ಲಾಕ್‌ಡೌನ್ ಸಂಕಷ್ಟದ ನಡುವೆಯೂ ಸಹಭಾಗಿತ್ವ ಯೋಜನೆ ಜಾರಿಗೆ ಮುಂದಾದ ಫೋರ್ಡ್-ಮಹೀಂದ್ರಾ

ಲಾಕ್‌ಡೌನ್‌ನಿಂದಾಗಿ ಆಟೋ ಉದ್ಯಮ ಭಾರೀ ನಷ್ಟ ಅನುಭವಿಸುತ್ತಿದ್ದು, ಹೊಸ ವಾಹನ ಮಾರಾಟವನ್ನು ತೀವ್ರವಾಗಿ ಕುಸಿತಕಂಡಿದೆ. ಅದಾಗ್ಯೂ ಲಾಕ್‌ಡೌನ್ ಸಡಿಲಿಕೆ ನಂತರದಲ್ಲಿ ವಾಹನ ಮಾರಾಟವು ತುಸು ಚೇತರಿಕೆ ಕಾಣುತ್ತಿದ್ದು, ಭಾರತದಲ್ಲಿ ಸಹಭಾಗಿತ್ವದ ಯೋಜನೆ ಜಾರಿ ಸಿದ್ದತೆಯಲ್ಲಿರುವ ಫೋರ್ಡ್ ಮತ್ತು ಮಹೀಂದ್ರಾ ಕಂಪನಿಗಳು ಸಂಕಷ್ಟದ ನಡುವೆಯೂ ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದತೆ ನಡೆಸಿವೆ.

ಲಾಕ್‌ಡೌನ್ ಸಂಕಷ್ಟದ ನಡುವೆಯೂ ಸಹಭಾಗಿತ್ವ ಯೋಜನೆ ಜಾರಿಗೆ ಮುಂದಾದ ಫೋರ್ಡ್-ಮಹೀಂದ್ರಾ

ಕರೋನಾ ವೈರಸ್ ಪರಿಣಾಮ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಫೋರ್ಡ್ ಮತ್ತು ಮಹೀಂದ್ರಾ ಕಂಪನಿಗಳ ಸಹಭಾಗಿತ್ವ ಯೋಜನೆಯು ಜಾರಿಗೆ ಬರುವುದೇ ಅನುಮಾನ ಎನ್ನುವ ವರದಿಗಳನ್ನು ತಳ್ಳಿಹಾಕಿರುವ ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಹೊಸ ಯೋಜನೆಗೆ ಗ್ರೀನ್ ಸಿಗ್ನಲ್ ಸಿಗಲಿದೆ ಎನ್ನುವ ಪ್ರಕ್ರಿಯೆ ನೀಡಿದೆ. ಹೊಸ ಯೋಜನೆ ಅಡಿ ಕಾರು ಉತ್ಪಾದನೆಯಲ್ಲಿ ಭಾರೀ ಬದಲಾವಣೆ ತರಲಿರುವ ಫೋರ್ಡ್ ಮತ್ತು ಮಹೀಂದ್ರಾ ಕಂಪನಿಗಳು ಹೊಸ ಯೋಜನೆಗಾಗಿ ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾಗಿವೆ.

ಲಾಕ್‌ಡೌನ್ ಸಂಕಷ್ಟದ ನಡುವೆಯೂ ಸಹಭಾಗಿತ್ವ ಯೋಜನೆ ಜಾರಿಗೆ ಮುಂದಾದ ಫೋರ್ಡ್-ಮಹೀಂದ್ರಾ

ಮಹೀಂದ್ರಾ ಕಂಪನಿಯು ಶೇ.51ರಷ್ಟು ಮತ್ತು ಫೋರ್ಡ್ ಕಂಪನಿಯು ಶೇ.49ರಷ್ಟು ಹೂಡಿಕೆಯೊಂದಿಗೆ ಸಹಭಾಗಿತ್ವ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಹೊಸ ಯೋಜನೆಗಾಗಿ ಬರೋಬ್ಬರಿ ರೂ. 4,300 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿವೆ.

ಲಾಕ್‌ಡೌನ್ ಸಂಕಷ್ಟದ ನಡುವೆಯೂ ಸಹಭಾಗಿತ್ವ ಯೋಜನೆ ಜಾರಿಗೆ ಮುಂದಾದ ಫೋರ್ಡ್-ಮಹೀಂದ್ರಾ

ಹೊಸ ಯೋಜನೆ ಅಡಿ ಸಾಮಾನ್ಯ ಕಾರು ಮಾದರಿಗಳಲ್ಲದೆ ಎಲೆಕ್ಟ್ರಿಕ್ ಕಾರು ಮಾದರಿಗಳು ಸಹ ಸೇರಿದ್ದು, ಸಹಭಾಗಿತ್ವ ಯೋಜನೆ ಅಡಿ ನಿರ್ಮಾಣವಾದ ಮೊದಲ ಕಾರು 2021ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ರಸ್ತೆಗಿಳಿಯಲಿದೆ.

