ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಯಾವುದೇ ಮನುಷ್ಯನಿಗೆ ಊಟ, ಬಟ್ಟೆ ಹಾಗೂ ಮನೆ ದಿನ ನಿತ್ಯದ ಅಗತ್ಯಗಳಾಗಿವೆ. ಈ ಮೂರು ಇಲ್ಲದ ಮನುಷ್ಯನ ಸ್ಥಿತಿ ನಾಯಿ ಪಾಡು. ಮನುಷ್ಯನ ಬಳಿಯಿರುವ ಕಾರ್, ಬೈಕ್, ಮೊಬೈಲ್, ಇಂಟರ್‍‍ನೆಟ್ ಇತ್ಯಾದಿಗಳು ತಾತ್ಕಾಲಿಕವಾದವುಗಳು.

ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಈ ತಾತ್ಕಾಲಿಕ ಅಗತ್ಯಗಳು ಇಲ್ಲದೇ ಇದ್ದರೂ ನಾವು ಬದುಕಬಹುದು. ಆದರೆ ಊಟ, ಬಟ್ಟೆ, ಮನೆಗಳಿಲ್ಲದ ಜೀವನ ಕಷ್ಟಕರ. ಈ ಕಾರಣಕ್ಕೆ ಆದಿ ಮಾನವರು ಊಟಕ್ಕಾಗಿ ಗೆಡ್ಡೆ ಗೆಣಸುಗಳನ್ನು, ಬಟ್ಟೆಗಳಿಗಾಗಿ ಸೊಪ್ಪುಗಳನ್ನು ಹಾಗೂ ಮನೆಗಳಿಗಾಗಿ ಗುಹೆಗಳನ್ನು ಬಳಸುತ್ತಿದ್ದರು.

ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಆಧುನಿಕ ಯುಗದಲ್ಲಿ ಗೆಡ್ಡೆ ಗೆಣಸುಗಳ ಬದಲಿಗೆ ಊಟಕ್ಕಾಗಿ ಪಿಜ್ಜಾ ಬರ್ಗರ್, ಬಟ್ಟೆಗಳಿಗಾಗಿ ಜೀನ್ಸ್, ಟಿ ಶರ್ಟ್‍‍ಗಳು ಬಂದಿದ್ದರೆ, ವಾಸಕ್ಕಾಗಿ ಬೃಹತ್ ಬಂಗಲೆಗಳು ತಲೆ ಎತ್ತಿವೆ. ಆಧುನಿಕತೆಗೆ ತಕ್ಕಂತೆ ಮನುಷ್ಯನ ಅಗತ್ಯ ಜೀವನಾಂಶಗಳು ಬದಲಾಗಿವೆ.

ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ತಮಿಳುನಾಡಿನ ಯುವಕನೊಬ್ಬ ಹೊಸ ಬಗೆಯ ಮನೆಯನ್ನು ನಿರ್ಮಿಸಿದ್ದಾನೆ. ವೆಲ್ಲೂರಿನ ನಿವಾಸಿ 23 ವರ್ಷದ ಪ್ರಭು ಎಂಬಾತನೇ ವಿನೂತನ ರೀತಿಯಲ್ಲಿ ಮನೆ ಕಟ್ಟಿರುವ ಯುವಕ. ಪ್ರಭು ಬೆಂಗಳೂರು ಮೂಲದ ಆರ್ಕಿಟೆಕ್ಟ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.

ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಬೇರೆ ದೇಶಗಳಲ್ಲಿ ವಾಹನಗಳನ್ನು ಬಳಸಿ ಮನೆ ಕಟ್ಟುವುದು ಸಾಮಾನ್ಯ ಸಂಗತಿಯಾಗಿದೆ. ಇವುಗಳ ಜೊತೆಗೆ ಮೋಟರ್ ಹೋಂ, ಕ್ಯಾಂಪರ್ ವ್ಯಾನ್ ಹಾಗೂ ಕ್ಯಾರವಾನ್‍‍ಗಳನ್ನು ಸಹ ಕಾಣಬಹುದು. ಪ್ರಭು ಸಹ ಈ ಹಾದಿಯನ್ನು ತುಳಿದಿದ್ದಾರೆ.

ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಬಜಾಜ್‍‍ನ ಆಟೋರಿಕ್ಷಾವನ್ನು ಬಳಸಿ ಐಷಾರಾಮಿ ಎನ್ನ ಬಹುದಾದ ಮನೆ ನಿರ್ಮಿಸಿದ್ದಾರೆ. ಮೋಟರ್ ಹೋಂಗಳು ಮನೆಯಿಲ್ಲದವರು ಮನೆಯಂತೆ ಬಳಸುವ ವಾಹನಗಳಾಗಿವೆ. ಕ್ಯಾಂಪರ್ ವ್ಯಾನ್‍‍ಗಳಲ್ಲಿ ಬಹುತೇಕ ಎಲ್ಲಾ ಸೌಲಭ್ಯಗಳಿರುತ್ತವೆ.

ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಇನ್ನು ಕ್ಯಾರವಾನ್‍‍ಗಳಲ್ಲಿ ಎಲ್ಲಾ ರೀತಿಯ ಐಷಾರಾಮಿ ಸೌಲಭ್ಯಗಳಿರುತ್ತವೆ. ಇವುಗಳನ್ನು ಹೆಚ್ಚಾಗಿ ಸಿನಿತಾರೆಯರು ಶೂಟಿಂಗ್‍‍ನ ಬಿಡುವಿನ ವೇಳೆಯನ್ನು ಕಳೆಯಲು ಬಳಸುತ್ತಾರೆ.

ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಇವುಗಳ ಆಧಾರದ ಮೇಲೆ ಪ್ರಭುರವರು ಬಜಾಜ್ ಕಂಪನಿಯ ಆಟೋವನ್ನು ಚಿಕ್ಕ ಐಷಾರಾಮಿ ಮನೆಯನ್ನಾಗಿ ಮಾಡಿದ್ದಾರೆ. ಪ್ರಭುರವರು ಐದು ತಿಂಗಳ ಅವಧಿಯಲ್ಲಿ ಆಟೋದಲ್ಲಿ ಮನೆ ನಿರ್ಮಿಸಿದ್ದಾರೆ. ಇದಕ್ಕಾಗಿ ರೂ. 1 ಲಕ್ಷ ಖರ್ಚು ಮಾಡಿದ್ದಾರೆ.

ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಕೊಂಡಿರುವ ಪ್ರಭುರವರು ಇದಕ್ಕಾಗಿ ಆಟೋದಲ್ಲಿ ಮನೆ ನಿರ್ಮಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ನಾಲ್ಕು ಚಕ್ರದ ವಾಹನಗಳಲ್ಲಿ ಈ ರೀತಿಯಾಗಿ ಮಾಡಬಹುದಾದರೂ ಇದೇ ಮೊದಲ ಬಾರಿಗೆ ತ್ರಿ ಚಕ್ರ ವಾಹನವೊಂದರಲ್ಲಿ ಈ ರೀತಿಯ ಸಾಹಸಕ್ಕೆ ಕೈ ಹಾಕಿದ್ದಾರೆ.

ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ತ್ರಿ ಚಕ್ರ ವಾಹನಗಳನ್ನು ಈ ರೀತಿಯಾಗಿ ಬದಲಿಸುವುದು ಸುಲಭದ ಕೆಲಸವಲ್ಲ. ಮನೆ ನಿರ್ಮಿಸುವಾಗ ಪ್ರಭುರವರು ಹಲವಾರು ಕಷ್ಟಕರ ಸನ್ನಿವೇಶಗಳನ್ನು ಎದುರಿಸಿದ್ದಾರೆ. ಆಟೋವನ್ನು ಬ್ಯಾಲೆನ್ಸ್ ಮಾಡುವುದಕ್ಕಾಗಿ ಹೆಚ್ಚುವರಿ ಬಿಡಿಭಾಗಗಳನ್ನು ಅಳವಡಿಸಿದ್ದಾರೆ.

ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಪ್ರಭುರವರು ಈ ಆಟೋದಲ್ಲಿದ್ದ ಬಹುತೇಕ ಭಾಗಗಳನ್ನು ಬದಲಿಸಿ ಲಿಮೊಸಿನ್ ಕಾರುಗಳಲ್ಲಿರುವಂತಹ ಬಿಡಿ ಭಾಗಗಳನ್ನು ಅಳವಡಿಸಿದ್ದಾರೆ. ಇದರಿಂದಾಗಿ ವ್ಯಕ್ತಿಯೊಬ್ಬ ಈ ಆಟೋದಲ್ಲಿರುವ ಮನೆಯಲ್ಲಿ ಆರಾಮವಾಗಿ ಕುಳಿತುಕೊಳ್ಳುವಂತೆ ಮಾಡಿದ್ದಾರೆ.

ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಆಟೋದಲ್ಲಿ ತಯಾರಾಗಿರುವ ಈ ಮನೆಯಲ್ಲಿ ಬೆಡ್‍‍ರೂಂ, ಬಾಥ್‍‍ರೂಂ, ಕಿಚನ್, ವಾಟರ್ ಹೀಟರ್ ಹಾಗೂ ಟಾಯ್ಲೆಟ್‍‍ಗಳಿವೆ. ಟಾಯ್ಲೆಟ್ ಅನ್ನು ಬೆಡ್‍‍ರೂಂನಡಿಯಲ್ಲಿ ನೀಡಲಾಗಿದೆ. ಲಿವಿಂಗ್ ರೂಂನಂತೆ ಒಂದೇ ಸ್ಥಳದಲ್ಲಿ ಇವೆರಡನ್ನೂ ಅಳವಡಿಸಲಾಗಿದೆ.

ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಈ ಮನೆಯಲ್ಲಿ 250 ಲೀಟರಿನ ವಾಟರ್ ಟ್ಯಾಂಕ್ ಹಾಗೂ 600 ವ್ಯಾ ಸೋಲಾರ್ ಪ್ಯಾನೆಲ್‍‍ಗಳಿವೆ. ಈ ಸೋಲಾರ್ ಪ್ಯಾನೆಲ್ ಕ್ಯಾಬಿನ್‍‍ನೊಳಗಿರುವ ಬ್ಯಾಟರಿಯನ್ನು ಚಾರ್ಜ್ ಮಾಡಿ, ವಿದ್ಯುತ್ ನೀಡುತ್ತದೆ.

ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಸನ್‍‍ಬಾತ್‍‍ಗಾಗಿ ಅಂಬ್ರೆಲ್ಲಾ ಸೀಟ್‍‍ಗಳನ್ನು ಅಳವಡಿಸಲಾಗಿದೆ. ಮನೆಯೊಳಗಿಂದ ಪ್ರಕೃತಿ ಸೌಂದರ್ಯವನ್ನು ನೋಡಬಹುದಾಗಿದೆ. ಬಟ್ಟೆ ನೇತು ಹಾಕಲು ಹ್ಯಾಂಗರ್‍‍ಗಳಿವೆ. ಇದರ ಜೊತೆಗೆ ಶೆಲ್ಪ್, ವಾಶರ್ ಡ್ರೈಗಳಿವೆ. ಮೇಲೆ ಹತ್ತಿ ಹೋಗುವುದಕ್ಕಾಗಿ ಏಣಿಯನ್ನು ನೀಡಲಾಗಿದೆ.

ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಅಡುಗೆ ಮಾಡಲು ಈ ಆಟೋದೊಳಗೆ ನ್ಯಾಚುರಲ್ ಗ್ಯಾಸ್ ಸ್ಟವ್ ಅಳವಡಿಸಲಾಗಿದೆ. ಯಾವುದೇ ಐಷಾರಾಮಿ ಹೋಟೆಲ್‍‍ಗಳಿಗೆ ಕಡಿಮೆಯಿಲ್ಲದಂತೆ ಈ ಆಟೋದಲ್ಲಿ ಮನೆಯನ್ನು ನಿರ್ಮಿಸಲಾಗಿದೆ. ಪ್ರಭುರವರ ಪ್ರಕಾರ ಈ ಆಟೋ ಹೆಚ್ಚು ದೂರ ಪ್ರಯಾಣಿಸುವ ಉದ್ಯಮಿಗಳಿಗೆ ಹಾಗೂ ಸಂಶೋಧನೆಗಳಿಗಾಗಿ ಅರಣ್ಯಕ್ಕೆ ತೆರಳುವವರಿಗೆ ಹೆಚ್ಚು ಅನುಕೂಲವಾಗಲಿದೆ.

Most Read Articles

Kannada
English summary
Youth converts auto into a luxury house - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X