ಕರೋನಾ ವೈರಸ್ ಬಗ್ಗೆ ನಿಖರ ಮಾಹಿತಿ ನೀಡಲಿವೆ ಈ ಟೂಲ್‌ಗಳು
ಮ್ಯಾಪ್ ಮೈ ಇಂಡಿಯಾ ಕೋವಿಡ್ -19 ಟೂಲ್‌ಗಳನ್ನು ಬಿಡುಗಡೆಗೊಳಿಸಿದೆ. ಈ ಟೂಲ್‌ಗಳು ಲಾಕ್‌ಡೌನ್ 3.0ರ ನಂತರ ವ್ಯವಹಾರವನ್ನು ಪುನರಾರಂಭಿಸಲು ನೆರವಾಗುತ್ತವೆ. ಇದರ ಜೊತೆಗೆ ದೇಶದ ಕರೋನಾ ವೈರಸ್ ಸೋಂಕಿತ ಪ್ರದೇಶಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತವೆ.

ಕಂಪನಿಯ ಹೊಸ ಟೂಲ್‌ಗಳಲ್ಲಿ ಮ್ಯಾಪ್ ಎಪಿಐಎಸ್, ಸ್ಥಳ ಆಧಾರಿತ ವಿಶ್ಲೇಷಣೆ ಹಾಗೂ ಜಿಐಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ), ನ್ಯಾವಿಗೆಷನ್, ರೂಟ್ ಪ್ಲಾನಿಂಗ್, ಲೋಕೆಷನ್ ಟ್ರ್ಯಾಕಿಂಗ್, ಫ್ಲೀಟ್, ಫೀಲ್ಡ್ ವರ್ಕ್‌ಫೋರ್ಸ್ ಮ್ಯಾನೇಜ್‌ಮೆಂಟ್‌ಗಳನ್ನು ಸೇರಿಸಲಾಗಿದೆ.

ಈ ಟೂಲ್‌ಗಳ ಸಹಾಯದಿಂದ, ಜನರು ಕರೋನಾ ವೈರಸ್ ಪ್ರಕರಣಗಳು ಹೆಚ್ಚಾಗಿರುವ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಬಹುದು. ಈ ಆ್ಯಪ್ ನೈಜ-ಸಮಯದ ಸ್ಥಳವನ್ನು ಆಧರಿಸಿ ಎಚ್ಚರಿಕೆಯನ್ನು ಸಹ ನೀಡುತ್ತದೆ. ಈ ಮಾಹಿತಿಯನ್ನು ಮ್ಯಾಪ್ ಮೈ ಇಂಡಿಯಾದ ಸಿಇಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ರೋಹನ್ ವರ್ಮಾರವರು ನೀಡಿದ್ದಾರೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಈ ಟೂಲ್‌ಗಳ ಬಗ್ಗೆ ವಿವರಿಸಿದ ಅವರು ಮ್ಯಾಪ್‌ಮೈ ಇಂಡಿಯಾ ಕೋವಿಡ್ -19 ಟೂಲ್ ಹಾಗೂ ಎಪಿಐ ಸೂಟ್‌ನಲ್ಲಿರುವ ಪ್ಯಾನ್ ಇಂಡಿಯಾ ಮಾರ್ಗ ಹಾಗೂ ಸ್ಥಳ ಸುರಕ್ಷತಾ ಮೌಲ್ಯಮಾಪನವು ಹೈಪರ್‌ಲೋಕಲ್ ಮಟ್ಟದಲ್ಲಿ ಕರೋನಾ ಹುಟ್ಟು ಹಾಕಿರುವ ಬೆದರಿಕೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಸಂಸ್ಥೆಗಳು ಹಾಗೂ ಬಳಕೆದಾರರು ತಮ್ಮ ಎಲ್ಲಾ ವ್ಯವಹಾರ ಮಾಹಿತಿ, ಉದ್ಯೋಗ ಸ್ಥಳಗಳು, ಕಚೇರಿ ಶಾಖೆಗಳು, ಮಳಿಗೆಗಳು, ವಿತರಣೆ ಹಾಗೂ ವಿತರಣಾ ಮಾರ್ಗಗಳಂತಹ ಚಟುವಟಿಕೆಗಳನ್ನು ಈ ಮ್ಯಾಪ್‌ನಲ್ಲಿ ಸುಲಭವಾಗಿ ನೋಡಬಹುದೆಂದು ಅವರು ಹೇಳಿದರು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಇದಲ್ಲದೆ, ಮ್ಯಾಪ್‌ಮೈ ಇಂಡಿಯಾದ ಮೂವ್ ಆ್ಯಪ್ ಮೂಲಕ ದೇಶದ ಯಾವುದೇ ಭಾಗದಿಂದಲಾದರೂ ಹತ್ತಿರದಲ್ಲಿರುವ ಕರೋನಾ ವೈರಸ್ ಪರೀಕ್ಷಾ ಕೇಂದ್ರ, ಐಸೊಲೇಷನ್ ಕೇಂದ್ರ ಹಾಗೂ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಬಹುದು. ಈ ಅಪ್ಲಿಕೇಶನ್ ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ಗೆ ಲಿಂಕ್ ಮಾಡಲಾಗಿದೆ.

ಈ ಆ್ಯಪ್ ಸಹಾಯದಿಂದ, ಇಡೀ ದೇಶದಲ್ಲಿರುವ ಕರೋನಾ ವೈರಸ್ ಸೋಂಕಿತರ ಸಂಖ್ಯೆಯನ್ನು ತಿಳಿದುಕೊಳ್ಳಬಹುದು. ಇದರೊಂದಿಗೆ ದೇಶದಲ್ಲಿರುವ ಸಕ್ರಿಯ ಪ್ರಕರಣಗಳ ಬಗ್ಗೆ, ಗುಣಮುಖರಾದವರ ಬಗ್ಗೆ, ಸತ್ತ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.


Click it and Unblock the Notifications