ಉದ್ಯೋಗಿಗಳಿಗೆ ಪರಿಸರ ಸ್ನೇಹಿ ಮನೆಗಳನ್ನು ವಿತರಿಸಿದ ಮಾರುತಿ ಸುಜುಕಿ ಕಂಪನಿ

ಮಾರುತಿ ಸುಜುಕಿ ದೇಶದ ಪ್ರಮುಖ ಕಾರು ತಯಾರಕ ಕಂಪನಿಗಳಲ್ಲಿ ಒಂದು. ನೌಕರರ ಕಲ್ಯಾಣ ಯೋಜನೆಯಡಿ ಕಂಪನಿಯು ತನ್ನ ಉದ್ಯೋಗಿಗಳಿಗಾಗಿ ಮನೆಗಳನ್ನು ಒದಗಿಸಿದೆ. ಕಂಪನಿಯು ಕೈಗೆಟುಕುವ ಬೆಲೆಯ ಆಧುನಿಕ ಮನೆಗಳನ್ನು ತನ್ನ ಉದ್ಯೋಗಿಗಳಿಗೆ ನೀಡಿದೆ.

ಉದ್ಯೋಗಿಗಳಿಗೆ ಪರಿಸರ ಸ್ನೇಹಿ ಮನೆಗಳನ್ನು ವಿತರಿಸಿದ ಮಾರುತಿ ಸುಜುಕಿ ಕಂಪನಿ

ಮಾರುತಿ ಸುಜುಕಿ ಕಂಪನಿಯು ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಈ ಮನೆಗಳನ್ನು ವಿನ್ಯಾಸಗೊಳಿಸಿದೆ. ಇದು ಈ ಮನೆಯ ವಿಶೇಷ ಲಕ್ಷಣವಾಗಿದೆ. ಹರಿಯಾಣದ ಧಾರುಹೆರಾದಲ್ಲಿರುವ ಈ ಮನೆಗಳನ್ನು ಮಾರುತಿ ಸುಜುಕಿ ಕಂಪನಿಯು ತನ್ನ ಉದ್ಯೋಗಿಗಳಿಗೆ ಹಸ್ತಾಂತರಿಸಿದೆ. ಈ ಹಸ್ತಾಂತರ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಲಾಗಿತ್ತು.

ಉದ್ಯೋಗಿಗಳಿಗೆ ಪರಿಸರ ಸ್ನೇಹಿ ಮನೆಗಳನ್ನು ವಿತರಿಸಿದ ಮಾರುತಿ ಸುಜುಕಿ ಕಂಪನಿ

ಮಾರುತಿ ಸುಜುಕಿ ಕಂಪನಿಯು ತನ್ನ ಉದ್ಯೋಗಿಗಳಿಗಾಗಿ 360ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸುತ್ತಿದೆ. ಈ ಪೈಕಿ ಮೊದಲ ಹಂತದಲ್ಲಿ ಕೆಲವು ಮನೆಗಳನ್ನು ತನ್ನ ಉದ್ಯೋಗಿಗಳಿಗೆ ಹಸ್ತಾಂತರಿಸಿತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಉದ್ಯೋಗಿಗಳಿಗೆ ಪರಿಸರ ಸ್ನೇಹಿ ಮನೆಗಳನ್ನು ವಿತರಿಸಿದ ಮಾರುತಿ ಸುಜುಕಿ ಕಂಪನಿ

ಉಳಿದ ಮನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಹಸ್ತಾಂತರಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಮಾರುತಿ ಸುಜುಕಿ ಕಂಪನಿಯು ತನ್ನ ಉದ್ಯೋಗಿಗಳಿಗಾಗಿ 1989ರಲ್ಲಿ ಮೊದಲ ಬಾರಿಗೆ ವಸತಿ ಯೋಜನೆಯನ್ನು ಆರಂಭಿಸಿತು.

ಉದ್ಯೋಗಿಗಳಿಗೆ ಪರಿಸರ ಸ್ನೇಹಿ ಮನೆಗಳನ್ನು ವಿತರಿಸಿದ ಮಾರುತಿ ಸುಜುಕಿ ಕಂಪನಿ

ಆ ಸಮಯದಲ್ಲಿ, ಸಕರ್'ಪುರ್ ಪ್ರದೇಶದಲ್ಲಿ ನೌಕರರಿಗಾಗಿ ಮನೆಗಳನ್ನು ನಿರ್ಮಿಸಲಾಯಿತು. ಅದಾದ ಬಳಿಕ ಗುರುಗ್ರಾಮದ ಪಾಂಡ್ಸಿ ಪ್ರದೇಶದಲ್ಲಿ 1994ರಲ್ಲಿ ಎರಡನೇ ಬಾರಿಗೆ ಮನೆಗಳನ್ನು ನಿರ್ಮಿಸಲಾಯಿತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಉದ್ಯೋಗಿಗಳಿಗೆ ಪರಿಸರ ಸ್ನೇಹಿ ಮನೆಗಳನ್ನು ವಿತರಿಸಿದ ಮಾರುತಿ ಸುಜುಕಿ ಕಂಪನಿ

