ಕೋವಿಡ್ 19: ಸಂಕಷ್ಟದಲ್ಲಿರುವ ಚಾಲಕರಿಗೆ ಮಹೀಂದ್ರಾ ಲಾಜಿಸ್ಟಿಕ್ ಲಿಮಿಟೆಡ್‌ನಿಂದ ಧನಸಹಾಯ

ಕರೋನಾ ವೈರಸ್‌ನಿಂದಾಗಿ ಬಹುತೇಕ ವಾಣಿಜ್ಯ ವ್ಯವಹಾರ ಸ್ತಬ್ದವಾಗಿದ್ದು, ಆದಾಯ ಪ್ರಮಾಣವು ಸಂಪೂರ್ಣವಾಗಿ ನೆಲಕಚ್ಚಿದೆ. ಹೀಗಾಗಿ ಚಾಲಕರ ನೆರವಿಗೆ ಧಾವಿಸಿರುವ ಮಹೀಂದ್ರಾ ಒಡೆತನದ ಮಹೀಂದ್ರಾ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯು ಧನಸಹಾಯಕ್ಕೆ ಮುಂದಾಗಿದೆ.

ಸಂಕಷ್ಟದಲ್ಲಿರುವ ಚಾಲಕರಿಗೆ ಮಹೀಂದ್ರಾ ಲಾಜಿಸ್ಟಿಕ್ ಲಿಮಿಟೆಡ್‌ನಿಂದ ಧನಸಹಾಯ

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಸಿಲುಕಿರುವ ಮಹೀಂದ್ರಾ ಲಾಜಿಸ್ಟಿಕ್ ಲಿಮಿಟೆಡ್ ಅಡಿ ಕಾರ್ಯನಿರ್ವಹಿಸುತ್ತಿರುವ ಕ್ಯಾಬ್ ಮತ್ತು ಟ್ರಕ್ ಚಾಲಕರಿಗೆ ನೇರವಾಗಿ ರೂ.3 ಸಾವಿರ ಧನಸಹಾಯ ಘೋಷಣೆ ಮಾಡಲಾಗಿದ್ದು, ಆರೋಗ್ಯ ವಿಮೆಗಳನ್ನು ಸಹ ನೀಡುತ್ತಿದೆ. ಸಂಹಿತಾ ಎನ್ನುವ ಎನ್‌ಜಿಒ ಸಂಸ್ಥೆಯೊಂದರ ಜೊತೆಗೂಡಿ ಹೊಸ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವ ಮಹೀಂದ್ರಾ ಕಂಪನಿಯು ಸಂಕಷ್ಟದಲ್ಲಿರುವ ಚಾಲಕರ ಸಹಾಯಕ್ಕೆ ಧಾವಿಸಿದೆ.

ಸಂಕಷ್ಟದಲ್ಲಿರುವ ಚಾಲಕರಿಗೆ ಮಹೀಂದ್ರಾ ಲಾಜಿಸ್ಟಿಕ್ ಲಿಮಿಟೆಡ್‌ನಿಂದ ಧನಸಹಾಯ

ಇದಲ್ಲದೇ ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಈಗಾಗಲೇ ಎಲ್ಲಾ ಮಾದರಿಯಲ್ಲೂ ಸರ್ಕಾರಕ್ಕೆ ಸಹಾಯ ಮಾಡುತ್ತಿರುವ ಮಹೀಂದ್ರಾ ಕಂಪನಿಯು ದೇಣಿಗೆ ಜೊತೆಗೆ ಅಗತ್ಯವಿರುವ ಮಾಸ್ಕ್, ಫೇಸ್ ಶೀಲ್ದ್, ವೆಂಟಿಲೆಟರ್, ಸ್ಯಾನಿಟೈಜರ್ ಅನ್ನು ಉತ್ಪಾದನೆ ಮಾಡಿ ವೈರಸ್ ವಿರುದ್ದದ ಹೋರಾಟಕ್ಕೆ ಕೈಜೋಡಿಸಿದೆ.

