YouTube

ಡ್ರೈವಿಂಗ್ ತರಬೇತಿ ನೀಡಲಿದೆ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಭಾರತದ ಅಗ್ರಗಣ್ಯ ಕಾರು ತಯಾರಕ ಕಂಪನಿಯಾಗಿದೆ. ಈಗ ರಸ್ತೆ ಸುರಕ್ಷತೆಗಾಗಿ ಮಾರುತಿ ಸುಜುಕಿ ಕಂಪನಿಯು ಹೊಸ ಯೋಜನೆಯೊಂದನ್ನು ಆರಂಭಿಸಿದೆ. ಈ ಯೋಜನೆಯನ್ನು ಹರಿಯಾಣ ಸರ್ಕಾರದ ಜೊತೆಗೆ ಸೇರಿ ಆರಂಭಿಸಲಿದೆ.

ಡ್ರೈವಿಂಗ್ ತರಬೇತಿ ನೀಡಲಿದೆ ಮಾರುತಿ ಸುಜುಕಿ

ಹರಿಯಾಣದ ಸ್ಕಿಲ್ ಡೆವಲಪ್‍‍ಮೆಂಟ್ ಮಿಷನ್‍‍ನ ಸಹಯೋಗದಲ್ಲಿ ಮಾರುತಿ ಸುಜುಕಿ ಕಂಪನಿಯು ಚಾಲನಾ ತರಬೇತಿಯನ್ನು ನೀಡಲಿದೆ. ಈ ಯೋಜನೆಯಡಿಯಲ್ಲಿ 800 ಜನರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿಯನ್ನು ನೀಡಲಾಗುವುದು.

ಡ್ರೈವಿಂಗ್ ತರಬೇತಿ ನೀಡಲಿದೆ ಮಾರುತಿ ಸುಜುಕಿ

ಬಹದೂರ್‍‍ಘರ್ ಹಾಗೂ ರೋಹ್ಟಕ್‍‍ನಲ್ಲಿರುವ ಮಾರುತಿ ಸುಜುಕಿ ಕಂಪನಿಯ ಇನ್ಸ್ ಟಿಟ್ಯೂಟ್ ಆಫ್ ಡ್ರೈವಿಂಗ್ ಅಂಡ್ ಟ್ರಾಫಿಕ್ ರಿಸರ್ಚ್‍‍ನಲ್ಲಿ (ಐ‍‍ಡಿ‍‍ಟಿ‍ಆರ್) ಈ ತರಬೇತಿಯನ್ನು ನೀಡಲಾಗುವುದು. 800 ಜನರನ್ನು ಆಯ್ಕೆ ಮಾಡುವ ಸಂದರ್ಶನವನ್ನು ಮಾರುತಿ ಸುಜುಕಿ ಕಂಪನಿ ಹಾಗೂ ಹರಿಯಾಣ ಸಾರಿಗೆ ಇಲಾಖೆಗಳು ಜೊತೆಯಾಗಿ ನಡೆಸಲಿವೆ.

ಡ್ರೈವಿಂಗ್ ತರಬೇತಿ ನೀಡಲಿದೆ ಮಾರುತಿ ಸುಜುಕಿ

ಈ ತರಬೇತಿಯ ಉದ್ದೇಶವು ಯುವಕರಿಗೆ ಡ್ರೈವಿಂಗ್ ಸ್ಕಿಲ್‍‍ಗಳನ್ನು ಕಲಿಸುವುದು ಮಾತ್ರವಲ್ಲದೇ ಅವರಿಗೆ ಉದ್ಯೋಗ ಸಿಗುವಂತೆ ಮಾಡುವುದಾಗಿದೆ. ಮಾರುತಿ ಸುಜುಕಿ ಕಂಪನಿಯ ಎಕ್ಸಿಕ್ಯೂಟಿವ್ ಸಲಹೆಗಾರರಾದ ಅಜಯ್ ಕುಮಾರ್ ತೋಮರ್‍‍ರವರು ಈ ಬಗ್ಗೆ ಮಾತನಾಡಿದ್ದಾರೆ.

