ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟ ಸ್ಕೂಟರ್‌ ಮಾಲೀಕನಿಗೆ ಬಿತ್ತು ದುಬಾರಿ ದಂಡ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಹೆಲ್ಮೆಟ್ ಧರಿಸದೇ ಸ್ಕೂಟರ್‍‍ನಲ್ಲಿ ಕರೆದುಕೊಂಡು ಹೋದ ಕಾಂಗ್ರೆಸ್ ಕಾರ್ಯಕರ್ತನಿಗೆ ಉತ್ತರ ಪ್ರದೇಶದ ಟ್ರಾಫಿಕ್ ಪೊಲೀಸರು ರೂ.6,100 ಗಳವರೆಗೆ ದಂಡ ವಿಧಿಸಿದ್ದಾರೆ.

ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟ ಸ್ಕೂಟರ್‌ ಮಾಲೀಕನಿಗೆ ಬಿತ್ತು ದುಬಾರಿ ದಂಡ

ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಬಂಧಿತವಾಗಿರುವ ನಿವೃತ್ತ ಐಪಿಎಸ್ ಅಧಿಕಾರಿಯ ನಿವಾಸದ ಕಡೆಗೆ ಹೋಗುತ್ತಿದ್ದ ಪ್ರಿಯಾಂಕಾ ಗಾಂಧಿಯವರನ್ನು ಉತ್ತರ ಪ್ರದೇಶದ ಪೊಲೀಸರು ತಡೆದರು. ಪ್ರಿಯಂಕಾ ಗಾಂಧಿಯವರ ವಾಹನ ಹಾಗೂ ಬೆಂಗಾವಲು ಪಡೆಯ ವಾಹನಗಳನ್ನು ಪೊಲೀಸರು ತಡೆದರು ಬಳಿಕ ಪ್ರಿಯಾಂಕ ಗಾಂಧಿಯವರು ಪಕ್ಷದ ಕಾರ್ಯಕರ್ತನ ಸ್ಕೂಟರ್‍‍ನಲ್ಲಿ ನಿವೃತ್ತ ಐಪಿ‍ಎಸ್ ಅಧಿಕಾರಿ ಎಸ್.ಆರ್.ದರಾಪುರಿಯವರ ಮನೆಗೆ ತೆರಳಿದರು.

ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟ ಸ್ಕೂಟರ್‌ ಮಾಲೀಕನಿಗೆ ಬಿತ್ತು ದುಬಾರಿ ದಂಡ

ಪ್ರಿಯಾಂಕಾ ಗಾಂಧಿಯವರು ಕಾರ್ಯಕರ್ತನ ಸ್ಕೂಟರ್‍‍ನಲ್ಲಿ ತೆರಳುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸ್ಕೂಟರ್‍‍ನಲ್ಲಿ ತೆರಳುವಾಗ ಪ್ರಿಯಾಂಕ ಗಾಂಧಿಯವರು ಹೆಲ್ಮೆಟ್ ಧರಿಸದೇ ಇರುವ ಕಾರಣ ಉತ್ತರ ಪ್ರದೇಶದ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.

ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟ ಸ್ಕೂಟರ್‌ ಮಾಲೀಕನಿಗೆ ಬಿತ್ತು ದುಬಾರಿ ದಂಡ

ಸ್ಕೂಟರ್ ಅನ್ನು ಚಲಾಯಿಸಿದ ಕಾಂಗ್ರೆಸ್ ಕಾರ್ಯಕರ್ತನಿಗೆ ರೂ.6,100 ದಂಡ ವಿಧಿಸಿದ್ದಾರೆ. ಸ್ಕೂಟರ್ ಚಲಾಯಿಸಿದವರನ್ನು ಧೀರಜ್ ಗುರ್ಜರ್ ಎಂದು ಗುರುತಿಸಿಲಾಗಿದೆ. ದಂಡದ ಚಾಲನ್ ಅನ್ನು ಕಳುಹಿಸಿ ಚಾಲಕನಿಗೆ 15 ದಿನಗಳ ಒಳಗಡೆ ಪಾವತಿಸಲು ಕಾಲಾವಕಾಶವನ್ನು ನೀಡಿದ್ದಾರೆ.

ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟ ಸ್ಕೂಟರ್‌ ಮಾಲೀಕನಿಗೆ ಬಿತ್ತು ದುಬಾರಿ ದಂಡ

ಸ್ಥಳದಲ್ಲೇ ಪರವಾನಗಿ ಮತ್ತು ಇತರ ದಾಖಲೆಗಳನ್ನು ಪರಿಶೀಲಸಲು ರೈಡರ್ ಧೀರಜ್ ಅವರನ್ನು ಪೊಲೀಸರು ತಡೆದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಪ್ರಿಯಾಂಕ ಗಾಂಧಿ ಅವರು ಐಪಿಎಸ್ ಅಧಿಕಾರಿಯ ನಿವಾಸವನ್ನು ತೆರಳುದನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಮಹಿಳಾ ಪೊಲೀಸರು ತಮ್ಮ ಕುತ್ತಿಗೆ ಹಿಸುಕಿ ನೂಕಿದ್ದರು ಎಂದು ಪ್ರಿಯಾಂಕ ಗಾಂಧಿಯವರು ಗಂಭೀರ ಆರೋಪ ಮಾಡಿದ್ದಾರೆ.

ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟ ಸ್ಕೂಟರ್‌ ಮಾಲೀಕನಿಗೆ ಬಿತ್ತು ದುಬಾರಿ ದಂಡ

ಕೆಲವು ತಿಂಗಳ ಹಿಂದೆ ಭಾರತದಾದ್ಯಂತ ಜಾರಿಗೆ ತರಲಾದ ಹೊಸ ಮೋಟಾರು ವಾಹನ ಕಾಯ್ದೆ ಅನುಗುಣವಾಗಿ ಸ್ಕೂಟರ್ ಸವಾರನಿಗೆ ದಂಡವನ್ನು ವಿಧಿಸಲಾಗಿದೆ ಎಂಬ ವರದಿಗಳು ಪ್ರಕಟವಾಗಿದೆ. ಗುಜರಾತ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮೋಟಾರು ವಾಹನ ಕಾಯ್ದೆ ಜಾರಿಯಾದ ನಂತರ ದಾಖಲೆಯ ಪ್ರಮಾಣದಲ್ಲಿ ದಂಡವನ್ನು ವಿಧಿಸಿದ್ದರು.

ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟ ಸ್ಕೂಟರ್‌ ಮಾಲೀಕನಿಗೆ ಬಿತ್ತು ದುಬಾರಿ ದಂಡ

ಇದರಿಂದಾಗಿ ದೇಶದ್ಯಾಂತ ಹೊಸ ಮೋಟಾರು ಕಾಯ್ದೆಯ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಹೊಸ ಮೋಟಾರು ಕಾಯ್ದೆ ಜಾರಿಯಾದ ಬಳಿಕ ಸಂಚಾರಿ ನಿಯಮ ಉಲ್ಲಂಘಣೆ ಇಳಿಕೆಯಾಗಿದೆ ಎಂದು ವರದಿಗಳು ತಿಳಿಸಿದೆ. ಅಲ್ಲದೇ ಅಪಘಾತ ಸಂಭವಿಸುತ್ತಿರುವ ಸಂಖ್ಖೆಯು ಇಳಿಕೆಯಾಗಿತ್ತು.

ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟ ಸ್ಕೂಟರ್‌ ಮಾಲೀಕನಿಗೆ ಬಿತ್ತು ದುಬಾರಿ ದಂಡ

ವಿಶ್ವದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುವ ಸ್ಥಳಗಳಲ್ಲಿ ಭಾರತವು ಒಂದಾಗಿದೆ. ಭಾರತದ ರಸ್ತೆಗಳಲ್ಲಿ ಪ್ರತಿವರ್ಷವು ಅಪಘಾತದಲ್ಲಿ ಸಾವಿರಾರು ಜನರ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಂತಹ ಭೀಕರ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಹೊಸ ಮೋಟಾರು ಕಾಯ್ದೆಯನ್ನು ಜಾರಿಗೊಳಿಸಿದ್ದರು.

ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟ ಸ್ಕೂಟರ್‌ ಮಾಲೀಕನಿಗೆ ಬಿತ್ತು ದುಬಾರಿ ದಂಡ

ಆದರೆ ತೀವ್ರ ಅಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಕೆಲವು ರಾಜ್ಯಗಳನ್ನು ಇದನ್ನು ಜಾರಿಗೊಳಿಸಿಲ್ಲ, ಇನ್ನೂ ಕೆಲವು ರಾಜ್ಯಗಳಲ್ಲಿ ತಿದ್ದುಪಡಿಗೊಳಿಸಿ ಜಾರಿಗೊಳಿಸಿದ್ದಾರೆ. ದಂಡದ ಪ್ರಮಾಣವು ಹೆಚ್ಚಾದರೂ ಸಂಚಾರಿ ನಿಯಮ ಉಲ್ಲಂಘನೆಯು ಕಡಿಮೆಯಾಗುತ್ತದೆ ಎಂಬುದನ್ನು ಅರಿಯಬೇಕು. ಹೊಸ ಮೋಟಾರು ಕಾಯ್ದೆಯನ್ನು ಉತ್ತರ ಪ್ರದೇಶವು ಜಾರಿಗೊಳಿಸಿದೆ.

ಇದರಿಂದಾಗಿ ಸ್ಕೂಟರ್ ಸವಾರನಿಗೆ ರೂ.6,100 ದಂಡವನ್ನು ವಿಧಿಸಿದ್ದಾರೆ. ಈ ಹಿಂದೆಯು ಇತರ ಪ್ರಕರಣಗಳು ನಡೆದಿದೆ. ಸೆಲೆಬ್ರಿಟಿಗಳು ಅಥವಾ ಪ್ರಭಾವಿ ವ್ಯಕ್ತಿಗಳು ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿ ಅವರ ಚಿತ್ರಗಳು ವೈರಲ್ ಆದಾಗ ಅವರಿಗೆ ಪೊಲೀಸರು ದಂಡ ವಿದಿಸಿದ ಉದಾಹರಣೆಗಳಿವೆ.

ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟ ಸ್ಕೂಟರ್‌ ಮಾಲೀಕನಿಗೆ ಬಿತ್ತು ದುಬಾರಿ ದಂಡ

ಕಾನೂನು ಎಲ್ಲರಿಗೂ ಒಂದೇ. ಬಡವರು, ಶ್ರೀಮಂತರು ಎನ್ನುವ ಬೇಧಭಾವ ಕಾನೂನಿನಲ್ಲಿಲ್ಲ ಅದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಅದು ಯಾವುದೇ ರಾಜಕೀಯ ಪಕ್ಷವಾಗಲಿ ಅಥವಾ ಆಡಳಿತ ಪಕ್ಷವಾದರೂ ಕನೂನು ಉಲ್ಲಂಘನೆ ಮಾಡಿದಾಗ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದೇ ನಮ್ಮ ಆಶಯ.

ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗಾಗಿ ಬೆಂಗಳೂರು ಪೊಲೀಸರಿಂದ ಹೊಸ ಐಡಿಯಾ..!

ಸಂಚಾರಿ ನಿಯಮ ಉಲ್ಲಂಘನೆ ತಡೆಗಾಗಿ ಬೆಂಗಳೂರು ಪೊಲೀಸರ ಹೊಸ ಐಡಿಯಾ..!

ದೇಶಾದ್ಯಂತ ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗಾಗಿ ದುಬಾರಿ ದಂಡಗಳನ್ನು ವಿಧಿಸುತ್ತಿದ್ದರೂ ಸಹ ಕೆಲವು ಕಡೆಗಳಲ್ಲಿ ವಾಹನ ಸವಾರರು ಮಾತ್ರ ನಿಯಮ ಉಲ್ಲಂಘನೆ ಮಾಡುವುದು ಮಾತ್ರ ಕಡಿಮೆಯಾಗುತ್ತಿಲ್ಲ.

ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗಾಗಿ ಬೆಂಗಳೂರು ಪೊಲೀಸರಿಂದ ಹೊಸ ಐಡಿಯಾ..!

ಇದಕ್ಕೆ ಪರಿಣಾಮಕಾರಿಯಾಗಿ ಕಡಿವಾಣ ಹಾಕುವ ಉದ್ದೇಶದಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಿದ್ದಾರೆ.

ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗಾಗಿ ಬೆಂಗಳೂರು ಪೊಲೀಸರಿಂದ ಹೊಸ ಐಡಿಯಾ..!