MOST READ: ವೈದ್ಯರ ನೆರವಿಗೆ ಬರಲಿದೆ ಮಹೀಂದ್ರಾ ನಿರ್ಮಾಣದ ವಿಶೇಷ ಏರೋಸೊಲ್ ಬಾಕ್ಸ್

ಸಂಕಷ್ಟದಲ್ಲಿರುವ ಚಾಲಕರಿಗೆ ಮಹೀಂದ್ರಾ ಲಾಜಿಸ್ಟಿಕ್ ಲಿಮಿಟೆಡ್‌ನಿಂದ ಧನಸಹಾಯ

ಮಹಾಮಾರಿ ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಈಗಾಗಲೇ ಹಲವು ಆಟೋ ಉತ್ಪಾದನಾ ಕಂಪನಿಗಳು ತಮ್ಮದೆ ಆದ ರೀತಿಯಲ್ಲಿ ಸರ್ಕಾರದ ಜೊತೆ ಕೈಜೋಡಿಸಿ ನೆರವು ನೀಡುತ್ತಿದ್ದು, ಮಹೀಂದ್ರಾ ಕಂಪನಿಯು ಸಹ ದೇಣಿಗೆ ಮಾತ್ರವಲ್ಲದೆ ವೈರಸ್ ಹರಡುವಿಕೆ ತಡೆಗಟ್ಟಲು ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ ವೈದ್ಯಕೀಯ ಉಪಕರಣಗಳನ್ನು ಸಿದ್ದಪಡಿಸಿ ವೈರಸ್ ವಿರುದ್ಧದ ಹೋರಾಟಕ್ಕೆ ಹೊಸ ಶಕ್ತಿ ತುಂಬುತ್ತಿದೆ.

ಸಂಕಷ್ಟದಲ್ಲಿರುವ ಚಾಲಕರಿಗೆ ಮಹೀಂದ್ರಾ ಲಾಜಿಸ್ಟಿಕ್ ಲಿಮಿಟೆಡ್‌ನಿಂದ ಧನಸಹಾಯ

ಮಹೀಂದ್ರಾ ಕಂಪನಿಯು ಕರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಅಗತ್ಯವಿರುವ ಹ್ಯಾಂಡ್ ಸ್ಯಾನಿಟೈಜರ್ ಉತ್ಪನ್ನದಿಂದ ವೆಂಟಿಲೆಟರ್ ತನಕವು ಎಲ್ಲಾ ಮಾದರಿಯ ವೈದ್ಯಕೀಯ ಉಪಕರಣಗಳನ್ನು ಸಿದ್ದಪಡಿಸಿ ವಿತರಣೆ ಮಾಡಿದ್ದು, ನಿನ್ನೆಯಷ್ಟೇ ಬರೋಬ್ಬರಿ 1 ಲಕ್ಷ ಫೇಸ್ ಶೀಲ್ಡ್‌ಗಳನ್ನು ಸಹ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಸಂಕಷ್ಟದಲ್ಲಿರುವ ಚಾಲಕರಿಗೆ ಮಹೀಂದ್ರಾ ಲಾಜಿಸ್ಟಿಕ್ ಲಿಮಿಟೆಡ್‌ನಿಂದ ಧನಸಹಾಯ

ಇದರ ಜೊತೆಗೆ ಮತ್ತೊಂದು ಸಿಹಿಸುದ್ದಿ ನೀಡಿರುವ ಮಹೀಂದ್ರಾ ಕಂಪನಿಯು ಇದೇ ಮೊದಲ ಬಾರಿಗೆ ಕರೋನಾ ವೈರಸ್ ಸೋಂಕು ಪಿಡಿತರ ಪ್ರಾಣ ಉಳಿಸಲು ಹಗಲು-ರಾತ್ರಿ ಶ್ರಮಿಸುತ್ತಿರುವ ವೈದ್ಯರ ಜೀವ ಹಾನಿ ತಡೆಯುವುದಕ್ಕೆ ಹೊಸ ತಂತ್ರಜ್ಞಾನ ಪ್ರೇರಿತ ಉಪಕರಣವೊಂದನ್ನು ಸಿದ್ದಪಡಿಸಿದೆ.