ಲಾಕ್‌ಡೌನ್ ಸಂಕಷ್ಟದ ನಡುವೆಯೂ ಸಹಭಾಗಿತ್ವ ಯೋಜನೆ ಜಾರಿಗೆ ಮುಂದಾದ ಫೋರ್ಡ್-ಮಹೀಂದ್ರಾ

ಹೊಸ ಸಹಭಾಗಿತ್ವ ಯೋಜನೆಯಿಂದ ಎರಡು ಕಂಪನಿಗಳಿಗೂ ಸಾಕಷ್ಟು ಲಾಭವಿದ್ದು, ಕಾರು ಉತ್ಪಾದನೆಗೆ ವಿಫುಲ ಅವಕಾಶ ದೊರೆಯುವುದಲ್ಲದೆ ಫೋರ್ಡ್ ಕಾರುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಮೂಲಕ ಮಹೀಂದ್ರಾ ಕೂಡಾ ಉತ್ತಮ ಆದಾಯ ಕಂಡುಕೊಳ್ಳಲಿದೆ.

ಲಾಕ್‌ಡೌನ್ ಸಂಕಷ್ಟದ ನಡುವೆಯೂ ಸಹಭಾಗಿತ್ವ ಯೋಜನೆ ಜಾರಿಗೆ ಮುಂದಾದ ಫೋರ್ಡ್-ಮಹೀಂದ್ರಾ

ಜೊತೆಗೆ ಗುಜರಾತ್‌ನಲ್ಲಿರುವ ಫೋರ್ಡ್ ಕಾರು ಉತ್ಪಾದನಾ ಘಟಕದಲ್ಲಿ ಮಹೀಂದ್ರಾ ಕಾರುಗಳ ಉತ್ಪಾದನೆಗೂ ಅವಕಾಶ ಸಿಗುವುದರಿಂದ ಉತ್ತರ ಭಾರತದ ಪ್ರಮುಖ ನಗರಗಳಲ್ಲಿನ ಕಾರು ಬೇಡಿಕೆಯನ್ನು ಸರಿಯಾದ ಸಮಯಕ್ಕೆ ಪೂರೈಕೆ ಮಾಡಲು ಸಹಕಾರಿಯಾಗಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಲಾಕ್‌ಡೌನ್ ಸಂಕಷ್ಟದ ನಡುವೆಯೂ ಸಹಭಾಗಿತ್ವ ಯೋಜನೆ ಜಾರಿಗೆ ಮುಂದಾದ ಫೋರ್ಡ್-ಮಹೀಂದ್ರಾ

ಇದರೊಂದಿಗೆ ಹೊಸ ಕಾರುಗಳ ಉತ್ಪಾದನೆಯ ವೆಚ್ಚ ಇಳಿಕೆಗಾಗಿ ಬಜೆಟ್ ಬೆಲೆಯ ಬಿಡಿಭಾಗಗಳನ್ನು ಒದಗಿಸಲಿರುವ ಮಹೀಂದ್ರಾ ಕಂಪನಿಯು ಕಾರು ಮಾರಾಟದಲ್ಲಿ ಮತ್ತೊಂದು ಹಂತದ ಬೆಳವಣಿಗೆ ಕಾರಣವಾಗಲಿದ್ದು, ಸಹಭಾಗಿತ್ವದ ಯೋಜನೆ ಅಡಿ ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಲಾಕ್‌ಡೌನ್ ಸಂಕಷ್ಟದ ನಡುವೆಯೂ ಸಹಭಾಗಿತ್ವ ಯೋಜನೆ ಜಾರಿಗೆ ಮುಂದಾದ ಫೋರ್ಡ್-ಮಹೀಂದ್ರಾ

ಪ್ರಸ್ತುತ ಮಾರುಕಟ್ಟೆಯಲ್ಲಿ ರೂ.15 ಲಕ್ಷದಿಂದ ರೂ.19 ಲಕ್ಷ ಬೆಲೆ ಅಂತರದಲ್ಲಿ ಬಲಿಷ್ಠವಾದ ಸಿ-ಸೆಗ್ಮೆಂಟ್ ಎಸ್‌ಯುವಿ ಹೆಚ್ಚಿನ ಬೇಡಿಕೆಯಿದ್ದು, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್ ಮತ್ತು ಜೀಪ್ ಕಂಪಾಸ್ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಂಡಿರುವುದು ಫೋರ್ಡ್-ಮಹೀಂದ್ರಾ ಸಹಭಾಗಿತ್ವದ ಹೊಸ ಕಾರುಗಳಿಗೆ ಪ್ರಮುಖ ಪ್ರೇರಣೆಯಾಗಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಲಾಕ್‌ಡೌನ್ ಸಂಕಷ್ಟದ ನಡುವೆಯೂ ಸಹಭಾಗಿತ್ವ ಯೋಜನೆ ಜಾರಿಗೆ ಮುಂದಾದ ಫೋರ್ಡ್-ಮಹೀಂದ್ರಾ

ಹಾಗೆಯೇ ಬಿ-ಸೆಗ್ಮೆಂಟ್‌ನಲ್ಲಿ ಬಿಡುಗಡೆಯಾಗಲಿರುವ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ರೂ. 12 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದ್ದು, ಸಹಭಾಗಿತ್ವದ ಆಧಾರದ ಮೇಲೆ ಹೊಸ ಕಾರುಗಳ ನಿರ್ಮಾಣ, ಎಂಜಿನ್ ಅಭಿವೃದ್ದಿಗಾಗಿ ಪರಸ್ಪರ ಸಹಕರಿಸುವ ಮೂಲಕ ಎಸ್‌ಯುವಿ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ.

Article Published On: Friday, July 17, 2020, 21:18 [IST]
English summary
Manindra and Ford Joint Venture Company Progress Is On Track Amidst COVID-19.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+