ಲಾಕ್‌ಡೌನ್ ಸಂಕಷ್ಟ: ಕಾರು ಮಾರಾಟದಲ್ಲಿ ಸೊನ್ನೆ ಸುತ್ತಿದ ಮಾರುತಿ ಸುಜುಕಿ

ಕರೋನಾ ವೈರಸ್‌ ಹರಡುವಿಕೆಯನ್ನು ತಡೆಯುವುದಕ್ಕಾಗಿ ಲಾಕ್‌ಡೌನ್ ಪಾಲನೆ ಅನಿವಾರ್ಯವಾಗಿದ್ದರಿಂದ ವಿಶ್ವಾದ್ಯಂತ ಬಹುತೇಕ ವಾಣಿಜ್ಯ ವ್ಯಾಪಾರಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, ಆಟೋ ಮೊಬೈಲ್ ಉದ್ಯಮವು ಕೂಡಾ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದೆ.

ಲಾಕ್‌ಡೌನ್ ಸಂಕಷ್ಟ: ಕಾರು ಮಾರಾಟದಲ್ಲಿ ಸೊನ್ನೆ ಸುತ್ತಿದ ಮಾರುತಿ ಸಜುಕಿ

ಮಾರ್ಚ್ 23ರಿಂದಲೇ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಆಟೋ ಕಂಪನಿಗಳು ಇದುವರೆಗೂ ಯಾವುದೇ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶ ಇಲ್ಲದಿರುವುದರಿಂದ ದಿನಂಪ್ರತಿ ನೂರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಇದುವರೆಗೂ ವಾಹನ ಕಂಪನಿಗಳಿಗೆ ಯಾವುದೇ ರೀತಿಯ ಆದಾಯವಿಲ್ಲದಿರುವುದು ಹಲವಾರು ಸಂಕಷ್ಟಗಳಿಗೆ ಎಡೆಮಾಡಿಕೊಡುತ್ತಿದೆ.

ಲಾಕ್‌ಡೌನ್ ಸಂಕಷ್ಟ: ಕಾರು ಮಾರಾಟದಲ್ಲಿ ಸೊನ್ನೆ ಸುತ್ತಿದ ಮಾರುತಿ ಸಜುಕಿ

ಸದ್ಯ 2ನೇ ಹಂತದ ಲಾಕ್‌ಡೌನ್ ಅವಧಿಯು ಮುಕ್ತಾಯ ಹಂತಕ್ಕೆ ಬಂದಿದ್ದರು ಸಹ ವಾಹನ ಮಾರಾಟಕ್ಕೆ ಅವಕಾಶ ಸಿಗುವುದು ಇನ್ನು ಅನುಮಾನ ಎನ್ನಲಾಗುತ್ತಿದ್ದು, ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಮತ್ತೆ ಮೂರನೇ ಹಂತದ ಲಾಕ್‌ಡೌನ್ ಅನ್ನು ಮುಂದುವರಿಸಲಾಗುತ್ತಿದೆ.

MOST READ: ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ಲಾಕ್‌ಡೌನ್ ಸಂಕಷ್ಟ: ಕಾರು ಮಾರಾಟದಲ್ಲಿ ಸೊನ್ನೆ ಸುತ್ತಿದ ಮಾರುತಿ ಸಜುಕಿ

ಇದರಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಏಪ್ರಿಲ್ ತಿಂಗಳಿನಲ್ಲಿ ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಆಟೋ ಕಂಪನಿಯು ಒಂದೇ ಒಂದು ವಾಹನವನ್ನು ಮಾರಾಟ ಮಾಡದೆ ಸೊನ್ನೆ ಸುತ್ತಿದ್ದು, ಮೇ 3ರ ನಂತರವಾದರೂ ವಾಹನ ಮಾರಾಟಕ್ಕೆ ಅವಕಾಶ ಸಿಗಬಹುದು ಎನ್ನುವ ಭರವಸೆಯಲ್ಲಿ ಆಟೋ ಕಂಪನಿಗಳು ದಿನದೂಡುತ್ತಿವೆ.

ಲಾಕ್‌ಡೌನ್ ಸಂಕಷ್ಟ: ಕಾರು ಮಾರಾಟದಲ್ಲಿ ಸೊನ್ನೆ ಸುತ್ತಿದ ಮಾರುತಿ ಸಜುಕಿ

ಒಂದು ವೇಳೆ ಮೇ 3ರ ನಂತರವು ವಾಹನ ಮಾರಾಟಕ್ಕೆ ಅವಕಾಶ ಸಿಗದೆ ಹೊದಲ್ಲಿ ಹಲವು ಕಂಪನಿಗಳು ಶಾಶ್ವತವಾಗಿ ಕದಮುಚ್ಚುವ ಪರಿಸ್ಥಿತಿಗೆ ತಲುಪಿದ್ದು, ವಾಹನ ಮಾರಾಟಕ್ಕೆ ಅವಕಾಶವಿಲ್ಲದೆಯೇ ವಾಹನ ಉತ್ಪಾದನೆಗೆ ಅವಕಾಶ ನೀಡಿರುವುದು ಆಟೋ ಕಂಪನಿಗಳಿಗೆ ಮತ್ತಷ್ಟು ಸಂಕಷ್ಟ ಶುರುವಾಗಿದೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಲಾಕ್‌ಡೌನ್ ಸಂಕಷ್ಟ: ಕಾರು ಮಾರಾಟದಲ್ಲಿ ಸೊನ್ನೆ ಸುತ್ತಿದ ಮಾರುತಿ ಸಜುಕಿ

ಕೇಂದ್ರ ಸರ್ಕಾರದ ಸೂಚನೆಯೆಂತೆ ವಾಹನಗಳ ಉತ್ಪಾದನೆಯನ್ನು ಮೊನ್ನೆಯಷ್ಟೇ ಪುನಾರಂಭಿಸಿದ್ದ ಕೆಲವು ಆಟೋ ಉತ್ಪಾದನಾ ಕಂಪನಿಗಳು ಇದೀಗ ಮತ್ತೆ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ಲಾಕ್‌ಡೌನ್ ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ಪೂರ್ಣ ಪ್ರಮಾಣದ ಉತ್ಪಾದನೆಯನ್ನು ಶುರು ಮಾಡುವ ಯೋಜನೆಯಲ್ಲಿವೆ.