ಟ್ರಾಫಿಕ್ ಪೊಲೀಸರು ಇರುವ ಕಡೆಗಳಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸುವ ವಾಹನ ಸವಾರರು ಪೊಲೀಸರು ಇಲ್ಲದ ಕಡೆಗಳಲ್ಲಿ ಯಾವುದೇ ಭಯವಿಲ್ಲದೆ ಟ್ರಾಫಿಕ್ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುತ್ತಲೇ ಇರುತ್ತಾರೆ.

ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗಾಗಿ ಬೆಂಗಳೂರು ಪೊಲೀಸರಿಂದ ಹೊಸ ಐಡಿಯಾ..!

ಇದರಿಂದ ಮುಖ್ಯ ರಸ್ತೆಗಳಿಂತ ಸಣ್ಣಪುಟ್ಟ ರಸ್ತೆಗಳಲ್ಲೇ ಹೆಚ್ಚು ಅಪಘಾತಗಳು ನಡೆಯುತ್ತಿದ್ದು, ಇದನ್ನು ಪರಿಣಾಮಕಾರಿಯಾಗಿ ತಡೆಯುವ ಉದ್ದೇಶದಿಂದ ಯಾವುದೇ ಹೆಚ್ಚುವರಿ ಪೊಲೀಸರನ್ನು ನೇಮಕ ಮಾಡದೆಯೇ ವಾಹನ ಸವಾರರು ಕಟ್ಟುನಿಟ್ಟಾಗಿ ನಿಯಮಪಾಲನೆ ಮಾಡುವಂತೆ ಮಾಡಲಾಗುತ್ತಿದೆ.

ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗಾಗಿ ಬೆಂಗಳೂರು ಪೊಲೀಸರಿಂದ ಹೊಸ ಐಡಿಯಾ..!

ಹೌದು, ಬೆಂಗಳೂರು ಟ್ರಾಫಿಕ್ ಪೊಲೀಸರು ಸಿಗ್ನಲ್‌ಗಳಲ್ಲಿ 24 ಗಂಟೆಯೂ ಕಾರ್ಯನಿರ್ವಹಣೆ ಮಾಡುವ ಉದ್ದೇಶದಿಂದ ಮ್ಯಾನಿಕ್ವಿನ್ಸ್‌ಗಳ(ಪ್ರತಿಕೃತಿ) ಮೊರೆ ಹೋಗಿದ್ದು, ಒನ್ ವೇ ಗಳಲ್ಲಿ ನುಗ್ಗುವ ಮತ್ತು ಸಿಗ್ನಲ್ ಜಂಪ್ ಪ್ರಕರಣಗಳನ್ನು ಕಡಿಮೆಗೊಳಿಸಲು ಟ್ರಾಫಿಕ್ ಪೊಲೀಸರನ್ನೇ ಹೋಲುವ ಮ್ಯಾನಿ​ಕ್ವಿನ್ಸ್‌​ಗಳನ್ನು ಅಳವಡಿಸಲಾಗುತ್ತಿದೆ.

ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗಾಗಿ ಬೆಂಗಳೂರು ಪೊಲೀಸರಿಂದ ಹೊಸ ಐಡಿಯಾ..!

ಮ್ಯಾನಿ​ಕ್ವಿನ್ಸ್‌​ಗಳು ಟ್ರಾಫಿಕ್ ಪೊಲೀಸರಷ್ಟೆ ಎತ್ತರ, ಯೂನಿಫಾರಂ ಅನ್ನು ತೊಡಿಸಿರುವುದು ನಿಜವಾದ ಪೊಲೀಸರೇ ವಾಹನ ತಪಾಸಣೆಗೆ ನಿಂತಿರುವ ಹಾಗೆ ಭಾಸಲಾಗುತ್ತದೆ. ಇದರಿಂದ ಒನ್‌ವೇ ಗಳಲ್ಲಿ ನುಗ್ಗುವ ಮತ್ತು ಸಿಗ್ನಲ್ ಜಂಪ್ ಪ್ರಕರಣಗಳು ಪರಿಣಾಮಕಾರಿಯಾಗಿ ತಗ್ಗಿಸಬಹುದಾಗಿದೆ.

ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗಾಗಿ ಬೆಂಗಳೂರು ಪೊಲೀಸರಿಂದ ಹೊಸ ಐಡಿಯಾ..!

