ಬಿಎಸ್-4 ಮಾದರಿಗಿಂತಲೂ ಬರೋಬ್ಬರಿ 1 ಲಕ್ಷ ದುಬಾರಿಯಾಗಲಿದೆ ಬಿಎಸ್-6 ಮರಾಜೋ ಕಾರು

ಮಹೀಂದ್ರಾ ಕಂಪನಿಯು ಇದೇ ತಿಂಗಳಾಂತ್ಯಕ್ಕೆ ತನ್ನ ಬಹುನೀರಿಕ್ಷಿತ ಬಿಎಸ್-6 ಮರಾಜೋ ಕಾರು ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗಿದ್ದು, ಮಾಹಿತಿಗಳ ಪ್ರಕಾರ ಹೊಸ ಕಾರು ಈ ಹಿಂದಿನ ಮಾದರಿಗಿಂತಲೂ ದುಬಾರಿ ಬೆಲೆಯೊಂದಿಗೆ ಮಾರಾಟಗೊಳ್ಳಲಿದೆ.

ಬರೋಬ್ಬರಿ 1 ಲಕ್ಷ ದುಬಾರಿಯಾಗಲಿದೆ ಬಿಎಸ್-6 ಮರಾಜೋ ಕಾರು

ಕಳೆದ ಏಪ್ರಿಲ್ ಅವಧಿಯಲ್ಲೇ ಬಿಡುಗಡೆಯಾಗಬೇಕಿದ್ದ ಬಿಎಸ್-6 ಮರಾಜೋ ಕಾರು ಮಾದರಿಯನ್ನು ಕರೋನಾ ವೈರಸ್ ಪರಿಣಾಮ ಮುಂದೂಡಿಕೆ ಮಾಡುತ್ತ ಬಂದಿದರುವ ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಹೊಸ ಕಾರುನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರು ಈಗಾಗಲೇ ಅಧಿಕೃತ ಡೀಲರ್ಸ್ ಬಳಿ ಸ್ಟಾಕ್ ಮಾಡಲಾಗುತ್ತಿದೆ. ಹೊಸ ಕಾರು ಈ ಹಿಂದಿನ ಮಾದರಿಗಿಂತಲೂ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಬೆಲೆ ಕೂಡಾ ದುಬಾರಿಯಾಗಿರಲಿದೆ.

ಬರೋಬ್ಬರಿ 1 ಲಕ್ಷ ದುಬಾರಿಯಾಗಲಿದೆ ಬಿಎಸ್-6 ಮರಾಜೋ ಕಾರು

ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಹೊಸ ಮರಾಜೋ ಬಿಎಸ್-6 ಕಾರು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ 6 ವೆರಿಯೆಂಟ್‌‌ಗಳಲ್ಲಿ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿದ್ದು, ಹೊಸ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.01 ಲಕ್ಷದಿಂದ ಪ್ರಾರಂಭವಾಗಲಿದೆ ಎನ್ನಲಾಗಿದೆ.

ಬರೋಬ್ಬರಿ 1 ಲಕ್ಷ ದುಬಾರಿಯಾಗಲಿದೆ ಬಿಎಸ್-6 ಮರಾಜೋ ಕಾರು

ಹೊಸ ಕಾರಿನಲ್ಲಿ ಎಂ2, ಎಂ4, ಎಂ6 ಮತ್ತು ಎಂ8 ಜೊತೆಗೆ ಹೊಸದಾಗಿ ಮತ್ತೆರಡು ವೆರಿಯೆಂಟ್ ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಹೊಸ ಕಾರಿನ ಕೈಪಿಡಿಯಲ್ಲಿ ಎಂ4 ಪ್ಲಸ್ ಪ್ಲಸ್ ಮತ್ತು ಎಂ6 ಪ್ಲಸ್ ಬಿಡುಗಡೆಯಾಗುವ ಮಾಹಿತಿಯಿದೆ.

