ಮಹತ್ವದ ಬದಲಾವಣೆಯೊಂದಿಗೆ ಬರಲಿದೆ ಬಿಎಸ್-6 ಮಹೀಂದ್ರಾ ಎಕ್ಸ್‌ಯುವಿ500
ಎಕ್ಸ್‌ಯುವಿ300 ಬಿಎಸ್-6 ಪೆಟ್ರೋಲ್ ಆವೃತ್ತಿಯ ಬಿಡುಗಡೆಯ ಮೂಲಕ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರುಗಳನ್ನು ಉನ್ನತೀಕರಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಶೀಘ್ರದಲ್ಲೇ ಎಕ್ಸ್‌ಯುವಿ500 ಸೇರಿದಂತೆ ವಿವಿಧ ಎಸ್‌ಯುವಿ ಕಾರು ಮಾದರಿಗಳನ್ನು ಹೊಸ ನಿಯಮ ಅನುಸಾರವಾಗಿ ಬಿಡುಗಡೆಗಾಗಿ ಸಿದ್ದತೆ ನಡೆಸಿದೆ.

ಮಹೀಂದ್ರಾ ಸಂಸ್ಥೆಯು ಸದ್ಯ ಸ್ಕಾರ್ಪಿಯೋ, ಎಕ್ಸ್‌ಯುವಿ500 ಮತ್ತು ಥಾರ್ ನ್ಯೂ ಜನರೇಷನ್ ಆವೃತ್ತಿಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಉನ್ನತಿಕರಿಸುತ್ತಿದ್ದು, ಬಿಎಸ್-6 ಎಂಜಿನ್ ಹೊಂದಿರುವ ಎಕ್ಸ್‌ಯುವಿ300 ಪೆಟ್ರೋಲ್ ಆವೃತ್ತಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300 ಮತ್ತು ಥಾರ್ ಕಾರುಗಳನ್ನು ಸಹ ಹೊಸ ನಿಯಮದಂತೆ ಬಿಡುಗಡೆ ಮಾಡುತ್ತಿದ್ದು, ನ್ಯೂ ಜನರೇಷನ್ ಆವೃತ್ತಿಗಳಲ್ಲಿ ಸಾಕಷ್ಟು ಸುಧಾರಿತ ಗುಣಮಟ್ಟದ ಬಿಡಿಭಾಗಗಳು, ಎಂಜಿನ್ ಸೌಲಭ್ಯ ಮತ್ತು ಪರ್ಫಾಮೆನ್ಸ್‌ನಲ್ಲಿ ಗ್ರಾಹಕರ ಆಕರ್ಷಣೆ ಕಾರಣವಾಗಲಿವೆ.

ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮದಿಂದಾಗಿ ಎಂಜಿನ್ ಆಯ್ಕೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಮಹೀಂದ್ರಾ ಸಂಸ್ಥೆಯು ಸಹ ಹೊಸ ನಿಯಮ ಅನುಸಾರವಾಗಿ ಬಿಎಸ್-6 ಎಂಜಿನ್ ಅಭಿವೃದ್ದಿಪಡಿಸಿದೆ.

ಮಾಹಿತಿಗಳ ಪ್ರಕಾರ, ಮಹೀಂದ್ರಾ ಸಂಸ್ಥೆಯು ಎಕ್ಸ್‌ಯುವಿ500 ಮಾದರಿಯಲ್ಲಿ ಈ ಹಿಂದಿನ 2.2-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನೇ ಹೊಸ ತಂತ್ರಜ್ಞಾನದೊಂದಿಗೆ ಮರುಅಭಿವೃದ್ದಿಗೊಳಿಸಿದ್ದು, 2.2-ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ತೆಗೆದುಹಾಕಲಿದೆಯೆಂತೆ.

ಜೊತೆಗೆ ಹೊಸ ನಿಯಮ ಅನುಸಾರ ಬಿಎಸ್-6 ಆವೃತ್ತಿಗಳಲ್ಲಿ ಹಲವು ಸುರಕ್ಷಾ ಸೌಲಭ್ಯಗಳನ್ನು ಕಡ್ಡಾಯವಾಗಿ ನೀಡಲಾಗಿದ್ದು, ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300 ಮತ್ತು ಥಾರ್ ಕಾರುಗಳಲ್ಲಿ ಇನ್ಮುಂದೆ ಎಲ್ಲಾ ಮಾದರಿಗಳಲ್ಲೂ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್ ಸಿಸ್ಟಂ, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ರಿಮೆಂಡರ್, ಲೆದರ್ ಸೀಟ್‌ಗಳ ಸೌಲಭ್ಯಗಳಿರಲಿವೆ.

