ಲಾಕ್‌ಡೌನ್ ಸಡಿಲಿಕೆ: ಉತ್ಪಾದನಾ ಘಟಕವನ್ನು ಪುನರಾರಂಭಿಸಿದ ಮಹೀಂದ್ರಾ

ಭಾರತ ಮೂಲದ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಅಂಡ್ ಮಹೀಂದ್ರಾ ಉತ್ತರಾಖಂಡದ ಹರಿದ್ವಾರ ಹಾಗೂ ಮಹಾರಾಷ್ಟ್ರದ ಇಗತ್ಪುರಿಗಳಲ್ಲಿರುವ ಉತ್ಪಾದನಾ ಘಟಕಗಳನ್ನು ತೆರೆಯುವುದಾಗಿ ಘೋಷಿಸಿದೆ.

ಲಾಕ್‌ಡೌನ್ ಸಡಿಲಿಕೆ: ಉತ್ಪಾದನಾ ಘಟಕವನ್ನು ಪುನರಾರಂಭಿಸಿದ ಮಹೀಂದ್ರಾ

ಸರ್ಕಾರವು ನಿಗದಿಪಡಿಸಿರುವ ಮಾರ್ಗಸೂಚಿಗಳ ಪ್ರಕಾರ ಈ ಘಟಕಗಳನ್ನು ತೆರೆಯಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯು ತನ್ನ ಉದ್ಯೋಗಿಗಳ ಆರೋಗ್ಯವನ್ನು ಕಾಪಾಡಲು ಈ ಎರಡೂ ಘಟಕಗಳಲ್ಲಿ ಹಲವಾರು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ.

ಲಾಕ್‌ಡೌನ್ ಸಡಿಲಿಕೆ: ಉತ್ಪಾದನಾ ಘಟಕವನ್ನು ಪುನರಾರಂಭಿಸಿದ ಮಹೀಂದ್ರಾ

ಮಹೀಂದ್ರಾದ ಹರಿದ್ವಾರ ಘಟಕದಲ್ಲಿ, ಸ್ಕಾರ್ಪಿಯೋ ಹಾಗೂ ಬೊಲೆರೊ ಎಸ್‌ಯುವಿಗಳ ಜೊತೆಗೆ ಆಲ್ಫಾದಂತಹ ಚಿಕ್ಕ ಕಮರ್ಷಿಯಲ್ ವಾಹನಗಳನ್ನು ಉತ್ಪಾದಿಸಲಾಗುತ್ತದೆ. ರೆಡ್ ಝೋನ್‌ನಲ್ಲಿರುವ ಕಾರಣಕ್ಕೆ ಮಹೀಂದ್ರಾ ಕಂಪನಿಯು ಚಕಾನ್ ಹಾಗೂ ನಾಸಿಕ್ ಘಟಕಗಳನ್ನು ತೆರೆದಿಲ್ಲ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ಸಡಿಲಿಕೆ: ಉತ್ಪಾದನಾ ಘಟಕವನ್ನು ಪುನರಾರಂಭಿಸಿದ ಮಹೀಂದ್ರಾ

ಲಾಕ್‌ಡೌನ್ ಮುಗಿದ ನಂತರ ಈ ಎರಡೂ ಘಟಕಗಳನ್ನು ತೆರೆಯುವ ನಿರೀಕ್ಷೆಗಳಿವೆ. ಮಹೀಂದ್ರಾ ಕಂಪನಿಯು ಇತ್ತೀಚೆಗಷ್ಟೇ ದೇಶಾದ್ಯಂತವಿರುವ 300 ಶೋರೂಂ ಹಾಗೂ ಸರ್ವೀಸ್ ಸೆಂಟರ್‌ಗಳನ್ನು ಮತ್ತೆ ತೆರೆದಿದೆ. ಇದರ ಜೊತೆಗೆ ಕಂಪನಿಯು ವಾಹನಗಳ ಮಾರಾಟವನ್ನೂ ಸಹ ಆರಂಭಿಸಿದೆ.