ಈಗ ಹರಿಯಾಣದ ಧಾರುಹೆರಾದಲ್ಲಿ ಮೂರನೇ ಬಾರಿಗೆ ಮಾರುತಿ ಸುಜುಕಿ ಎನ್‌ಕ್ಲೇವ್ ಹೆಸರಿನಲ್ಲಿ ಹೊಸ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ಮನೆಗಳನ್ನು ನೌಕರರ ಅಗತ್ಯಕ್ಕೆ ಅನುಗುಣವಾಗಿ ನಿರ್ಮಿಸಲಾಗಿದೆ.

ಉದ್ಯೋಗಿಗಳಿಗೆ ಪರಿಸರ ಸ್ನೇಹಿ ಮನೆಗಳನ್ನು ವಿತರಿಸಿದ ಮಾರುತಿ ಸುಜುಕಿ ಕಂಪನಿ

ಈ ಮನೆಗಳನ್ನು ಮಾರುತಿ ಸುಜುಕಿ ಕಂಪನಿಯ ಸಿಬ್ಬಂದಿಗಳೇ ನಿರ್ವಹಿಸುತ್ತಾರೆ ಎಂಬುದು ಗಮನಾರ್ಹ. ಈ ಮನೆಗಳನ್ನು ಹರಿಯಾಣ ರಾಜ್ಯ ಸರ್ಕಾರದ ಅನುಮೋದನೆ ಹಾಗೂ ಸರ್ಕಾರದ ನಿಬಂಧನೆಗಳಿಗೆ ಒಳಪಟ್ಟು ನಿರ್ಮಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಉದ್ಯೋಗಿಗಳಿಗೆ ಪರಿಸರ ಸ್ನೇಹಿ ಮನೆಗಳನ್ನು ವಿತರಿಸಿದ ಮಾರುತಿ ಸುಜುಕಿ ಕಂಪನಿ

ಈ ಕಾರಣಕ್ಕೆ ಈ ಮನೆಗಳಿಗೆ ಸರ್ಕಾರದ ವಸತಿ ಯೋಜನೆಗಳಾದ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಹಾಗೂ ದೀನ್ ದಯಾಳ್ ಆವಾಸ್ ಯೋಜನೆಗಳು ಅನ್ವಯವಾಗುತ್ತವೆ. ಇದರಿಂದಾಗಿ ಮಾರುತಿ ಸುಜುಕಿ ಕಂಪನಿಯ ನೌಕರರು ಸಬ್ಸಿಡಿಯನ್ನು ಪಡೆಯಬಹುದು.

ಉದ್ಯೋಗಿಗಳಿಗೆ ಪರಿಸರ ಸ್ನೇಹಿ ಮನೆಗಳನ್ನು ವಿತರಿಸಿದ ಮಾರುತಿ ಸುಜುಕಿ ಕಂಪನಿ

ಈಗ ಕೆಲಸದಲ್ಲಿರುವ ಸಿಬ್ಬಂದಿಗಳು ಹುದ್ದೆಯನ್ನು ತೊರೆದ ನಂತರ ಮಾರುತಿ ಸುಜುಕಿ ಕಂಪನಿಯು ಈಗ ನೀಡಿರುವ ಮನೆಗಳನ್ನು ಏನು ಮಾಡುತ್ತದೆ ಎಂದು ತಿಳಿದು ಬಂದಿಲ್ಲ. ದುಬಾರಿ ಬೆಲೆಯ ಐಷಾರಾಮಿ ವಿಲ್ಲಾಗಳಿಗೆ ಸರಿಸಾಟಿಯಾಗುವಂತೆ ಈ ಮನೆಗಳನ್ನು ನಿರ್ಮಿಸಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಉದ್ಯೋಗಿಗಳಿಗೆ ಪರಿಸರ ಸ್ನೇಹಿ ಮನೆಗಳನ್ನು ವಿತರಿಸಿದ ಮಾರುತಿ ಸುಜುಕಿ ಕಂಪನಿ

ಉದ್ಯಾನವನ, ಎಲ್‌ಇಡಿ ಬೀದಿ ದೀಪ, ಮಳೆನೀರು ಕೊಯ್ಲು, ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ, ಕುಡಿಯುವ ನೀರಿನ ಸಂಸ್ಕರಣಾ ಘಟಕ ಸೇರಿದಂತೆ ವಿವಿಧ ವಿಶೇಷ ಸೌಲಭ್ಯಗಳನ್ನು ಸೇರಿಸಿ ಈ ಮನೆಗಳನ್ನು ನಿರ್ಮಿಸಲಾಗಿದೆ.

Most Read Articles

Kannada
English summary
Maruti Suzuki hands over eco friendly houses to employees. Read in Kannada.
Story first published: Thursday, December 24, 2020, 9:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X