ಹಾಗೆಯೇ 6 ಏರ್‌ಬ್ಯಾಗ್‌ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಯ್ದ ವೆರಿಯೆಂಟ್‌ಗಳಲ್ಲಿ ಸನ್‌ರೂಫ್, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟಕ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್, ರಿಯರ್ ಎಸಿ ವೆಂಟ್ಸ್, ಲೆದರ್ ಸೀಟುಗಳು, 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟು ಮತ್ತು ಒಂದೇ ಸೂರಿನಡಿ ವಿವಿಧ ಮಾಹಿತಿಗಳನ್ನು ನೀಡಬಲ್ಲ ಟಚ್ ಸ್ಕ್ರಿನ್ ಇನ್ಪೋಟೈನ್‌ಟೆಂಟ್ ಸಿಸ್ಟಂ ಜೋಡಣೆ ಮಾಡಲಾಗಿದೆ.

ಇದರೊಂದಿಗೆ ಕಾರು ಕಳ್ಳತನಗಳಿಗೆ ಬ್ರೇಕ್ ಹಾಕಲು ಜಿಯೋ ಫೆನ್ಸ್ ಅಲರ್ಟ್ ಸೇರಿದಂತೆ ಸೆಂಟರ್ ಲಾಕಿಂಗ್ ಸಿಸ್ಟಂ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಒಟ್ಟಿನಲ್ಲಿ ಪ್ರಯಾಣಿಕರ ಸುರಕ್ಷೆತೆಗಾಗಿ ಗರಿಷ್ಠ ಮಟ್ಟದಲ್ಲಿ ಸುರಕ್ಷಾ ಸೌಲಭ್ಯ ಗಳನ್ನು ಅಳವಡಿಸಿರುವುದೇ ಹೊಸ ಕಾರುಗಳ ಪ್ರಮುಖ ಆಕರ್ಷಣೆಯಾಗಲಿದೆ.
MOST READ: 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಲಿರುವ ಟಾಪ್ 10 ಎಸ್‌ಯುವಿ ಕಾರುಗಳಿವು..!

ಅದಕ್ಕಿಂತಲೂ ಮುಖ್ಯವಾಗಿ ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300 ಮತ್ತು ಥಾರ್ ನ್ಯೂ ಜನರೇಷನ್ ಕಾರುಗಳಲ್ಲಿ ಬಿಎಸ್-6 ಎಂಜಿನ್ ಅಳವಡಿಸಿರುವುದು ಮಾಲಿನ್ಯ ತಡೆಯುವಲ್ಲಿ ಸಾಕಷ್ಟು ಸಹಕಾರಿಯಾಗಲಿದ್ದು, ಶೇ.25ರಷ್ಚು ಹೊಗೆ ಉಗುಳುವ ಪ್ರಮಾಣ ಕಡಿಮೆಯಾಗಿದ್ದಲ್ಲಿ ಶೇ. 10ರಷ್ಟು ಮೈಲೇಜ್ ಪ್ರಮಾಣದಲ್ಲೂ ಏರಿಕೆಯಾಗಲಿದೆ.
MOST READ: ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟ ಸ್ಕೂಟರ್ ಮಾಲೀಕನಿಗೆ ಬಿತ್ತು ದುಬಾರಿ ದಂಡ

ಬೆಲೆ ಹೆಚ್ಚಳ ಬಿಸಿ
ಹೌದು, ಬಿಎಸ್-6 ಕಾರುಗಳ ಬೆಲೆಯಲ್ಲಿ ತುಸು ಏರಿಕೆಯಾಗಲಿದ್ದು, ಬಿಎಸ್-4 ಕಾರುಗಳ ಬೆಲೆಗಳಿಂತಲೂ ಬಿಎಸ್-6 ಕಾರುಗಳ ಬೆಲೆಯು ತಾಂತ್ರಿಕ ಸೌಲಭ್ಯಗಳ ಅಳವಡಿಕೆಯ ಆಧಾರದ ಪೆಟ್ರೋಲ್ ಕಾರುಗಳು ರೂ.10 ಸಾವಿರದಿಂದ ರೂ.30 ಸಾವಿರ ಮತ್ತು ಡೀಸೆಲ್ ಕಾರುಗಳು ರೂ.80 ಸಾವಿರದಿಂದ ರೂ.1.50 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.
MOST READ: ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಇದಲ್ಲದೇ ಫೋರ್ಡ್ ಜೊತೆ ಹೊಸ ಕಾರುಗಳ ಅಭಿವೃದ್ದಿ ಮತ್ತು ಮಾರಾಟಕ್ಕೆ ಕೈಜೋಡಿಸಿರುವ ಮಹೀಂದ್ರಾ ಸಂಸ್ಥೆಯು ಸಹಭಾಗಿತ್ವ ಯೋಜನೆಯಲ್ಲಿ ಆಸ್ಪೈರ್ ಎಲೆಕ್ಟ್ರಿಕ್ ಮತ್ತು ಎಕ್ಸ್‌ಯುವಿ100 ಎಲೆಕ್ಟ್ರಿಕ್ ಕಾರುಗಳನ್ನು 2020ರ ಮಧ್ಯಂತರದಲ್ಲಿ ಬಿಡುಗಡೆ ಮಾಡಲಿದೆ.


Click it and Unblock the Notifications