ಬರೋಬ್ಬರಿ 1 ಲಕ್ಷ ದುಬಾರಿಯಾಗಲಿದೆ ಬಿಎಸ್-6 ಮರಾಜೋ ಕಾರು

ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಹೊಸ ಕಾರಿನ ಬೆಲೆಯಲ್ಲಿ ಭಾರೀ ಪ್ರಮಾಣದ ಹೆಚ್ಚಳವಾಗಿದ್ದು, ಬೆಸ್ ವೆರಿಯೆಂಟ್‌ನಲ್ಲಿ ಸರಿಸುಮಾರು ರೂ. 1.01 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದಿದೆ. ಹೊಸ ಸುರಕ್ಷಾ ನಿಯಮಗಳಿಂದಾಗಿ ಕಾರಿನ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಿದ್ದು, ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಬರೋಬ್ಬರಿ 1 ಲಕ್ಷ ದುಬಾರಿಯಾಗಲಿದೆ ಬಿಎಸ್-6 ಮರಾಜೋ ಕಾರು

ಹೊಸ ಎಮಿಷನ್ ನಿಯಮದಂತೆ ಎಂ2 ವೆರಿಯೆಂಟ್ ಅನ್ನು ಉನ್ನತೀಕರಿಸಲು ಸಾಕಷ್ಟು ಬದಲಾವಣೆಯನ್ನು ತಂದಿರುವ ಮಹೀಂದ್ರಾ ಕಂಪನಿಯು ಕಾರಿನ ಗುಣಮಟ್ಟವನ್ನು ಕಾಯ್ದುಕೊಳ್ಳಲು ಯತ್ನಿಸಿದ್ದು, ಡೀಸೆಲ್ ಮಾದರಿಯ ಜೊತೆಗೆ ಹೊಸ ಕಾರಿನಲ್ಲಿ ಪೆಟ್ರೋಲ್ ಮಾದರಿಯ ಆಯ್ಕೆಯನ್ನು ಸಹ ನೀಡಲಾಗುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬರೋಬ್ಬರಿ 1 ಲಕ್ಷ ದುಬಾರಿಯಾಗಲಿದೆ ಬಿಎಸ್-6 ಮರಾಜೋ ಕಾರು

1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಹೊಸದಾಗಿ ಬಿಡುಗಡೆಯಾಗಲಿರುವ 1.5-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು ಮರಾಜೋ ಕಾರಿನ ಆಯ್ಕೆ ಹೆಚ್ಚಿಸಲಿದ್ದು, ಎರಡು ಮಾದರಿಯಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಯನ್ನು ಹೊಂದಿರಲಿದೆ.

ಬರೋಬ್ಬರಿ 1 ಲಕ್ಷ ದುಬಾರಿಯಾಗಲಿದೆ ಬಿಎಸ್-6 ಮರಾಜೋ ಕಾರು

ಡೀಸೆಲ್ ಮಾದರಿಯು ಈ ಹಿಂದಿನಂತೆ 1.5-ಲೀಟರ್ ಎಂಜಿನ್‌ನೊಂದಿಗೆ 121-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ, 1.5-ಲೀಟರ್ ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 162-ಬಿಎಚ್‌ಪಿ, 280-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಬರೋಬ್ಬರಿ 1 ಲಕ್ಷ ದುಬಾರಿಯಾಗಲಿದೆ ಬಿಎಸ್-6 ಮರಾಜೋ ಕಾರು

ಹಾಗೆಯೇ ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ 7 ಸೀಟರ್ ಮತ್ತು 8 ಸೀಟರ್ ಮಾದರಿಯಲ್ಲೇ ಮಾರಾಟ ಮುಂದುವರಿಯಲಿದ್ದು, ಎಲ್ಲಾ ಮಾದರಿಗಳಲ್ಲೂ ಹಲವಾರು ಫೀಚರ್ಸ್‌ಗಳು ಸ್ಟ್ಯಾಂಡರ್ಡ್ ಆಗಿ ನೀಡಿರುವುದರಿಂದ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ದೊರೆಯಲಿದೆ.

Most Read Articles

Kannada
English summary
Mahindra Marazzo BS6 Prices Leaked Ahead Of Launch. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X