ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯ ಫೀಚರ್‍‍ಗಳ ಮಾಹಿತಿ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಸ್ಕಾರ್ಪಿಯೋ ಎಸ್‍ಯುವಿಯನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.12.40 ಲಕ್ಷಗಳಾಗಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯ ಫೀಚರ್‍‍ಗಳ ಮಾಹಿತಿ

ಬಿಎಸ್-6 ಸ್ಕಾರ್ಪಿಯೋ ಎಸ್‍ಯುವಿಯು ಎಸ್5, ಎಸ್7, ಎಸ್9 ಮತ್ತು ಎಸ್11 ಎಂಬ ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ.ಇದರಲ್ಲಿ ಎಸ್3 ರೂಪಾಂತರವು ಎಂಟ್ರಿ-ಲೆವೆಲ್ ಆದರೆ ಎಸ್11 ಟಾಪ್-ಎಂಡ್ ಎಡಬ್ಲ್ಯೂಡಿ ರೂಪಾಂತರವಾಗಿದೆ. ಹೊಸ ಸ್ಕಾರ್ಪಿಯೋ ಎಸ್5 ರೂಪಾಂತರದ ಬೆಲೆಯು ರೂ.12.40 ಲಕ್ಷ, ಸ್ಕಾರ್ಪಿಯೋ ಎಸ್7 ರೂಪಾಂತರದ ಬೆಲೆಯು ರೂ.14.21 ಲಕ್ಷ ಮತ್ತು ಸ್ಕಾರ್ಪಿಯೋ ಎಸ್9 ರೂಪಾಂತರದ ಬೆಲೆಯು ರೂ.14.84 ಲಕ್ಷಗಳಾಗಿದ್ದರೆ ಟಾಪ್ ಸ್ಪೆಕ್ ಎಸ್11 ರೂಪಾಂತರದ ಬೆಲೆಯು ರೂ.16.00 ಲಕ್ಷಗಳಾಗಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯ ಫೀಚರ್‍‍ಗಳ ಮಾಹಿತಿ

ಮೇಲಿನ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ. ಬಿಎಸ್-6 ಸ್ಕಾರ್ಪಿಯೋ ಎಸ್‍ಯುವಿಯು ಎಸ್5, ಎಸ್7, ಎಸ್9 ಮತ್ತು ಎಸ್11 ಎಂಬ ನಾಲ್ಕು ರೂಪಾಂತರಗಳಲ್ಲಿರುವ ಫೀಚರ್ ಗಳ ಮಾಹಿತಿ ಇಲ್ಲಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯ ಫೀಚರ್‍‍ಗಳ ಮಾಹಿತಿ

ಬಿಎಸ್-6 ಸ್ಕಾರ್ಪಿಯೋ ಎಸ್5

ಬಿಎಸ್-6 ಸ್ಕಾರ್ಪಿಯೋ ಎಸ್5 ರೂಪಾಂತರದಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್, ಸ್ಫೀಡ್ ಸೆನ್ಸರಿಂಗ್ ಡೋರ್ ಲಾಕ್, ರೇರ್ ಪಾರ್ಕಿಂಗ್ ಸೆನ್ಸಾರ್, ಸೆಂಟ್ರಲ್ ಲಾಕಿಂಗ್, ಟಿಲ್ಟ್-ಹೊಂದಾಣಿಕೆ ಸ್ಟೀಯರಿಂಗ್, ಮೈಕ್ರೋ-ಹೈಬ್ರಿಡ್ ತಂತ್ರಜ್ಞಾನ, ವೀಲ್ ಕ್ಯಾಪ್ ಹೊಂದಿರುವ 17 ಇಂಚಿನ ಸ್ಟೀಲ್ ವ್ಹೀಲ್ ಗಳು ಮತ್ತು ಇತರ ಫೀಚರ್ ಗಳನ್ನು ಹೊಂದಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯ ಫೀಚರ್‍‍ಗಳ ಮಾಹಿತಿ

