ಬಿಡುಗಡೆಯಾದಾಗಿನಿಂದಲೂ ಏರುತ್ತಲೇ ಇದೆ ಮಾರುತಿ ಸುಜುಕಿ ಎಸ್-ಪ್ರೆಸೊ ಮಾರಾಟ

ಮಾರುತಿ ಸುಜುಕಿ ಕಂಪನಿಯನ್ನು ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯೆಂದು ಕರೆಯಲಾಗುತ್ತದೆ. ಹಲವಾರು ದಶಕಗಳಿಂದ ಭಾರತದಲ್ಲಿರುವ ಮಾರುತಿ ಸುಜುಕಿ ಕಂಪನಿಯು ಈ ಸ್ಥಾನವನ್ನು ಪಡೆಯಲು ಸಹಜವಾಗಿಯೇ ಅರ್ಹವಾಗಿದೆ.

ಬಿಡುಗಡೆಯಾದಾಗಿನಿಂದಲೂ ಏರುತ್ತಲೇ ಇದೆ ಮಾರುತಿ ಸುಜುಕಿ ಎಸ್-ಪ್ರೆಸೊ ಮಾರಾಟ

ಭಾರತದಲ್ಲಿ ಮಾರಾಟವಾಗುವ 10 ಕಾರುಗಳಲ್ಲಿ 7 ಕಾರುಗಳು ಮಾರುತಿ ಸುಜುಕಿ ಕಂಪನಿಗೆ ಸೇರಿರುತ್ತವೆ. ಮಾರುತಿ ಸುಜುಕಿ ಕಂಪನಿಯು ಹೆಚ್ಚಾಗಿ ಎಂಟ್ರಿ ಲೆವೆಲ್ ಕಾರುಗಳನ್ನು ಮಾರಾಟ ಮಾಡುತ್ತದೆ. ಈ ಕಾರುಗಳಲ್ಲಿ ಆಲ್ಟೊ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಎಸ್-ಪ್ರೆಸೊಗಳು ಸೇರಿವೆ. ಆಲ್ಟೊ ಕಾರು ಕಂಪನಿಯ ಹೆಚ್ಚು ಮಾರಾಟವಾಗುವ ಕಾರ್ ಆಗಿದೆ.

ಬಿಡುಗಡೆಯಾದಾಗಿನಿಂದಲೂ ಏರುತ್ತಲೇ ಇದೆ ಮಾರುತಿ ಸುಜುಕಿ ಎಸ್-ಪ್ರೆಸೊ ಮಾರಾಟ

ಮಾರುತಿ ಸುಜುಕಿ ಎಸ್-ಪ್ರೆಸೊ ಬಿಡುಗಡೆಯಾದಾಗಿನಿಂದ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಈ ವರ್ಷದ ಮಾರ್ಚ್ ತಿಂಗಳ ಕೊನೆಯ 10 ದಿನಗಳಲ್ಲಿ, ಕರೋನಾ ವೈರಸ್‌ ಹರಡುವ ಭೀತಿಯಿಂದಾಗಿ ಇಡೀ ದೇಶದಲ್ಲಿ ಲಾಕ್‌ಡೌನ್ ಘೋಷಿಸಲಾಯಿತು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಬಿಡುಗಡೆಯಾದಾಗಿನಿಂದಲೂ ಏರುತ್ತಲೇ ಇದೆ ಮಾರುತಿ ಸುಜುಕಿ ಎಸ್-ಪ್ರೆಸೊ ಮಾರಾಟ

ಆದರೆ ಮಾರುತಿ ಸುಜುಕಿ ಕಂಪನಿಯು ಮಾರ್ಚ್ ತಿಂಗಳಿನಲ್ಲಿ 16,000ಕ್ಕೂ ಹೆಚ್ಚು ಆಲ್ಟೊ ಹಾಗೂ ಎಸ್-ಪ್ರೆಸೊಗಳನ್ನು ಮಾರಾಟ ಮಾಡಿದೆ. ಮಾರುತಿ ಸುಜುಕಿ ಎಸ್-ಪ್ರೆಸೊ ಮಿನಿ ಎಸ್‌ಯುವಿಯ 10,000ಕ್ಕೂ ಹೆಚ್ಚು ಯೂನಿಟ್‌ಗಳನ್ನು ಮಾರ್ಚ್ ತಿಂಗಳಿನಲ್ಲಿ ಮಾರಾಟ ಮಾಡಲಾಗಿದೆ.

