ಚಳಿಗಾಲಕ್ಕಾಗಿ ವಿಂಟರ್ ಚೆಕ್-ಅಪ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಚಳಿಗಾಲಕ್ಕಾಗಿ ಕಾರುಗಳ ನಿರ್ವಹಣೆಯನ್ನು ಸರಳಗೊಳಿಸಲು ವಿಂಟರ್ ಚೆಕ್-ಅಪ್ ಕ್ಯಾಂಪ್ ಆಯೋಜಿಸಿದ್ದು, ಆಸಕ್ತ ಗ್ರಾಹಕರು ಚೆಕ್-ಅಪ್ ಕ್ಯಾಂಪ್‌ನಲ್ಲಿ ತಮ್ಮ ವಿವಿಧ ಕಾರು ಮಾದರಿಗಳಿಗೆ ರಿಯಾಯ್ತಿ ದರದಲ್ಲಿ ಸೇವೆಗಳನ್ನು ಪಡೆಯಬಹುದಾಗಿದೆ.

ಚಳಿಗಾಲಕ್ಕಾಗಿ ವಿಂಟರ್ ಚೆಕ್-ಅಪ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ವಿಂಟರ್ ಚೆಕ್-ಅಪ್ ಕ್ಯಾಂಪ್ ಅನ್ನು ಈ ತಿಂಗಳು 14ರಿಂದ 19ರ ತನಕ ಆಯೋಜಿಸಿರುವ ಮಹೀಂದ್ರಾ ಕಂಪನಿಯು ವಿವಿಧ ಕಾರು ಮಾದರಿಗಳನ್ನು ಪರೀಕ್ಷಿಸಲಿದ್ದು, ವಾರಂಟಿ ಆಫರ್‌ಗಳ ಸೇವೆಗಳು ಹೊರತುಪಡಿಸಿ ಸಾಮಾನ್ಯ ಸೇವೆಗಳು ಸರ್ವಿಸ್ ಕ್ಯಾಂಪ್‌ನಲ್ಲಿ ಲಭ್ಯವಿವೆ. ಚೆಕ್-ಅಪ್ ಕ್ಯಾಂಪ್‌ನಲ್ಲಿ ಒಟ್ಟು 75 ವಿವಿಧ ತಾಂತ್ರಿಕ ಅಂಶಗಳನ್ನು ಉಚಿತವಾಗಿ ಪರೀಕ್ಷೆಗೆ ಒಳಪಡಿಸಲಿದ್ದು, ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಸೇವೆಗಳನ್ನು ಮುಂದುವರಿಸಲಾಗುತ್ತದೆ.

ಚಳಿಗಾಲಕ್ಕಾಗಿ ವಿಂಟರ್ ಚೆಕ್-ಅಪ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ಚೆಕ್-ಅಪ್ ಕ್ಯಾಂಪ್‌ನಲ್ಲಿ ಸರ್ವಿಸ್ ಪಡೆದುಕೊಳ್ಳುವ ಕಾರು ಮಾದರಿಗಳಿಗೆ ಶೇ.5 ರಷ್ಟು ವಿನಾಯ್ತಿಯೊಂದಿಗೆ ಬಿಡಿಭಾಗಗಳ ಸೇವೆಯು ಲಭ್ಯವಿದ್ದು, ಲೇಬರ್ ಚಾರ್ಜ್‌ಗಳ ಮೇಲೆ ಶೇ. 10 ರಷ್ಟು ರಿಯಾಯ್ತಿ ನೀಡಲಾಗುತ್ತದೆ.

ಚಳಿಗಾಲಕ್ಕಾಗಿ ವಿಂಟರ್ ಚೆಕ್-ಅಪ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ಹಾಗೆಯೇ ವಿಂಡ್‌ಶೀಲ್ಡ್ ಪಾಲಿಷ್ ಮತ್ತು ಹೆಡ್‌ಲ್ಯಾಂಪ್ ರಿಸ್ಟೋರ್‌ರೇಷನ್ ಮೇಲೆ ಶೇ.25 ರಷ್ಟು ವಿನಾಯ್ತಿ ಲಭ್ಯವಿದ್ದು, ಆಸಕ್ತ ಗ್ರಾಹಕರು ತಮ್ಮ ವಾಹನಗಳನ್ನು ಹತ್ತಿರದ ಮಹೀಂದ್ರಾ ಸರ್ವಿಸ್ ಸೆಂಟರ್‌ಗಳಲ್ಲಿ ಹೊಸ ಕ್ಯಾಂಪ್ ಅಡಿ ಸೇವೆ ಪಡೆದುಕೊಳ್ಳಬಹುದು.