ಸಂಕಷ್ಟದಲ್ಲಿರುವ ಚಾಲಕರಿಗೆ ಮಹೀಂದ್ರಾ ಲಾಜಿಸ್ಟಿಕ್ ಲಿಮಿಟೆಡ್‌ನಿಂದ ಧನಸಹಾಯ

ಉತ್ತರ ಅಮೆರಿಕದಲ್ಲಿರುವ ಮಹೀಂದ್ರಾ ಡೆಟ್ರಾಯಿಟ್ ಡಿಸೈನ್ ತಂಡವು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಯಾವುದೇ ರೀತಿ ಸೋಂಕು ತಗುಲದಂತೆ ತಡೆಯಲು ಏರೋಸೊಲ್ ಬಾಕ್ಸ್ ಅನ್ನು ಸಿದ್ದಪಡಿಸಿ ಉತ್ಪಾದನೆಗೆ ಚಾಲನೆ ನೀಡಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಸಂಕಷ್ಟದಲ್ಲಿರುವ ಚಾಲಕರಿಗೆ ಮಹೀಂದ್ರಾ ಲಾಜಿಸ್ಟಿಕ್ ಲಿಮಿಟೆಡ್‌ನಿಂದ ಧನಸಹಾಯ

ಭಾರತದಲ್ಲೂ ಶೀಘ್ರದಲ್ಲೇ ಏರೋಸೊಲ್ ಬಾಕ್ಸ್ ಉತ್ಪಾದನೆಗೆ ಚಾಲನೆ ನೀಡುವುದಾಗಿ ಹೇಳಿಕೊಂಡಿರುವ ಮಹೀಂದ್ರಾ ಹಿರಿಯ ಅಧಿಕಾರಿಗಳು, ಸೋಂಕು ಪಿಡಿತರಿಗೆ ಚಿಕಿತ್ಸೆ ನೀಡುವಾಗ ಯಾವುದೇ ರೀತಿಯ ವೈರಸ್ ವೈದ್ಯರಿಗೆ ಬಾರದಿರುವಂತೆ ತಡೆಯಲು ಇದು ಸಾಕಷ್ಟು ಸಹಕಾರಿಯಾಗಲಿದೆ ಎಂದಿದ್ದಾರೆ.

ಸಂಕಷ್ಟದಲ್ಲಿರುವ ಚಾಲಕರಿಗೆ ಮಹೀಂದ್ರಾ ಲಾಜಿಸ್ಟಿಕ್ ಲಿಮಿಟೆಡ್‌ನಿಂದ ಧನಸಹಾಯ

ಈಗಾಗಲೇ ಹಲವಾರು ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯು ಸೋಂಕು ಪಿಡಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಯಾವುದೋ ಒಂದು ಮಾರ್ಗದಿಂದ ಸೋಂಕು ತಗುಲಿದ ಹಲವು ಪ್ರಕರಣಗಳು ದಾಖಲಾಗಿದ್ದು, ಈ ಹಿನ್ನಲೆಯಲ್ಲಿ ವೈದ್ಯರಿಗೆ ಶೇ.100ರಷ್ಟು ಸುರಕ್ಷೆ ನೀಡುವುದಕ್ಕಾಗಿ ಏರೋಸೊಲ್ ಬಾಕ್ಸ್‌ಗಳು ಸಾಕಷ್ಟು ಸಹಕಾರಿಯಾಗಲಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಸಂಕಷ್ಟದಲ್ಲಿರುವ ಚಾಲಕರಿಗೆ ಮಹೀಂದ್ರಾ ಲಾಜಿಸ್ಟಿಕ್ ಲಿಮಿಟೆಡ್‌ನಿಂದ ಧನಸಹಾಯ

ಇನ್ನು ವೈರಸ್ ತೀವ್ರತೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಅನ್ನು ಇದೀಗ ಮತ್ತೆ ಮುಂದುವರಿಸಲಾಗಿದ್ದು, ಈ ವೇಳೆ ವಾಹನ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಆಟೋ ಉತ್ಪಾದನಾ ಕಂಪನಿಗಳು ವೈದ್ಯಕೀಯ ಉಪಕರಣ ಉತ್ಪಾದನೆನೊಂದಿಗೆ ವೈರಸ್ ವಿರುದ್ಧದ ಹೋರಾಟಕ್ಕೆ ಸರ್ಕಾರದ ಜೊತೆಗೆ ಸಹಕರಿಸಿವೆ.

Article Published On: Monday, April 20, 2020, 21:09 [IST]
English summary
Mahindra Logistics Limited Launches HOPE Initiative: Helping Our People During Emergencies. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+