ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆಗೆ ಚಾಲನೆ ನೀಡಿದ ಮಾರುತಿ ಸುಜುಕಿ

ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸಿರುವ ಆಟೋ ಉತ್ಪಾದನಾ ಸಂಸ್ಥೆಗಳು ಭಾರೀ ಪ್ರಮಾಣದ ಧನಸಹಾಯ ಮತ್ತು ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಚಾಲನೆ ನೀಡಿವೆ.

ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ಕರೋನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದ್ದು, ಕರೋನಾ ವಿರುದ್ಧ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಣಿಗೆ ಸಂಗ್ರಹ ಅಭಿಯಾನವನ್ನು ಕೈಗೊಂಡಿವೆ. ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧದ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬುತ್ತಿದ್ದಾರೆ.

ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಯ ಜೊತೆಗೆ ಧನಸಹಾಯವನ್ನು ಕೂಡಾ ಮಾಡುತ್ತಿವೆ.

ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ದೇಶದ ನಂ.1 ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ ಕೂಡಾ ಅತಿ ಕಡಿಮೆ ಬೆಲೆಯಲ್ಲಿ ವೆಂಟಿಲೆಯಟರ್‌ಗಳ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿರುವುದಲ್ಲದೆ ಆಗ್ವಾ ಹೆಲ್ತ್ ಕೇರ್ ಸಂಸ್ಥೆಯೊಂದಿಗೆ ಮಹತ್ವದ ಒಡಂಬಡಿಕೆಗೆ ಸಹಿ ಹಾಕಿದೆ.

ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ದೇಶದ ವಿವಿಧ ಭಾಗದಲ್ಲಿ ಮೂರು ಕಾರು ಉತ್ಪಾದನಾ ಘಟಕಗಳಲ್ಲೂ ಆಗ್ವಾ ಹೆಲ್ತ್ ಕೇರ್ ಸಂಸ್ಥೆಯ ಸಹಯೋಗದೊಂದಿಗೆ ವೆಂಟಿಲೆಟರ್‌ಗಳನ್ನು ನಿರ್ಮಾಣ ಮಾಡಲಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರತಿ ತಿಂಗಳು 10 ಸಾವಿರ ಯುನಿಟ್ ಉತ್ಪಾದನೆ ಮಾಡುವುದಾಗಿ ಘೋಷಣೆ ಮಾಡಿದೆ. ಜೊತೆಗೆ ಕೃಷ್ಣಾ ಮಾರುತಿ ಲಿಮೆಟೆಡ್ ಕಂಪನಿಯು ಪ್ರತ್ಯೇಕವಾಗಿ 20 ಲಕ್ಷ ಫೇಸ್‌ಮಾಸ್ಕ್‌ಗಳನ್ನು ಹರಿಯಾಣ ಸರ್ಕಾರಕ್ಕೆ ಉಚಿತವಾಗಿ ನೀಡುವುದಾಗಿ ಹೇಳಿದ್ದು, ಮತ್ತೊಂದು ಅಂಗಸಂಸ್ಥೆಯಾದ ಎಂಎಸ್ಐಎ ಮತ್ತು ಭಾರತ್ ಸೀಟ್ ಲಿಮಿಟೆಡ್ ಕಂಪನಿಗಳು ವೈದ್ಯಕೀಯ ಸೇವೆಗಳಿಗೆ ಬಳಕೆ ಮಾಡುವ ಪ್ರೋಕ್ಟೆಕ್ಟಿವ್ ಕ್ಲಾಥ್‌ಗಳನ್ನು ಸಿದ್ದಪಡಿಸಿ ನೀಡಲಿದ್ದಾರೆ.

ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ಇನ್ನು ದೇಶದ ಪ್ರಮುಖ ಕಾರು ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಮಹೀಂದ್ರಾ ಕೂಡಾ ಇದೀಗ ಕಾರು ಉತ್ಪಾದನೆ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ವೆಂಟಿಲೆಟರ್‌ಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು, ಆಧುನಿಕ ತಂತ್ರಜ್ಞಾನ ಪ್ರೇರಣೆಯ ಮೂರು ವೆಂಟಿಲೆಟರ್ ಮಾದರಿಗಳ ಪೋಟೋಟೈಪ್ ಮಾದರಿಗಳನ್ನು ಕೇವಲ 48 ಗಂಟೆಗಳಲ್ಲಿ ಅಭಿವೃದ್ದಿಗೊಳಿಸಿ ಬಹಿರಂಗಪಡಿಸಿದೆ.

ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ಅತ್ಯುತ್ತಮ ಗುಣಮಟ್ಟದೊಂದಿಗೆ ಬೆಲೆಯಲ್ಲೂ ಗಮನಸೆಳೆಯಲಿದ್ದು, ಬೆಲೆ ಮಾಹಿತಿಯನ್ನು ಕೂಡಾ ಹಂಚಿಕೊಳ್ಳಲಾಗಿದೆ. ಸಾಮಾನ್ಯವಾಗಿ ಒಂದು ವೆಂಟಿಲೆಟರ್ ಬೆಲೆಯು ಪ್ರಸ್ತುತ ಮಾರುಕಟ್ಟೆಯಲ್ಲಿ ರೂ.5 ಲಕ್ಷದಿಂದ ರೂ.7 ಲಕ್ಷ ಬೆಲೆ ಹೊಂದಿದ್ದು, ದೇಶದ ಬಹುತೇಕ ಆಸ್ಪತ್ರೆಗಳಲ್ಲಿ ವೆಂಟಿಲೆಟರ್ ಸೌಲಭ್ಯವು ಸೀಮಿತ ಸಂಖ್ಯೆಯಲ್ಲಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ಆದರೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ಅಧ್ಯಕ್ಷರಾಗಿರುವ ಆನಂದ್ ಮಹೀಂದ್ರಾ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಕೇವಲ 48 ಗಂಟೆಗಳಲ್ಲಿ ಸಿದ್ದಗೊಂಡಿರುವ ಈ ಹೊಸ ವೆಂಟಿಲೆಟರ್‌ಗಳ ಬೆಲೆಯು ಕೇವಲ ರೂ.7,500ಕ್ಕಿಂತಲೂ ಕಡಿಮೆ ಬೆಲೆ ಪಡೆದುಕೊಂಡಿವೆ ಎಂದಿದ್ದಾರೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ಮಹೀಂದ್ರಾ ಉತ್ಪಾದನೆ ಮಾಡುತ್ತಿರುವ ವೆಂಟಿಲೆಟರ್‌ಗಳು ಗಾತ್ರದಲ್ಲಿ ದೀರ್ಘ ಬಾಳಕೆಯ ವೆಂಟಿಲೆಟರ್‌ಗಳಿಂತಲೂ ತುಸು ಕಡಿಮೆ ಸಾಮಾರ್ಥ್ಯವನ್ನು ಹೊಂದಿರಲಿದ್ದು, ತುರ್ತು ಸಂದರ್ಭದಲ್ಲಿ ಇವುಗಳು ಸಾಕಷ್ಟು ಅನುಕೂಲಕರವಾಗಲಿವೆ. ಜೊತೆಗೆ ಕೈಗೆಟುಕುವ ಬೆಲೆಗೆ ಲಭ್ಯವಾಗಲಿರುವ ಈ ವೆಂಟಿಲೆಟರ್‌ಗಳನ್ನು ಮನೆಗಳಲ್ಲಿರುವ ದೀರ್ಘ ಕಾಲದ ರೋಗಿಗಳ ಆರೈಕೆಗೂ ಕೂಡಾ ಬಳಕೆ ಮಾಡಬಹುದಾಗಿದ್ದು, ಕೇವಲ 5ರಿಂದ 7 ಕೆ.ಜಿ ತೂಕವನ್ನು ಹೊಂದಿರಲಿವೆ.

MOST READ: ಅತಿ ಕಡಿಮೆ ಬೆಲೆಯ ವೆಂಟಿಲೆಟರ್‌ಗಳ ಉತ್ಪಾದನೆಗೆ ಚಾಲನೆ ನೀಡಿದ ಮಹೀಂದ್ರಾ

ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ಪೋಟೋಟೈಪ್ ಮಾದರಿಗಳನ್ನು ಸದ್ಯ ಅನಾವರಣಗೊಳಿಸಿರುವ ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಸರ್ಕಾರದಿಂದ ಅನುಮೊದನೆ ತೆಗೆದುಕೊಳ್ಳಲಿದ್ದು, ಅಗತ್ಯವಿರುವ ರಾಜ್ಯಗಳಿಗೆ ಪೂರೈಕೆಯನ್ನು ಆರಂಭಿಸಲಿದೆ.

More from DriveSpark

Article Published On: Saturday, March 28, 2020, 20:20 [IST]
English summary
Coronavirus Outbreak: Maruti Suzuki Partner With AgVa Healthcare To Produce Ventilators. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+