ಹೊಸ ವರ್ಷದಿಂದ ಟ್ರ್ಯಾಕ್ಟರ್ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಹೀಂದ್ರಾ

ಟ್ರ್ಯಾಕ್ಟರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಫಾರ್ಮಾ ಇಕ್ವಿಪ್ಮೆಂಟ್ ಸೆಕ್ಟರ್ ಕಂಪನಿಯು ಹೊಸ ವರ್ಷದಿಂದ ತನ್ನ ವಿವಿಧ ಸರಣಿಯ ಟ್ರ್ಯಾಕ್ಟರ್‌ಗಳ ಬೆಲೆ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದು, ಹೊಸ ದರ ಪಟ್ಟಿಯನ್ನು ಜನವರಿ 1ರಂದು ಪ್ರಕಟಿಸುವುದಾಗಿ ತಿಳಿಸಿದೆ.

ಹೊಸ ವರ್ಷದಿಂದ ಟ್ರ್ಯಾಕ್ಟರ್ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಹೀಂದ್ರಾ

ಹೆಚ್ಚುತ್ತಿರುವ ಉತ್ಪಾದನಾ ಬಿಡಿಭಾಗಗಳ ಬೆಲೆ ಏರಿಕೆಯಿಂದಾಗಿ ಜನವರಿ 1ರಿಂದ ಬಹುತೇಕ ಆಟೋ ಕಂಪನಿಗಳು ಬೆಲೆ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದು, ಮಹೀಂದ್ರಾ ಫಾರ್ಮಾ ಇಕ್ವಿಪ್ಮೆಂಟ್ ಸೆಕ್ಟರ್ ಕಂಪನಿಯು ಕೂಡಾ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದೆ. ವಿವಿಧ ಮಾದರಿಗಳಿಗೆ ಅನುಗುಣವಾಗಿ ಶೇ.1.50ರಿಂದ ಶೇ.3 ರಷ್ಟು ಎಕ್ಸ್‌ಶೋರೂಂ ದರದಲ್ಲಿ ಹೆಚ್ಚಳ ಮಾಡುವ ಸಾಧ್ಯತೆಗಳಿದ್ದು, ಹೊಸ ವರ್ಷದ ಆರಂಭದಲ್ಲಿ ಹೊಸ ದರ ಜಾರಿಗೆ ಬರಲಿದೆ.

ಇನ್ನು ಕಳೆದ ಒಂದು ವರ್ಷದಿಂದ ಟ್ರ್ಯಾಕ್ಟರ್ ಮಾರಾಟವು ಸಾಕಷ್ಟು ಏರಿಕೆ ಕಂಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಹರಿದುಬರುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಟ್ರ್ಯಾಕ್ಟರ್ ಸರಣಿಗಳನ್ನು ಹೆಚ್ಚಿಸಿರುವ ಮಹೀಂದ್ರಾ ಕಂಪನಿಯು ಹೊಸ ಯೋಜನೆ ಜಾರಿಗೆ ತಂದಿದೆ.

ಹೊಸ ವರ್ಷದಿಂದ ಟ್ರ್ಯಾಕ್ಟರ್ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಹೀಂದ್ರಾ

ಆಧುನಿಕ ಕೃಷಿ ಚಟುವಟಿಕೆಗಳಲ್ಲಿ ಟ್ರ್ಯಾಕ್ಟರ್‌ಗಳ ಬಳಕೆಯೂ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದರಿಂದ ವಿವಿಧ ಮಾದರಿಗಳ ಟ್ರ್ಯಾಕ್ಟರ್‌ ಮಾದರಿಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಫಾರ್ಮಾ ಇಕ್ವಿಪ್ಮೆಂಟ್ ಸೆಕ್ಟರ್ ವಿಭಾಗವು ಕೃಷಿ ಚಟುವಟಿಕೆಗಳಿಗೆ ಪೂರಕವಾದ ಯಂತ್ರೋಪಕರಣ ತಯಾರಿಕೆಯಲ್ಲಿ ಹಲವು ಹೊಸ ದಾಖಲೆಗಳಿಗೆ ಕಾರಣವಾಗಿದೆ.

ಹೊಸ ವರ್ಷದಿಂದ ಟ್ರ್ಯಾಕ್ಟರ್ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಹೀಂದ್ರಾ

ಮಹೀಂದ್ರಾ ಫಾರ್ಮಾ ಇಕ್ವಿಪ್ಮೆಂಟ್ ಸೆಕ್ಟರ್ ವಿಭಾಗವು ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಮಾರಾಟ ಜಾಲವನ್ನು ಹೊಂದಿದ್ದು, ಆ ಪ್ರದೇಶಗಳಿಗೆ ಅನುಗುಣವಾಗಿ ವಿವಿಧ ಮಾದರಿಯ ಕೃಷಿ ಯಂತ್ರೋಪಕರಣಗಳನ್ನು ಮಾರಾಟ ಮಾಡುತ್ತಿದೆ. ಇದರಲ್ಲಿ ಟ್ರ್ಯಾಕ್ಟರ್ ಮಾದರಿಗಳೇ ಪ್ರಮುಖ ಉತ್ಪನ್ನವಾಗಿದ್ದು, ಇತ್ತೀಚೆಗೆ ಮತ್ತೊಂದು ಮಹತ್ವದ ಯೋಜನೆಗೆ ಚಾಲನೆ ನೀಡಿದೆ.