ಲಾಕ್‌ಡೌನ್ ಸಂಕಷ್ಟ: ಕಾರು ಮಾರಾಟದಲ್ಲಿ ಸೊನ್ನೆ ಸುತ್ತಿದ ಮಾರುತಿ ಸಜುಕಿ

ಸದ್ಯಕ್ಕೆ ಹಸಿರು ವಲಯದಲ್ಲಿರುವ ಕೈಗಾರಿಕೆಗಳಿಗೆ ಮಾತ್ರವೇ ಅವಕಾಶ ನೀಡಿರುವುದರಿಂದ ಆಟೋ ಉತ್ಪಾದನೆ ಬೇಕಿರುವ ಪ್ರಮುಖ ಬಿಡಿಭಾಗಗಳ ಕೊರತೆ ಶುರುವಾಗಿದ್ದು, ಪ್ರಮುಖ ಬಿಡಿಭಾಗಗಳ ಉತ್ಪಾದನಾ ಕಂಪನಿಗಳು ಕೆಂಪು ವಲಯದಲ್ಲಿರುವುದರಿಂದ ಅವುಗಳಿಗೆ ಇದುವರೆಗೂ ಉತ್ಪಾದನೆಗೆ ಅವಕಾಶ ಸಿಕ್ಕಿಲ್ಲ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಲಾಕ್‌ಡೌನ್ ಸಂಕಷ್ಟ: ಕಾರು ಮಾರಾಟದಲ್ಲಿ ಸೊನ್ನೆ ಸುತ್ತಿದ ಮಾರುತಿ ಸಜುಕಿ

ಹೀಗಿರುವಾಗ ವಾಹನ ಉತ್ಪಾದನೆಗೆ ತೊಂದರೆ ಉಂಟಾಗಬಹುದು ಎನ್ನುವುದನ್ನು ಅರಿತಿರುವ ಹಸಿರು ವಲಯದಲ್ಲಿರುವ ಆಟೋ ಕಂಪನಿಗಳು ಸದ್ಯಕ್ಕೆ ಉತ್ಪಾದನೆಯನ್ನು ಕೈಗೊಳ್ಳದಿರುವುದೇ ಒಳಿತು ಎನ್ನುವ ನಿರ್ಧಾರಕ್ಕೆ ಬಂದಿದ್ದು, ವಾಹನ ಮಾರಾಟಕ್ಕೂ ಅವಕಾಶ ಇಲ್ಲದಿರುವುದರಿಂದ ಉತ್ಪಾದನಾ ಪ್ರಕ್ರಿಯೆ ಕೈಗೊಳ್ಳಲು ಆಸಕ್ತಿ ತೊರುತ್ತಿಲ್ಲ.

ಲಾಕ್‌ಡೌನ್ ಸಂಕಷ್ಟ: ಕಾರು ಮಾರಾಟದಲ್ಲಿ ಸೊನ್ನೆ ಸುತ್ತಿದ ಮಾರುತಿ ಸಜುಕಿ

ಒಂದು ವೇಳೆ ಎಲ್ಲಾ ಮಾದರಿಯ ಬಿಡಿಭಾಗಗಳು ಲಭ್ಯವಾಗಿ ಉತ್ಪಾದನೆ ಮಾಡಲಾದ ವಾಹನಗಳನ್ನು ಮಾರಾಟ ಮಾಡದೆ ಸ್ಟಾಕ್ ಇಟ್ಟಲ್ಲಿ ಅದು ಮತ್ತಷ್ಟು ಆರ್ಥಿಕ ಹೊರೆಯಾಗಿ ಪರಿಣಮಿಸಲಿದ್ದು, ಹೀಗಾಗಿ ಲಾಕ್‌ಡೌನ್ ಸಡಿಲಿಕೆಯಾದರೂ ಆಟೋ ಕಂಪನಿಗಳಿಗೆ ಯಾವುದೇ ಪ್ರಯೋಜನವಿಲ್ಲ ಎನ್ನಬಹುದು.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಲಾಕ್‌ಡೌನ್ ಸಂಕಷ್ಟ: ಕಾರು ಮಾರಾಟದಲ್ಲಿ ಸೊನ್ನೆ ಸುತ್ತಿದ ಮಾರುತಿ ಸಜುಕಿ

ಇಷ್ಟೆಲ್ಲಾ ಸಂಕಷ್ಟಗಳ ನಡುವೆಯೂ ಬಹುತೇಕ ಆಟೋ ಕಂಪನಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರೆಗೆ ಓಗೊಟ್ಟು ಕರೋನಾ ವಿರುದ್ದದ ಹೋರಾಟದಲ್ಲಿ ಭಾಗಿಯಾಗಿವೆ. ಆಟೋ ಉತ್ಪಾದನೆ ಇಲ್ಲದಿರುವುದರಿಂದ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಉತ್ಪಾದನೆ ಮಾಡುವ ಮೂಲಕ ವೈರಸ್ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.

Most Read Articles

Kannada
English summary
Maruti Suzuki India Limited had zero sales in the domestic market, (including sales to OEM), in April 2020. This was because in compliance with the Government orders all production facilities were closed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X