ಬಿಡುಗಡೆಯಾದಾಗಿನಿಂದಲೂ ಏರುತ್ತಲೇ ಇದೆ ಮಾರುತಿ ಸುಜುಕಿ ಎಸ್-ಪ್ರೆಸೊ ಮಾರಾಟ

ಮುಂಬರುವ ದಿನಗಳಲ್ಲಿ ಜನರು ಕೈಗೆಟುಕುವ ದರ ಹೊಂದಿರುವ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಆಲ್ಟೊ ಹಾಗೂ ಎಸ್-ಪ್ರೆಸೊ ಕಾರುಗಳ ಮಾರಾಟವು ಹೆಚ್ಚಾಗುವ ಸಾಧ್ಯತೆಗಳಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಬಿಡುಗಡೆಯಾದಾಗಿನಿಂದಲೂ ಏರುತ್ತಲೇ ಇದೆ ಮಾರುತಿ ಸುಜುಕಿ ಎಸ್-ಪ್ರೆಸೊ ಮಾರಾಟ

ಈ ಬಗ್ಗೆ ಮಾರುತಿ ಸುಜುಕಿ ಇಂಡಿಯಾದ ಮಾರ್ಕೆಟಿಂಗ್ ಹಾಗೂ ಸೇಲ್ಸ್ ವಿಭಾಗದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಶಾಂಕ್ ಶ್ರೀವಾಸ್ತವರವರು ಮಾತನಾಡಿ, ಜನರು ದೊಡ್ಡ ಕಾರುಗಳ ಬದಲು ಸಣ್ಣ ಕಾರುಗಳನ್ನು ಖರೀದಿಸುತ್ತಿದ್ದಾರೆ. ನಮ್ಮ ಆಂತರಿಕ ಸಮೀಕ್ಷೆಗಳು ಸಹ ಸಣ್ಣ ಕಾರುಗಳಿಗೆ ದೊಡ್ಡ ಕಾರುಗಳಿಗಿಂತ ಹೆಚ್ಚು ಬೇಡಿಕೆಯಿರುವುದಾಗಿ ತಿಳಿಸಿವೆ ಎಂದು ಹೇಳಿದರು.

ಬಿಡುಗಡೆಯಾದಾಗಿನಿಂದಲೂ ಏರುತ್ತಲೇ ಇದೆ ಮಾರುತಿ ಸುಜುಕಿ ಎಸ್-ಪ್ರೆಸೊ ಮಾರಾಟ

ಆಲ್ಟೊ ಹಾಗೂ ಎಸ್-ಪ್ರೆಸೊ ಕಾರುಗಳ ಹೊರತಾಗಿ, ಮಾರುತಿ ಸುಜುಕಿಯ ಇತರ ಹ್ಯಾಚ್‌ಬ್ಯಾಕ್ ಕಾರುಗಳಾದ ಸೆಲೆರಿಯೊ, ವ್ಯಾಗನ್ಆರ್ ಹಾಗೂ ಸ್ವಿಫ್ಟ್ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ಇಗ್ನಿಸ್ ಹಾಗೂ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳನ್ನು ನೆಕ್ಸಾ ಶೋರೂಂನಲ್ಲಿ ಮಾರಾಟ ಮಾಡಲಾಗುತ್ತದೆ.

Most Read Articles

Kannada
English summary
Maruti Suzuki S Presso sales since launch. Read in Kannada.
Story first published: Saturday, May 16, 2020, 17:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X