ವೈರಸ್ ಭೀತಿ ಹಿನ್ನಲೆ: ಕಾರುಗಳಿಗಾಗಿ ಸೇಫ್ಟಿ ಆಕ್ಸೆಸರಿಸ್ ಪರಿಚಯಿಸಿದ ಮಾರುತಿ ಸುಜುಕಿ

ಇಡೀ ವಿಶ್ವವೇ ಮಹಾಮಾರಿ ಕರೋನಾ ವೈರಸ್ ಅಟ್ಟಹಾಸಕ್ಕೆ ನಲುಗಿ ಹೋಗಿದ್ದು, ವೈರಸ್ ತಡೆಗಾಗಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕರೋನಾ ವೈರಸ್‌ಗೆ ಸೂಕ್ತವಾದ ಔಷಧಿಗಳಿಲ್ಲದಿರುವುದು ಸಾಕಷ್ಟು ಸಾವು-ನೋವಿಗೆ ಕಾರಣವಾಗಿದ್ದು, ವೈರಸ್ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಅಂತರವೇ ಇದೀಗ ಪ್ರಮುಖ ಮುಂಜಾಗ್ರತಾ ಕ್ರಮವಾಗಿದೆ.

ಕಾರುಗಳಿಗಾಗಿ ಸೇಫ್ಟಿ ಆಕ್ಸೆಸರಿಸ್ ಪರಿಚಯಿಸಿದ ಮಾರುತಿ ಸುಜುಕಿ

ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಅಂತರವು ಪ್ರಮುಖ ಮುನ್ನೆಚ್ಚರಿಕೆ ಕ್ರಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನದಟ್ಟಣೆಯಾಗುವ ಪ್ರತಿ ಸ್ಥಳದಲ್ಲೂ ಇದೀಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಪ್ರಮುಖ ಸವಾಲಾಗಿದೆ. ತರಕಾರಿ ಖರೀದಿಯಿಂದ ಹಿಡಿದು ಸಾರಿಗೆ ವ್ಯವಸ್ಥೆಯ ಬಳಕೆಯ ತನಕವು ಇದೀಗ ಸಾಮಾಜಿಕ ಅಂತರ ಕಾಯ್ದಕೊಳ್ಳುವುದರ ಬಗೆಗೆ ಹೆಚ್ಚು ಗಮನಹರಿಸಲಾಗುತ್ತಿದೆ.

ಕಾರುಗಳಿಗಾಗಿ ಸೇಫ್ಟಿ ಆಕ್ಸೆಸರಿಸ್ ಪರಿಚಯಿಸಿದ ಮಾರುತಿ ಸುಜುಕಿ

ವೈರಸ್ ಹರಡಲು ಸಾಧ್ಯವಿರುವ ಎಲ್ಲಾ ಕಡೆಗೂ ಹೆಚ್ಚು ಕಟ್ಟುನಿಟ್ಟಾಗಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸುರಕ್ಷಾ ಕ್ರಮಗಳಾದ ಹ್ಯಾಂಡ್ ಸ್ಯಾನಿಟೈಜರ್, ಫೇಸ್ ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್ ಹೆಚ್ಚು ಬಳಕೆ ಮಾಡಲಾಗುತ್ತಿದೆ.

ಕಾರುಗಳಿಗಾಗಿ ಸೇಫ್ಟಿ ಆಕ್ಸೆಸರಿಸ್ ಪರಿಚಯಿಸಿದ ಮಾರುತಿ ಸುಜುಕಿ

ಹಾಗೆಯೇ ಪ್ರಯಾಣದ ಸಂದರ್ಭದಲ್ಲಿ ವ್ಯಯಕ್ತಿಕ ವಾಹನಗಳನ್ನು ಹೊರತುಪಡಿಸಿ ಕಂಪನಿಯ ವಾಹನಗಳು ಮತ್ತು ಕ್ಯಾಬ್ ಸೇವೆಗಳನ್ನು ಬಳಕೆ ಮಾಡುವಾಗ ಹೆಚ್ಚು ಸುರಕ್ಷತೆ ವಹಿಸಬೇಕಾದ ಅನಿವಾರ್ಯತೆಗಳಿದ್ದು, ಇದಕ್ಕಾಗಿ ವಿವಿಧ ಕಂಪನಿಗಳು ಕ್ಯಾಬ್ ಸೇವೆಗಳನ್ನು ಮತ್ತಷ್ಟು ಸುರಕ್ಷಿತವಾಗಿಸಲು ಕೆಲವು ಪ್ರಮುಖ ಸೇಫ್ಟಿ ಆಕ್ಸೆಸರಿಸ್ ತಯಾರಿಸಿವೆ.

