನ್

ಈಗಾಗಲೇ ಹೊಸ ಕಾರಿನಲ್ಲಿ ಹೊಸ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದ್ದು, ಹೊಸದಾಗಿ ಪರಿಚಯಿಸುತ್ತಿರುವ ಸಿಎನ್‌ಜಿ ಆವೃತ್ತಿಯನ್ನು ರೋಡ್ ಟೆಸ್ಟಿಂಗ್ ಮಾಡಲಾಗುತ್ತಿದೆ. ಬಿಎಸ್-6 ಎಮಿಷನ್‌ನಿಂದಾಗಿ ಸಣ್ಣಗಾತ್ರದ ಡೀಸೆಲ್ ಎಂಜಿನ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿದ್ದು, ಮಹೀಂದ್ರಾ ಕೂಡಾ ಈ ನಿಟ್ಟಿನಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಗಳನ್ನು ಮಾತ್ರ ಬಿಡುಗಡೆಮಾಡುತ್ತಿದ್ದು, ಇದರ ಜೊತೆಗೆ ಹೊಸ ಕಾರಿನಲ್ಲಿ ಎಲೆಕ್ಟ್ರಿಕ್ ಆವೃತ್ತಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.

ಡೀಸೆಲ್ ಎಂಜಿನ್‌ಗೆ ಗುಡ್‌ಬೈ- ಕೆಯುವಿ100 ಕಾರಿನಲ್ಲಿ ಮೊದಲ ಬಾರಿಗೆ ಸಿಎನ್‌ಜಿ ವರ್ಷನ್

ಇದರ ಜೊತೆಗೆ ಪರಿಸರಕ್ಕೆ ಪೂರಕವಾದ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿರುವುದು ಪ್ರಮುಖ ಬದಲಾವಣೆಯಾಗಿದ್ದು, ಹೊಸ ಸಿಎನ್‌ಜಿ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಅಂತಿಮ ಹಂತದ ರೋಡ್ ಟೆಸ್ಟಿಂಗ್ ನಡೆಸುತ್ತಿದೆ.

ಡೀಸೆಲ್ ಎಂಜಿನ್‌ಗೆ ಗುಡ್‌ಬೈ- ಕೆಯುವಿ100 ಕಾರಿನಲ್ಲಿ ಮೊದಲ ಬಾರಿಗೆ ಸಿಎನ್‌ಜಿ ವರ್ಷನ್

ಸದ್ಯ ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಪೆಟ್ರೋಲ್ ವರ್ಷನ್ ಮಾದರಿಯ ಮುಂದಿನ ಕೆಲವೇ ವಾರಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದ್ದು, ಪೆಟ್ರೋಲ್ ವರ್ಷನ್ ಬಿಡುಗಡೆಯ ನಂತರವಷ್ಟೇ ಸಿಎನ್‌ಜಿ ಆವೃತ್ತಿಯು ಬಿಡುಗಡೆಯಾಗಲಿದೆ.

ಡೀಸೆಲ್ ಎಂಜಿನ್‌ಗೆ ಗುಡ್‌ಬೈ- ಕೆಯುವಿ100 ಕಾರಿನಲ್ಲಿ ಮೊದಲ ಬಾರಿಗೆ ಸಿಎನ್‌ಜಿ ವರ್ಷನ್

ಇದಲ್ಲದೆ ಮಹೀಂದ್ರಾ ಸಂಸ್ಥೆಯು ಹೊಸ ಕೆಯುವಿ100 ನೆಕ್ಸ್ಟ್ ಪೆಟ್ರೋಲ್ ಕಾರಿನಲ್ಲಿ ಕೆಲವು ಬೇಡಿಕೆಯಿಲ್ಲದ ವೆರಿಯೆಂಟ್‌ಗಳನ್ನು ತೆಗೆದುಹಾಕಲಾಗಿದ್ದು, ಬೇಡಿಕೆಗೆ ಅನುಗುಣವಾಗಿ ಪ್ರಮುಖ ಮೂರು ವೆರಿಯೆಂಟ್‌ಗಳನ್ನು ಮಾತ್ರವೇ ಮುಂದುವರಿಸಲಿದೆ. ಖರೀದಿಗೆ ಲಭ್ಯವಾಗಲಿರುವ ಕೆ2 ಪ್ಲಸ್ ವೆರಿಯೆಂಟ್ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.50 ಲಕ್ಷ, ಕೆ4 ಪ್ಲಸ್ ಕಾರಿನ ಬೆಲೆ ರೂ.5.96 ಲಕ್ಷ ಮತ್ತು ಕೆ8 ವೆರಿಯೆಂಟ್ ಬೆಲೆಯು ರೂ.7.12 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಡೀಸೆಲ್ ಎಂಜಿನ್‌ಗೆ ಗುಡ್‌ಬೈ- ಕೆಯುವಿ100 ಕಾರಿನಲ್ಲಿ ಮೊದಲ ಬಾರಿಗೆ ಸಿಎನ್‌ಜಿ ವರ್ಷನ್

ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಕೆಯುವಿ100 ನೆಕ್ಸ್ಟ್ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 83-ಬಿಎಚ್‌ಪಿ ಮತ್ತು 115-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಇಂಧನ ದಕ್ಷತೆ ಪಡೆದುಕೊಂಡಿದೆ.

ಡೀಸೆಲ್ ಎಂಜಿನ್‌ಗೆ ಗುಡ್‌ಬೈ- ಕೆಯುವಿ100 ಕಾರಿನಲ್ಲಿ ಮೊದಲ ಬಾರಿಗೆ ಸಿಎನ್‌ಜಿ ವರ್ಷನ್

ಇನ್ನುಳಿದಂತೆ ಹೊಸ ಕಾರಿನಲ್ಲಿ ಈ ಹಿಂದಿನಂತೆಯೇ ಗ್ರಿಲ್ ಡಿಸೈನ್, ಫ್ರಂಟ್ ಆ್ಯಂಡ್ ರಿಯರ್ ಬಂಪರ್, ಫ್ಲಕ್ಸ್ ಸ್ಕೀಡ್ ಪ್ಲೇಟ್, 15-ಇಂಚಿನ್ ಅಲಾಯ್ ವೀಲ್ಹ್ ಮತ್ತು ಕಾರಿನ ಒಳಭಾಗದಲ್ಲಿ ಜಿಪಿಎಸ್ ಒಳಗೊಂಡಿರುವ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಸ್ಟಿರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್ ನೀಡಲಾಗಿದೆ.

ಡೀಸೆಲ್ ಎಂಜಿನ್‌ಗೆ ಗುಡ್‌ಬೈ- ಕೆಯುವಿ100 ಕಾರಿನಲ್ಲಿ ಮೊದಲ ಬಾರಿಗೆ ಸಿಎನ್‌ಜಿ ವರ್ಷನ್

ಹಾಗೆಯೇ ಹೋಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಸೀಟು, ಕೂಲ್ಡ್ ಗ್ಲೋ ಬಾಕ್ಸ್ ಸೇರಿದಂತೆ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಸೇರಿ ಹಲವು ಹೊಸ ಫೀಚರ್ಸ್‌ಗಳಿವೆ.

ಡೀಸೆಲ್ ಎಂಜಿನ್‌ಗೆ ಗುಡ್‌ಬೈ- ಕೆಯುವಿ100 ಕಾರಿನಲ್ಲಿ ಮೊದಲ ಬಾರಿಗೆ ಸಿಎನ್‌ಜಿ ವರ್ಷನ್

ಇನ್ನು ಹೊಸ ಕಾರಿನಲ್ಲಿ 5 ಸೀಟರ್ ಆವೃತ್ತಿಯನ್ನು ಮಾತ್ರವೇ ಬಿಡುಗಡೆ ಮಾಡಲಾಗುತ್ತಿದ್ದು, ಈ ಹಿಂದಿನ 6 ಸೀಟರ್ ಮಾದರಿಯನ್ನು ಸದ್ಯಕ್ಕೆ ಬಿಡುಗಡೆ ಮಾಡುತ್ತಿಲ್ಲ. 6 ಸೀಟರ್ ಮಾದರಿಯು ಮುಂಭಾಗದ ಕ್ಯಾಪ್ಟನ್ ಸೀಟಿನಲ್ಲಿಯೇ ಎರಡು ಆಸನವನ್ನು ಹೊಂದಿದೆ. ಆದರೆ 6 ಸೀಟರ್ ಮಾದರಿಗೆ ಗ್ರಾಹಕರ ಬೇಡಿಕೆ ಕಡಿಮೆ ಇದ್ದು, 5 ಸೀಟರ್ ಮಾದರಿಯನ್ನು ಮಾತ್ರವೇ ಬಿಎಸ್-6 ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

Source: Rushlane

Most Read Articles

Kannada
English summary
Mahindra KUV100 CNG BS6 Variant Spied Testing Ahead Of Launch. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X