ಹೊಸ ವರ್ಷದಿಂದ ಟ್ರ್ಯಾಕ್ಟರ್ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಹೀಂದ್ರಾ

ಜಪಾನ್ ವಾಹನ ತಯಾರಿಕೆ ಕಂಪನಿಯಾದ ಮಿಟ್ಸುಬಿಷಿ ಎಂಜನಿಯರಿಂಗ್ ಜೊತೆಗೂಡಿ ಕೆ2 ಸರಣಿಯ ಟ್ರ್ಯಾಕ್ಟರ್ ಉತ್ಪಾದನೆಗಾಗಿ ಕೈಜೋಡಿಸಿರುವ ಮಹೀಂದ್ರಾ ಫಾರ್ಮಾ ಕಂಪನಿಯು ಹೊಸ ಟ್ರ್ಯಾಕ್ಟರ್‌ಗಳನ್ನು ತೆಲಂಗಾಣದಲ್ಲಿರುವ ಜಹೀರಾಬಾದ್ ಟ್ರ್ಯಾಕ್ಟರ್ ಉತ್ಪಾದನಾ ಘಟಕದಲ್ಲಿ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಹೊಸ ವರ್ಷದಿಂದ ಟ್ರ್ಯಾಕ್ಟರ್ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಹೀಂದ್ರಾ

ಹೊಸ ಯೋಜನೆ ಅಡಿ ನಿರ್ಮಾಣವಾಗಲಿರುವ ಕೆ2 ಸರಣಿ ಟ್ರ್ಯಾಕ್ಟರ್‌ಗಳು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಗಳಲ್ಲಿ ಉತ್ಪಾದನೆಗೊಳ್ಳಲಿದ್ದು, ಆಧುನಿಕ ತಂತ್ರಜ್ಞಾನ ಸೌಲಭ್ಯ ಹೊಂದಿರುವ ಹೊಸ ಟ್ರ್ಯಾಕ್ಟರ್ ಮಾದರಿಗಳು ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ರಫ್ತುಗೊಳ್ಳಲಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹೊಸ ವರ್ಷದಿಂದ ಟ್ರ್ಯಾಕ್ಟರ್ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಹೀಂದ್ರಾ

ಕೆ2 ಸರಣಿಯಲ್ಲಿ ಹೈ ರೇಂಜ್, ಮಿಡಲ್ ಮತ್ತು ಲೈಟ್‌ವೆಟ್ ಟ್ರ್ಯಾಕ್ಟರ್ ಮಾದರಿಗಳನ್ನು ಅಭಿವೃದ್ದಿಪಡಿಸಲಿರುವ ಮಹೀಂದ್ರಾ ಮತ್ತು ಮಿಟ್ಸುಬಿಷಿ ಕಂಪನಿಗಳು ಒಟ್ಟು 37 ಮಾದರಿಗಳನ್ನು ನಿರ್ಮಾಣ ಮಾಡಲಿದ್ದು, ಹೊಸ ಟ್ರ್ಯಾಕ್ಟರ್ ಮಾದರಿಗಳು ಆಯಾ ರಾಷ್ಟ್ರಗಳಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಿದ್ದಪಡಿಸಲಾಗುತ್ತದೆ. ಹೊಸ ಟ್ರ್ಯಾಕ್ಟರ್ ಪ್ರಮುಖವಾಗಿ ಲಾಟಿನ್ ಅಮೆರಿಕ, ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಮಾರಾಟಗೊಳ್ಳಲಿವೆ.

ಹೊಸ ವರ್ಷದಿಂದ ಟ್ರ್ಯಾಕ್ಟರ್ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಹೀಂದ್ರಾ

ಹೊಸ ಸರಣಿಯಲ್ಲಿರುವ ಕೆ2 ಟ್ರ್ಯಾಕ್ಟರ್ ಮಾದರಿಗಳು ಆರಂಭಿಕವಾಗಿ 30ಬಿಹೆಚ್‌ಪಿಯಿಂದ ಹೈಎಂಡ್ ಮಾದರಿಗಳು 100ಬಿಹೆಚ್‌ಪಿ ಸಾಮರ್ಥ್ಯ ಹೊಂದಿದ್ದು, ಹೊಸ ಟ್ರ್ಯಾಕ್ಟರ್ ಮಾದರಿಗಳ ಉತ್ಪಾದನೆಗಾಗಿ ಪ್ರತ್ಯೇಕ ಪ್ಲ್ಯಾಟ್ ಫಾರ್ಮ್ ಬಳಕೆ ಮಾಡಲಾಗುತ್ತಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ವರ್ಷದಿಂದ ಟ್ರ್ಯಾಕ್ಟರ್ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಹೀಂದ್ರಾ

ಜಹೀರಾಬಾದ್ ಟ್ರ್ಯಾಕ್ಟರ್ ಉತ್ಪಾದನಾ ಘಟಕದಲ್ಲಿ ಈಗಾಗಲೇ ಮಹೀಂದ್ರಾ ಕಂಪನಿಯ ಯುವೋ, ಜಿವೋ ಮತ್ತು ಪ್ಲಸ್ ಸರಣಿಗಳನ್ನು ಉತ್ಪಾದನೆ ಮಾಡಲಾಗುತ್ತಿದ್ದು, ಇದೀಗ ಕೆ2 ಸರಣಿಯ ಟ್ರ್ಯಾಕ್ಟರ್‌ಗಳ ಉತ್ಪಾದನೆ ಮೂಲಕ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಜನಪ್ರಿಯತೆ ಗಳಿಸಲಿದೆ.

Most Read Articles

Kannada
English summary
Mahindra Will Also Increase The Prices Of Its Tractors From January 2021. Read in Kannada.
Story first published: Monday, December 21, 2020, 15:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X