ಲಾಕ್ ಡೌನ್ ವಿಸ್ತರಣೆ: ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಾರುತಿ ಸುಜುಕಿ

ಕರೋನಾ ವೈರಸ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಗ್ಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ 21 ದಿನಗಳ ಲಾಕ್ ಡೌನ್ ಅನ್ನು ಮತ್ತೆ ಮೇ 3ರ ತನಕ ವಿಸ್ತರಣೆ ಮಾಡಿದ್ದು, ಈ ಹಿನ್ನಲೆಯಲ್ಲಿ ಆಟೋ ಉತ್ಪಾದನಾ ಕಂಪನಿಗಳು ವಾರಂಟಿ ಅವಧಿಯನ್ನು ವಿಸ್ತರಣೆ ಮಾಡಿವೆ.

ಲಾಕ್ ಡೌನ್ ವಿಸ್ತರಣೆ: ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಾರುತಿ ಸುಜುಕಿ

ದೇಶದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿ ಮಾರುತಿ ಸುಜುಕಿ ಕೂಡಾ ವಾರಂಟಿ ಅವಧಿಯನ್ನು ವಿಸ್ತರಣೆ ಮಾಡಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ಮುಕ್ತಾಯಗೊಳ್ಳಬೇಕಿದ್ದ ವಿವಿಧ ವಾಹನಗಳ ವಾರಂಟಿ ಅವಧಿಯನ್ನು ಜೂನ್ 30ರ ತನಕ ವಿಸ್ತರಣೆ ಮಾಡಿದೆ. ಹೀಗಾಗಿ ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ವಾರಂಟಿ ಮುಗಿದರೂ ಜೂನ್ 30ರ ತನಕ ವಾರಂಟಿ ಲಭ್ಯವಿರಲಿದ್ದು, ಯಾವುದೇ ಹೆಚ್ಚುವರಿ ಶುಲ್ಕದ ಹೊರೆ ಇರುವುದಿಲ್ಲ.

ಲಾಕ್ ಡೌನ್ ವಿಸ್ತರಣೆ: ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಾರುತಿ ಸುಜುಕಿ

ಇನ್ನು ಕರೋನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದ್ದು, ಕರೋನಾ ವಿರುದ್ಧ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಣಿಗೆ ಸಂಗ್ರಹ ಅಭಿಯಾನವನ್ನು ಕೈಗೊಂಡಿವೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಲಾಕ್ ಡೌನ್ ವಿಸ್ತರಣೆ: ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಾರುತಿ ಸುಜುಕಿ

ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧದ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬುತ್ತಿದ್ದಾರೆ.

ಲಾಕ್ ಡೌನ್ ವಿಸ್ತರಣೆ: ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಾರುತಿ ಸುಜುಕಿ

ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಯ ಜೊತೆಗೆ ಧನಸಹಾಯವನ್ನು ಕೂಡಾ ಮಾಡುತ್ತಿವೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಲಾಕ್ ಡೌನ್ ವಿಸ್ತರಣೆ: ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಾರುತಿ ಸುಜುಕಿ

ದೇಶದ ನಂ.1 ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ ಕೂಡಾ ಅತಿ ಕಡಿಮೆ ಬೆಲೆಯಲ್ಲಿ ವೆಂಟಿಲೆಯಟರ್‌ಗಳ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿರುವುದಲ್ಲದೆ ಆಗ್ವಾ ಹೆಲ್ತ್ ಕೇರ್ ಸಂಸ್ಥೆಯೊಂದಿಗೆ ಮಹತ್ವದ ಒಡಂಬಡಿಕೆಗೆ ಸಹಿ ಹಾಕಿದೆ.

ಲಾಕ್ ಡೌನ್ ವಿಸ್ತರಣೆ: ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಾರುತಿ ಸುಜುಕಿ

ದೇಶದ ವಿವಿಧ ಭಾಗದಲ್ಲಿ ಮೂರು ಕಾರು ಉತ್ಪಾದನಾ ಘಟಕಗಳಲ್ಲೂ ಆಗ್ವಾ ಹೆಲ್ತ್ ಕೇರ್ ಸಂಸ್ಥೆಯ ಸಹಯೋಗದೊಂದಿಗೆ ವೆಂಟಿಲೆಟರ್‌ಗಳನ್ನು ನಿರ್ಮಾಣ ಮಾಡಲಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರತಿ ತಿಂಗಳು 10 ಸಾವಿರ ಯುನಿಟ್ ಉತ್ಪಾದನೆ ಮಾಡುವುದಾಗಿ ಘೋಷಣೆ ಮಾಡಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಲಾಕ್ ಡೌನ್ ವಿಸ್ತರಣೆ: ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಾರುತಿ ಸುಜುಕಿ

ಜೊತೆಗೆ ಕೃಷ್ಣಾ ಮಾರುತಿ ಲಿಮೆಟೆಡ್ ಕಂಪನಿಯು ಪ್ರತ್ಯೇಕವಾಗಿ 20 ಲಕ್ಷ ಫೇಸ್‌ಮಾಸ್ಕ್‌ಗಳನ್ನು ಹರಿಯಾಣ ಸರ್ಕಾರಕ್ಕೆ ಉಚಿತವಾಗಿ ನೀಡುವುದಾಗಿ ಹೇಳಿದ್ದು, ಮತ್ತೊಂದು ಅಂಗಸಂಸ್ಥೆಯಾದ ಎಂಎಸ್ಐಎ ಮತ್ತು ಭಾರತ್ ಸೀಟ್ ಲಿಮಿಟೆಡ್ ಕಂಪನಿಗಳು ವೈದ್ಯಕೀಯ ಸೇವೆಗಳಿಗೆ ಬಳಕೆ ಮಾಡುವ ಪ್ರೋಕ್ಟೆಕ್ಟಿವ್ ಕ್ಲಾಥ್‌ಗಳನ್ನು ಸಿದ್ದಪಡಿಸಿ ನೀಡಲಿದ್ದಾರೆ.

ಲಾಕ್ ಡೌನ್ ವಿಸ್ತರಣೆ: ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಾರುತಿ ಸುಜುಕಿ

ಕರೋನಾ ವಿರುದ್ಧ ಹೋರಾಟಕ್ಕಾಗಿ ಅಗತ್ಯ ವೈದ್ಯಕೀಯ ಉಪಕರಣಗಳ ಕೊರತೆ ಎದುರಾಗಿದ್ದು, ಸದ್ಯ ಆಟೋ ಉತ್ಪಾದನಾ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ಪ್ರಮುಖ ವಾಹನ ಕಂಪನಿಗಳು ವೈದ್ಯಕೀಯ ಉಪಕರಣಗಳ ತಯಾರಿಕೆ ಮತ್ತು ಅಸೆಂಬ್ಲಿಗಾಗಿ ಕೈಜೋಡಿಸಿರುವುದು ಜನರ ಮೆಚ್ಚುಗೆಗೆ ಕಾರಣವಾಗಿವೆ.

Most Read Articles

Kannada
English summary
Maruti Suzuki Offers Extended Warranty & Free Service Period Till 30th June. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X