ಡ್ರೈವಿಂಗ್ ತರಬೇತಿ ನೀಡಲಿದೆ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು, ಹರಿಯಾಣ ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿರುವ ಯುವಕರಿಗೆ ಉದ್ಯೋಗ ದೊರೆಯುವಂತೆ ಮಾಡಲು ನೆರವಾಗಲಿದೆ. ಈ ಎಲ್ಲಾ 800 ಜನರಿಗೆ ಡ್ರೈವಿಂಗ್ ಬಗ್ಗೆ ತರಬೇತಿ ನೀಡುವುದರ ಜೊತೆಗೆ ಡ್ರೈವಿಂಗ್ ಬಿಹೇವಿಯರ್‍‍ಗಳನ್ನು ಕಲಿಸಲಾಗುವುದು.

ಡ್ರೈವಿಂಗ್ ತರಬೇತಿ ನೀಡಲಿದೆ ಮಾರುತಿ ಸುಜುಕಿ

ಡ್ರೈವಿಂಗ್ ಸ್ಕಿಲ್ ಹಾಗೂ ಡ್ರೈವಿಂಗ್ ಬಿಹೇವಿಯರ್‍‍ಗಳು ಮಾತ್ರವೇ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲಿವೆ ಎಂದು ಅವರು ಹೇಳಿದರು. ಮಾರುತಿ ಸುಜುಕಿಯ ರೋಹ್ಟಕ್ ಹಾಗೂ ಬಹದೂರ್‍‍ಘರ್ ಕೇಂದ್ರಗಳಲ್ಲಿ ತಲಾ 400 ಜನರಂತೆ ತರಬೇತಿಯನ್ನು ನೀಡಲಾಗುವುದು.

ಡ್ರೈವಿಂಗ್ ತರಬೇತಿ ನೀಡಲಿದೆ ಮಾರುತಿ ಸುಜುಕಿ

ಈ 800 ಜನರ ತರಬೇತಿಯು ಮಾರ್ಚ್ ಕೊನೆಯ ವೇಳೆಗೆ ಮುಕ್ತಾಯವಾಗಲಿದೆ. ಈ 800 ಜನರ ತರಬೇತಿಯ ವೆಚ್ಚವನ್ನು ಹರಿಯಾಣದ ಸ್ಕಿಲ್ ಡೆವಲಪ್‍‍ಮೆಂಟ್ ಮಿಷನ್ ಭರಿಸಿದರೆ, ತರಬೇತಿಯ ನಂತರದ ಡ್ರೈವಿಂಗ್ ಲೈಸೆನ್ಸ್ ವೆಚ್ಚವನ್ನು ಹರಿಯಾಣ ಸರ್ಕಾರವು ಭರಿಸಲಿದೆ.

ಡ್ರೈವಿಂಗ್ ತರಬೇತಿ ನೀಡಲಿದೆ ಮಾರುತಿ ಸುಜುಕಿ

ಇದರ ಜೊತೆಗೆ ಇನ್ಸ್ ಟಿಟ್ಯೂಟ್ ಆಫ್ ಡ್ರೈವಿಂಗ್ ಅಂಡ್ ಟ್ರಾಫಿಕ್ ರಿಸರ್ಚ್‍ ಸಂಸ್ಥೆಯು ತರಬೇತಿ ಪಡೆಯುವ ಈ 800 ಜನರಿಗೆ ಪಾಸ್‍‍ಪೋರ್ಟ್ ಪಡೆಯಲು ನೆರವಾಗಲಿದೆ. ಇದರಿಂದಾಗಿ ಅವರಿಗೆ ಉದ್ಯೋಗವಕಾಶವು ಹೆಚ್ಚಾಗಲಿದೆ.

ಡ್ರೈವಿಂಗ್ ತರಬೇತಿ ನೀಡಲಿದೆ ಮಾರುತಿ ಸುಜುಕಿ

ಹರಿಯಾಣ ಸರ್ಕಾರದ ಸ್ಕಿಲ್ ಡೆವಲಪ್‍‍ಮೆಂಟ್ ಮಿಷನ್‍‍ನ ನಿರ್ದೇಶಕರಾದ ರಾಜ್ ನೆಹರುರವರು ಮಾತನಾಡಿ, ಮಾರುತಿ ಸುಜುಕಿ ಕಂಪನಿಯ ಜೊತೆಗೂಡಿ ಯುವಕರಿಗೆ ವಾಹನ ಚಾಲನಾ ತರಬೇತಿಯನ್ನು ನೀಡುತ್ತಿರುವುದು ಖುಷಿಯಾಗುತ್ತಿದೆ ಎಂದು ಹೇಳಿದರು.

Most Read Articles

Kannada
English summary
Maruti Suzuki to train 800 youth. Read in Kannada.
Story first published: Friday, January 17, 2020, 10:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X