ಬಿಡುಗಡೆಗೆ ಸಿದ್ದವಾದ ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್
ಮಾರುತಿ ಸುಜುಕಿ ಕಂಪನಿಯು ಈಗಾಗಲೇ ಬಹುತೇಕ ಕಾರು ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದ್ದು, ಹೊಚ್ಚ ಹೊಸ ಕಾರು ಮಾದರಿಯಾಗಿರುವ ಎಸ್-ಕ್ರಾಸ್ ಆವೃತ್ತಿಯು ಸಹ ಇದೇ ತಿಂಗಳಾಂತ್ಯಕ್ಕೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಏಪ್ರಿಲ್ 1ರಿಂದ ಜಾರಿಗೆ ಬಂದಿರುವ ಬಿಎಸ್-6 ನಿಯಮ ಹಿನ್ನಲೆಯಲ್ಲಿ ಕಾರು ಮಾರಾಟದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸಿರುವ ಮಾರುತಿ ಸುಜುಕಿಯು ವಿಟಾರಾ ಬ್ರೆಝಾ ಮತ್ತು ಎಸ್-ಕ್ರಾಸ್ ಕಾರಿನಲ್ಲಿ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದೆ. ವಿಟಾರಾ ಬ್ರೆಝಾ ಈಗಾಗಲೇ ಹೊಸ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡಿದ್ದು, ಇದೀಗ ಎಸ್-ಕ್ರಾಸ್ ಮಾದರಿಯು ಸಹ ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೆ ಸಿದ್ದವಾಗಿದೆ.

ಸದ್ಯ ಕರೋನಾ ವೈರಸ್ ತಡೆಗಟ್ಟಲು ಲಾಕ್‌ಡೌನ್ ವಿಧಿಸಿರುವುದರಿಂದ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್ ಸೇರಿದಂತೆ ಹಲವಾರು ಕಾರು ಮಾದರಿಗಳ ಬಿಡುಗಡೆಯು ವಿಳಂಬವಾಗಿದ್ದು, ಲಾಕ್‌ಡೌನ್ ತೆರವುಗೊಂಡ ಬಳಿಕವಷ್ಟೇ ಹೊಸ ಕಾರು ಖರೀದಿಗೆ ಲಭ್ಯವಿರಲಿದೆ.

ಹೊಸ ಕಾರು ವಿಟಾರಾ ಬ್ರೆಝಾ ಜೋಡಣೆ ಮಾಡಲಾಗಿರುವ 1.5-ಲೀಟರ್ ಪೆಟ್ರೋಲ್ ಮಾದರಿಯನ್ನೇ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಬಿಎಚ್‌ಪಿ ಉತ್ಪಾದನೆಯಲ್ಲಿ ಎಸ್-ಕ್ರಾಸ್ ಕಾರು ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದೆ.
MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಜೊತೆಗೆ ಹೊಸ ಕಾರಿನ ಎಂಜಿನ್‌ನಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಎರಡು ಆವೃತ್ತಿಗಳಲ್ಲೂ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಜೋಡಣೆ ಮಾಡಲಿದ್ದು, ಇದು ಪರ್ಫಾಮೆನ್ಸ್ ಜೊತೆಗೆ ಮೈಲೇಜ್ ಪ್ರಮಾಣದಲ್ಲೂ ಉತ್ತಮ ರೇಟಿಂಗ್ಸ್ ಪಡೆದುಕೊಳ್ಳಲಿದೆ.

ಇನ್ನು ಬಿಎಸ್-6 ಜಾರಿಗೆ ಬಂದ ಹಿನ್ನಲೆಯಲ್ಲಿ ಮಾರುತಿ ಸುಜುಕಿಯು ಈ ಹಿಂದಿನ 1.3-ಲೀಟರ್ ಡೀಸೆಲ್ ಮಾದರಿಯನ್ನ ಸ್ಥಗಿತಗೊಳಿಸಿದ್ದು, ಜನಪ್ರಿಯ ವಿಟಾರಾ ಬ್ರೆಝಾ, ಎಸ್-ಕ್ರಾಸ್, ಸ್ವಿಫ್ಟ್ ಮತ್ತು ಡಿಜೈರ್ ಕಾರಿನಲ್ಲೂ ಕೂಡಾ ಇನ್ಮುಂದೆ ಡೀಸೆಲ್ ಆವೃತ್ತಿಯ ಮಾರಾಟವನ್ನು ಕೈಬಿಟ್ಟು ಕೇವಲ ಪೆಟ್ರೋಲ್ ಆವೃತ್ತಿಯನ್ನು ಮಾತ್ರವೇ ಖರೀದಿಗೆ ಲಭ್ಯವಿರಲಿದೆ.
MOST READ: ಎರಡು ಚಕ್ರಗಳಲ್ಲಿ ಚಲಿಸಿದ ಟ್ರಾಕ್ಟರ್, ಆನಂದ್ ಮಹೀಂದ್ರಾ ಹೇಳಿದ್ದೇನು?

ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿರುವುದೇ ಡೀಸೆಲ್ ಎಂಜಿನ್ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿವೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ನಿರ್ಮಾಣದ ಬಿಎಸ್-4 ಡೀಸೆಲ್ ಕಾರುಗಳ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಉನ್ನತೀಕರಣವು ಆರ್ಥಿಕವಾಗಿ ಹೊರೆಯಾಗಲಿದ್ದು, ಇದೇ ಕಾರಣಕ್ಕೆ ಪೆಟ್ರೋಲ್, ಪೆಟ್ರೋಲ್ ಜೊತೆಗೆ ಸ್ಮಾರ್ಟ್ ಹೈಬ್ರಿಡ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆ ಹೆಚ್ಚಿಸಲಾಗುತ್ತಿದೆ.
MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಮಾರುತಿ ಸುಜುಕಿಯು ಈಗಾಗಲೇ ಹೊಸದಾಗಿ 1.2-ಲೀಟರ್ ಮತ್ತು 1.5-ಲೀಟರ್ ಪೆಟ್ರೋಲ್ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳನ್ನು ಹೊರತುಪಡಿಸಿ ಸೆಡಾನ್, ಎಸ್‌ಯುವಿ ಮತ್ತು ಎಂಪಿವಿ ಕಾರು ಮಾದರಿಗಳಲ್ಲಿ ಮಾತ್ರವೇ ಹೊಸ ಮಾದರಿಯ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಬಹುದಾಗಿದೆ.


Click it and Unblock the Notifications