ಲಾಕ್‌ಡೌನ್ ಸಡಿಲಿಕೆ: ಉತ್ಪಾದನಾ ಘಟಕವನ್ನು ಪುನರಾರಂಭಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ಉತ್ಪಾದನೆ ಹಾಗೂ ರಿಟೇಲ್ ಮಾರಾಟ ಕೇಂದ್ರಗಳಲ್ಲಿ ಹೊಸ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ ಬಿಡುಗಡೆಗೊಳಿಸಿದೆ. ಇದರ ಪ್ರಕಾರ ಕಂಪನಿಯ ನೌಕರರು, ಮಾರಾಟ ಸಿಬ್ಬಂದಿ ಹಾಗೂ ಗ್ರಾಹಕರಿಗೆ ಕರೋನಾ ಸೋಂಕನ್ನು ತಪ್ಪಿಸಲು ಅಗತ್ಯ ನಿಯಮಗಳನ್ನು ರೂಪಿಸಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಸಡಿಲಿಕೆ: ಉತ್ಪಾದನಾ ಘಟಕವನ್ನು ಪುನರಾರಂಭಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಇತ್ತೀಚೆಗೆ ಕಾರುಗಳ ಮಾರಾತಕ್ಕಾಗಿ ಆನ್‌ಲೈನ್ ಪ್ಲಾಟ್‌ಫಾರ್ಮ್ ಅನ್ನು ಆರಂಭಿಸಿದೆ. ಇದರಲ್ಲಿ ಗ್ರಾಹಕರು ಆನ್‌ಲೈನ್‌ ಮೂಲಕ ಕಾರುಗಳನ್ನು ಬುಕ್ಕಿಂಗ್ ಮಾಡಬಹುದು. ಬುಕ್ಕಿಂಗ್ ಮಾಡಲಾದ ಕಾರುಗಳನ್ನು ಕಂಪನಿಯು ಹೋಂ ಡೆಲಿವರಿ ಮಾಡಲಿದೆ.

ಲಾಕ್‌ಡೌನ್ ಸಡಿಲಿಕೆ: ಉತ್ಪಾದನಾ ಘಟಕವನ್ನು ಪುನರಾರಂಭಿಸಿದ ಮಹೀಂದ್ರಾ

ಕಾರುಗಳ ಸರ್ವೀಸ್‌ಗಾಗಿ ಕಂಪನಿಯು ಪಿಕ್-ಅಪ್, ಡ್ರಾಪ್ ವ್ಯವಸ್ಥೆಯನ್ನು ಒದಗಿಸಿದೆ. ಇದರ ಮೂಲಕ ಕಾರನ್ನು ಮನೆಯಿಂದ ಸರ್ವೀಸ್‌ಗೆ ತೆಗೆದುಕೊಂಡು ಹೋಗಿ ಮನೆಗೆ ತಂದು ಕೊಡಲಾಗುತ್ತದೆ. ಮಹೀಂದ್ರಾ ಕಂಪನಿಯು ಲಾಕ್‌ಡೌನ್ ಮುಗಿದ ನಂತರ ಹೊಸ ಥಾರ್ ಕಾರ್ ಅನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಸಡಿಲಿಕೆ: ಉತ್ಪಾದನಾ ಘಟಕವನ್ನು ಪುನರಾರಂಭಿಸಿದ ಮಹೀಂದ್ರಾ

ಲಾಕ್‌ಡೌನ್ ಕಾರಣದಿಂದಾಗಿ ಮಹೀಂದ್ರಾ ಕಂಪನಿಯು ಟಿಯುವಿ 300 ಬಿಡುಗಡೆಯನ್ನು ಮುಂದೂಡಿದೆ. ಲಾಕ್‌ಡೌನ್ ಮುಗಿಯುವವರೆಗೂ ಇಕುವಿ 100 ಕಾರಿನ ವಿತರಣೆಯನ್ನು ಮುಂದೂಡಿದೆ.

Most Read Articles

Kannada
English summary
Mahindra reopens Haridwar Igatpuri production plants. Read in Kannada.
Story first published: Saturday, May 16, 2020, 16:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X