ಹೊಸ ಥಾರ್ ಎಸ್‌ಯುವಿಯಲ್ಲಿ 6 ಡೋರ್ ವರ್ಷನ್ ಸ್ಥಗಿತಗೊಳಿಸಿದ ಮಹೀಂದ್ರಾ

ನ್ಯೂ ಜನರೇಷನ್ ಥಾರ್ ಎಸ್‌ಯುವಿ ಕಾರು ಮಾದರಿಯಲ್ಲಿ ಕಳೆದ ತಿಂಗಳು 6 ಡೋರ್ ಮಾದರಿಯ ಬುಕ್ಕಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದ ಮಹೀಂದ್ರಾ ಕಂಪನಿಯು ಇದೀಗ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲೂ 6 ಡೋರ್ ಮಾದರಿಯ ಮಾಹಿತಿಯನ್ನು ತೆಗೆದುಹಾಕುವ ಮೂಲಕ ಥಾರ್ ಕಾರಿನ ಬೆಸ್ ವೆರಿಯೆಂಟ್ ಸ್ಥಗಿತದ ಗೊಂದಲಕ್ಕೆ ತೆರೆಎಳೆದಿದೆ.

ಹೊಸ ಥಾರ್ ಎಸ್‌ಯುವಿಯಲ್ಲಿ 6 ಡೋರ್ ವರ್ಷನ್ ಸ್ಥಗಿತಗೊಳಿಸಿದ ಮಹೀಂದ್ರಾ

ಹೊಸ ಥಾರ್ ಕಾರು ಮಾದರಿಯು ಸದ್ಯ ಗ್ರಾಹಕರ ಬೇಡಿಕೆಯೆಂತೆ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಎರಡು ಮಾದರಿಗಳಲ್ಲೂ ಸಾಫ್ಟ್ ಮತ್ತು ಹಾರ್ಡ್ ಟಾಪ್ ವರ್ಷನ್‌ಗಳನ್ನು ನೀಡಲಾಗಿದೆ. 6 ಡೋರ್ ಹೊಂದಿರುವ ಆರಂಭಿಕ ಆವೃತ್ತಿಗಿಂತಲೂ 4 ಡೋರ್ ಹೊಂದಿರುವ ಟಾಪ್ ಎಂಡ್ ಮಾದರಿಗಳಾದ ಡೀಸೆಲ್ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚು ಬೇಡಿಕೆ ಹರಿದುಬರುತ್ತಿದ್ದು, ಬೇಡಿಕೆ ಆಧಾರದ ಮೇಲೆ ವೆರಿಯೆಂಟ್‌ನಲ್ಲಿ ಹೊಸ ಬದಲಾವಣೆ ತರಲಾಗಿದೆ.

ಹೊಸ ಥಾರ್ ಎಸ್‌ಯುವಿಯಲ್ಲಿ 6 ಡೋರ್ ವರ್ಷನ್ ಸ್ಥಗಿತಗೊಳಿಸಿದ ಮಹೀಂದ್ರಾ

ಗ್ರಾಹಕರ ಬೇಡಿಕೆಯೆಂತೆ ಮಹೀಂದ್ರಾ ಕಂಪನಿಯು ಥಾರ್ ಕಾರಿನ ಆರಂಭಿಕ ಆವೃತ್ತಿಯಾದ ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಸ್ಟ್ಯಾಂಡರ್ಡ್ ಟಾಪ್ ಪೆಟ್ರೋಲ್ ಮ್ಯಾನುವಲ್, ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಪೆಟ್ರೋಲ್ ಮ್ಯಾನುವಲ್ ಮತ್ತು ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಡೀಸೆಲ್ ಮ್ಯಾನುವಲ್ ಆವೃತ್ತಿಗಳ ಮಾರಾಟವನ್ನು ಸ್ಥಗಿತಗೊಳಿಸಿದೆ.

ಹೊಸ ಥಾರ್ ಎಸ್‌ಯುವಿಯಲ್ಲಿ 6 ಡೋರ್ ವರ್ಷನ್ ಸ್ಥಗಿತಗೊಳಿಸಿದ ಮಹೀಂದ್ರಾ

ಆರಂಭಿಕ ವೆರಿಯೆಂಟ್‌ಗಳ ಸ್ಥಗಿತದ ನಂತರ ಥಾರ್ ಎಸ್‌ಯುವಿ ಕಾರಿನ ಆರಂಭಿಕ ಮಾದರಿಯು ಬೆಲೆಯು ಇದೀಗ ರೂ. 9.80 ಲಕ್ಷದಿಂದ ರೂ.11.90 ಲಕ್ಷಕ್ಕೆ(ಎಕ್ಸ್‌ಶೋರೂಂ ಪ್ರಕಾರ) ಏರಿಕೆಯಾಗಿದ್ದು, ಟಾಪ್ ಮಾದರಿಯು ರೂ. 12.95 ಲಕ್ಷ ಬೆಲೆ ಪಡೆದುಕೊಂಡಿದೆ.