ಬಿಎಸ್-6 ಸ್ಕಾರ್ಪಿಯೋ ಎಸ್7

ರಿಮೋಟ್ ಸೆಂಟ್ರಲ್ ಲಾಕಿಂಗ್, ಆಂಟಿ ಥೀಫ್ಟ್ ಅಲರ್ಮ್(ಕಾರು ಕಳ್ಳತನವಾಗುವ ಸಂದರ್ಭದಲ್ಲಿ ಈ ಅಲರ್ಮ್ ಎಚ್ಚರಿಕೆ ನೀಡುತ್ತದೆ), ವೈಪರ್ ಮತ್ತು ಡಿಫೋಗರ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಫಾಲೋ-ಮಿ-ಹೋಮ್ ಹೆಡ್‌ಲ್ಯಾಂಪ್‌ಗಳು, ಸಿಲ್ವರ್ ಸ್ಕಿಡ್ ಪ್ಲೇಟ್, ಸಿಡಿ, ಯುಎಸ್‌ಬಿ ಮತ್ತು ಎಯುಎಕ್ಸ್-ಇನ್ ಹೊಂದಿರುವ 2-ಡಿಐಎನ್ ಆಡಿಯೊ ಸಿಸ್ಟಂ ಮತ್ತು ಇತರ ಫೀಚರ್ ಗಳನ್ನು ಹೊಂದಿದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯ ಫೀಚರ್‍‍ಗಳ ಮಾಹಿತಿ

ಬಿಎಸ್-6 ಸ್ಕಾರ್ಪಿಯೋ ಎಸ್9

ಎಮರ್ಜೆನ್ಸಿ ಕಾಲ್, ಫ್ರಂಟ್ ಫಾಗ್ ಲ್ಯಾಂಪ್, ಇಂಟಿಗ್ರೇಟಡ್ ಇಂಡೀಕೆಟರ್ ಸಿಗ್ನಲ್, ಸ್ಟೀಟಯರಿಂಗ್ ಮೌಂಟಡ್ ಕಂಟ್ರೋಲ್, ಆಂಟಿ-ಪಿಂಚ್ ಮತ್ತು ಒನ್-ಪ್ರೆಸ್ ರೈಸಿಂಗ್ ಡ್ರೈವರ್ ವಿಂಡೋ, ಬ್ಲೂಟೂತ್, ಯುಎಸ್‌ಬಿ ಮತ್ತು ಎಯುಎಕ್ಸ್‌ನೊಂದಿಗೆ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಗೇರ್-ಶಿಫ್ಟ್ ಇಂಡೀಕೆಟರ್ಮತ್ತು ಇತರ ಫೀಚರ್ ಗಳನ್ನು ಹೊಂದಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯ ಫೀಚರ್‍‍ಗಳ ಮಾಹಿತಿ

ಬಿಎಸ್-6 ಸ್ಕಾರ್ಪಿಯೋ ಎಸ್11

ಡೈನಾಮಿಕ್ ಗೈಡ್ ಲೈನ್‌ಗಳೊಂದಿಗೆ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, 17 ಇಂಚಿನ ಅಲಾಯ್, ವ್ಹೀಲ್ ಗಳು, ಕ್ರೋಮ್ ಫೀನಿಶೀಂಗ್ ಗ್ರಿಲ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ವೈಪರ್‌ಗಳು, ಸ್ಟೀರಿಂಗ್ ಮತ್ತು ಗೇರ್ ಲಿವರ್‌ನಲ್ಲಿ ಫಾಕ್ಸ್-ಲೆದರ್ ಅನ್ನು ಹೊಂದಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯ ಫೀಚರ್‍‍ಗಳ ಮಾಹಿತಿ

ಹೊಸ ಸ್ಕಾರ್ಪಿಯೋ 2.2 ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 140 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯ ಫೀಚರ್‍‍ಗಳ ಮಾಹಿತಿ

ಹೊಸ ಸ್ಕಾರ್ಪಿಯೋದ ಇಂಟಿರಿಯರ್‍‍ನಲ್ಲಿ ಹೆಚ್ಚಿನ ಸ್ಪೇಸ್ ಅನ್ನು ನೀಡಲಾಗಿದೆ. ಇದರಿಂದಾಗಿ ಪ್ರಯಾಣಿಕರಿಕೆ ಆರಾಮದಾಯಕವಾಗಿ ಪ್ರಯಾಣಿಸಬಹುದು. ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

Most Read Articles

Kannada
English summary
BS6 Mahindra Scorpio price, variants explained. Read in Kannada.
Story first published: Thursday, May 7, 2020, 15:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X