ಎರ್ಟಿಗಾ ಕಾರಿಗಿಂತಲೂ ಉನ್ನತ ಶ್ರೇಣಿಯ ಮತ್ತೊಂದು ಎಂಪಿವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಅಗ್ಗದ ಬೆಲೆಯ ವಾಹನ ಮಾದರಿಗಳ ಮೂಲಕ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸಿರುವ ಮಾರುತಿ ಸುಜುಕಿಯು ಇತ್ತೀಚೆಗೆ ಕಾರು ಉತ್ಪಾದನೆಯಲ್ಲಿ ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಕಾರುಗಳ ಗುಣಮಟ್ಟ, ಸುರಕ್ಷತೆ ಮತ್ತು ಪ್ರೀಮಿಯಂ ಸೌಲಭ್ಯಗಳತ್ತ ಹೆಚ್ಚು ಗಮನಹರಿಸುತ್ತಿದೆ.

ಮತ್ತೊಂದು ಎಂಪಿವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಗ್ರಾಹಕರ ಬೇಡಿಕೆ ಅನುಸಾರವಾಗಿ ಈಗಾಗಲೇ ಹೊಸ ಕಾರು ಮಾದರಿಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಪರಿಚಯಿಸುತ್ತಿರುವ ಮಾರುತಿ ಸುಜುಕಿಯು ಶೀಘ್ರದಲ್ಲೇ ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಎರ್ಟಿಗಾ ಮಲ್ಟಿ ಪ್ಯಾಸೆಂಜರ್ ಕಾರು ಮಾದರಿಗಿಂತಲೂ ಉನ್ನತ ಶ್ರೇಣಿಯ ಎಂಪಿವಿ ಕಾರು ಮಾದರಿಯನ್ನು ಅಭಿವೃದ್ದಿ ಪಡಿಸುತ್ತಿರುವ ಬಗ್ಗೆ ಸುಳಿವು ನೀಡಿದೆ.

ಮತ್ತೊಂದು ಎಂಪಿವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಮಾರುತಿ ಬಿಡುಗಡೆ ಮಾಡಲಿರುವ ಹೊಸ ಎಂಪಿವಿ ಕಾರು ಎರ್ಟಿಗಾ ಕಾರಿಗಿಂತಲೂ ಉನ್ನತ ಶ್ರೇಣಿಯಲ್ಲಿ ಮತ್ತು ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗಿಂತಲೂ ಕೆಳೆ ದರ್ಜೆಯ ಎಂಪಿವಿ ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಎರ್ಟಿಗಾ ಮತ್ತು ಇನೋವಾ ಕ್ರಿಸ್ಟಾ ನಡುವಿನ ಬೆಲೆ ಅಂತರವನ್ನು ತುಂಬಲು ಹೊಸ ಕಾರು ಮಾದರಿಗಾಗಿ ಸಿದ್ದವಾಗಿದೆ.

ಮತ್ತೊಂದು ಎಂಪಿವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಸದ್ಯ ಮಾರುಕಟ್ಟೆಯಲ್ಲಿ ಎರ್ಟಿಗಾ ಕಾರು ಆನ್‌ರೋಡ್ ಬೆಲೆಗಳ ಪ್ರಕಾರ ರೂ. 9.16 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.88 ಲಕ್ಷ ಬೆಲೆ ಹೊಂದಿದ್ದು, ಇನೋವಾ ಕ್ರಿಸ್ಟಾ ಕಾರು ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ. 19.44 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 30.48 ಲಕ್ಷ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದೆ.

ಮತ್ತೊಂದು ಎಂಪಿವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಹೀಗಾಗಿ ಎರಡು ಎಂಪಿವಿ ಕಾರುಗಳ ನಡುವಿನ ಬೆಲೆ ಅಂತರದಲ್ಲಿ ಹೊಸ ವಿನ್ಯಾಸವುಳ್ಳ ಎಂಪಿವಿ ಕಾರು ಬಿಡುಗಡೆಗಾಗಿ ಸಿದ್ದವಾಗಿರುವ ಮಾರುತಿ ಸುಜುಕಿಯು ಹೊಸ ಯೋಜನೆಗೆ ಚಾಲನೆ ನೀಡುತ್ತಿದ್ದು, ಹೊಸ ಕಾರನ್ನು ಟೊಯೊಟಾ ಕಂಪನಿಯ ಜೊತೆಯಲ್ಲೇ ನಿರ್ಮಾಣ ಮಾಡುವ ಸಾಧ್ಯತೆಗಳಿವೆ.