ಚಳಿಗಾಲಕ್ಕಾಗಿ ವಿಂಟರ್ ಚೆಕ್-ಅಪ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ಚೆಕ್ ಪಾಯಿಂಟ್‌ನಲ್ಲಿ ಎಸಿ, ಹೆಡ್‌ಲ್ಯಾಂಪ್ ಯುನಿಟ್, ಟೈಲ್‌ಲೈಟ್ ಸೇರಿದಂತೆ ವಿವಿಧ ತಾಂತ್ರಿಕ ಅಂಶಗಳನ್ನು ಪರೀಕ್ಷಿಸಲಿದ್ದು, ತಾಂತ್ರಿಕ ಪರೀಕ್ಷೆಗೆ ಯಾವುದೇ ಶುಲ್ಕವಿರುವುದಿಲ್ಲ. ಒಂದು ವೇಳೆ ತಾಂತ್ರಿಕ ದೋಷ ಕಂಡುಬಂದಲ್ಲಿ ಮಾಲೀಕರ ಒಪ್ಪಿಗೆ ಮೇರೆಗೆ ಸೇವೆಗಳನ್ನು ಮುಂದುವರಿಸಲಿದ್ದು, ರಿಯಾಯ್ತಿ ದರಗಳಲ್ಲಿ ವಿವಿಧ ತಾಂತ್ರಿಕ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಚಳಿಗಾಲಕ್ಕಾಗಿ ವಿಂಟರ್ ಚೆಕ್-ಅಪ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ಇನ್ನು ಮಹೀಂದ್ರಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಥಾರ್ ಅನ್ನು ಹೊರತುಪಡಿಸಿ ತನ್ನ ಇತರ ಎಲ್ಲಾ ಮಾದರಿಗಳ ಖರೀದಿ ಮೇಲೆ ಡಿಸೆಂಬರ್ ಅವಧಿಗಾಗಿ ಭರ್ಜರಿ ರಿಯಾಯಿತಿಗಳನ್ನು ಘೋಷಿಸಿದ್ದು, ಮಹೀಂದ್ರಾ ವಿವಿಧ ಕಾರುಗಳ ಮೇಲೆ ರೂ.20 ಸಾವಿರದಿಂದ ರೂ.3.06 ಲಕ್ಷ ಗಳವರೆಗೆ ಭರ್ಜರಿ ಇಯರ್ ಎಂಡ್ ಆಫರ್ ಪಡೆದುಕೊಳ್ಳಬಹುದಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಚಳಿಗಾಲಕ್ಕಾಗಿ ವಿಂಟರ್ ಚೆಕ್-ಅಪ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ಈ ತಿಂಗಳ ಅಂತ್ಯದವರೆಗೂ ಮಹೀಂದ್ರಾ ಕಾರುಗಳ ಮೇಲೆ ರಿಯಾಯಿತಿಗಳು ಲಭ್ಯವಿಲಿದ್ದು, ಬೊಲೆರೊ ಮೇಲೆ ಒಟ್ಟು ರೂ.20,550 ಗಳವರೆಗೆ ಮತ್ತು ಸ್ಕಾರ್ಪಿಯೋ ಎಸ್‍ಯುವಿಯ ಮೇಲೆ ರೂ.60,000 ಗಳವರೆಗೆ ರಿಯಾಯ್ತಿ ಪಡೆಯಬಹುದು.

ಚಳಿಗಾಲಕ್ಕಾಗಿ ವಿಂಟರ್ ಚೆಕ್-ಅಪ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ಹಾಗೆಯೇ ಎಕ್ಸ್‌ಯುವಿ500 ಎಸ್‍ಯುವಿಯ ಮೇಲೆ ಒಟ್ಟು ರೂ.56,760 ದವರೆಗೆ ರಿಯಾಯಿತಿಯನ್ನು ಘೋಷಿಸಿದ್ದು, ಕೆಯುವಿ100 ಮಾದರಿಯ ಮೇಲೆ ಒಟ್ಟು ರೂ.62,055 ಮತ್ತು ಮರಾಜೋ ಮಾದರಿಯ ಮೇಲೆ ಒಟ್ಟು ರೂ.41,000 ತನಕ ರಿಯಾಯಿತಿ ಘೋಷಿಸಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಚಳಿಗಾಲಕ್ಕಾಗಿ ವಿಂಟರ್ ಚೆಕ್-ಅಪ್ ಕ್ಯಾಂಪ್ ಆಯೋಜಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ300 ಕಾರು ಮಾದರಿಯ ರೂ.45,000 ತನಕ ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಅಲ್ಟುರಾಸ್ ಜಿ4 ಎಸ್‍ಯುವಿಯ ಮೇಲೆ ರೂ.3.06 ಲಕ್ಷ ಗಳವರೆಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.

Most Read Articles

Kannada
English summary
Mahindra Winter Care Maintenance Camp Announced. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X