ಹೊಸ ಥಾರ್ ಎಸ್‌ಯುವಿಯಲ್ಲಿ 6 ಡೋರ್ ವರ್ಷನ್ ಸ್ಥಗಿತಗೊಳಿಸಿದ ಮಹೀಂದ್ರಾ

ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಸ್ಟ್ಯಾಂಡರ್ಡ್ ಟಾಪ್ ಪೆಟ್ರೋಲ್ ಮ್ಯಾನುವಲ್, ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಪೆಟ್ರೋಲ್ ಮ್ಯಾನುವಲ್ ಮತ್ತು ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಡೀಸೆಲ್ ಮ್ಯಾನುವಲ್ ಆವೃತ್ತಿಗಳ ಸ್ಥಗಿತ ನಂತರದ ಎಎಕ್ಸ್ ಫೋರ್ ಸೀಟರ್ ಕನ್ವರ್ಟಿಬಲ್ ಡೀಸೆಲ್ ಮ್ಯಾನುವಲ್ ಮಾದರಿಯು ಆರಂಭಿಕ ಮಾದರಿಯಾಗಿದ್ದು, ಹೊಸ ಕಾರು ಬಿಡುಗಡೆಯ ನಂತರ ಇದುವರೆಗೆ ಬರೋಬ್ಬರಿ 25 ಸಾವಿರ ಬುಕ್ಕಿಂಗ್ ಪಡೆದುಕೊಂಡಿದೆ.

ಹೊಸ ಥಾರ್ ಎಸ್‌ಯುವಿಯಲ್ಲಿ 6 ಡೋರ್ ವರ್ಷನ್ ಸ್ಥಗಿತಗೊಳಿಸಿದ ಮಹೀಂದ್ರಾ

ನ್ಯೂ ಜನರೇಷನ್ ಮಾದರಿಯೊಂದಿಗೆ ಥಾರ್ ಕಾರಿನ ಎಂಜಿನ್, ವಿನ್ಯಾಸ ಮತ್ತು ತಾಂತ್ರಿಕ ಅಂಶಗಳಲ್ಲಿ ಸಾಕಷ್ಟು ಬದಲಾವಣೆ ಪರಿಚಯಿಸಿದ್ದು, ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದೆ.

ಹೊಸ ಥಾರ್ ಎಸ್‌ಯುವಿಯಲ್ಲಿ 6 ಡೋರ್ ವರ್ಷನ್ ಸ್ಥಗಿತಗೊಳಿಸಿದ ಮಹೀಂದ್ರಾ

ಹೊಸ ಕಾರಿನಲ್ಲಿ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಡೀಸೆಲ್ ಮಾದರಿಯು 132-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಪೆಟ್ರೋಲ್ ಮಾದರಿಯು 152-ಬಿಎಚ್‌ಪಿ, 320-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಥಾರ್ ಎಸ್‌ಯುವಿಯಲ್ಲಿ 6 ಡೋರ್ ವರ್ಷನ್ ಸ್ಥಗಿತಗೊಳಿಸಿದ ಮಹೀಂದ್ರಾ

ಹಾಗೆಯೇ ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್‌ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದ್ದು, ಗ್ರಾಹಕರು ತಮ್ಮ ಬೇಡಿಕೆ ಅನುಗುಣವಾಗಿ ಎಎಕ್ಸ್ ಮ್ಯಾನುವಲ್ ಮತ್ತು ಎಲ್ಎಕ್ಸ್ ಮಾದರಿಯಲ್ಲಿ ಕನ್ವರ್ಟಿಬಲ್ ಮತ್ತು ಹಾರ್ಡ್ ಟಾಪ್ ಆಯ್ಕೆ ಮಾಡಬಹುದಾಗಿದೆ.

ಹೊಸ ಥಾರ್ ಎಸ್‌ಯುವಿಯಲ್ಲಿ 6 ಡೋರ್ ವರ್ಷನ್ ಸ್ಥಗಿತಗೊಳಿಸಿದ ಮಹೀಂದ್ರಾ

ಹೊಸ ಕಾರಿನ ಒಳಭಾಗದ ಸೌಲಭ್ಯಗಳು ಪ್ರಸ್ತುತ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಮಾರ್ಡನ್ ವಿನ್ಯಾಸಗಳನ್ನು ಹೊಂದಿದ್ದು, ಆಕರ್ಷಕ ಡ್ಯಾಶ್‌ಬೋರ್ಡ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋಗೆ ಸರ್ಪೋಟ್ ಮಾಡಬಲ್ಲ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಲ್ಲಾ ಮಾದರಿಯ ಹವಾಗುಣವನ್ನು ತಡೆಯಬಲ್ಲ ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಫಾಮೆಷನ್ ಡಿಸ್‌ಪ್ಲೇ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಸೌಲಭ್ಯ ನೀಡಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಥಾರ್ ಎಸ್‌ಯುವಿಯಲ್ಲಿ 6 ಡೋರ್ ವರ್ಷನ್ ಸ್ಥಗಿತಗೊಳಿಸಿದ ಮಹೀಂದ್ರಾ

ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸೆಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ, ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್, ರಿಯರ್ ವ್ಯೂ ಕ್ಯಾಮೆರಾ ಜೋಡಿಸಲಾಗಿದೆ.

Article Published On: Thursday, December 24, 2020, 17:28 [IST]
English summary
Mahindra Thar 6 Seat Variant Removed From The Brochure. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+