ಕಾರುಗಳಿಗಾಗಿ ಸೇಫ್ಟಿ ಆಕ್ಸೆಸರಿಸ್ ಪರಿಚಯಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕೂಡಾ ವಾಹನ ಉತ್ಪಾದನೆಯೊಂದಿಗೆ ಕರೋನಾ ವೈರಸ್ ತಡೆಗೆ ಬೇಕಾದ ಸುರಕ್ಷಾ ಸಾಧನಗಳನ್ನು ಸಹ ತನ್ನ ಸಹಭಾಗೀತ್ವ ಸಂಸ್ಥೆಗಳೊಂದಿಗೆ ಸೇರಿ ಉತ್ಪಾದನೆಗೆ ಚಾಲನೆ ನೀಡಿದ್ದು, ವೈರಸ್ ಹರಡುವಿಕೆಯನ್ನು ತಡೆಯಲು ಹೊಸ ಸೇಫ್ಟಿ ಆಕ್ಸೆಸರಿಸ್ ಪ್ರಮುಖ ಪಾತ್ರವಹಿಸಲಿವೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಕಾರುಗಳಿಗಾಗಿ ಸೇಫ್ಟಿ ಆಕ್ಸೆಸರಿಸ್ ಪರಿಚಯಿಸಿದ ಮಾರುತಿ ಸುಜುಕಿ

ಕರೋನಾ ವೈರಸ್ ತಡೆಗಾಗಿ ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಸೇಫ್ಟಿ ಆಕ್ಸೆಸರಿಸ್ ಅಭಿವೃದ್ದಿಪಡಿಸಿರುವ ಮಾರುತಿ ಸುಜುಕಿಯು ಕಾರ್ ಕ್ಯಾಬಿನ್ ಪ್ರೋಟೆಕ್ವಿವ್ ಕವರ್, ಫೇಸ್ ವೀಸರ್, ಡಿಸ್ಪೋಸಲ್ ಸ್ಪೇಕ್ಟ್ಸ್ ಪರಿಚಯಿಸಿದೆ.

ಕಾರುಗಳಿಗಾಗಿ ಸೇಫ್ಟಿ ಆಕ್ಸೆಸರಿಸ್ ಪರಿಚಯಿಸಿದ ಮಾರುತಿ ಸುಜುಕಿ

ಕಾರ್ ಕ್ಯಾಬಿನ್ ಪ್ರೋಟೆಕ್ವಿವ್ ಕವರ್‌ನಿಂದ ಕಾರು ಚಾಲಕ ಮತ್ತು ಹಿಂಬದಿಯ ಸವಾರರ ನಡುವಿನ ನೇರ ಸಂಪರ್ಕ ತಡೆಯುವ ಮೂಲಕ ವೈರಸ್ ಹರಡುವಿಕೆಯ ಸಾಧ್ಯತೆಯನ್ನು ತಡೆಯಬಹುದಾಗಿದೆ. ಹಾಗೆಯೇ ಫೇಸ್ ವೀಸರ್‌ ಮತ್ತು ಡಿಸ್ಪೋಸಲ್ ಸ್ಪೋಕ್ಟ್ಸ್‌ ಕೂಡಾ ವೈರಸ್ ಹರಡುವಿಕೆ ಸಾಧ್ಯತೆಯನ್ನು ಕಡಿಮೆಗೊಳಿಸಲಿವೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಕಾರುಗಳಿಗಾಗಿ ಸೇಫ್ಟಿ ಆಕ್ಸೆಸರಿಸ್ ಪರಿಚಯಿಸಿದ ಮಾರುತಿ ಸುಜುಕಿ

ಇನ್ನು ಕೆಲವು ಕಡೆಗಳಲ್ಲಿ ಕ್ಯಾಬ್ ಕಂಪನಿಗಳು ಕಾರಿನ ಒಳಭಾಗದಲ್ಲಿ ಪ್ರಯಾಣಿಕರು ಮತ್ತು ಚಾಲಕರ ನಡುವಿನ ನೇರ ಸಂಪರ್ಕವನ್ನು ತಪ್ಪಿಸುವುದಕ್ಕೆ ಮಾತ್ರವಲ್ಲದೇ ಪ್ರಯಾಣಿಕರ ಮಧ್ಯಭಾಗದಲ್ಲೂ ಪ್ರೋಟೆಕ್ವಿಟ್ ಕವರ್ ಜೋಡಣೆ ಮಾಡುತ್ತಿದೆ. ಈ ಮೂಲಕ ವೈರಸ್ ಹರಡುವಿಕೆಯನ್ನು ತಪ್ಪಿಸಲು ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಹೊಸ ಸುರಕ್ಷಾ ಸಾಧನಗಳು ಸಾಕಷ್ಟು ಸಹಕಾರಿಯಾಗುತ್ತಿವೆ.

Article Published On: Wednesday, May 27, 2020, 18:35 [IST]
English summary
Maruti Suzuki Introduced A Range Of Products To Fight Against The Covid-19. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+