ಬೆಂಗಳೂರಿನ ಪ್ರಮುಖ ಠಾಣಾ ವ್ಯಾಪ್ತಿಗಳಲ್ಲಿ ಈಗಾಗಲೇ ಮ್ಯಾನಿಕ್ವಿನ್ಸ್‌ಗಳ ಅಳವಡಿಕೆ ಮಾಡಲಾಗಿದ್ದು, ಶೀಘ್ರದಲ್ಲೇ ಮತ್ತಷ್ಟು ಮ್ಯಾನಿಕ್ವಿನ್ಸ್‌ಗಳನ್ನು ಟ್ರಾಫಿಕ್ ಪೊಲೀಸರು ಕೊರತೆ ಇರುವ ಕಡೆಗಳಲ್ಲಿ ನಿಯೋಜಿಸಲು ಯೋಜನೆ ರೂಪಿಸಲಾಗಿದೆ.

ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗಾಗಿ ಬೆಂಗಳೂರು ಪೊಲೀಸರಿಂದ ಹೊಸ ಐಡಿಯಾ..!

ಇದರಿಂದ ಸಿಬ್ಬಂದಿ ಕೊರತೆಯಿದ್ದರೂ ಟ್ರಾಫಿಕ್ ನಿರ್ವಹಣೆ ಮತ್ತಷ್ಟು ಸುಲಭವಾಗಲಿದ್ದು, ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ಗಣನೀಯವಾಗಿ ತಗ್ಗಿಸಲು ಇದು ನೆರವಾಗಲಿದೆ.

ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗಾಗಿ ಬೆಂಗಳೂರು ಪೊಲೀಸರಿಂದ ಹೊಸ ಐಡಿಯಾ..!

ಇನ್ನು ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿರುವ ಭಾರೀ ಪ್ರಮಾಣದ ದಂಡದಿಂದ ಹೆದರಿರುವ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ರಸ್ತೆ ಅಪಘಾತಗಳ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.

ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗಾಗಿ ಬೆಂಗಳೂರು ಪೊಲೀಸರಿಂದ ಹೊಸ ಐಡಿಯಾ..!

ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿದಾಗ ಭಾರೀ ಪ್ರಮಾಣದ ಪ್ರತಿಭಟನೆಗಳು ನಡೆದಿದ್ದವು. ಆದರೆ ಇದೀಗ ರಸ್ತೆ ಅಪಘಾತಗಳ ಪ್ರಮಾಣವು ಕುಸಿದಿರುವುದು ಕೇಂದ್ರ ಸರ್ಕಾರ ಜಾರಿಗೆ ತಂದ ಕಠಿಣ ಕ್ರಮವು ಸರಿಯಾಗಿದೆ ಎಂದು ಹೇಳಲಾಗುತ್ತಿದೆ.

ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗಾಗಿ ಬೆಂಗಳೂರು ಪೊಲೀಸರಿಂದ ಹೊಸ ಐಡಿಯಾ..!

ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಮೋಟಾರ್ ಕಾಯ್ದೆ ಜಾರಿ ನಂತರ ಅಪಘಾತಗಳ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ವಿವಿಧ ರಾಜ್ಯಗಳಲ್ಲಿ ಶೇ.10ರಿಂದ ಶೇ.45ರಷ್ಟು ಅಪಘಾತ ಪ್ರಕರಣಗಳು ಕಡಿಮೆಯಾಗಿವೆ.

ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗಾಗಿ ಬೆಂಗಳೂರು ಪೊಲೀಸರಿಂದ ಹೊಸ ಐಡಿಯಾ..!

ಇದೀಗ ಬೆಂಗಳೂರು ಪೊಲೀಸರು ಸಂಚಾರಿ ನಿಯಮಗಳನ್ನು ವಾಹನ ಸವಾರರು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಮಾಡಲು ಮಹತ್ವದ ಯೋಜನೆಗೆ ಚಾಲನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಹೊಸ ಯೋಜನೆಯು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಲಿದೆ ಎನ್ನುವುದನ್ನು ಕಾಯ್ದನೋಡಬೇಕಿದೆ.

Most Read Articles

Kannada
English summary
Priyanka Gandhi & Congress worker ride scooter without helmet - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X