Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಎಸ್-6 ಎಂಜಿನ್ ಪ್ರೇರಿತ ಮಹೀಂದ್ರಾ ಮರಾಜೋ ಬಿಡುಗಡೆ
ಮಹೀಂದ್ರಾ ಕಂಪನಿಯು ಭಾರತದಲ್ಲಿ ತನ್ನ ಎಂಪಿವಿ ಕಾರು ಮಾದರಿಯಾದ ಮರಾಜೋದಲ್ಲಿ ಬಿಎಸ್-6 ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ 11.25 ಲಕ್ಷ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಕರೋನಾ ವೈರಸ್ ಹಿನ್ನಲೆಯಲ್ಲಿ ಮರಾಜೋ ಬಿಎಸ್-6 ಆವೃತ್ತಿಯ ಬಿಡುಗಡೆಯಲ್ಲಿ ಸಾಕಷ್ಟು ವಿಳಂಬವಾಗಿದ್ದು, ಲಾಕ್‌ಡೌನ್ ಸಡಿಲಿಕೆಯ ನಂತರವಷ್ಟೇ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆಯ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿತ್ತು. ಇದೀಗ ಹೊಸ ಕಾರು ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಿದ್ದು, ಬಿಎಸ್-6 ಎಂಜಿನ್ ಜೊತೆಗೆ ಹೊಸ ಕಾರಿನಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಹೊಸ ಎಮಿಷನ್‌ಗೆ ಅನುಗುಣವಾಗಿ ಬಿಎಸ್-4 ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದ ಮರಾಜೋ ಎಂ8 ವೆರಿಯೆಂಟ್ ಸ್ಥಗಿತಗೊಳಿಸಲಾಗಿದ್ದು, ಬಿಎಸ್-6 ಆವೃತ್ತಿಯಲ್ಲಿ ಇದೀಗ ಎಂ2, ಎಂ4 ಪ್ಲಸ್ ಮತ್ತು ಎಂ6 ಪ್ಲಸ್ ವೆರಿಯೆಂಟ್ ಮಾತ್ರವೇ ಖರೀದಿಗೆ ಲಭ್ಯವಿವೆ.

ಮರಾಜೋ ಎಂ2 ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 11.25 ಲಕ್ಷ ಬೆಲೆ ಹೊಂದಿದ್ದರೆ, ಎಂ4 ಪ್ಲಸ್ ಮಾದರಿಯು ರೂ.12.37 ಲಕ್ಷ ಮತ್ತು ಎಂ6 ಪ್ಲಸ್ ಮಾದರಿಯು ರೂ. 13.51 ಲಕ್ಷದೊಂದಿಗೆ ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದೆ.

ಎಂಜಿನ್ ವೈಶಿಷ್ಟ್ಯತೆ
ಬಿಎಸ್-6 ಮರಾಜೋ ಕಾರು ಹೊಸ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಡೀಸೆಲ್ ಆಯ್ಕೆ ಪಡೆದುಕೊಂಡಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 121-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬಿಎಸ್-6 ಎಮಿಷನ್ ನಂತರ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ ಪರಿಚಯಿಸಿರುವ ಮಹೀಂದ್ರಾ ಕಂಪನಿಯು ಹಲವು ಜನಪ್ರಿಯ ಡೀಸೆಲ್ ಕಾರುಗಳಲ್ಲಿ ಈ ಬಾರಿಗೆ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದೆ. ಹೀಗಾಗಿ ಮರಾಜೋ ಕಾರಿನಲ್ಲೂ ಕೂಡಾ ಪೆಟ್ರೋಲ್ ಮಾದರಿಯ ಬಿಡುಗಡೆಯ ನೀರಿಕ್ಷೆಯಿತ್ತು. ಆದರೆ ಸದ್ಯಕ್ಕೆ ಡೀಸೆಲ್ ಮಾದರಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಪೆಟ್ರೋಲ್ ಮಾದರಿಯು ಕೂಡಾ ರಸ್ತೆಗಿಳಿಯುವ ಸಾಧ್ಯತೆಗಳಿವೆ.

ಪೆಟ್ರೋಲ್ ಮಾದರಿಯೊಂದಿಗೆ ಮಾರಾಜೋ ಕಾರು ಈಗಾಗಲೇ ಹಲವಾರು ಬಾರಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಮಾಹಿತಿಗಳಿದ್ದು, ವರ್ಷಾಂತ್ಯದೊಳಗೆ ಪೆಟ್ರೋಲ್ ಮಾದರಿಯು ಕೂಡಾ ಎಂಪಿವಿ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಲಿದೆ.
MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಇನ್ನು ಮರಾಜೋ ಕಾರು ಬಿಎಸ್-6 ಎಂಜಿನ್ ಮತ್ತು ವೆರಿಯೆಂಟ್ ಬದಲಾಣೆಯೊಂದಿಗೆ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದ್ದು, ಸ್ಟ್ಯಾಂಡರ್ಡ್ ಫೀಚರ್ಸ್‌ಗಳೊಂದಿಗೆ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡುವ ತವಕದಲ್ಲಿದೆ.