ಮತ್ತೊಂದು ಎಂಪಿವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಮಾರುತಿ ಸುಜುಕಿ ಮತ್ತು ಟೊಯೊಟಾ ಕಂಪನಿಗಳು ಈಗಾಗಲೇ ಭಾರತದಲ್ಲಿ ಸಹಭಾಗಿತ್ವ ಯೋಜನೆಯೊಂದಿಗೆ ರೀಬ್ಯಾಡ್ಜ್ ಕಾರುಗಳ ಮಾರಾಟಕ್ಕೆ ಚಾಲನೆ ನೀಡಿದ್ದು, ಗ್ಲಾಂಝಾ ನಂತರ ಇದೀಗ ಅರ್ಬನ್ ಕ್ರೂಸರ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡುತ್ತಿವೆ.

ಮತ್ತೊಂದು ಎಂಪಿವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಸದ್ಯ ಮಾರುತಿ ಸುಜುಕಿ ನಿರ್ಮಾಣದ ಕಾರಗಳನ್ನೇ ರೀಬ್ಯಾಡ್ಜ್ ಮಾದರಿಯಾಗಿ ಮಾರಾಟ ಮಾಡುತ್ತಿರುವ ಟೊಯೊಟಾ ಕಂಪನಿಯು ತನ್ನ ಕಾರು ಮಾದರಿಗಳನ್ನು ಸಹ ಮಾರುತಿ ಸುಜುಕಿ ಹೆಸರಿನೊಂದಿಗೆ ಬಿಡುಗಡೆ ಮಾಡಲು ಸಿದ್ದವಾಗಿದ್ದು, ಮಧ್ಯಮ ಕ್ರಮಾಂಕದ ಎಂಪಿವಿ ಕಾರಿಗಾಗಿ ಅವಾಂಜಾ ಕಾರನ್ನು ಭಾರತದಲ್ಲಿ ಮಾರುತಿ ಸುಜುಕಿ ರೀಬ್ಯಾಡ್ಜ್‌ನೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಮತ್ತೊಂದು ಎಂಪಿವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಅವಾಂಜ್ ಕಾರು ಸದ್ಯ ಮಧ್ಯಪ್ರಾಚ್ಯದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿದ್ದು, ಇದೇ ಕಾರನ್ನು ಮಾರುತಿ ಸುಜುಕಿ ಹೊಸ ಎಂಪಿವಿಗಾಗಿ ರೀಬ್ಯಾಡ್ಜ್ ಮಾಡಲು ಉದ್ದೇಶಿಸಲಾಗಿದೆ. ಆದರೆ ಹೊಸ ಕಾರಿನ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಡದ ಮಾರುತಿ ಸುಜುಕಿಯು ಮುಂಬರುವ ಕೆಲವೇ ದಿನಗಳಲ್ಲಿ ಹೊಸ ಕಾರಿನ ಕುರಿತಾಗಿ ಅಧಿಕೃತ ಮಾಹಿತಿ ಬಿಡುಗಡೆ ಮಾಡಲಿದೆ.

ಮತ್ತೊಂದು ಎಂಪಿವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಮಾರುತಿ ಸುಜುಕಿ ಬ್ಯಾಡ್ಜ್‌ನೊಂದಿಗೆ ಬಿಡುಗಡೆಯಾಗಲಿರುವ ಅವಾಂಜಾ ಕಾರು ಭಾರತದಲ್ಲಿ ಬದಲಿ ಹೆಸರು ಪಡೆದುಕೊಳ್ಳಲಿದ್ದು, ಹೊಸ ಕಾರನ್ನು 1.5-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೋ ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಮತ್ತೊಂದು ಎಂಪಿವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಮೇಲೆ ಹೇಳಿದ ಹಾಗೆ ಹೊಸ ಕಾರನ್ನು ಎರ್ಟಿಗಾ ಮತ್ತು ಇನೋವಾ ಕ್ರಿಸ್ಟಾ ನಡುವಿನ ಬೆಲೆ ಅಂತರವನ್ನು ತುಂಬುವ ಉದ್ದೇಶದಿಂದಲೇ ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಕಾರು ಆನ್‌ರೋಡ್ ಪ್ರಕಾರ ರೂ.12.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17 ಲಕ್ಷ ಅಂತರದಲ್ಲಿ 2021ರ ಮಧ್ಯಂತರದಲ್ಲಿ ರಸ್ತೆಗಿಳಿಯಲಿದೆ.

Most Read Articles

Kannada
English summary
Maruti Suzuki Considering New Seven Seater MPV For India. Read in Kannada.
Story first published: Sunday, July 26, 2020, 10:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X