ವೈರಸ್ ಭೀತಿ: ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದ ಮಹೀಂದ್ರಾ
ವಿಶ್ವಾದ್ಯಂತ ಕರೋನಾ ವೈರಸ್ ಅಟ್ಟಹಾಸವು ದಿನದಿಂದ ಹೆಚ್ಚಾಗುತ್ತಲೇ ಇದ್ದು, ಭಾರತದಲ್ಲೂ ಕೂಡಾ ಈಗಾಗಲೇ ಸಾವಿರಾರು ಜನ ವೈರಸ್ ದಾಳಿಗೆ ಬಲಿಯಾಗಿದ್ದಾರೆ. ಇದಕ್ಕಾಗಿ ಲಾಕ್‌ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ವೈರಸ್ ಭೀತಿಯ ನಡುವೆಯೂ ವಾಣಿಜ್ಯ ವ್ಯವಹಾರಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದೆ.

ಮಾಹಾಮಾರಿ ಕರೋನಾ ವೈರಸ್ ಅಟ್ಟಹಾಸದಿಂದ ಇಡೀ ವಿಶ್ವವೇ ಆತಂಕದಲ್ಲಿದ್ದು, ವೈರಸ್ ಹತೋಟಿಗಾಗಿ ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಆಟೋ ಉದ್ಯಮದಕ್ಕೂ ಕೂಡಾ ಭಾರೀ ಪ್ರಮಾಣದ ನಷ್ಟ ಉಂಟುಮಾಡಿದೆ. ಸದ್ಯ ವೈರಸ್ ಹೊಡೆದೊಡಿಸಲು ವಿಧಿಸಲಾಗಿರುವ ಲಾಕ್‌ಡೌನ್ ಅನ್ನು ಪರಿಸ್ಥಿತಿಗೆ ಅನುಗುಣವಾಗಿ ತೆರವುಗೊಳಿಸಲಾಗುತ್ತಿದ್ದು, ಹಸಿರು ಮತ್ತು ಕಿತ್ತಳೆ ವಲಯದಲ್ಲಿನ ವಾಣಿಜ್ಯ ಚಟುವಟಿಕೆಗಳಿಗೆ ಷರತ್ತುಬದ್ದ ಅವಕಾಶ ನೀಡಲಾಗಿದೆ

ಕೇಂದ್ರ ಸರ್ಕಾರವು 3ನೇ ಹಂತದ ಲಾಕ್‌ಡೌನ್ ವಿಧಿಸುವುರೊಂದಿಗೆ ಹಸಿರು ಮತ್ತು ಕಿತ್ತಳೆ ವಲಯಗಳಿಗೆ ಹಲವು ವಿನಾಯ್ತಿಗಳನ್ನು ನೀಡಿದ್ದು, ರೆಡ್ ಅಲರ್ಟ್ ಪ್ರದೇಶಗಳಲ್ಲಿನ ವಾಣಿಜ್ಯ ಚಟುವಟಿಕೆಗಳಿಗೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿದೆ.
MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಹೀಗಾಗಿ ಮೇ 3ರ ನಂತರ ನೇರವಾಗಿ ವಾಹನ ಮಾರಾಟವನ್ನು ಪುನಾರಂಭಿಸುವ ತವಕದಲ್ಲಿದ್ದ ಆಟೋ ಕಂಪನಿಗಳಿಗೆ ಇದು ಹಿನ್ನಡೆ ಉಂಟಾಗಿದ್ದು, ಗ್ರಾಹಕರ ಸುರಕ್ಷತೆಯ ದೃಷ್ಠಿಯಿಂದ ಆನ್‌ಲೈನ್ ವಹಿವಾಟಿನತ್ತ ಹೆಚ್ಚು ಗಮನಹರಿಸಿವೆ.

ದೇಶದ ಮೂರನೇ ಅತಿ ದೊಡ್ಡ ವಾಹನ ಉತ್ಪಾದನಾ ಕಂಪನಿಯಾಗಿರುವ ಮಹೀಂದ್ರಾ ಕೂಡಾ ಪ್ರಯಾಣಿಕರ ಕಾರು ಮಾರಾಟಕ್ಕಾಗಿ ಮಹೀಂದ್ರಾ ವೊನ್ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದಿದ್ದು, ಆಸಕ್ತ ಗ್ರಾಹಕರೊಂದಿಗೆ ಪತ್ರ ವ್ಯವಹಾರಗಳನ್ನು ಆನ್‌ಲೈನ್ ಮೂಲಕವೇ ಬಗೆಹರಿಸಲಿದೆ.
MOST READ: ಕರೋನಾ ವೈರಸ್: ಹೊಸ ವಿಧಾನದ ಮೂಲಕ ಜನರ ಬಳಿ ಬರಲಿರುವ ಪೊಲೀಸರು..

ತದನಂತರ ಅಂತಿಮ ಪತ್ರ ವ್ಯವಹಾರ ಮುದಗಿದ ಬಳಿಕ ಗ್ರಾಹಕರ ಮನೆ ಬಾಗಿಲಿಗೆ ವಾಹನಗಳನ್ನು ತಲುಪಿಸಲಿರುವ ಮಹೀಂದ್ರಾ ಕಂಪನಿಯು ವಿತರಣೆಯ ಸಂದರ್ಭದಲ್ಲೂ ಗರಿಷ್ಠ ಪ್ರಮಾಣದ ಸುರಕ್ಷಾ ಕ್ರಮಗಳೊಂದಿಗೆ ಗ್ರಾಹಕರಿಗೆ ಹಸ್ತಾಂತರಿಸಲಿದೆ.

ಜೊತೆಗೆ ಹಣಕಾಸು ಸಹಾಯ ಸೇರಿದಂತೆ ಪ್ರಮುಖ ವ್ಯವಹಾರಗಳನ್ನು ಅತಿ ಸುಲಭವಾಗಿ ನಿರ್ವಹಿಸಲು ನೆರವಾಗುವಂತೆ ಮಹೀಂದ್ರಾ ವೊನ್ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಅಭಿವೃದ್ದಿಗೊಳಿಸಲಾಗಿದ್ದು, ಕಾರು ಖರೀದಿಯನ್ನು ಮತ್ತಷ್ಟು ಸುಲಭವಾಗಿಸಿದೆ.
MOST READ: ಎರಡು ಚಕ್ರಗಳಲ್ಲಿ ಚಲಿಸಿದ ಟ್ರಾಕ್ಟರ್, ಆನಂದ್ ಮಹೀಂದ್ರಾ ಹೇಳಿದ್ದೇನು?

ಇನ್ನು ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲೂ ಭಾಗಿಯಾಗಿರುವ ಮಹೀಂದ್ರಾ ಕಂಪನಿಯು ವಿವಿಧ ಮಾದರಿಯ ವೈದ್ಯಕೀಯ ಉಪಕರಣಗಳನ್ನು ಅಗತ್ಯವಿರುವ ರಾಜ್ಯ ಸರ್ಕಾರಗಳಿಗೆ ಒದಗಿಸುತ್ತಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ವೆಂಟಿಲೇಟರ್ ಮಾದರಿಗಳು ಸಾಕಷ್ಟು ಸಹಕಾರಿಯಾಗುತ್ತಿವೆ.


Click it and Unblock the Notifications








